ಕ್ರಿಸ್ಮಸ್ ಹೊಸ್ತಿಲಲ್ಲಿ ಬಂತು ಪಾದ್ರಿಗಳ ಲೈಂಗಿಕತೆ, ಕೊಲೆ ಪ್ರಕರಣದ ತೀರ್ಪು!!
ನೈತಿಕತೆಯ ಎಲ್ಲೆಯನ್ನು ಮೀರಿ ವರ್ತಿಸಿದ, ಹೊರ ಪ್ರಪಂಚಕ್ಕೆ ಗೊತ್ತಾಗಬಾರದು ಎಂದು ಪ್ರತ್ಯಕ್ಷದರ್ಶಿಗೆ ಚೂರಿ ಹಾಕಿ ಜೀವಂತವಾಗಿ ಬಾವಿಗೆ ದೂಡಿದ, ನಂತರ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರಿಗೆ ಲಂಚ ನೀಡಿದ್ದಾರೆ ಎಂದು ಹೇಳಲಾಗುವ ಆರೋಪಿಗಳು ಕೈಸ್ತರು ಭಕ್ತಿಯಿಂದ ಆರಾಧಿಸುವ ಚರ್ಚ್ ವೊಂದರ ಪಾದ್ರಿಗಳಾಗಿದ್ದರು ಎನ್ನುವುದೇ ಅಸಹ್ಯಕರ ವಿಷಯ. ಬೆಳ್ಳಂಬೆಳಿಗ್ಗೆ 4 ಗಂಟೆಗೆ ಚರ್ಚ್ ನ ಅಡುಗೆ ಕೋಣೆಗೆ ಯಾರಾದರೂ ಬರಬಹುದು ಎನ್ನುವ ಚಿಕ್ಕ ಸುಳಿವೇ ಮೂರು ಜನರಿಗೆ ಇರಲಿಲ್ಲ. “ಸಿಸ್ಟರ್” ಎಂದು ಕ್ರೈಸ್ತ ಸಮುದಾಯದಲ್ಲಿ ಕರೆಯಲ್ಪಡುವ ಪವಿತ್ರ ಕೆಲಸದಲ್ಲಿ ನಿರತಳಾಗಿದ್ದ ಯುವತಿಯೊಬ್ಬಳನ್ನು ಇಬ್ಬರು ಪಾದ್ರಿಗಳು ಸರದಿಯ ಮೇಲೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಬಹುಶ: ಭಯದಿಂದಲೋ, ಪಾದ್ರಿಗಳಿಗೆ ಸುಖ ಕೊಡುತ್ತಿದ್ದೇನೆ ಎನ್ನುವ ಹೆಮ್ಮೆಯಿಂದಲೋ ಅಥವಾ ಪಾದ್ರಿಗಳು ಬಯಸುವಾಗ ಅವರಿಗೆ ಸುಖ ಕೊಡುವುದು ತಮ್ಮ ಕರ್ತವ್ಯ ಎನ್ನುವಂತೆ ಆ ಯುವತಿ ಗಾಢಾಂದಕಾರದಲ್ಲಿ ಬೆತ್ತಲಾಗಿ ಪಾದ್ರಿಗಳಿಗೆ ದೇಹ ಒಡ್ಡಿದ್ದಳು. ಆ ಸರಹೊತ್ತಿನಲ್ಲಿ ಒಬ್ಬ ಹುಡುಗಿ ಅಡುಗೆ ಕೋಣೆಗೆ ನೀರು ಕುಡಿಯಲು ಬರಬಹುದು ಎನ್ನುವ ಕಲ್ಪನೆ ಇಲ್ಲದೆ ಇದ್ದ ಕಾರಣದಿಂದ ಅವರು ನಿತ್ಯದಂತೆ ಅಲ್ಲಿ ಸೇರಿದ್ದರು. ಒಂದು ವೇಳೆ ಯಾರಾದರೂ ಬಂದರೂ ಬಾಗಿಲಿನ ಶಬ್ದಕ್ಕಾದರೂ ತಮಗೆ ಎಚ್ಚರವಾಗುತ್ತೆ ಎಂದು ಅಂದುಕೊಂಡಿದ್ದಿರಬಹುದು. ಹಾಗೆ ನಿಶ್ಚಿಂತೆಯಾಗಿ ದೇಹಗಳು ಮಿಲನೋತ್ಸವವನ್ನು ಅನುಭವಿಸುತ್ತಿದ್ದಂತೆ ಒಂದು ಹುಡುಗಿ ಅಡುಗೆ ಕೋಣೆಯ ಒಳಗೆ ಬಂದಾಗಿತ್ತು. ಅವತ್ತು ಅವಳಿಗೆ ಪಿಯುಸಿ ಪರೀಕ್ಷೆ. ಪರೀಕ್ಷೆಗೆ ಓದಲು ಇದೆ, ಬೇಗ ಎಬ್ಬಿಸು ಎಂದು ಅವಳು ವಾರ್ಡನ್ ಗೆ ಹೇಳಿದ್ದಳು. ಹಾಗೆ ವಾರ್ಡನ್ ಎಬ್ಬಿಸಿ ಆಚೆ ಹೋಗಿದ್ದಳು. ಪರೀಕ್ಷೆಗೆ ಎದ್ದ ಹುಡುಗಿಗೆ ಬಾಯಾರಿಕೆ ಜೋರಾಗಿತ್ತು. ಹಾಸ್ಟೆಲ್ ಕೋಣೆಯಲ್ಲಿ ನೀರು ಖಾಲಿಯಾಗಿತ್ತು. ನೀರು ಹುಡುಕಿಕೊಂಡು ಹೋದವಳು ಜೀವನದ ಮೊದಲ ಶಾಕ್ ನೋಡಿದ್ದಳು.
ಸಾಮಾನ್ಯವಾಗಿ ಪಾದ್ರಿಗಳು, ಸಂತರು, ಮೌಲ್ವಿಗಳು ಎಂದರೆ ಆಯಾ ಧರ್ಮದ ಜನರಿಗೆ ಅದೇನೋ ವಿಶೇಷ ಭಕ್ತಿ ಇರುತ್ತದೆ. ಅವರು ಲೌಕಿಕ ಪ್ರಪಂಚದ ಸೆಳೆತಕ್ಕೆ ಒಳಗಾಗಲ್ಲ ಎನ್ನುವ ಅಭಿಪ್ರಾಯ ಇರುತ್ತದೆ. ಕೆಲವೊಂದು ಘಟನೆಗಳಿಂದ ಭ್ರಮನಿರಸನವಾಗುವುದು ಇದೆ. ಹಾಗೆ ಈ ಹುಡುಗಿ ಚರ್ಚ್ ನಲ್ಲಿ ಸಿಸ್ಟರ್ ಆಗಿದ್ದುಕೊಂಡೇ ಅಲ್ಲಿಯೇ ಆವರಣದಲ್ಲಿರುವ ಹಾಸ್ಟೆಲ್ ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದಳು. ಅವಳಿಗೆ ಪಾದ್ರಿಗಳು ಎಂದರೆ ವಿಶೇಷ ಭಕ್ತಿ. ಅವರನ್ನು ಬಹಳ ಪೂಜ್ಯ ಭಾವನೆಯಿಂದ ನೋಡುತ್ತಿದ್ದಳು. ಅವರು ತಂದೆಯ ಸಮಾನ ಎಂದು ಅಂದುಕೊಂಡಿದ್ದಳು. ಅವರು ಲೈಂಗಿಕ ಕ್ರಿಯೆ ನಡೆಸುವುದಿರಲಿ, ಆ ಬಗ್ಗೆ ಯೋಚಿಸುವುದು ಕೂಡ ಇಲ್ಲ ಎಂದೇ ಭಾವಿಸಿದ್ದಳು. ಆದರೆ ಅಡುಗೆ ಕೋಣೆಯಲ್ಲಿ ಕೈಯಲ್ಲಿ ನೀರಿನ ಗ್ಲಾಸು ಹಿಡಿದುಕೊಂಡವಳ ಎದುರಿಗೆ ಪಾದ್ರಿಗಳಿಬ್ಬರು ತನ್ನದೇ ಒರಗೆಯ ಸಿಸ್ಟರ್ ಜೊತೆ ಮೈಯ ಮೇಲೆ ಒಂದು ಎಳೆ ದಾರವೂ ಇಲ್ಲದೆ ಬಿದ್ದುಕೊಂಡಿರುವುದನ್ನು ನೋಡಿ ಅವಳಿಗೆ ಜೀವವೇ ಬಾಯಲ್ಲಿ ಬಂದಂತೆ ಆಗಿತ್ತು. ಅವಳು ಈ ಕ್ರಿಯೆಯನ್ನು ನೋಡುವುದಕ್ಕೂ ದೇಹವಾಂಛೆಯನ್ನು ತೀರಿಸುತ್ತಿದ್ದ ಮೂರು ಮನುಷ್ಯ ಪ್ರಾಣಿಗಳು ನೋಡುವುದಕ್ಕೂ ಸರಿಯಾಗಿ ಹೋಯಿತು. ಬಹುಶ: ಇದನ್ನು ಹೊರಗೆ ಯಾರಿಗೂ ಹೇಳಬೇಡಾ ಎಂದು ಜೋರು ಮಾಡಿದಿದ್ದರೆ ಅವಳು ಹೇಳುತ್ತಿರಲಿಲ್ಲವೇನೊ. ಆದರೆ ಪಾದ್ರಿಗಳು ಯಾವುದೇ ರಿಸ್ಕ್ ತೆಗೆದುಕೊಳ್ಳಲು ತಯಾರಿರಲಿಲ್ಲ. ಯಾವತ್ತಾದರೂ ಮುಂದೆ ಗೊತ್ತಾಗಿ ಮರ್ಯಾದೆ ಹೋಗುವುದಕ್ಕಿಂತ ಒಂದು ಜೀವವನ್ನು ಸೂರ್ಯ ಮೂಡುವ ಮೊದಲೇ ಪರಲೋಕದಲ್ಲಿರುವ ತಂದೆಯ ಬಳಿ ಕಳುಹಿಸೋಣ ಎಂದು ನಿರ್ಧರಿಸಿಬಿಟ್ಟಿದ್ದರು. ತಕ್ಷಣ ಇಬ್ಬರೂ ಪಾದ್ರಿಗಳು ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಪಾದ್ರಿಗಳ ಕೆಳಗೆ ಮಲಗಿ ಫ್ಯಾನ್ ನೋಡುತ್ತಿದ್ದ ಸಿಸ್ಟರ್ ಇದು ತನ್ನ ಮಾನದ ಪ್ರಶ್ನೆ ಕೂಡ ಹೌದು ಎನ್ನುವಂತೆ ಅಡುಗೆ ಕೋಣೆಯಲ್ಲಿದ್ದ ಚಾಕು ತೆಗೆದು ಮೇಲಿನಿಂದ ಮೇಲೆ ಬಲವಾಗಿ 19 ವರ್ಷದ ಹುಡುಗಿಗೆ ಚುಚ್ಚುತ್ತಲೇ ಹೋದಳು. ಆದರೆ ಈ ಹುಡುಗಿ ಅಷ್ಟು ಸುಲಭವಾಗಿ ಪ್ರಾಣ ಬಿಡಲೇ ಇಲ್ಲ. ಇಷ್ಟೆಲ್ಲಾ ಆದ ಮೇಲೆ ಇನ್ನು ಇವಳನ್ನು ಹೀಗೆ ಬಿಟ್ಟರೆ ಖಂಡಿತ ಸಮಸ್ಯೆ ಆಗುತ್ತದೆ ಎಂದು ಗೊತ್ತಾದ ಕೂಡಲೇ ಅರ್ಧ ಉಸಿರಾಡುತ್ತಿದ್ದ ಆ ಹುಡುಗಿಯನ್ನು ಹಾಗೆ ಎತ್ತಿ ಮೂರು ಜನ ಅಲ್ಲಿಯೇ ಆವರಣದಲ್ಲಿದ್ದ ಹಾಳು ಬಾವಿಯಲ್ಲಿ ಎತ್ತಿ ಬಿಸಾಡಿಬಿಟ್ಟರು. ಒಳಗೆ ಬಂದವರೇ ಆ ರಕ್ತದ ಎಲ್ಲಾ ಕುರುಹುಗಳನ್ನು ಅಳಿಸಿ ಹಾಕಿ ಸ್ನಾನ ಮಾಡಿ ಬಟ್ಟೆ ಧರಿಸಿ ಯಥಾಪ್ರಕಾರದಂತೆ ಇರಲಾರಂಭಿಸಿದರು. ಆದರೆ ಅವರಿಗೆ ತಾವು ಒಂದು ಜೀವಂತ ಹುಡುಗಿ ನೋವಿನಿಂದ ನರಳುತ್ತಿದ್ದಾಗ ಹಾಗೆ ಎತ್ತಿ ಬಾವಿಗೆ ಹಾಕಿದ್ದನ್ನು ಒಬ್ಬ ಕಳ್ಳ ನೋಡಿರಬಹುದು ಎನ್ನುವ ಸಣ್ಣ ಕುರುಹು ಕೂಡ ಇರಲಿಲ್ಲ. ಹಾಗೆ ಬೆಳಗಾಗುತ್ತಿದ್ದಂತೆ ಚರ್ಚ್ ನ ಬಾವಿಯ ಆವರಣದಲ್ಲಿ ಸಿಕ್ಕ ಯುವತಿಯ ಶವಕ್ಕೆ ಎಲ್ಲರೂ ಆತ್ಮಹತ್ಯೆ ಎಂದು ಹಣೆಪಟ್ಟಿ ಕಟ್ಟಿ ಆಗಿತ್ತು. ಸ್ಥಳೀಯ ಪೊಲೀಸರು ಆತ್ಮಹತ್ಯೆ ಎಂದು ಷರಾ ಬರೆದರು. ನಂತರ ಅದು ಕ್ರೈಂ ಬ್ರಾಂಚಿಗೆ ಹೋದಾಗ ಅಲ್ಲಿಯೂ ಷರಾ ಎನ್ನಲಾಯಿತು. ನಂತರ ಸಿಬಿಐಗೆ ಹೋಯಿತು. ಅಲ್ಲಿ ಪ್ರತಿ ಅಧಿಕಾರಿ ಕೂಡ ಪಾದ್ರಿಗಳ ಸೂಟುಕೇಸಿಗೆ ಕರಗಿ ತನಿಖೆ ಕೊನೆಗೊಳ್ಳುವ ಹೊತ್ತಿಗೆ ಆತ್ಮಹತ್ಯೆ ಎಂದು ಷರಾ ಎಂದೇ ಬರೆಯುತ್ತಿದ್ದ. ಆದರೆ ಗಟ್ಟಿಯಾಗಿ ನಿಂತದ್ದು ಸಿಬಿಐ ನ್ಯಾಯಾಧೀಶರೊಬ್ಬರು ಮಾತ್ರ. ಅವರ ಒಳಮನಸ್ಸು ಇದು ಕೊಲೆ ಎಂದೇ ಹೇಳುತ್ತಿತ್ತು. ಏಕೆಂದರೆ ಆತ್ಮಹತ್ಯೆ ಎಂದಾದರೆ ಚೂರಿ ದೇಹದೊಳಗೆ ಪ್ರವೇಶಿಸಿ ಹೊರಗೆ ಯಾಕೆ ಬರಬೇಕಿತ್ತು. ಅಂತಿಮವಾಗಿ ಹದಿಮೂರು ಬಾರಿ ಸಿಬಿಐ ತಂಡ ಬೇರೆ ಬೇರೆಯಾಗಿ ತನಿಖೆ ಮಾಡಿ ಕೊನೆಗೆ ಅಂತಿಮವಾಗಿ ಆರೋಪಿಗಳನ್ನು ದೋಷಿಯೆಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.
ಹೀಗೆ 28 ವರ್ಷಗಳ ಹಿಂದೆ ಕೊಟ್ಟಾಯಂನಲ್ಲಿ ನಡೆದ ಸಿಸ್ಟರ್ ಅಭಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದೋಷಿಗಳಾದ ಕ್ಯಾಥೊಲಿಕ್ ಪಾದ್ರಿ ಥೋಮಸ್ ಕೊಟ್ಟೂರ್ ಹಾಗೂ ಸಿಸ್ಟರ್ ಸೆಫಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಥೋಮಸ್ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಅಪರಾಧ ಸಾಬೀತಾಗಿರುವ ಹಿನ್ನಲೆಯಲ್ಲಿ ಎರಡು ಜೀವಾವಧಿ ಶಿಕ್ಷೆ ಹಾಗೂ 6.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದೇ ವೇಳೆ ಸಿಸ್ಟರ್ ಸೆಫಿಗೆ ಏಳು ವರ್ಷಗಳ ಜೀವಾವಧಿ ಶಿಕ್ಷೆ ಹಾಗೂ 5.5 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. ಇನ್ನೊಬ್ಬ ಪಾದ್ರಿ ಜೋಸ್ ಪುತ್ರಕಯಲ್ ಪ್ರಕರಣದಲ್ಲಿ ನಿರ್ದೋಷಿಯಾಗಿದ್ದಾನೆ.!!
Leave A Reply