• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಾರ್ಡ್ ಕಮಿಟಿ ಆಗಲೇಬೇಕಿರುವುದರಿಂದ ಬೆಕ್ಕಿಗೆ ಗಂಟೆ ಕಟ್ಟಲು ನಾನು ರೆಡಿ!

Tulunadu News Posted On October 31, 2020


  • Share On Facebook
  • Tweet It

ವಾರ್ಡ ಕಮಿಟಿ ಆಗದಿದ್ದರೆ ಒಳ್ಳೆಯದು, ನಾವು ನಮಗೆ ಖುಷಿ ಇದ್ದ ಕಡೆಯಲ್ಲಿ ಕೆಲಸ ಮಾಡಬಹುದು. ಇಲ್ಲದೆ ಹೋದರೆ ಅವರು ಹೇಳಿದ ಕಡೆನೆ ಕೆಲಸ ಮಾಡಬೇಕಾಗುತ್ತದೆ, ಅದು ತುಂಬಾ ಕಿರಿಕಿರಿ ಮಾರಾಯ್ರೆ- ಇದು ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಸದಸ್ಯರ ಬಾಯಿಂದ ಬರುವ ಅಪ್ಪಟ ಹೃದಯದ ಮಾತು. ನಮ್ಮ ಜನಸಾಮಾನ್ಯರು ಕೂಡ ಹಾಗೆಯೇ. ಯಾರೂ ಕೂಡ ವಾರ್ಡ ಕಮಿಟಿ ಆಗಲೇಬೇಕು ಎಂದು ಒಂದು ಜನಾಭಿಪ್ರಾಯ ಮೂಡಿಸುವ ನನ್ನ ಪ್ರಯತ್ನಕ್ಕೆ ದೊಡ್ಡ ಮಟ್ಟದಲ್ಲಿ ಕೈ ಜೋಡಿಸಿದಂತೆ ಕಾಣುವುದಿಲ್ಲ. ವಾರ್ಡ ಕಮಿಟಿ ಒಂದು ವೇಳೆ ಅಸ್ತಿತ್ವಕ್ಕೆ ಬಂದರೆ ನಿಮ್ಮ ವಾರ್ಡನಲ್ಲಿ ನೀವೆ ರಾಜರು ಎನ್ನುವುದು ತುಂಬಾ ಜನರಿಗೆ ಗೊತ್ತೆ ಇಲ್ಲ. ಇನ್ನೂ ನಮ್ಮ ದೇಶದಲ್ಲಿ ಕೆಲವು ಲಕ್ಷಗಳಲ್ಲಿ ಭ್ರಷ್ಟಾಚಾರ ನಡೆಸುವುದು ತುಂಬಾ ಚಿಕ್ಕ ವಿಷಯ ಆಗಿ ಹೋಗಿರುವುದರಿಂದ ಹತ್ತು ಲಕ್ಷದ ಕಾಮಗಾರಿಯಲ್ಲಿ ಒಬ್ಬ ಅಧಿಕಾರಿ ಮತ್ತು ಸದಸ್ಯ ಸೇರಿ ಒಂದೂ ಚಿಲ್ಲರೆ ಲಕ್ಷ ರೂಪಾಯಿ ತಿಂದರೆ ಆ ಬಗ್ಗೆ ಏನೂ ಅನಿಸುವುದಿಲ್ಲ. ಅವನ ಬಗ್ಗೆ ಕನಿಕರ ಬರಬಹುದೇ ವಿನ: ಅವನು ಒಂದು ಲಕ್ಷ ತಿಂದ ಎನ್ನುವುದು ನಮಗೆ ದೊಡ್ಡ ಸಂಗತಿಯಂತೆ ತೋರುವುದಿಲ್ಲ. ಕಳಪೆ ಕಾಮಗಾರಿ ಆದರೆ ಆ ಸದಸ್ಯನನ್ನು ಅಥವಾ ಅಧಿಕಾರಿಯನ್ನು ಬೈದು ಓಡಾಡಿಕೊಳ್ಳುತ್ತೇವೆ ವಿನ: ಅವನ ಅಥವಾ ಅವಳ ಮನೆಗೆ ಹೋಗಿ ಒಂದು