• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯಾರಿಗೂ ಬೇಸರವಾಗದಂತೆ ಕರ್ಫ್ಯೂ ಹೇರಿದ ಏಕೈಕ ಸಿಎಂ ಯಡ್ಡಿ!!

AvatarTulunadu News Posted On December 23, 2020


  • Share On Facebook
  • Tweet It

ನಾವು ಈ ಜಾಗೃತ ಅಂಕಣವನ್ನು ಪೋಸ್ಟ್ ಮಾಡುವ ಹೊತ್ತಿಗೆ ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ನೆಷ್ಟು ಟ್ವಿಸ್ಟ್ ಎಂಡ್ ಟರ್ನ್ ಕೊಡಲಿದ್ದಾರೋ ಎನ್ನುವುದು ದೇವರಿಗೆ ಗೊತ್ತು. ಒಂದು ಕುತೂಹಲಕಾರಿ ಸಿನೆಮಾದಲ್ಲಿ ಇರುವುದಕ್ಕಿಂತಲೂ ಹೆಚ್ಚು ಯೂ ಟರ್ನ್ ಗಳನ್ನು ಈಗಿನ ರಾಜ್ಯ ಸರಕಾರದ ಆಡಳಿತದಲ್ಲಿ ನಾವು ನೋಡುತ್ತಿದ್ದೇವೆ. ಯಡಿಯೂರಪ್ಪನವರಿಗೆ ಸೂಕ್ತವಾದ ಸಲಹೆಗಾರರ ಕೊರತೆಯೋ ಅಥವಾ ಎಡಬಿಡಂಗಿ ಸಲಹೆಗಾರರನ್ನು ಇಟ್ಟುಕೊಂಡಿರಬಹುದಾದ ಸಾಧ್ಯತೆಯೋ ಭಗವಂತನೇ ಬಲ್ಲ. ಒಟ್ಟಿನಲ್ಲಿ ಯಡಿಯೂರಪ್ಪನವರನ್ನು ನಂಬಿ ಪತ್ರಿಕೆಗಳು, ಟಿವಿಗಳು, ವೆಬ್ ಸೈಟ್ ಗಳು ಸುದ್ದಿ ಮಾಡಿದರೆ ವರದಿಗಾರರು ತಲೆ ಚಚ್ಚಿಕೊಳ್ಳಬೇಕಾಗಬಹುದೇನೊ. ಅಷ್ಟಕ್ಕೂ ನಾನು ಇದನ್ನು ಹೇಳುತ್ತಿರುವುದು ಯಡ್ಡಿ ಘೋಷಿಸಿದ ನೈಟ್ ಕರ್ಫೂ ಬಗ್ಗೆ. ಕರ್ಫೂ ಎಂದರೇನು ಎನ್ನುವುದನ್ನು ಮೊದಲು ಸಿಎಂ ಹೇಳಬೇಕು. ಅದಕ್ಕಿಂತ ಮೊದಲು ಇವರು ಮಾಡಿರುವ ಎಡವಟ್ಟುಗಳನ್ನು ನೋಡೋಣ. ಬೆಳಿಗ್ಗೆ ಏನು ಹೇಳಿದ್ರು ಎಂದರೆ ಬುಧವಾರ ರಾತ್ರಿಯಿಂದ ಜನವರಿ 2 ರ ತನಕ ಕರ್ಫೂ ಎಂದರು. ಸಂಜೆ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡಿ ಇವತ್ತು ಬೇಡಾ, ನಾಳೆಯಿಂದ ಶುರು ಮಾಡೋಣ ಎಂದು ಹೇಳಿದ್ರು. ಬೇಕಾದರೆ ಈ ವಿಷಯವನ್ನೇ ತೆಗೆದುಕೊಳ್ಳಿ. ಯಾವುದೇ ಒಂದು ಬದಲಾವಣೆ ಆಗಬೇಕಾದರೆ ಅದು ನಿಂತ ನಿಲುವಿನಲ್ಲಿ ಆಗೋದಿಲ್ಲ. ಅದಕ್ಕೆ ಸಮಯ ಬೇಕು. ಇವತ್ತು ರಾತ್ರಿ ಯಾರಾದರೂ ಏನಾದರೂ ಪ್ಲಾನ್ ಮಾಡಿದ್ರೆ ಸಡನ್ ಬದಲಾವಣೆ ಕಷ್ಟಸಾಧ್ಯ. ಇನ್ನು ಕೆಲವರಿಗೆ ನಾಳೆಯ ಪೇಪರ್ ಓದಿದ ಮೇಲೆನೆ ಕರ್ಫೂ ವಿಷಯ ಗೊತ್ತಾಗುವುದು. ಇನ್ನು ಪೊಲೀಸ್ ಇಲಾಖೆ ತನ್ನ ಅಷ್ಟೂ ಸಾಮರ್ತ್ಯವನ್ನು ಬಳಸಬೇಕಾದರೆ ಸಮಯ ಬೇಕು. ಅದಕ್ಕಾಗಿ ಯಾವುದೇ ಒಂದು ದಿಢೀರ್ ಬದಲಾವಣೆ ಮಾಡಬೇಕಾದರೆ ಅಧಿಕಾರಿಗಳು ಮೊದಲು ಕೇಳುವುದೇ ನಮಗೆ ಒಂದು ದಿನ ಸಮಯ ಕೊಡಿ. ಇಲ್ಲಿ ಯಡಿಯೂರಪ್ಪನವರು ಅವರ ಮಾತುಗಳನ್ನು ಕೇಳಲೇಬೇಕಾಗಿಲ್ಲ. ಆಗಲ್ಲಾರಿ, ಇವತ್ತಿನಿಂದ ಕರ್ಫೂ ಶುರು, ನೀವು ಏನೂಂತ ವ್ಯವಸ್ಥೆ ಮಾಡಿ, ಇದು ಸಿಎಂ ಆದೇಶ ಎಂದು ಹೇಳಿಬಿಡಬಹುದು. ಅವರು ಹಾಗೆ ಹೇಳುವ ಎಲ್ಲ ಅವಕಾಶವನ್ನು ಹೊಂದಿದ್ದಾರೆ. ಆದರೆ ಯಡ್ಡಿ ಅಧಿಕಾರಿಗಳ ಮುಂದೆ ಕುಳಿತುಕೊಂಡಂತೆ ಥಂಡಾ ಹೊಡೆದು ಬಿಡುತ್ತಾರೆ. ಅದಕ್ಕೆ ಈ ಬದಲಾವಣೆಯೇ ಕಾರಣ. ಎರಡನೇಯದಾಗಿ ರಾತ್ರಿ 10 ರಿಂದ ಬೆಳಿಗ್ಗೆ 6 ರ ತನಕ ಕರ್ಫೂ ಎಂದು ಸಿಎಂ ಬೆಳಿಗ್ಗೆ ಹೇಳಿಬಿಟ್ಟಿದ್ದಾರೆ. ಅಧಿಕಾರಿಗಳ ಸಭೆಯ ನಂತರ ಅದು ರಾತ್ರಿ 11 ರಿಂದ ಬೆಳಿಗ್ಗೆ 5ಕ್ಕೆ ಬಂದು ಬಿಟ್ಟಿದೆ. ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ತನಕವೇ ಕರ್ಫೂ ಮಾಡುವುದಾದರೆ ಅದರಿಂದ ಆಗಬಹುದಾದ ಪ್ರಯೋಜನವೇನು ಎನ್ನುವುದನ್ನು ಯಡ್ಡಿ ಹೇಳಬೇಕು. ಹಾಗಂತ ಇದು ರಾತ್ರಿಯ ಕಟ್ಟುನಿಟ್ಟಿನ ಕರ್ಫೂ ಎಂದು ಯೋಚಿಸಬೇಕಾಗಿಲ್ಲ. ರಾತ್ರಿ ಪಾಳಿಯಲ್ಲಿ ಡ್ಯೂಟಿಗೆ ಹೋಗುವವರು ತಮ್ಮ ಐಡಿ ಕಾರ್ಡ್ ತೋರಿಸಿದರೆ ಸಾಕು. ಅವರಿಗೆ ಯಾವುದೇ ರೀತಿಯ ಅಡಚಣೆ ಇಲ್ಲ. ಇನ್ನು ರೈಲು, ಬಸ್ಸು, ವಿಮಾನಗಳಲ್ಲಿ ಬರುವ ಹೋಗುವ ಪ್ರಯಾಣಿಕರಿಗೆ ಯಾವುದೇ ನಿರ್ಭಂಧ ಇಲ್ಲ. ಅವರನ್ನು ಪಿಕ್ ಅಪ್ ಅಂಡ್ ಡ್ರಾಪ್ ಮಾಡಲು ಟ್ಯಾಕ್ಸಿಗಳು ಆರಾಮವಾಗಿ ಓಡಾಟ ಮಾಡಬಹುದು. ಕ್ರೈಸ್ತರ ಸಾಮೂಹಿಕ ಪ್ರಾರ್ಥನೆಗೆ ರಾಜ್ಯ ಸರಕಾರ ಪೂರ್ಣ ವಿನಾಯಿತಿ ಇದೆ. ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮಿಸಲು ಯಾವುದೇ ರೀತಿಯ ತೊಂದರೆ ಇಲ್ಲ. ಈ ಮೂಲಕ ತಾವು ಎಲ್ಲರಿಗೂ ಬೇಕಾದವನು ಎಂದು ತೋರಿಸುವ ವಿಫಲ ಪ್ರಯತ್ನ ಯಡ್ಡಿಜಿಯವರಿಂದ ಆಗಿದೆ. ಡಿಸೆಂಬರ್ 24 ರಂದು ರಾತ್ರಿ ಕ್ರೈಸ್ತರು ತಮ್ಮ ಮಿಡ್ ನೈಟ್ ಮಾಸ್ ಮಾಡಬಹುದು. ಅದಕ್ಕೆ ಯಾವುದೇ ತೊಂದರೆ ಇಲ್ಲ. ಯಡ್ಡಿ ಈ ಹೊತ್ತಿನಲ್ಲಿಯೂ ಕ್ರೈಸ್ತ ಮತಗಳ ಮೇಲೆ ಆಸೆ ಇಟ್ಟು ಹೀಗೆ ಷರತ್ತುಗಳಲ್ಲಿ ಅಗಾಧ ಸಡಿಲಿಕೆ ಕೊಟ್ಟಿರುವುದಕ್ಕೆ ಅವರಿಗೆ ಕ್ರೈಸ್ತರು