• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.

AvatarHanumantha Kamath Posted On January 21, 2021


  • Share On Facebook
  • Tweet It

ನೀವು ಇಷ್ಟು ದಿನ ಆರಾಮಾಗಿ ಸಿಕ್ಕಿದ ರಸ್ತೆಯಲ್ಲಿ ಬೇಕಾಬಿಟ್ಟಿ ಗುಜರಿ ವ್ಯಾಪಾರ ಮಾಡಿದ್ದು ಸಾಕು. ನಾವು ಕೊಟ್ಟ ಜಾಗವನ್ನು ಧರ್ಮಕ್ಕೆ ಸಿಕ್ಕಿದ್ದು ಅಂತ ಅನುಭವಿಸಿದ್ದು ಸಾಕು. 2006-07 ರಿಂದ ಇಲ್ಲಿಯ ತನಕ ಬಾಕಿ ಇರುವ ಬಾಡಿಗೆ ಮೊತ್ತ 14,09,400 ರೂಪಾಯಿಯನ್ನು ಒಳ್ಳೆಯ ಮಾತಿನಲ್ಲಿ ಪಾವತಿಸಿದ್ದೆ ಸರಿ. ಬೇಕಾದರೆ ಏಳು ದಿನ ಟೈಮು ತೆಗೆದುಕೊಳ್ಳಿ. ಅದು ಬಿಟ್ಟು ಪುನ: ಅದೇ ಹಿಂದಿನ ರಾಗ ಎಳೆದರೆ ಅಲ್ಲಿಂದ ಒದ್ದು ಓಡಿಸಬೇಕಾಗುತ್ತದೆ. ಹೀಗೆ ಸಿನೆಮಾಗಳಲ್ಲಿ ಹೀರೋ ಅತಿಕ್ರಮಣ ಮಾಡಿದ ಶ್ರೀಮಂತ ಉದ್ಯಮಿಗಳಿಗೆ ಬಡವರ ಪರವಾಗಿ ಧ್ವನಿ ಎತ್ತುತ್ತಾನೆ. ರಿಯಲ್ ಲೈಪ್ ನಲ್ಲಿ ಯಾರಾದರೂ ಹಾಗೆ ಬೀಬಿ ಅಲಾಬಿ ರಸ್ತೆಯಲ್ಲಿ ನಿಂತು ಆವಾಜ್ ಹಾಕಲು ಆಗುವುದಿಲ್ಲ. ಆದರೆ ಮಂಗಳೂರು ಮಹಾನಗರ ಪಾಲಿಕೆ ಮನಸ್ಸು ಮಾಡಿದರೆ ಅದಕ್ಕೆ ನಿಜವಾಗಲೂ ಇಚ್ಚಾಶಕ್ತಿ ಇದೆ ಎಂದಾದರೆ ಪೊಲೀಸ್ ಇಲಾಖೆಯ ಸಹಾಯ ತೆಗೆದುಕೊಂಡು ಬೀಬಿ ಅಲಾಬಿ ರಸ್ತೆಯನ್ನು ಮತ್ತು ಹಳೆ ಮನಪಾ ಕಚೇರಿ ಇದ್ದ ಜಾಗದಲ್ಲಿ ಈ ಗುಜರಿ-ಕಬ್ಬಿಣ ವ್ಯಾಪಾರಿಗಳ ಸಂಘಕ್ಕೆ ಕೊಟ್ಟ ಮುಕ್ಕಾಲು ಎಕರೆ ಜಾಗವನ್ನು ಹಿಂದಕ್ಕೆ ಪಡೆಯಬಹುದು. ಆದರೆ ಪಾಲಿಕೆ ಯಾಕೆ ಹಾಗೆ ಮಾಡುವುದಿಲ್ಲ ಎನ್ನುವುದು ನನ್ನ ಪ್ರಶ್ನೆ.
ಒಂದು ವೇಳೆ ಮಾಹಿತಿ ಹಕ್ಕಿನ ಆಧಾರದಲ್ಲಿ ನಾನು application ಹಾಕದೆ ಹೋಗಿದಿದ್ದರೆ ಅದು ಕೂಡ ಹೊರಗೆ ಬರುತ್ತಿರಲಿಲ್ಲ. ಗುಜರಿಯವರು ಆರಾಮವಾಗಿ ರಸ್ತೆಯನ್ನು, ಜಾಗವನ್ನು ಎಂಜಾಯ್ ಮಾಡುತ್ತಾ ಇದ್ದುಬಿಡುತ್ತಿದ್ದರು. ಆದರೆ ನನಗೆ ಇನ್ನೂ ಆಶ್ಚರ್ಯವಾಗುತ್ತಿರುವುದು 2015 ರ ಎಪ್ರಿಲ್ 4 ರಂದು ಮೇಯರ್ ಅವರು ಗುಜರಿ ಅಸೋಸಿಯೇಷನ್ ಗೆ ನೋಟಿಸ್ ಜಾರಿಮಾಡಿದ್ದರು. ಅದಾಗಿ ಒಂದು ವಾರದೊಳಗೆ ಆ ಬಾಕಿ ಇರುವ ಮೊತ್ತ ಪಾಲಿಕೆಗೆ ಬರಬೇಕಾಗಿತ್ತು. ಆದರೆ 02-02-2016ಕ್ಕೆ ಅಂದರೆ 10 ತಿಂಗಳ ನಂತರ ಕೇವಲ 5ಲಕ್ಷ ಕಟ್ಟಿದರು ಬಡ್ಡಿ ವಸೂಲಿ ಮಾಡಲೇ ಇಲ್ಲ‌ ಇಷ್ಟು ಸಮಯ ನಂತರ 5ಲಕ್ಷ.ಏಕೆ 5ಲಕ್ಷ ಎಂದು ಪಾಲಿಕೆಯಿಂದ ಒಂದೇ ಒಂದೂ ನೋಟಿಸ್ ಕೂಡ ಅವರಿಗೆ ಹೋಗಿಲ್ಲಿಲ್ಲ ಇನ್ನೂ ಕ್ರಮ ತೆಗೆದುಕೊಳ್ಳುವುದು ಬಿಡಿ, ಅದು ಧಮ್ ಇದ್ದವರಿಂದ ಮಾತ್ರ ಸಾಧ್ಯ.
ಅಂತಹ ದಮ್ಮಿರುವರು ಪಾಲಿಕೆಯಲ್ಲಿ ಅಗ ಕಾಣಿಸಲಿಲ್ಲ. ಇದ್ದುದ್ದರಲ್ಲಿ ಆ wardನ ಮನಪಾ ಸದಸ್ಯೆ Poornima ಅವರೇ ಪರವಾಗಿಲ್ಲ. ಗಂಡಸರಿಗಿಂತ ಹೆಚ್ಚು ಓಡಾಡಿ ಆ ಸಮಸ್ಯೆ ಪರಿಹಾರವಾಗಲು ಪ್ರಯತ್ನಿಸಿದ್ದಾರೆ. ಆದರೆ ಎಷ್ಟೆಂದರೂ ಅವರು ಅಗ ಪಾಲಿಕೆಯಲ್ಲಿ ವಿಪಕ್ಷವಾಗಿದ್ದ ಭಾರತೀಯ ಜನತಾ partyಯವರು. ಆದ್ದರಿಂದ ಇವರು ಹೋಗಿ ಕೇಳಿದ ಕೂಡಲೇ ತೆಗೆದುಕೊಳ್ಳಿ ಅಮ್ಮಾ, ನೀವಾದರೂ ಅವರೊಂದಿಗೆ ಹೋರಾಡಿ ಎಲ್ಲ ಹಣ ಪಾಲಿಕೆಗೆ ಬರುವಂತೆ ಮಾಡಿ ಎಂದು ಅದಕ್ಕೆ ಸಂಬಂಧಿಸಿದ ಕಡತಗಳನ್ನು ಬೆಳ್ಳಿ ತಟ್ಟೆಯಲ್ಲಿ ಇಟ್ಟು ಕೊಡಲು ಅಗ ಅಲ್ಲಿ ಅಧಿಕಾರದಲ್ಲಿ ಇದವರು ಕಾಂಗ್ರೆಸ್. ಅಲ್ಲಿ ಬಿಜೆಪಿಯವರು ಹೋಗಿ ನಾನು ಅದರ ಹಣ ಬರುವಂತೆ ಹೋರಾಡುತ್ತೇನೆ ಎಂದರೆ ಸುಮ್ಮನೆ ಬಾಯಿ ಮುಚ್ಚಿ ಕುಳಿತುಕೊಳ್ಳಿ ಎಂದು ಕಾಂಗ್ರೆಸ್ಸಿನವರು ಹೇಳುತ್ತಾರೆ ವಿನ: ನಮ್ಮಿಂದ ಆಗುವುದಿಲ್ಲ ನೀವಾದರೂ ಮಾಡಿ ಎಂದು ಸುತಾರಾಂ ಹೇಳಿರುವುದಿಲ್ಲ. ಕಾಂಗ್ರೆಸ್ಸಿಗರು ಕಮೀಷನರ್ ಆಗಿದ್ದ ಖಡಕ್ ಹೆಣ್ಣುಮಗಳು ಹೆಪ್ಸಿಬಾ ರಾಣಿ ಕೊರ್ಲಪಾಟಿಯವರಿಗೆನೆ ಕೇರ್ ಮಾಡುತ್ತಿರಲಿಲ್ಲ. ಅವರು ಕೇಳಿದ ಫೈಲುಗಳನ್ನೆ ಅವರಿಗೆ ಸರಿಯಾಗಿ ಒದಗಿಸದೆ ಅವರನ್ನು ಆಟವಾಡಿಸಿರುವಾಗ ಸಾಮಾನ್ಯ ಬಿಜೆಪಿಯ ಸದಸ್ಯಳಿಗೆ ಕಾಂಗ್ರೆಸ್ಸಿನ ಅತಿರಥ ಮಹಾರಥರು ಕೇರ್ ಮಾಡುತ್ತಾರಾ? ಕಡತ ಹೊರಗೆ ಬರಲೇ ಇಲ್ಲ.