ವಾರ್ಡ ಕಮಿಟಿ ಮಾಡಿ ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಹಾಡುತ್ತೇನೆ ಎಂದು ಆವಾಜ್ ಹಾಕಿ ಬರುವುದಿಲ್ಲ. ಕಾಮಗಾರಿ ಆಗದೆ ಬಿಲ್ ಮಾಡುವುದು, ಒಂದೇ ಕಾಮಗಾರಿಗೆ ಎರಡು ಸಲ ಬಿಲ್ ಮಾಡುವುದು ಹೀಗೆ ಕೆಲವು ಗೋಲ್ ಮಾಲ್ ಗಳೂ ವಾರ್ಡ ಕಮಿಟಿ ಆಗಿದ್ದಲ್ಲಿ ಎಲ್ಲವೂ ನಿಂತು ಹೋಗುತ್ತಿತ್ತು. ಆದರೆ ನಮಗೆ ನಮ್ಮ ವಾರ್ಡ ನ ಸದಸ್ಯನ\ಳ ಮೇಲೆ ತುಂಬಾ ಪ್ರೀತಿ. ಆದ್ದರಿಂದ ನಾವು ಈ ವಿಷಯದ ಮೇಲೆ ಮೌನವಾಗಿದ್ದೇವೆ. ಈ ಮೂಲಕ ಮೌನಂ ಸಮ್ಮತಿ ಲಕ್ಷಣಂ ಎನ್ನುವುದನ್ನು ತೋರಿಸಿಕೊಟ್ಟಿದ್ದೇವೆ.

ಅದೇ ವಾರ್ಡ ಕಮಿಟಿ ಆಗಿದ್ದಲ್ಲಿ ನಿಮ್ಮ ವಾರ್ಡನಲ್ಲಿ ಆಗುವ ಪ್ರತಿಯೊಂದು ಕೆಲಸವೂ ನಿಮಗೆ ಸರಿಯಾಗಿ ಗೊತ್ತಾಗುತ್ತಿತ್ತು. ಆ ವಾರ್ಡನ ಪ್ರತಿ ಕಾಮಗಾರಿಗೆ ಎಷ್ಟು ಅನುದಾನ ಬಂದಿದೆ, ಅದಕ್ಕೆ ಎಸ್ಟೀಮೆಟ್ ಎಷ್ಟು ಆಗಿದೆ, ಎಷ್ಟು ಖರ್ಚಾಗಬಹುದು, ಯಾರು ಗುತ್ತಿಗೆದಾರರ, ಅವನು ಅಧಿಕಾರಿಗೆ ಅಥವಾ ಸದಸ್ಯನಿಗೆ ಎಷ್ಟು ಶೇಕಡಾ ಹಣ ಕೊಡಬೇಕಾಗುತ್ತದೆ ಎಲ್ಲದರ ಮಾಹಿತಿ ಇರುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ನೀವು ಅಭಿವೃದ್ಧಿಯ ಅಂಗ ಎಂದು ಅನಿಸುತ್ತಿದ್ದ ಕಾರಣ ನಿಮ್ಮ ವಾರ್ಡನ ಮೇಲೆ ನಿಮಗೆ ಪ್ರೀತಿ ಹೆಚ್ಚಾಗುತ್ತಿತ್ತು. ವಾರ್ಡ ಕಮಿಟಿಯಿಂದ ಬೇರೆ ಏನೂ ಆಗದಿದ್ದರೂ ನಿಮ್ಮ ರಸ್ತೆ, ನೀರು, ಚರಂಡಿ, ತೋಡು, ವಿದ್ಯುತ್ ಕಂಬ ಸಹಿತ ಯಾವುದೇ ಕಾಮಗಾರಿಗೆ ಎಷ್ಟು ಅನುದಾನ ಬಿಡುಗಡೆ ಆಗಿದೆ ಅಷ್ಟು ಹಣ ಕೂಡ ಸದ್ಭಳಕೆ ಆಗುತ್ತದೆ ಎನ್ನುವ ಧೈರ್ಯ ನಿಮ್ಮಲ್ಲಿ ಬರುತ್ತಿತ್ತು. ಯಾವ ಒಬ್ಬನೇ ಒಬ್ಬ ಅಧಿಕಾರಿ ಅಥವಾ ಸದಸ್ಯ ಒಂದು ರೂಪಾಯಿ ಕೂಡ ನುಂಗಲು ಆಗುತ್ತಿರಲಿಲ್ಲ.

