ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
ಗೋಡೆಗಳ ಮೇಲೆ ದೇಶದ್ರೋಹಿ ಬರಹಗಳನ್ನು ಬರೆದಾಗ ಅದನ್ನು ಪ್ರಚಾರಕ್ಕಾಗಿ ಬರೆದದ್ದು ಎಂದು ಹೇಳಲಾಯಿತು. ಮಕ್ಕಳನ್ನು ಗೋಣಿಯೊಳಗೆ ತುರುಕಿಸಿ ತೆಗೆದುಕೊಂಡು ಹೋಗಲು ಯತ್ನಿಸಿದಾಗ ಅದು ಯೂಟ್ಯೂಬ್ ಗಾಗಿ ಎಂದು ಆಯಿತು. ಎಸ್ ಡಿಪಿಐ ಮುಖಂಡ ರಫೀಕ್ ಫರಂಗಿಪೇಟೆ ಎಂಬುವವರು ಮಂಗಳೂರು ತಾಲೂಕು ಕಚೇರಿಯ ಹೊರಗೆ ಪ್ರತಿಭಟನೆ ಮಾಡುವಾಗ “ನಾವು ನಳಿನ್, ಹರೀಶ್ ಪೂಂಜಾ ಯಾರನ್ನು ಕೂಡ ಕ್ಯಾರ್ ಮಾಡುವುದಿಲ್ಲ. ತಾಂಟ್ ಬಾ ತಾಂಟ್” ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ. ಈಗ ದೈವಸ್ಥಾನ, ದೇವಸ್ಥಾನಗಳ ಹುಂಡಿಯಲ್ಲಿ ಕಾಂಡೋಮ್ ಗಳು ಪತ್ತೆಯಾಗಿವೆ. ದೇವಸ್ಥಾನವೊಂದರ ಭಗವಾ ಧ್ವಜವೊಂದರ ಕೆಳಗೆ ಮೂತ್ರ ಮಾಡಲಾಗಿದೆ. ಇದೆಲ್ಲಾ ಆಗುತ್ತಿರುವುದು ಮಂಗಳೂರು ಎನ್ನುವ ಕೋಮು ಸೂಕ್ಷ್ಮ ಪ್ರದೇಶದಲ್ಲಿ. ಒಂದು ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಒಂದೋ ಹಣ ಹಾಕುತ್ತಾರೆ ಅಥವಾ ಬೆಳ್ಳಿ, ಚಿನ್ನದ ವಸ್ತು ಹಾಕುತ್ತಾರೆ.
ಆದರೆ ಕಾಂಡೋಮ್ ಒಬ್ಬ ಹಿಂದೂ ಹಾಕಲು ಸಾಧ್ಯವಿಲ್ಲ. ಒಂದು ವೇಳೆ ಹಾಕಿದರೆ ಅವನು ಕೂಡ ಯಾವುದೋ ಮತೀಯವಾದಿಗಳ ಎಂಜಿಲಿಗೆ ಕೈ ಒಡ್ಡಿ ದೇವಸ್ಥಾನದ ಒಳಗೆ ಬಂದು ಹಾಕಿರಬಹುದು. ಅಂತವನು ಒಬ್ಬನೇ ತಂದೆಗೆ ಹುಟ್ಟಲು ಸಾಧ್ಯವಿಲ್ಲ. ಹೀಗೆ ಮಾಡುವ ಉದ್ದೇಶ ಒಂದೇ. ಮಂಗಳೂರಿನಲ್ಲಿ ಗಲಾಟೆ ಆಗಬೇಕು. ಸಾವು ನೋವು ಸಂಭವಿಸಬೇಕು. ಮಂಗಳೂರು ಬಂದ್ ಆಗಬೇಕು. ಮಂಗಳೂರಿನ ಬಗ್ಗೆ ಕೆಟ್ಟ ಹೆಸರು ಎಲ್ಲೆಡೆ ಹಬ್ಬಬೇಕು. ಕೊನೆಗೆ ಮಂಗಳೂರಿನಲ್ಲಿ ಪ್ರವಾಸೋದ್ಯಮ, ವ್ಯಾಪಾರ, ವಹಿವಾಟು, ಶಿಕ್ಷಣ ಎಲ್ಲದಕ್ಕೂ ಪೆಟ್ಟು ಬೀಳಬೇಕು. ಈ ಮೂಲಕ ಉದ್ಯೋಗ ನಾಶ ಆಗಬೇಕು. ಬಡವರು ಕಷ್ಟ ಪಡಬೇಕು. ಇದೆಲ್ಲವನ್ನು