ಕೈಯಲ್ಲಿ ಪಿಸ್ತೂಲ್, ತಲವಾರು ಹಿಡಿದು ಹಾಡುಹಗಲೇ ಓಡಾಡಲು ನಮ್ಮದೇನೂ ಬಿಹಾರವೇ?
Tulunadu News
Posted On November 1, 2020
ಮಂಗಳೂರು ನಗರದೊಳಗೆ ಪಿಸ್ತೂಲ್ ಗಳು ಬಂದುಬಿಟ್ಟಿದೆ. ಅದನ್ನು ಅಪ್ಪಟ ಆಟಿಕೆಯ ವಸ್ತುಗಳಂತೆ ಬಳಸುವ ಹುಡುಗರು ಕೂಡ ಎಂಟ್ರಿ ಪಡೆದುಕೊಂಡಿದ್ದಾರೆ. ಯುಪಿ, ಬಿಹಾರ ಹಿನ್ನಲೆಯುಳ್ಳ ಸಿನೆಮಾಗಳಲ್ಲಿ ಖಳನಾಯಕರು ಹೋಟೇಲುಗಳಲ್ಲಿ ತಿಂಡಿ ಸರಿ ಕೊಡಲಿಲ್ಲ ಎಂದು ಕಿಸೆಯಲ್ಲಿದ್ದ ಪಿಸ್ತೂಲ್ ತೆಗೆದು ಅಂಗಡಿ ಮಾಲೀಕನನ್ನು ಹೆದರಿಸಿ ಫೋಸ್ ಕೊಡುತ್ತಾರಲ್ಲ, ಅದನ್ನೇ ಮಂಗಳೂರಿನ ಪಳ್ನೀರ್ ನಲ್ಲಿ ಕೆಲವು ಹುಡುಗರು ಮಾಡಿದ್ದನ್ನು ಕೇಳಿದಾಗ ಈ ಲೆವೆಲ್ಲಿಗೆ ಮಂಗಳೂರು ಬಂತಾ ಎಂದು ಅನಿಸುತ್ತದೆ. ಇನ್ನು ಜಿಲ್ಲೆಯ ವಿಷಯ ತೆಗೆದುಕೊಳ್ಳೋಣ. ಸುರೇಂದ್ರ ಬಂಟ್ವಾಳ್ ಹತ್ಯೆಯಾಯಿತು, ನಂತರ ಫಾರೂಕ್ ಎನ್ನುವ ರೌಡಿಶೀಟರ್ ಕೊಲೆಯಾಯಿತು, ಮೊನ್ನೆಯಷ್ಟೇ ದಿನೇಶ್ ಎನ್ನುವ ಯುವಕನ ಹತ್ಯೆಗೆ ವಿಫಲ ಯತ್ನವಾಯಿತು. ದಿನೇಶ್ ಅವರನ್ನು ಸ್ಟುಡಿಯೋ ಒಳಗೆ ಬಂದು ತಲವಾರಿನಿಂದ ಹೊಡೆಯಲಾಗಿತ್ತು. ಅಷ್ಟಕ್ಕೂ ಅವರ ಸ್ಟುಡಿಯೋದಿಂದ ಪೊಲೀಸ್ ಠಾಣೆ ಒಂದೇ ಬೊಬ್ಬೆಗೆ ಕೇಳುವಷ್ಟೇ ಹತ್ತಿರದಲ್ಲಿದೆ. ಅವರ ಸ್ಟುಡಿಯೋ ಕಾಡಂಚಿನಲ್ಲಿಲ್ಲ. ಯಾವುದೋ ಕುಗ್ರಾಮದಲ್ಲಿಲ್ಲ. ಅದು ಇರುವುದು ಜನನಿಬಿಡ ಬಸ್ ಸ್ಟಾಪ್ ಇರುವ ಪ್ರದೇಶದಲ್ಲಿ. ಆದರೂ ದುಷ್ಕರ್ಮಿಗಳು ತಮ್ಮ ಧೈರ್ಯ ತೋರಿಸಿದ್ದಾರೆ. ಪಕ್ಕದ ಉಡುಪಿಯಲ್ಲಿ ಹಾಡುಹಗಲೇ ರಸ್ತೆಯಲ್ಲಿ ಓಡಾಡಿಸಿ ಯುವಕನೊಬ್ಬನ ಹತ್ಯೆ ಮಾಡಲಾಯಿತು. ಹಾಗಾದರೆ ಇಲ್ಲಿ ಏನು ನಡೆಯುತ್ತಿದೆ?
ಹಂತಕರಿಗೆ ಪೊಲೀಸರ ಭಯ ಇಲ್ವಾ? ಪುಂಡ ಯುವಕರು ಇಲ್ಲೊಂದು ಪೊಲೀಸ್ ವ್ಯವಸ್ಥೆ ಇದೆ ಎಂದೇ ಮರೆತಿದ್ದಾರಾ? ನಮ್ಮಲ್ಲಿ ಕಣ್ಣಿನಲ್ಲಿಯೇ ಮಾತನಾಡಿ ರೌಡಿಗಳ ನೆತ್ತರು ಹಣೆಯಲ್ಲಿ ಬೆವರಾಗಿ ಬರುವಂತೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ನಾವು ಪಡೆದಿಲ್ಲವಾ? ಎನ್ಟಿ ರೌಡಿ ಸ್ಕ್ವಾಡ್ ಮತ್ತೆ ಬೇಕಾ? ಎಲ್ಲ ಪ್ರಶ್ನೆಗಳು ಈಗ ಉದ್ಭವವಾಗುತ್ತದೆ. ಒಂದು ಸಮೋಸಕ್ಕಾಗಿ ಪಿಸ್ತೂಲ್ ತೆಗೆಯುವ ಸಂಸ್ಕೃತಿ ಮಂಗಳೂರಿನದ್ದು ಅಲ್ಲವೇ ಅಲ್ಲ. ಅಂತಹ ಸಣ್ಣ ವಯಸ್ಸಿನ ಹುಡುಗರ ಬಳಿ ಪಿಸ್ತೂಲ್ ಹೇಗೆ ಬಂತು ಎನ್ನುವುದು ಕೂಡ ತನಿಖೆಯಾಗಬೇಕು. ಬಹುಶ: ಅದನ್ನು ಬೆನ್ನತ್ತಿ ಹೋದರೆ ಯಾವುದಾದರೂ ದೊಡ್ಡ ದುರ್ಘಟನೆ ಆಗುವುದನ್ನು ತಪ್ಪಿಸಬಹುದು. ಈಗ ಮಾಡಲು ಕೆಲಸವಿಲ್ಲದೇ, ದುಡಿಯಲು ಉದ್ಯೋಗವಿಲ್ಲದೆ ಪುಂಡರಾಗುತ್ತಿರುವ ಯುವಕರ ಸಂಖ್ಯೆ ಕೊರೊನಾ ಈ ಅವಧಿಯಲ್ಲಿ ಹೆಚ್ಚಾಗುತ್ತಿದೆ. ಆರು ತಿಂಗಳು ಮನೆಯಲ್ಲಿ ಕುಳಿತು ಈಗ ಸೊಂಟ ಬಾಗುವುದಿಲ್ಲ. ಮೈಯಲ್ಲಿ ಬೊಜ್ಜು ಮತ್ತು ಮನಸ್ಸಿನಲ್ಲಿ ಆಲಸ್ಯ ಹೆಚ್ಚಿದೆ. ಹೊಸ ಉದ್ಯೋಗ ಇನ್ನು ಸಿಗದೆ ಹಳೆಯ ಉದ್ಯೋಗದಲ್ಲಿ ಪೂರ್ಣಾವಧಿ ಇಲ್ಲದೆ ಐಷಾರಾಮಿ ಜೀವನಕ್ಕೆ ಹಣ ಬೇಕಾದಾಗ ಏನಾದರೂ ದರೋಡೆ, ಕೊಲೆ ಮಾಡಿದರೆ ಇಷ್ಟು ಹಣ ಸಿಗುತ್ತೆ ಎಂದು ಯಾರಾದರೂ ಹಳೆಯ ಪಂಟರುಗಳು ಆಮಿಷ ತೋರಿಸಿದರೆ ಫೀಲ್ಡಿಗಿಳಿಯುವ ಯುವಕರು ಈಗ ಅನೇಕರಿದ್ದಾರೆ. ಅವರಿಗೆ ನಾಲ್ಕು ಹಿಂದಿ ಸಿನೆಮಾ ನೋಡಿ ಹಾಗೆ ಪಿಸ್ತೂಲ್ ಎತ್ತಿ ಹಿಡಿಯಬೇಕು ಎನ್ನುವ ಷೋಕಿಯೂ ಸೇರಿಕೊಂಡರೆ ನಂತರ ಅವರನ್ನು ಯಾರೂ ತಡೆಯಲಾರದು. ಇಲ್ಲದೇ ಹೋದರೆ ಹಾಡುಹಗಲೇ ಸಮೋಸ ಅಂಗಡಿಯ ಗ್ರಾಹಕರ ಕೈಯಲ್ಲಿ ಪಿಸ್ತೂಲ್ ಎಲ್ಲಿಂದ?