ಆದರೆ ಇಲ್ಲಿಯ ತನಕ ಒಬ್ಬನೇ ಒಬ್ಬ ಸದಸ್ಯ ಅಥವಾ ಅಧಿಕಾರಿ ಮುಂದೆ ಬಂದೂ ವಾರ್ಡ ಕಮಿಟಿ ಆಗಲೇಬೇಕು ಎಂದು ಹೇಳಿಲ್ಲ. ನಿಮ್ಮ ಸದಸ್ಯನನ್ನು\ಳನ್ನು ನೀವು ಕೇಳಿಲ್ಲ. ಕೇಳುವಂತಹ ಧೈರ್ಯ ನಿಮಗೆ ಇಲ್ಲವೇ ಇಲ್ಲ. ನೀವು ಕೇಳುವಾಗ ಇನ್ನೊಂದಿಷ್ಟು ಸದಸ್ಯರು ತಮ್ಮ ಮನೆ, ಮಠ ಗಟ್ಟಿಮಾಡಿಕೊಂಡು ಪಾಲಿಕೆಗೆ ದೊಡ್ಡ ನಮಸ್ಕಾರ ಹಾಕಿಕೊಂಡು ಇಷ್ಟು ವರ್ಷ ನಮಗೆ ತಿನ್ನಲು ಅವಕಾಶ ಮಾಡಿಕೊಟ್ಟ ಪಾಲಿಕೆಗೆ, ಅದರ ಅಧಿಕಾರಿಗಳಿಗೆ ಮತ್ತು ವೋಟು ಕೊಟ್ಟು ಸಹಕರಿಸಿ ತನ್ನ ಉದ್ಧಾರಕ್ಕೆ ಅವಕಾಶ ಮಾಡಿಕೊಟ್ಟ ಮತದಾರರ ಪ್ರಭುವಿಗೆ ಅಭಾರಿ ಆಗಿದ್ದೇನೆಂದು ಹೇಳಿ ತೆಪ್ಪಗೆ ಹೊರಟು ಹೋಗಿರುತ್ತಾರೆ. ನೀವು ಮಾತ್ರ ನಮ್ಮ ವಾರ್ಡ ಯಾವಾಗಲೂ ಹೀಗೆಯೇ ಎಂದು ಅವನಿಗೆ ಅಥವಾ ಅವಳಿಗೆ ಬೈಯುತ್ತಾ ಮುಂದಿನ ಬಾರಿ ಚುನಾವಣೆಗೆ ನಿಲ್ಲುವವನಿಗೆ ಓಟು ಹಾಕುತ್ತಿರಿ ವಿನ: ವಾರ್ಡ ಕಮಿಟಿ ಮಾಡುತ್ತಿಯಾ ಅಥವಾ ನೀನು ಕೂಡ ತಿನ್ನಲು ಕುಳಿತುಕೊಳ್ಳುತ್ತಿಯಾ ಎಂದು ಕೇಳುವುದಿಲ್ಲ. ಇದು ನಮ್ಮ ಪರಿಸ್ಥಿತಿ. ಹಾಗಿದ್ದಲ್ಲಿ ಇದು ಯಾರ ತಪ್ಪು? ಕೇಳದೇ ಇರುವ ನಮ್ಮದೊ, ನಾವು ಒತ್ತಾಯ ಮಾಡಿಲ್ಲ ಎಂದು ತಮ್ಮ ಪಾಡಿಗೆ ತಾವಿರುವ ಅವರದ್ದೋ. ಒಟ್ಟಿನಲ್ಲಿ ಬೆಂಕಿಗೆ ಗಂಟೆ ಕಟ್ಟುವವರು ಯಾರು ಎಂದು ನೀವು ಟೆನ್ಷನ್ ಮಾಡಿಕೊಳ್ಳುತ್ತಿದ್ದಿರಾದರೆ ಆ ಬಗ್ಗೆ ವರಿ ಮಾಡಬೇಡಿ. ನಾನಿದ್ದೇನೆ. ಬೆಕ್ಕಿಗೆ ಗಂಟೆ ನಾನು ಕಟ್ಟುತ್ತೆನೆ, ಆದರೆ ಅದಕ್ಕೆ ನೀವು ನನ್ನೊಡನೆ ಕೈಜೋಡಿಸಬೇಕು.

ಇದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ 2013 ರ ಜೂನ್ 17 ರಂದು ನಡೆದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಆದೇಶ ನೀಡಿದ ಮೊದಲ ಕೆಲಸ ಫೈಲ್ ಆಗಿರುವುದು. ಅಷ್ಟಕ್ಕೂ ವಿನಯ ಕುಮಾರ್ ಸೊರಕೆಯವರು ಹಟ ಹಿಡಿದು ಈ ಕೆಲಸ ಆಗಲೇಬೇಕು, ವಾರ್ಡ ಸಮಿತಿ ಮನಪಾದಲ್ಲಿ ಯಾಕೆ ಆಗುವುದಿಲ್ಲ ಎಂದು ಅಧಿಕಾರಿಗಳಿಗೆ, ಸದಸ್ಯರಿಗೆ ಜೋರು ಮಾಡಿ ಕೇಳಿ, ಮಾಡಿಸಿದ್ದರೆ ಅದು ಬೇರೆ. ಅವರು ಮಾಡಿಸಲ್ಲಿಲ್ಲ ಈಗಿನ ಭೈರತಿಯವರಾದರೂ ಮಾಡಿಸುತ್ತಾರ? ಇವರಿಗೆ ಜನರ ಬಗ್ಗೆ, ಜನರ ತೆರಿಗೆಯ ಹಣದ ಬಗ್ಗೆ ಕಾಳಜಿ ಇದೆ ಎಂದು ಗೊತ್ತಾಗುತ್ತಿತ್ತು. ಆದರೆ ಅವರು ಕೂಡ ಮೌನವಾಗಿರುವುದು ನೋಡಿದಾಗ ಅವರು ಕೂಡ ಅಧಿಕಾರಿಗಳಿಗೆ, ಗೌರವಾನ್ವಿತ ಸದಸ್ಯರಿಗೆ, ಆಡಳಿತಕ್ಕೆ ಕಷ್ಟಪಟ್ಟು ಬಂದಿರುವ ತನ್ನ ಪಕ್ಷದ ಸದಸ್ಯರಿಗೆ ಹಣ ನುಂಗಲು ಅವಕಾಶ ಕೊಟ್ಟಂತೆ ಕಾಣುತ್ತದೆ ಅಥವಾ ನಾವು ತೆಗೆದುಕೊಳ್ಳುತ್ತಿರುವ ಲಂಚ ನಮಗೆ ಮಾತ್ರವಲ್ಲ, ನಾವು ಮೇಲಿನಿಂದ ಕೆಳಗಿನವರೆಗೆ ಎಲ್ಲರಿಗೂ ಕೊಡಬೇಕು ಎನ್ನುವ ಹಳೆ ಡೈಲಾಗ್ ಇದೆಯಲ್ಲ ಅದರಂತೆ ಮೇಲಿನಿಂದ ಕೆಳಗಿನ ತನಕ ಎಲ್ಲ ಜನಪ್ರತಿನಿಧಿಗಳಿಗೆ ಅದರಲ್ಲಿ ಪಾಲು ಇದೆಯೋ ಪಾಪ.