ಯಾವುದೋ ಒಂದು ಜಾಲ ಬಹಳ ಸಿಸ್ಟಮ್ಯಾಟಿಕ್ ಆಗಿ ಮಾಡುತ್ತಿದೆ. ಯಾವಾಗ ಸಿಎಎ ಗಲಾಟೆ ಆಯಿತೋ, ಗಲಭೆಕೋರರಲ್ಲಿ ಇಬ್ಬರು ಸತ್ತು ಹೋದರೋ ಬಹಳ ವ್ಯವಸ್ಥಿತವಾಗಿ ಮಂಗಳೂರಿನಲ್ಲಿ ಗಲಭೆ ನಡೆಸಲು ಸಂಚು ಹೂಡಲಾಗುತ್ತಿದೆ. ಅದಕ್ಕೆ ಮೊದಲ ಹೆಜ್ಜೆ ಇಟ್ಟಿದ್ದೇ ಪೊಲೀಸ್ ಕಾನ್ಸಸ್ಟೇಬಲ್ ಒಬ್ಬರ ಮೇಲೆ ಹಲ್ಲೆ. ಇನ್ನು ಕೂಡ ಬೇರೆ ಬೇರೆ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಷಡ್ಯಂತ್ರ ನಡೆಸಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಹಿಂದೂ ದೇವಾಲಯಗಳ ಮೇಲೆ ಕಳೆದ ಕೆಲವು ದಿನಗಳಲ್ಲಿ ನಾಲ್ಕು ಕಡೆಗಳಲ್ಲಿ ಹೀಗೆ ಅಪಚಾರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಉದ್ದೇಶ ಇಷ್ಟೇ, ಕೇಸರಿ ಪಡೆ ಸಂಘಟನೆಗಳು ಹೋರಾಟಕ್ಕೆ ಇಳಿಯಲಿ. ಉಗ್ರ ಭಾಷಣಗಳು ನಾಯಕರ ಬಾಯಿಯಿಂದ ಬರಲಿ. ಅದನ್ನು ಕೇಳಿದ ಸಂಘಟನೆಯ ಹುಡುಗರಲ್ಲಿ ರೋಷಾಗ್ನಿ ಮೈಯಲ್ಲಿ ಧಾವಿಸಲಿ. ಆಗ ಅವರ ಮೇಲೆ ಒಂದು ಸಣ್ಣ ಹಲ್ಲೆ ಆದರೂ ಸಾಕು, ಮಂಗಳೂರು ಹೊತ್ತಿ ಉರಿಯಲಿ ಎನ್ನುವ ಕುಟಿಲ ಜಾಲ ಹೆಣೆಯಲಾಗುತ್ತಿದೆ ಎಂದು ಅನಿಸುತ್ತಿದೆ. ನಾನು ಹೇಳುವುದು ಏನೆಂದ್ರೆ ಹಿಂದೂಗಳು ನಾವು ಸಹಿಷ್ಣುವಾದಿಗಳು. ನಮ್ಮನ್ನು ಪ್ರೇರೇಪಿಸುವ ಪ್ರಯತ್ನ ಈಗ ನಡೆಯುತ್ತಿದೆ. ಅವರು ಏನೇ ಮಾಡಿದರೂ ನಾವು ಸುಮ್ಮನೆ ಭಾವೋದ್ವೇಗರಾಗುವುದು ಬೇಡಾ. ಯಾಕೆಂದ್ರೆ ನಾವು ಕೋಪವನ್ನು ಕೈಯಲ್ಲಿ ಕೊಡಲಿ ಎಂದೇ ಮತೀಯವಾದಿಗಳು ಬಯಸುತ್ತಿದ್ದಾರೆ. ನಮ್ಮಿಂದ ಮೊದಲು ತಪ್ಪು ನಡೆಯಲಿ ಎಂದು ವಿರೋಧಿಗಳು ಕಾಯುತ್ತಿದ್ದಾರೆ. ಆದ್ದರಿಂದ ಅವರ ಎಣಿಕೆಗಳು ಸರಿಯಾಗದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ನಾವು ಯುಕ್ತಿ ಉಪಯೋಗಿಸಿ ಷಡ್ಯಂತ್ರಕೋರರ ಸಂಚನ್ನು ದಮನಿಸಬೇಕಾಗಿದೆ.