ಇನ್ನು ದಿನೇಶ್ ಅವರನ್ನು ಕೊಲ್ಲಲು ಬಂದ ಹಂತಕರ ಪಡೆಗೆ ಸೂಕ್ತ ಶಿಕ್ಷೆ ಆಗದೇ ಇದ್ದರೆ ಅದು ಸ್ವಸ್ಥ ಸಮಾಜಕ್ಕೆ ಇನ್ನೂ ಡೇಂಜರ್. ಇದರಲ್ಲಿ ಹಿಂದೂ, ಮುಸ್ಲಿಂ, ಬಿಜೆಪಿ, ಕಾಂಗ್ರೆಸ್ ಎಂದು ಬರಲೇಬಾರದು. ದಿನೇಶ್ ರೌಡಿಶೀಟರ್ ಅಲ್ಲವೇ ಅಲ್ಲ. ಅವರು ಒಂದು ಬಾಲಕಿಯ ಮೇಲೆ ಕೆಲವರು ಲೈಂಗಿಕ ಕಿರುಕುಳ ಕೊಡುತ್ತಿದ್ದಾಗ ವಿರೋಧಿಸಿದವರು. ಆ ಹೆಣ್ಣುಮಗುವಿನ ಕುಟುಂಬದ ಪರವಾಗಿ ನಿಂತವರು. ಅವರ ಮೇಲೆ ಮಾರಣಾಂತಿಕ ಹಲ್ಲೆ ಆದಾಗ ಕೇವಲ ಬಿಜೆಪಿಯವರು ಮಾತ್ರ ಯಾಕೆ ನೋವು ಅನುಭವಿಸಬೇಕು. ಇಲ್ಲಿ ಯಾಕೆ ಕಾಂಗ್ರೆಸ್ಸಿನವರು ಒಂದು ಸಣ್ಣ ಹೇಳಿಕೆಯನ್ನು ಕೊಡುವುದಿಲ್ಲ. ಕೊಟ್ಟರೆ ಮುಸ್ಲಿಮರು ಬೇಸರ ಪಟ್ಟುಕೊಳ್ಳುತ್ತಾರೆ ಎನ್ನುವ ಆತಂಕ ಇದೆಯಾ? ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳ ಮೇಲೆ ಅನ್ಯಾಯವಾದಾಗ ಎಲ್ಲರೂ ಪ್ರತಿಭಟಿಸಬೇಕು. ಆಗ ದುರುಳರಿಗೆ ಹೆದರಿಕೆ ಇರುತ್ತದೆ. ಹಥರಸ್ ಪ್ರಕರಣದಲ್ಲಿ ಕಾಂಗ್ರೆಸ್ಸಿನವರು ಪ್ರತಿಭಟನೆ ಮಾಡಿದರು. ನಾನು ಕಾಂಗ್ರೆಸ್ ಮಾಡಿದ್ದು ತಪ್ಪು ಎಂದು ವಿರೋಧಿಸುವುದಿಲ್ಲ. ಆದರೆ ದಿನೇಶ್ ಅವರ ಮೇಲೆ ತಲವಾರು ಹಿಡಿದು ಮುಗಿಬಿದ್ದ ಆರೋಪಿಗಳ ಬಗ್ಗೆ ಈಗ ಯಾಕೆ ಕಾಂಗ್ರೆಸ್ಸಿಗರು ಮೌನವಾಗಿದ್ದಾರೆ. ನಮ್ಮಲ್ಲಿ ಬೀದಿ ಗಲಾಟೆಗಳು ಯಾವಾಗ ಬಿಜೆಪಿ, ಕಾಂಗ್ರೆಸ್ ಆಗುತ್ತದೆಯೋ ಆಗಲೇ ಕೆಲವು ಪುಂಡರಿಗೆ ಧೈರ್ಯ ಬರುತ್ತದೆ. ಯಾವಾಗ ಆ ಹೆಣ್ಣುಮಗುವಿನ ಮೇಲೆ ಅದು ಕೂಡ ಅಪ್ರಾಪ್ತ ಮಗುವಿನ ಮೇಲೆ ಲೈಂಗಿಕ ಕಿರುಕುಳ ಆದಾಗ ದಿನೇಶ್ ಜೊತೆ ಅಲ್ಲಿನವರು ಧರ್ಮಭೇದವಿಲ್ಲದೆ ನಿಂತು ಎಲ್ಲರೂ ಆರೋಪಿಗಳನ್ನು ಬಹಿಷ್ಕರಿಸಿದ್ದಲ್ಲಿ ಕೊಲ್ಲಲು ಬಂದವರಿಗೆ ಮೊನ್ನೆ ಅಂತಹ ಧೈರ್ಯ ಇರುತ್ತಿರಲಿಲ್ಲ. ಅದು ಕೂಡ ಪೊಲೀಸ್ ಠಾಣೆಯ ಕಣ್ಣೇದುರೆ ಇರುವ ಸ್ಟುಡಿಯೋದ ಒಳಗೆ.
ಕೊಲ್ಲಲು ಹೋಗುವ ಪ್ರತಿಯೊಬ್ಬರಿಗೂ ಗೊತ್ತು. ಪೊಲೀಸರು ಎಫ್ ಐಆರ್ ದಾಖಲಿಸುತ್ತಾರೆ. ಯಾರೋ ಬಂದು ಸರೆಂಡರ್ ಆಗುತ್ತಾರೆ. ಕೇಸ್ ಮುಂದೆ ಸಾಕ್ಷ್ಯ ಇಲ್ಲದೆ ಬಿದ್ದು ಹೋಗುತ್ತದೆ. ಕೊಂದವರಿಗೆ ಅಥವಾ ಕೊಲೆಯತ್ನ ಮಾಡಿದ ನೈಜ ದುರುಳರಿಗೆ ಫೀಲ್ಡಿನಲ್ಲಿ ಸ್ಟಾರ್ ಗಿರಿ ಸಿಗುತ್ತದೆ!

- Advertisement -
Leave A Reply