• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಆಂಟೋನಿ ಬಂದ ಬಳಿಕ ಮಂಗಳೂರಿನವರು ತಿನ್ನುವುದಕ್ಕಿಂತ ಬಿಸಾಡುವುದು ಜಾಸ್ತಿ ಆಗಿತ್ತು!!

Hanumantha Kamath Posted On January 12, 2021


  • Share On Facebook
  • Tweet It

ನಾವು ಮೊದಲು ಮಂಗಳೂರಿಗೆ ನುಗ್ಗುವ, ನಂತರ ಅಲ್ಲಿನ ಬುದ್ಧಿವಂತರನ್ನು ಮಂಗ ಮಾಡುವುದು ಎನ್ನುವುದು ಕಷ್ಟವೇನಲ್ಲ. ಹೀಗೆ ಅಂದುಕೊಂಡೇ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ಮುಂಬೈಯಿಂದ ಮಂಗಳೂರಿಗೆ ಕಾಲಿಟ್ಟಿದ್ದು. pregnent ಹೊಟ್ಟೆ, ತುಂಡು ಮಾಡಿದ ಹಲಸಿನ ಹಣ್ಣು ಮತ್ತು ಮನೆಯ ಹೊರಗೆ ಇಟ್ಟ ತ್ಯಾಜ್ಯದ ಪ್ಲಾಸ್ಟಿಕ್ ಅನ್ನು ತುಂಬಾ ದಿನ ಮುಚ್ಚಿಡಲು ಆಗುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಅದು ಆಂಟೋನಿಯವರಿಗೆ ಚೆನ್ನಾಗಿ ಗೊತ್ತಿತ್ತು. ಒಮ್ಮೆ ಇವರ ಜುಟ್ಟು ಹಿಡಿದು ಬಿಡೋಣ, ನಂತರ ನಮ್ಮದೇ ಆಟ ಎಂದೇ ಅವರು ಫೀಲ್ಡಿಗೆ ಇಳಿದದ್ದು. ಆದರೆ ಅವರ ತ್ಯಾಜ್ಯ ತಿನ್ನುವ ಹಸಿವು ಈ ಪರಿ ಇರಬಾರದಿತ್ತು. ಅವರು ನೇರವಾಗಿ ವ್ಯಾಪಾರಕ್ಕೆ ಬಂದಿದ್ರು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಈ ಪರಿ ವ್ಯಾಪಾರ ಮಾಡಿ ಅಂಗಡಿ ತೆರೆದ ವರ್ಷದೊಳಗೆ ಅರಮನೆ ಕಟ್ಟುವ ಲೆವೆಲ್ಲಿಗೆ ಕೆಲವರು ಹೋಗುತ್ತಾರಲ್ಲ, ಅದರಲ್ಲಿ ಖಂಡಿತ ಸಂಶಯ ಬರುತ್ತದೆ. ಆ ಸಂಶಯ ಹಿಡಿದುಕೊಂಡೇ ಮಂಗಳೂರು ಮಹಾನಗರ ಪಾಲಿಕೆಯ ಹಿಂದಿನ ಕೆಲವು ಸದಸ್ಯರು ಈ ಆಂಟೋನಿ ತ್ಯಾಜ್ಯದ ವಾಹನದ ಹಿಂದೆ ಬಿದ್ದಿದ್ದರು. ಸಾಕ್ಷಿ ಸಮೇತ ಇವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಆದರೆ ಅವೆಲ್ಲ ಕೇವಲ ನೀರಿನ ಮೇಲೆ ಹೋಮ ಮಾಡಿದ ರೀತಿಯಾಗಿತ್ತು. ಕೆಲವು ಅಧಿಕಾರಿಗಳೇ ಆಂಟೋನಿಯವರ ಕೆಲಸದ ಮೇಲಿನ ನಿರ್ಲಕ್ಷ್ಯ ಮತ್ತು ಡಬಲ್ ಗೇಮ್ ಮೇಲಿನ ಆಸಕ್ತಿಯನ್ನು ಪತ್ತೆಹಚ್ಚಿದ್ದರು. ಆದರೆ ಏನೂ ಪ್ರಯೋಜನವಾಗಲಿಲ್ಲ.