ಹಾಗೆ ಸೆಂಟ್ರಲ್ wardನ ಸದಸ್ಯೆ ಮೊದಲ ಬಾರಿ ಗೆದ್ದು ಬಂದಿರುವ Poornima ಅವರು ಎರಡೆರಡು ಬಾರಿ ಕಡತಗಳಿಗಾಗಿ ಪಾಲಿಕೆಯಲ್ಲಿ ಹೋರಾಟ ಮಾಡಿದರೂ ಇವರ ಕೈಗೆ ಕಡತ ಸಿಕ್ಕಿರಲಿಲ್ಲ. ಕಡತಗಳು ಇದ್ದರೆ ಮಾತ್ರ ಈ ಪ್ರಕರಣದಲ್ಲಿ ಹೋರಾಟ ಮಾಡಬಹುದಾಗಿರುವುದರಿಂದ ಕಟ್ಟಕಡೆಯದಾಗಿ Poornima ಅವರು ಈ ವಿಷಯವನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಎತ್ತುವ decide ಮಾಡುತ್ತಾರೆ. ಆದರೆ ಈ ವಿಷಯದಲ್ಲಿ ಸಭೆಯಲ್ಲಿ ಏನೂ ಮಾತನಾಡಬಾರದು ಎಂದು ಅವರಿಗೆ ಹೇಳಲಾಗಿತ್ತು. ಇಲ್ಲಿಗೆ ಬೀಬಿ ಅಲಾಬಿ ರಸ್ತೆಯ ಗುಜರಿಯವರ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರೇಮಮಯವಾಗಿ ಇರುವುದು ಸಾಬೀತಾಯಿತು. ಅತ್ತ ಕಡೆಯಿಂದ ಸೆಂಟ್ರಲ್ wardನ ಪ್ರಮುಖ ರಸ್ತೆಯಾಗಿರುವ ಬೀಬಿ ಅಲಾಬಿ ರಸ್ತೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಿ, ಇಲ್ಲದಿದ್ದರೆ ಮುಂದಿನ ಬಾರಿ ವೋಟ್ ಕೊಡುವುದಿಲ್ಲ ಎಂದು ಜನರ ಒತ್ತಡ, ಮತ್ತೊಂದೆಡೆ corporator ಅವರು ಗುಜರಿಯವರೊಂದಿಗೆ ಸಮ್ ಥಿಂಗ್ ತೆಗೆದುಕೊಂಡು ಶಾಮೀಲಾಗಿದ್ದಾರೆ ಎಂದು ನಾಗರಿಕರ ಆರೋಪ ಮತ್ತೊಂದೆಡೆ ಹಿಂದಿನ corporator ಕೂಡ ಬಿಜೆಪಿಯವರಾಗಿದ್ದರೂ ಈ ಸಮಸ್ಯೆಯನ್ನು ಸರಿಪಡಿಸಿಲ್ಲ, ನೀವು ಕೂಡ ಅವರಾಗೇನಾ ಎಂದು ಹಲವರ ಮೂದಲಿಕೆ, ಇತ್ತ ಎಷ್ಟು ಪ್ರಯತ್ನಿಸಿದರೂ ಕಡತ ಕೊಡದೆ ಆಟವಾಡಿಸುವ ಅಗಿನ ಆಡಳಿತ ಪಕ್ಷ ಕಾಂಗ್ರೆಸ್, ಸುಸಂಸ್ಕೃತ ಹೆಣ್ಣು ಮಗಳು Poornima ಎಲ್ಲ ಕಡೆಯ ಒತ್ತಡದಿಂದ ಅಳುವುದೊಂದೇ ಬಾಕಿ! ಕಥೆ ಈಗ ಗುಜರಿಯವರು ಬಡ್ಡಿ ರಹಿತವಾಗಿ 2019-20 ರ ವರಗಿನ ಬಾಡಿಗೆ ಚುಕ್ತಾ ಅಗುವವರೆಗೆ ಬಂದು ಮುಟ್ಟಿತ್ತು.ಕಾರ್ಪೋರೆಟ್ ರ್ ಪೂರ್ಣಿಮಾ ರವರ ಹೋರಾಟಕ್ಕೆ ಅಲ್ಪ ಜಯ ಸಿಕ್ಕಿತು. ಹದಿಮೂರು ವರ್ಷಗಳಲ್ಲಿ ಬಾಡಿಗೆ ಮಾತ್ರ ಜಾಸ್ತಿಯಾಗಿಲ್ಲ.
  • Share On Facebook
  • Tweet It