ಇನ್ನೂ ಅದೇ ಸಭೆಯಲ್ಲಿ ವಿನಯ ಕುಮಾರ ಸೊರಕೆಯವರು ಮತ್ತೊಂದು ಸೂಚನೆಯನ್ನು ಪಾಲಿಕೆಗೆ ನೀಡಿದ್ದರು ” ಕಟ್ಟಡ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಮುಂದಿನ ಮೂರು ತಿಂಗಳಲ್ಲಿ ಇತ್ಯರ್ಥಗೊಳಿಸಿ ಅರ್ಹ ಪ್ರಕರಣಗಳಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವುದು” ಈ ಸೂಚನೆ ಪಾಲಿಕೆಗೆ ಸಿಕ್ಕಿ ಇವತ್ತಿಗೆ ಏಳುವರ್ಷ ನಾಲ್ಕೈದು ತಿಂಗಳು ಕಳೆದು ಹೋಗಿದೆ. ಪಾಲಿಕೆಯಿಂದ ಒಂದೇ ಒಂದು ಬಿಲ್ಡರ್ ಮೇಲೆ ಕ್ರಮ ಕೈಗೊಂಡಿಲ್ಲ. ಅದರರ್ಥ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಕಟ್ಟಡಗಳು ಇಲ್ಲ ಎಂದಾ? ಆ ಬಗ್ಗೆ ನಾನೇ ಕಳೆದ ಜಾಗೃತ ಲೇಖನದಲ್ಲಿ ಎಷ್ಟು ಅನಧಿಕೃತ ಕಟ್ಟಡಗಳಿವೆ ಎನ್ನುವ ಲಿಸ್ಟ್ ಕೊಟ್ಟಿದೆ. ಹಾಗಿದ್ದರೆ ಸಚಿವರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತನ್ನು ಕೊಡದಷ್ಟು ಪಾಲಿಕೆ ಬೆಳೆದಿದೆಯಾ? ಅಥವಾ ಸೊರಕೆಯವರೇ ಎದುರಿನಿಂದ ಸೂಚನೆ ಕೊಟ್ಟು ಅದು ಜನರಿಗೆ ಖುಷಿ ಮಾಡಲು ಹೇಳಿದ್ದು, ಏನೂ ಕ್ರಮ ತೆಗೆದುಕೊಳ್ಳಲು ಹೋಗಬೇಡಿ ಎಂದು ಹೇಳಿದ್ದಾರಾ? ಅಥವಾ ಸೊರಕೆಯವರು ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ಬಹಿರಂಗವಾಗಿ, ಅಂತರಂಗವಾಗಿ ಎರಡೂ ಕಡೆ ಹೇಳಿದ್ದಾರೆ ಎಂದೇ ಅಂದುಕೊಳ್ಳೋಣ, ಆಗ ಆದೇಶವನ್ನು ಈಡೇರಿಸುವುದು ಅಧಿಕಾರಿಗಳ ಕರ್ತವ್ಯ ಅಲ್ಲವೇ, ಕನಿಷ್ಟ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ತಮ್ಮ ಪಕ್ಷದ ನಾಯಕರೂ ಆಗಿರುವ ಸಚಿವ ಸೊರಕೆಯವರ ಸೂಚನೆಯನ್ನು ಅಧಿಕಾರಿಗಳು ರದ್ದಿ ಕಾಗದದಂತೆ ಎಲ್ಲೋ ಬಿಸಾಡಿದ್ದಾರೆ ಎಂದು ಗೊತ್ತಾದಾಗ ಕನಿಷ್ಟ ಕೋಪವೂ ಬರಲ್ಲಿಲ್ಲವೂ ಏನೋ, ರಾಜ್ಯ ಸರಕಾರದ ಮಂತ್ರಿಗಳಿಂದ ಹಿಡಿದು ಪಾಲಿಕೆಯ ಕಡೆಯೆ ಅಧಿಕಾರಿ ಎಲ್ಲರೂ ಒಟ್ಟಿಗೆ ಎಲೆ ಹಾಕಿ ಕುತ್ಕೊಂಡಂತೆ ಕಾಣಿಸುತ್ತದೆ. ಹೋಗಲಿ ಈಗಿನ ಬಿಜೆಪಿ ಸರಕಾರದ ನಮ್ಮ ಶಾಸಕರುಗಳು ತಮ್ಮ ನಗರಾಭಿವೃದ್ಧಿ ಸಚಿವರಿಂದ ಈ ಎರಡು ಕೆಲಸಗಳನ್ನು ಮಾಡಿಸುವರೇ.

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Tulunadu News September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Tulunadu News September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search