ಅಷ್ಟಕ್ಕೂ ಆಂಟೋನಿಯವರು ಮಂಗಳೂರು ಮಹಾನಗರದ ಜನರ ತೆರಿಗೆ ಹಣವನ್ನು ದೋಚುವ ಶೈಲಿ ಹೇಗೆ ಗೊತ್ತಾ? ಸುಳ್ಳು ಸುಳ್ಳು ತ್ಯಾಜ್ಯ ಸಂಗ್ರಹಣಾ ಲೆಕ್ಕ ತೋರಿಸುವುದು. ಅದು ಮೇಲ್ನೋಟಕ್ಕೆ ಅಪರಾಧದ ತರಹ ತೋರದಂತೆ ನೋಡಿಕೊಳ್ಳುವುದು. ನಿಮ್ಮ ಮನೆಯ ಹೊರಗೆ ನೀವು ಯಾವುದೋ ಕೆಲಸಕ್ಕೆಂದು ತಂದ ಒಂದೆರಡು ಟನ್ ಮಣ್ಣು ರಾಶಿ ಹಾಕಿರುತ್ತಿರಿ ಅಥವಾ ನಿಮ್ಮ ಮನೆಯ ಹೊರಗೆ ಮನೆ ಕಟ್ಟುವಾಗ ಅಥವಾ alteration ಮಾಡುವಾಗ ಉಳಿದ ಮಣ್ಣಿನ ರಾಶಿ ಬಿದ್ದಿರುತ್ತದೆ. ಅದನ್ನು ಇವರು ಅಲ್ಲಿಂದ ರಾತ್ರೋರಾತ್ರಿ ನಿಮಗೆ ಗೊತ್ತಿಲ್ಲದಂತೆ ತಮ್ಮ ವಾಹನಕ್ಕೆ ತುಂಬಲು ಹಿಂಜರಿಯುವುದಿಲ್ಲ. ರಸ್ತೆಗಳ ಇಕ್ಕೆಲಗಳಲ್ಲಿ ಕಟ್ಟಡಗಳಿಗೆಂದು ತಂದಿಟ್ಟ ಕಲ್ಲುಗಳು, ಮರಳು, ಮಣ್ಣು ಇವರ ಪಾಲಿಗೆ ಮೃಷ್ಟಾನ್ನ ಭೋಜನ. ಅದು ತ್ಯಾಜ್ಯವಾಗಲು ಸಾಧ್ಯವೇ ಇಲ್ಲ. ಆದರೆ ಇವರು ಸರಿಯಾಗಿ ತ್ಯಾಜ್ಯ ಸಂಗ್ರಹ ಮಾಡದಿದ್ದರೂ ಇಂತಹುಗಳನ್ನು ಸರಿಯಾಗಿ ಎತ್ತಿಕೊಳ್ಳುತ್ತಾರೆ ಮತ್ತು ಅದನ್ನು ತ್ಯಾಜ್ಯ ಘಟಕಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅದು ಮಂಗಳೂರು ನಗರ ಉತ್ತರದಲ್ಲಿ ಇರಲಿ ದಕ್ಷಿಣದಲ್ಲಿ ಇರಲಿ, ಇವರು ಅದನ್ನು ಮಂಗಳೂರು ನಗರ ಉತ್ತರದ ಅಕೌಂಟಿಗೆ ಸೇರಿಸುತ್ತಾರೆ. ಯಾಕೆಂದರೆ ನಾನು ನಿನ್ನೆ ಹೇಳಿದ ಹಾಗೆ ದಕ್ಷಿಣಕ್ಕಿಂತ ಉತ್ತರದ ತ್ಯಾಜ್ಯದ ಟನ್ ಮೌಲ್ಯ 1150 ರೂಪಾಯಿ ಜಾಸ್ತಿ. ದಕ್ಷಿಣದಲ್ಲಿ ಒಂದು ಟನ್ ತ್ಯಾಜ್ಯದ ಸಂಗ್ರಹಣ ಶುಲ್ಕ 2051 ಮತ್ತು ಉತ್ತರದ ಸಂಗ್ರಹಣಾ ಶುಲ್ಕ 3201. ಅಂದರೆ ಇವರು ಸಂಗ್ರಹ ಮಾಡುವುದು ದಕ್ಷಿಣದ್ದು ಮತ್ತು ಲೆಕ್ಕ ಉತ್ತರಕ್ಕೆ. ನಿಜವಾಗಿ ಅದನ್ನು ಜಿಪಿಎಸ್ ಪ್ರಕಾರ ಪತ್ತೆ ಹಚ್ಚಬೇಕು. ಆದರೆ ಪಾಲಿಕೆಯಲ್ಲಿ ಅದೆಲ್ಲ ಮಾಡಲು ಯಾರಿಗೆ ಸಮಯವಿದೆ ಸ್ವಾಮಿ. ಹಣ ಹೋಗುವುದು ಪಾಪದವರದ್ದು ಅಲ್ವಾ?
ಹೀಗೆ ಮಾಡುವ ಮೂಲಕ ಆಂಟೋನಿಯವರು ತಿಂಗಳಿಗೆ ಹೊಡೆಯುವ ಹಣದ ಲೆಕ್ಕಾಚಾರವನ್ನು ಸಿಂಪಲ್ ಆಗಿ ನೀವೆ ಕ್ಯಾಲ್ಕುಲೇಟರ್ ತೆಗೆದುಕೊಂಡು ಲೆಕ್ಕ ಹಾಕಬಹುದು. ಇವರು ಅಂದರೆ ಆಂಟೋನಿಯವರು ಇಲ್ಲಿನ ತ್ಯಾಜ್ಯದ ವಹಿವಾಟಿಗೆ ಕೈ ಹಾಕುವ ತನಕ ಪಾಲಿಕೆ ತನ್ನದೆ ಶೈಲಿಯಲ್ಲಿ ಈ ಕೆಲಸ ಮಾಡಿಸಿಕೊಂಡು ಹೋಗುತ್ತಿತ್ತು. 2014 ರ ಜೂನ್ ತಿಂಗಳ ತನಕ ಮಂಗಳೂರಿನಲ್ಲಿ ದಕ್ಷಿಣ ಮತ್ತು ಉತ್ತರ ಸೇರಿ ಸಂಗ್ರಹ ಆಗುತ್ತಿದ್ದ ತ್ಯಾಜ್ಯ ಸುಮಾರು 220 ಟನ್. ಮಳೆಗಾಲ ಎಂದ ಕೂಡಲೇ ಸಹಜವಾಗಿ ತ್ಯಾಜ್ಯದ ತೂಕ ಒಂದಿಷ್ಟು ಜಾಸ್ತಿಯಾಗುತ್ತದೆ. ಅಂದರೆ ಮಳೆಯ ನೀರು ಸೇರಿ ತ್ಯಾಜ್ಯ ದ ತೂಕ ಹೆಚ್ಚಾಗುವುದನ್ನು ನಾನು ಅಲ್ಲಗಳೆಯುವುದಿಲ್ಲ. ಅದು ಹೆಚ್ಚೆಂದರೆ 25 ರಿಂದ 30 ಟನ್ ಆಗಬಹುದು. ಹಾಗೆ 2014 ರ ಜೂನ್ ನಿಂದ ಸೆಪ್ಟೆಂಬರ್ ತನಕ ಪಾಲಿಕೆಯ ದಾಖಲೆಯಲ್ಲಿಯೇ ಇರುವ ಪ್ರಕಾರ ಸುಮಾರು 245-250 ಟನ್ ತೂಕ ಬರುತ್ತಿತ್ತು. ಓಕೆ, ಅದನ್ನು ಒಪ್ಪಬಹುದು. ಆದರೆ ಈ ಘಟೋದ್ಕಜರು ಬಂದರಲ್ಲ, 2015 ರ ಮಾರ್ಚನಿಂದ ಜೂನ್ ತನಕ 400 ಟನ್ ತ್ಯಾಜ್ಯ ಸಂಗ್ರಹವಾದ ಲೆಕ್ಕ ಬಂದಿದೆ. ಅಂದರೆ ಮಂಗಳೂರಿನವರು ತಿನ್ನುವುದಕ್ಕಿಂತ ಬಿಸಾಡುವುದೇ ಜಾಸ್ತಿಯಾಯಿತಾ, ಇದನ್ನು ಯಾರು ನಂಬುತ್ತಾರೋ, ದೇವರೇ ಬಲ್ಲ. ಮತ್ತೆ ಒಂದಿಷ್ಟು ಸದಸ್ಯರು ಇದರ ವಿರುದ್ಧ ಧ್ವನಿ ಎತ್ತಿದ ಬಳಿಕ ಅದು 400 ರಿಂದ 365 ಟನ್ ಗೆ ಬಂದು ನಿಂತಿತು. ಆದರೆ ಏನೇ ಮಾಡಿದರೂ ಇವರು 350 ರಿಂದ 370 ಲೆಕ್ಕ ತೋರಿಸಿಯೇ ಇರುತ್ತಿದ್ದರು. ಒಂದೆರಡು ನೋಟಿಸಿನ ಬಾಣ ಬಿಟ್ಟ ಬಳಿಕ ಅದು 305 ಟನ್ ಗೆ ಬಂದು ಬಿಟ್ಟಿತ್ತು. ಇದಲ್ಲವೇ ಬ್ರಹ್ಮಾಂಡ ರಹಸ್ಯ. ಹಾಗಂತ ನೀವು ಲೈಟ್ ಕಂಬದ ವೈಯರ್ ನಿಮ್ಮ ಅಂಗಣದಲ್ಲಿರುವ ಮರದ ಗೆಲ್ಲುಗಳಿಗೆ ತಾಗುತ್ತೆ ಎಂದು ಗೆಲ್ಲನ್ನು ತೆಗೆದು ಹಾಕಿದರೆ ಅದನ್ನು ಇವರು ತೆಗೆದುಕೊಂಡು ಹೋಗುತ್ತಿರಲಿಲ್ಲ. ಕಾರಣ ಗೆಲ್ಲುಗಳು ಇಡೀ ಲಾರಿ ತುಂಬುತ್ತವೆ ಮತ್ತು ಲಾಭ ಇಲ್ಲ! ಇನ್ನು ಒಂದಿಷ್ಟು ಬರೆಯಲು ಬಾಕಿ ಇದೆ. ನಾನು ಕೊಟ್ಟಿರುವ ಇಷ್ಟು ಸಾಕ್ಷಿಗಳನ್ನು ಹಿಡಿದು ಪಾಲಿಕೆ ಆಂಟೋನಿಗೆ ಅಂಕುಶ ಹಾಕಬಹುದಿತ್ತು ಆದರೆ ಹಾಗೆ ಮಾಡಿದಾರಾ?
  • Share On Facebook
  • Tweet It


- Advertisement -


Trending Now
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Hanumantha Kamath March 24, 2023
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Hanumantha Kamath March 23, 2023
Leave A Reply

  • Recent Posts

    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
  • Popular Posts

    • 1
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 2
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 3
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 4
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 5
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search