ಚಿರ ಋಣಿ ಆಗಿರಲೇಬೇಕು. ಅದೇ ದೇವಸ್ಥಾನ ಆಗಿದ್ದರೆ ನವರಾತ್ರಿ, ಚೌತಿಯಲ್ಲಿ ಇವರಿಗೆ ಹತ್ತು ಹಲವು ನಿರ್ಭಂದಗಳು ಬಾಯಿಗೆ ಬರುತ್ತದೆ. ಅದೇ ಬೇರೆ ಧರ್ಮದವರ ಹಬ್ಬವಾದರೆ ಯಾವುದೇ ಅಡಚಣೆ ಆಗದಂತೆ ಇವರೇ ನೋಡಿಕೊಳ್ಳುತ್ತಾರೆ. ಬಹುಶ: ಸ್ವತ: ಕ್ರೈಸ್ತರಿಗೂ ಯಡ್ಡಿ ನಿಲುವು ನೋಡಿ ಆಶ್ಚರ್ಯವಾಗಿರಬಹುದು. ಇನ್ನು ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಬೇಡಿ, ಸರಳವಾಗಿ ಆಚರಿಸಿ ಎಂದು ಯಡ್ಡಿ ಹೇಳಿದ್ದಾರೆ. ಯಾವುದು ಸರಳ, ಯಾವುದು ಅದ್ದೂರಿ ಎಂದು ಸಿಎಂ ಹೇಳಬೇಕು. ಎಲ್ಲರಿಗೂ ಖುಷಿಯಾಗುವಂತೆ, ಯಾರಿಗೂ ಬೇಸರವಾದಂತೆ ಕರ್ಫೂ ಹೇರಿರುವ ದೇಶದ ಏಕೈಕ ಸಿಎಂ ನಮ್ಮ ಯಡ್ಯೂರಪ್ಪ.
ಇನ್ನು ಅಗತ್ಯ ವಸ್ತುಗಳ ಸಾಗಾಟದ ಲಾರಿಗಳಿಗೆ ನಿಷೇಧ ಇಲ್ಲ, ರಾತ್ರಿ ಪಾಳಿಯ ಬಸ್ಸುಗಳು ಸಂಚರಿಸಬಹುದು, ಆದರೆ ಜನರು ಮಾತ್ರ ರಸ್ತೆಯಲ್ಲಿ ಓಡಾಡುವಂತೆ ಇಲ್ಲ. ಒಬ್ಬ ವ್ಯಕ್ತಿ ರಾತ್ರಿ ಮಲಗಿ ಬೆಳಿಗ್ಗೆ ಏಳುವ ನಡುವಿನಲ್ಲಿ ಕರ್ಫೂ ಸರಿಯಾಗಿ ಮುಗಿದಿರುತ್ತದೆ. ಇದು ಮಾಡುವ ಮೂಲಕ ನಮ್ಮ ರಾಜ್ಯದಲ್ಲಿ ನಾವು ಕೊರೊನಾವನ್ನು ಯಶಸ್ವಿಯಾಗಿ ನಿಯಂತ್ರಿಸುತ್ತಿದ್ದೇವೆ ಎಂದು ತೋರಿಸುವ ಹಂಬಲ ಯಡ್ಯೂರಪ್ಪನವರು. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಕಾರ್ಖಾನೆ, ಸಂಸ್ಥೆಗಳಿಗೆ ಕರ್ಫೂ ನಲ್ಲಿ ಅವಕಾಶ ಕೊಡಲಾಗಿದೆ. ಶೇಕಡಾ 50 ರಷ್ಟು ಕಾರ್ಮಿಕರು ಕೆಲಸ ಮಾಡಬಹುದು. ರಾತ್ರಿ ಕಾರ್ಮಿಕರು ಹೊರಗೆ ಬರಬಹುದು, ಬಸ್ಸು, ರೈಲು, ವಿಮಾನದಲ್ಲಿ ಹೋಗುವವರು ಟ್ಯಾಕ್ಸಿ ಅಗತ್ಯವಿದ್ದರೆ ತರಿಸಬಹುದು, ಲಾರಿಗಳು ಸಂಚರಿಸಬಹುದು, ಹನ್ನೊಂದು ಗಂಟೆಯ ತನಕ ಎಲ್ಲರೂ ಓಡಾಡಬಹುದು, ಬೆಳಿಗ್ಗೆ 5 ಗಂಟೆಗೆ ವಾಕಿಂಗ್ ಹೊರಡಬಹುದು. ಒಟ್ಟಿನಲ್ಲಿ ಅದರ ನಡುವೆ ಸಾರ್ವಜನಿಕರು ಸಂಚರಿಸುವಂತಿಲ್ಲ. ಸರಿಯಾಗಿ ತಾವು ಮಲಗುವ ಸಮಯದಲ್ಲಿ ಮಾತ್ರ ರಾಜ್ಯದಲ್ಲಿ ಕರ್ಫೂ ಜಾರಿಗೆ ತರುವ ಮೂಲಕ ಕೊರೊನಾ ಅಥವಾ ಹೊಸ ಬ್ರಿಟನ್ ವೈರಸ್ ಹರಡುವಿಕೆಯನ್ನು ಯಡ್ಡಿ ಯಶಸ್ವಿಯಾಗಿ ತಡೆದಿದ್ದಾರೆ. ಅವರಿಗೆ ಶುಭಾಶಯಗಳು.!
  • Share On Facebook
  • Tweet It


