• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನೂರು ಕೋಟಿ ಅಕ್ರಮಕ್ಕೆ ಬಂಧಿಸಿದರೆ ಅಲ್ಪಸಂಖ್ಯಾತರ ದಮನ ಹೇಗೆ ಆಗುತ್ತದೆ!!

Hanumantha Kamath Posted On December 28, 2020


  • Share On Facebook
  • Tweet It

ಸಿಎಫ್ ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೌಫ್ ಶೆರೀಫ್ ನ ಬಂಧನ ಖಂಡಿಸಿ ಸಿಎಫ್ ಐನ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ತಿರುವನಂತಪುರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದ ರೌಫ್ ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದು ಪಿಎಫ್ ಐ ಇದರ ಅಂಗ ಸಂಘಟನೆಯಾದ ಸಿಎಫ್ ಐಗೆ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಗಿದೆ. ಈ ಸಂಘಟನೆಯ ರಹಸ್ಯ ಕಾರ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯುವುದು ವಿದೇಶದಲ್ಲಿ. ಬಹುಶ: ಅದೇ ಕಾರಣಕ್ಕೆ ರವೂಫ್ ಹೊರಟಿರಬಹುದು. ಆ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಿಂದೆ ಆಲ್ ಖೈದಾದಂತಹ ಉಗ್ರ ಸಂಘಟನೆಗಳ ಸಂಪರ್ಕವಿರುವ ಐಎಚ್ ಎಚ್ ನನ್ನು ಎಸ್ ಡಿಪಿಐ ರಾಷ್ಟ್ರೀಯ ನಾಯಕರಾದ ತಸ್ಲೀಮ್ ರೆಹಮಾನಿ, ಪಿಎಫ್ ಐ ನ ರಾಷ್ಟ್ರೀಯ ನಾಯಕರಾದ ಇ.ಎಮ್.ಅಬ್ದುಲ್ ಮತ್ತು ಪ್ರೋ.ಕೋಯಾ ಗುಪ್ತವಾಗಿ ಪಾಕಿಸ್ತಾನದ ಮಿತ್ರ ರಾಷ್ಟ್ರವಾಗಿರುವ ಟರ್ಕಿಯಲ್ಲಿ ಭೇಟಿ ಮಾಡಿದ್ದರು ಎನ್ನುವ ವರದಿಯನ್ನು ರಾಷ್ಟ್ರೀಯ ವಾಹಿನಿ ರಿಪಬ್ಲಿಕ್ ಪ್ರಸಾರ ಮಾಡಿದೆ. ಅದರೊಂದಿಗೆ ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದೆ. ಇದರಿಂದ ಒಂದು ವಿಷಯ ಸ್ಪಷ್ಟವಾಗಿದೆ. ಭಾರತದಲ್ಲಿಯೇ ಇದ್ದುಕೊಂಡು ಭಾರತದ ವಿರುದ್ಧ ಪಿಎಫ್ ಐ ಹಾಗೂ ಅದರ ಅಂಗ ಸಂಘಟನೆಗಳು ಷಡ್ಯಂತ್ರ ರೂಪಿಸುತ್ತಿದ್ದವು. ಅದರಲ್ಲಿ ಆಗಾಗ ಸಣ್ಣಮಟ್ಟಿಗಿನ ಯಶಸ್ಸನ್ನು ಕೂಡ ಕಾಣುತ್ತಿದ್ದವು. ಅದಕ್ಕೆ ಉದಾಹರಣೆ ದೆಹಲಿ ಸಹಿತ ವಿವಿದೆಡೆ ಸಿಎಎ ವಿರುದ್ಧ ಇವರ ಸಂಘಟನೆಗಳು ನಡೆಸಿದ ದಾಂಧಲೆ. ದೆಹಲಿಯ ಪ್ರಮುಖ ಆಯಾಕಟ್ಟಿನ ಜಾಗದಲ್ಲಿ ಶಾಯಿನಾಭಾಗ್ ನಲ್ಲಿ ವಾರಗಟ್ಟಲೆ ನಡೆಸಿದ ರೋಡ್ ಬ್ಲಾಕ್. ಕಲ್ಲು ತೂರಾಟ, ಟಯರ್ ಗಳಿಗೆ ಬೆಂಕಿ, ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಇದರ ಹಿಂದೆಲ್ಲ ಪಿಎಫ್ ಐ ಕೈವಾಡ ಇರುವ ಬಗ್ಗೆ ತನಿಖೆ ನಡೆದು ಚಾರ್ಜ್ ಶೀಟ್ ಕೂಡ ಸಲ್ಲಿಕೆ ಆಗಿದೆ. ಇದಲ್ಲದೆ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಗಳಲ್ಲಿ ಕೂಡ ಬೆಂಕಿ ಹಾಕಿದ ಪ್ರಕರಣದಲ್ಲಿ ಪಿಎಫ್ ಐ ಹೆಸರು ಉಲ್ಲೇಖವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯಾವುದೇ ದೊಂಬಿ ಮಾಡಲು ಜನರನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿಸಲು ಬಹಳ ಕಡಿಮೆ ಹೊತ್ತಿನಲ್ಲಿ ಪಿಎಫ್ ಐಗೆ ಸಾಧ್ಯವಾಗುತ್ತಿರುವುದನ್ನು ನೋಡುವಾಗ ಯಾರಿಗಾದರೂ ಆಶ್ಚರ್ಯವಾಗದೇ ಇರಲಾರದು. ಈ ಬಗ್ಗೆ ತನಿಖೆ ಮಾಡುವಾಗ ಗೊತ್ತಾದದ್ದೇ ಪಿಎಫ್ ಐ ಒಳಹರಿವಿನ ಆರ್ಥಿಕ ಸಂಪನ್ಮೂಲ. ಆ ಬಗ್ಗೆ ಪರಿಶೀಲಿಸಿದಾಗ ಗೊತ್ತಾದದ್ದೇ ನೂರು ಕೋಟಿಯ ಹಣದ ವಹಿವಾಟು. ಈ ಬಗ್ಗೆ ಈಗ ತನಿಖೆ ಮಾಡಲು ಹೊರಟರೆ ಇದೇ ಪಿಎಫ್ ಐ ಮತ್ತು ಸಿಎಫ್ ಐಯವರು ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಅದರ ಅಗತ್ಯ ಇದೆಯಾ ಎನ್ನುವುದು ಪ್ರಶ್ನೆ. ಹಾಗೆ ಸರಿಯಾದ ಕಾರಣಗಳಿಲ್ಲದೆ ಇಡಿ, ಸಿಬಿಐ ಅಧಿಕಾರಿಗಳು ಯಾವುದೇ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳನ್ನು ಬಂಧನ ಮಾಡುವುದಿಲ್ಲ. ಯಾಕೆಂದರೆ ಬಂಧನ ಮಾಡಿದ್ದು ವಿನಾಕಾರಣ ಎನ್ನುವುದು ಸಾಬೀತಾದರೆ ಆ ತನಿಖಾ ಸಂಸ್ಥೆಗಳ ಇಮೇಜು ಹಾಳಾಗಿ ಹೋಗುತ್ತದೆ. ಅದರಲ್ಲಿರುವ ಅಧಿಕಾರಿಗಳ ವರ್ಚಸ್ಸಿಗೆ ದಕ್ಕೆ ಉಂಟಾಗುತ್ತದೆ. ಆದ್ದರಿಂದ ಎಂತಹ ಒತ್ತಡಗಳಿದ್ದರೂ ಸೂಕ್ತ ದಾಖಲೆಗಳನ್ನು ಸಂಗ್ರಹಿಸದೆ ಯಾರನ್ನೂ ಕೂಡ ಅನಾವಶ್ಯಕವಾಗಿ ವಶಕ್ಕೆ ಪಡೆದುಕೊಳ್ಳುವಂತಹ ಕೆಲಸ ಇವು ಮಾಡುವುದಿಲ್ಲ. ಆದ್ದರಿಂದ ತಾವು ಕಾನೂನಿಗೆ ಶಿರಬಾಗುವುದಾಗಿ ಹೇಳಿ ತಮ್ಮ ಬಂಧನದಿಂದ ಯಾರೂ ಕೂಡ ವಿಚಲಿತರಾಗಬೇಕಾಗಿಲ್ಲ ಎನ್ನುವ ಹೇಳಿಕೆಯನ್ನು ಅಂತಹ ವ್ಯಕ್ತಿಗಳು ಕೊಟ್ಟು ಯಾವುದೇ ದೊಂಬಿ, ಗಲಭೆ ಆಗದಂತೆ ನೋಡಿಕೊಂಡರೆ ಅದರಿಂದ ನಿಜಕ್ಕೂ ಅವರ ಘನತೆ ಎತ್ತರಕ್ಕೆ ಏರುತ್ತದೆ. ಆದರೆ ಈ ಪ್ರಕರಣದಲ್ಲಿ ಆದದ್ದೇನು?
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ (ಸಿಎಫ್ ಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ಬಂಧನವಾದ ಕೂಡಲೇ ಸಿಎಫ್ ಐ ಕಾರ್ಯಕರ್ತರು ಶನಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಆವರಣಕ್ಕೆ ನುಗ್ಗಿದರು. ಅದೇ ಕಟ್ಟಡದಲ್ಲಿರುವ ಲೋಕಸಭಾ ಸದಸ್ಯರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಕಚೇರಿಗೂ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ಶನಿವಾರ ಸಾರ್ವಜನಿಕ ರಜಾದಿನವಾಗಿದ್ದ ಕಾರಣ ಆ ಕಚೇರಿಗಳಲ್ಲಿ ಯಾರೂ ಇರಲಿಲ್ಲ. ಆದರೆ ತಮ್ಮ ಪಬ್ಲಿಸಿಟಿ ಸ್ಟಂಟ್ ಗಾಗಿ ಅದು ಸಿಎಫ್ ಐಗೆ ಅವಶ್ಯಕವಾಗಿತ್ತು. ಆದರೆ ಅವರ ವಾದ ಏನೆಂದರೆ ಕೇಂದ್ರ ಸರಕಾರ ಇಡಿ, ಸಿಬಿಐ ಮೂಲಕ ಅಲ್ಪಸಂಖ್ಯಾತರ ಧ್ವನಿಯನ್ನು ದಮನಿಸುವ ಕೆಲಸ ಮಾಡುತ್ತಿದೆ. ಹಾಗಾದರೆ ನಾನು ಹೇಳುವುದೇನೆಂದರೆ ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಅವರು ಆರ್ಥಿಕ ಅಪರಾಧ ಮಾಡಿದರೂ ಅವರನ್ನು ವಿಚಾರಿಸಬಾರದಾ? ಅವರು ಸರಕಾರದ ವಿರುದ್ಧ ದೇಶದ್ರೋಹಿಗಳು ಕಳುಹಿಸುವ ಹಣವನ್ನು ಹೇಗೆ ಬೇಕಾದರೂ ಗಲಭೆಗಳಿಗೆ ಬಳಸಬಹುದಾ? ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಅವರ ಖಾತೆಗಳಿಗೆ ನೂರು ಕೋಟಿಯಷ್ಟು ಹಣ ಹರಿದು ಬಂದರೂ ಹೇಗೆ ಬಂತು ಎಂದು ವಿಚಾರಿಸಬಾರದಾ? ಸಾಕ್ಷ್ಯಗಳು ಇದ್ದರೂ ಅವರು ಅಲ್ಪಸಂಖ್ಯಾತರು ಎನ್ನುವ ಒಂದೇ ಕಾರಣಕ್ಕೆ ಅವರಿಗೆ ವಿನಾಯಿತಿ ನೀಡಬೇಕಾ? ಒಂದು ವೇಳೆ ರವೂಫ್ ನಿರಪರಾಧಿ ಎಂದಾದರೆ ಅವರ ವಕೀಲರು ಬಿಡಿಸಿಕೊಂಡು ಬಂದೇ ಬರುತ್ತಾರೆ. ಅದಕ್ಕೆ ಹೋರಾಟ ಯಾಕೆ? ಇಡಿ ಎನ್ನುವ ಸಂಸ್ಥೆ ಇರುವುದೇ ಆರ್ಥಿಕ ಅಪರಾಧಗಳನ್ನು ಹತ್ತಿಕ್ಕಲು. ಅದು ಈ ಹಿಂದೆ ಡಿಕೆಶಿಯವರ ಪ್ರಕರಣದಲ್ಲಿಯೂ ತನಿಖೆ ಮಾಡಿದೆ. ಸಾಮಾನ್ಯವಾಗಿ ಹೀಗೆ ಸಿಕ್ಕಿಬಿದ್ದಾಗ ಎಲ್ಲರೂ ಹೇಳುವುದು ಒಂದೇ ಮಾತು “ನಮ್ಮ ವಿರುದ್ಧ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ” ಇಲ್ಲಿ ರಾಜಕೀಯ ದ್ವೇಷ ಎಲ್ಲಿಂದ ಬಂತು? ಅದರಲ್ಲಿಯೂ ಮೋದಿಯ ಅವಧಿಯಲ್ಲಿ ಯಾರಾದರೂ ಹಣ ಭ್ರಷ್ಟಾಚಾರದ ದಾರಿಯಿಂದ ಮಾಡುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಅವರು ಸ್ವಪಕ್ಷೀಯರೇ ಇದ್ದರೂ ಅವರನ್ನು ಎಲ್ಲಿ ಇಡಬೇಕು ಅಲ್ಲಿ ಇಡಲಾಗುತ್ತದೆ. ಹಾಗಿರುವಾಗ ಇಲ್ಲಿ ದ್ವೇಷ, ಗೀಶ ಏನೂ ಬರುವುದಿಲ್ಲ. ಅಷ್ಟಕ್ಕೂ ಯಾರಾದರೂ ಹಾಗೆ ಅಂದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಸುಮ್ಮನೆ ಕುಳಿತುಕೊಳ್ಳುವುದಕ್ಕೂ ಮೋದಿ ಸರಕಾರ ಹೋಗುವುದಿಲ್ಲ. ಯಾಕೆಂದರೆ ಮೋದಿಗೆ ದೇಶ ಮುಖ್ಯ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search