- Advertisement -


Trending Now
ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
Hanumantha Kamath March 5, 2021
ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
Hanumantha Kamath March 4, 2021
Leave A Reply

  • Recent Posts

    • ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
    • ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
    • ಹೊಸ ಮೇಯರ್ ಮಾಡಬೇಕಾದ ಮೊದಲ ಕೆಲಸಕ್ಕೆ ಗುಂಡಿಗೆ ಬೇಕು!!
    • ಮನ್ ಕಿ ಬಾತ್ ನಲ್ಲಿ ಅಡುಗೆ ಅನಿಲದ ರೇಟ್ ಬಗ್ಗೆ ಮೋದಿ ಮಾತನಾಡಲಿ!!
    • ಜಾತಿ ಮೀಸಲಾತಿ ತೆಗೆದು ಆರ್ಥಿಕ ಮೀಸಲಾತಿ ಜಾರಿಗೆ ಬರಲಿ!!
    • ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದ 1 ವರ್ಷದಲ್ಲಿಯೇ ಲಗಾಮು ತಪ್ಪಿ ಹೋಗಿದೆ!!
    • ಪಾಲಿಕೆಯ ಹೊಸ ನಿಯಮದಿಂದ ಉದ್ದಿಮೆದಾರ ಬೀದಿಗೆ??
    • ನೀರು ಬರುತ್ತಿಲ್ಲ, ಮಣ್ಣು ತೆಗೆಸುವ ಗಂಡಸು ಪಾಲಿಕೆಯಲ್ಲಿ ಇದ್ದಾರಾ?
    • ಕಾಂಗ್ರೆಸ್ಸಿನ ಲೆಕ್ಕ ಕೊಡಿ ಅಭಿಯಾನ ಖಾದರ್ ಮನೆಯಿಂದಲೇ ಆರಂಭವಾಗಲಿ!!
    • ಖಾದರ್ ಸ್ವಕ್ಷೇತ್ರದಲ್ಲಿ ತ್ಯಾಜ್ಯ ಘಟಕ ಇಲ್ಲದಿದ್ದರೆ ಕಸ ಪಂಚಾಯತ್ ಅಂಗಳದಲ್ಲಿ ಸುರಿಯಬೇಕಾ!
  • Popular Posts

    • 1
      ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!
    • 2
      ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
    • 3
      ಹೊಸ ಮೇಯರ್ ಮಾಡಬೇಕಾದ ಮೊದಲ ಕೆಲಸಕ್ಕೆ ಗುಂಡಿಗೆ ಬೇಕು!!
    • 4
      ಮನ್ ಕಿ ಬಾತ್ ನಲ್ಲಿ ಅಡುಗೆ ಅನಿಲದ ರೇಟ್ ಬಗ್ಗೆ ಮೋದಿ ಮಾತನಾಡಲಿ!!
    • 5
      ಜಾತಿ ಮೀಸಲಾತಿ ತೆಗೆದು ಆರ್ಥಿಕ ಮೀಸಲಾತಿ ಜಾರಿಗೆ ಬರಲಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search