- Advertisement -


Trending Now
ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
Tulunadu News January 22, 2021
ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
Tulunadu News January 21, 2021
Leave A Reply

  • Recent Posts

    • ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
    • ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
    • ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
    • ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
    • 30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!
    • ಪಾಲಿಕೆ ಮತ್ತು ಗುಜರಿಯವರ ನಡುವಿನ "ಪ್ರೇಮ" ಸಂಬಂಧದಿಂದ ಪಾಲಿಕೆಯಲ್ಲಿ ಧ್ವನಿ ಎತ್ತುವವರಿಲ್ಲ...
    • ಟ್ರಾಫಿಕ್ ಸಮಸ್ಯೆ ಪರಿಹಾರವಾದರೆ ಲಾಭ ನನಗೆ ಅಲ್ಲ, ನಿಮಗೆ ಮತ ನೀಡಿದ ಜನರಿಗೆ...
    • ಮಂಗಳೂರು ಗೋಲಿಬಾರ್ ರಿವೇಂಜ್, ಪೊಲೀಸ್ ಗಣೇಶ್ ಕಾಮತ್ ಕೊಲೆ ಯತ್ನ ಆರು ಆರೋಪಿಗಳು ಅರೆಸ್ಟ್!
    • ಸಹಾಯ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಎದುರು ಬೆತ್ತಲೆ ನಿಂತ ಉಳ್ಳಾಲ ಎಸ್ಡಿಪಿಐ ಮುಖಂಡ ಅರೆಸ್ಟ್!
    • ಮೋದಿಜಿ, ಏಳಿ, ಎದ್ದೇಳಿ, ಒಟಿಟಿ ಮುಗಿಸದೇ ನಿಲ್ಲದಿರಿ!!
  • Popular Posts

    • 1
      ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
    • 2
      ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
    • 3
      ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
    • 4
      ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
    • 5
      30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search