ಯಾವ ದೇವಸ್ಥಾನದಲ್ಲಿ, ದೈವಸ್ಥಾನದಲ್ಲಿ ಹೀಗೆ ಆಗಿದೆಯೋ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುವ ಮೂಲಕ ಯಾರು ಡಬ್ಬಿಯಲ್ಲಿ ಹೀಗೆ ಕಾಂಡೋಮ್ ಹಾಕಿದ್ದಾರೆ ಎಂದು ನೋಡುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಕೆಲವು ಕಡೆ ಎಷ್ಟೋ ದಿನಗಳಿಗೊಮ್ಮೆ ಡಬ್ಬಿ ತೆರೆದು ಹಣ ಲೆಕ್ಕ ಮಾಡಲಾಗುತ್ತದೆ. ಇನ್ನು ಡಬ್ಬಿಯ ಹತ್ತಿರ ಅದಕ್ಕೆ ಸರಿಯಾಗಿ ಸಿಸಿಟಿವಿ ಕ್ಯಾಮೆರಾ ಇರುವುದಿಲ್ಲ. ಹಾಕಿದವನು ಎದ್ದು ಕಾಣುವಂತೆ ಹಾಕಿರುವುದಿಲ್ಲ. ಆದ್ದರಿಂದ ಆ ಮೂಲಕ ಪತ್ತೆ ಹಚ್ಚುವುದು ಕಷ್ಟ. ಅದರ ಬದಲಿಗೆ ನಾವು ದೈವ ದೇವರನ್ನು ನಂಬಿದ ಜನರು. ಭಕ್ತಿಯಿಂದ ದೇವ, ದೈವಗಳನ್ನು ಪ್ರಾರ್ತಿಸೋಣ. ನಮ್ಮ ಭಾವನೆಗಳಿಗೆ ದಕ್ಕೆ ತಂದವರು ಬೇಗನೆ ರಕ್ತ ಕಾರಲಿ ಎಂದೇ ಅಂದುಕೊಳ್ಳೋಣ. ಇನ್ನು ಈ ಸಮಯದಲ್ಲಿ ಪೊಲೀಸ್ ವರಿಷ್ಟಾಧಿಕಾರಿಗಳ ಪಾತ್ರ ದೊಡ್ಡದಿದೆ. ಒಂದು ಕ್ಷಣವೂ ಮೈಮರೆಯದೇ ಕೋಮು ಹಿಂಸೆ ಮಾಡಲು ಉದ್ದೇಶಿಸಿದ್ದವರನ್ನು ಹಿಡಿದು ಬೆಂಡೆತ್ತಿ ಬಿಡಬೇಕು. ಇತ್ತ ಬಜರಂಗದಳದ ಮುಖಂಡ ಶರಣ್ ಪಂಪವೆಲ್ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಎಲ್ಲವೂ ಹಿಂದೂ ಸಂಘಟನೆಗಳನ್ನು ಕೆಣಕುವ ಕೆಲಸ ನಡೆಯುತ್ತಿದೆ. ನಾವು ಒಂದು ನಿರ್ಧಾರ ಮಾಡೋಣ. ನಮ್ಮ ದೇವ, ದೈವಗಳನ್ನು ಯಾರೋ ಕಾಂಡೋಮ್ ಡಬ್ಬಿಯಲ್ಲಿ ಹಾಕುವ ಮೂಲಕ ನಿಂದಿಸಲಾರರು. ದೇವರು, ದೈವಗಳು ಯಾವಾಗಲೂ ಇದೆಲ್ಲಕ್ಕಿಂತ ಮಿಗಿಲಾಗಿದ್ದಾರೆ. ಅದೇ ರೀತಿಯಲ್ಲಿ ಹಿಂದೂಗಳ ಮೌನ ಕೂಡ ಬಲಹೀನತೆ ಅಲ್ಲ ಎನ್ನುವುದನ್ನು ದೇಶದ್ರೋಹಿಗಳು ಅರಿತುಕೊಳ್ಳಬೇಕು. ನಾವು ಸಹಿಸುವಷ್ಟು ಸಹಿಸುತ್ತೇವೆ. ಉಳಿದದ್ದು ದೇವರಿಗೆ ಬಿಟ್ಟಿದ್ದು!!
Leave A Reply