ಕ್ರೈಸ್ತ ಮಿಶನರಿ ದಿನಕರನ್ ಮಾಡಿದ 120 ಕೋಟಿಯ ಮೂಲ ಗೊತ್ತಾಗಲೇಬೇಕು!!
ಒಬ್ಬ ಜಾಕೀರ್ ನೈಕ್ ಇದ್ದ. ಅವನ ಬಳಿ ಇದ್ದ ಅಕ್ರಮ ಆಸ್ತಿಪಾಸ್ತಿಯ ಲೆಕ್ಕ ಸಿಗುತ್ತದೆ ಎಂದ ಕೂಡಲೇ ವಿದೇಶಕ್ಕೆ ಹಾರಿ ಹೋದ. ಭಾರತ ಸಹಿತ ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ನಿಂತು ಹಿಂದೂಗಳ ದೇವರುಗಳನ್ನು ಹೀಯಾಳಿಸುವುದು ಅವನಿಗೆ ಮೂಲಭೂತವಾದಿಗಳು ಕೊಟ್ಟಿದ್ದ ದೊಡ್ಡ ಉದ್ಯೋಗ. ಅದನ್ನು ನಿಷ್ಟೆಯಿಂದ ಮಾಡಿ ಮತಾಂಧರ ಕೃಪೆಗೆ ಪಾತ್ರನಾಗಿದ್ದ. ಅವನಂತೆ ಅನೇಕರು ಇದ್ದಾರೆ. ಆದರೆ ಜಾಕೀರ್ ನೈಕ್ ತರಹ ಪ್ರಖ್ಯಾತಿ ಹೊಂದಲು ಆಗಲಿಲ್ಲ. ಆದರೆ ಧರ್ಮವನ್ನು ವ್ಯಾಪಾರದ ಸರಕನ್ನಾಗಿ ಮಾಡಿ ಕೋಟಿ ಸಂಪಾದಿಸುತ್ತಿರುವ ಕೆಲವರು ನಮ್ಮ ದೇಶದಲ್ಲಿ ಇದ್ದಾರೆ. ಅದರಲ್ಲಿ ಇತ್ತೀಚೆಗೆ ಗ್ರಹಚಾರ ಕೆಟ್ಟು ಸಿಕ್ಕಿಬಿದ್ದವರು ಪೌಲ್ ದಿನಕರನ್. ಈ ವ್ಯಕ್ತಿಯ 28 ವಿವಿಧ ನಿವಾಸ, ಕಚೇರಿಗಳ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಅಂದಾಜು 120 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಅದರಲ್ಲಿ ನಾಲ್ಕೂವರೆ ಕೆಜಿ ಬಂಗಾರವೂ ಸೇರಿದೆ. ಇಷ್ಟು ಹಣಕ್ಕೆ ದಿನಕರನ್ ಬಳಿ ಯಾವುದೇ ದಾಖಲೆಗಳು ಇಲ್ಲ. ಇಷ್ಟು ಹಣ ಎಲ್ಲಿಂದ ಬಂತು ಎಂದು ಹೇಳಲು ಪೌಲ್ ದಿನಕರನ್ ಬಳಿ ಉತ್ತರವಿಲ್ಲ. ಒಂದು ವೇಳೆ ಯೇಸುವಿನ ಹೆಸರು ಹೇಳಿ ಇವರು ಹೀಗೆ ಹಣವನ್ನು ಸಂಪಾದಿಸುವುದೇ ಆದರೆ ಅದಕ್ಕೆ ಸೂಕ್ತ ಆದಾಯ ತೆರಿಗೆಯನ್ನು ಕಟ್ಟಲೇಬೇಕು. ಆದರೆ ಕಟ್ಟಬೇಕಾದರೆ ಇಷ್ಟು ಹಣ ಎಲ್ಲಿಂದ ಬಂತು ಎಂದು ದಾಖಲೆ ತೋರಿಸಬೇಕಾಗುತ್ತದೆ. ನನಗೆ ತಿಂಗಳಿಗೆ ಹತ್ತು ಕೋಟಿ ಆದಾಯ ಇದೆ, ಅದರ ಪ್ರಕಾರ ಸರಕಾರ ನಿಗದಿಪಡಿಸಿದ ಇಷ್ಟು ತೆರಿಗೆ ಆಗುತ್ತದೆ, ಅದನ್ನು ಕಟ್ಟಿಬಿಡುತ್ತೇನೆ ಎಂದು ಯಾರಾದರೂ ಹೇಳಿ ನುಣುಚಿಕೊಳ್ಳುವಂತಿಲ್ಲ. ಯಾಕೆಂದರೆ ನೀವು ತೆರಿಗೆ ಕಟ್ಟುತ್ತಿರಿ ಎಂದ ಕೂಡಲೇ ಹಣ ಎಲ್ಲಿಂದ ಬೇಕಾದರೂ ಬರಲಿ ಎಂದು ಐಟಿ ಇಲಾಖೆಯವರು ಹಾಗೆ ನಿಮ್ಮನ್ನು ಬಿಡುವುದಿಲ್ಲ. ಆದ್ದರಿಂದ ಅಕ್ರಮ ಆಸ್ತಿಯನ್ನು ಯಾರೂ ತೋರಿಸಲು ಹೋಗುವುದಿಲ್ಲ. ಹಿಂದೆ ಒಂದು ಸಾವಿರ ರೂಪಾಯಿ ನೋಟು ಅಪಮೌಲ್ಯ ಆಗುವ ಮೊದಲು ಅಕ್ರಮ ಹಣವನ್ನು ಕ್ಯಾಶ್ ರೂಪದಲ್ಲಿ ಇಡುವುದಕ್ಕೆ ಅಕ್ರಮಿಗಳಿಗೆ ಅವಕಾಶ ಇರುತ್ತಿತ್ತು. ಆದರೆ ಈಗ ಹಾಗಿಲ್ಲ. ಆದರೆ ಜಮೀನುಗಳ ದಾಖಲೆ ಪತ್ರಗಳು, ಕಟ್ಟಡಗಳ ದಾಖಲೆ ಪತ್ರಗಳು, ಹಣ, ಬಂಗಾರ, ವಜ್ರವನ್ನು ಶೇಖರಿಸುವುದು ಇವತ್ತಿಗೂ ತೆರಿಗೆ ತಪ್ಪಿಸುವ ದಂಧೆಕೋರರಿಗೆ ಸಾಧ್ಯವಾಗುತ್ತಿದೆ. ಆದರೆ ಪೌಲ್ ದಿನಕರನ್ ಉದ್ಯಮಿಯಲ್ಲ. ಇವರಿಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ. ಸಂಶಯವೇ ಬೇಡಾ. ಇದು ವಿದೇಶದಿಂದ ಭಾರತಕ್ಕೆ ಬಂದ ಕಪ್ಪು ಹಣ. ಇಲ್ಲಿ ಮತಾಂತರವನ್ನು ಮಾಡಲು ಅದಕ್ಕೆ ತಗಲುವ ಖರ್ಚು ನೀಡುವುದು, ಕಾರ್ಯಕ್ರಮ ಆಯೋಜಿಸಲು ಆರ್ಥಿಕ ಹಣ ಪೂರೈಸುವುದು, ಬ್ರೇನ್ ವಾಶ್ ಮಾಡಲು ಕೌನ್ಸಿಲರ್ ಗಳನ್ನು ನೇಮಿಸುವುದು, ಬೈಬಲ್ ಸಹಿತ ಕರಪತ್ರ ಮತ್ತು ಮುದ್ರಿಕೆಗಳನ್ನು ನಿರ್ಮಿಸುವುದು, ಹಳ್ಳಿಮಟ್ಟದಲ್ಲಿ ಹೋಗಿ ಜನರಿಗೆ ಮಂಕುಬೂದಿ ಎರಚುವುದು, ಅದಕ್ಕಾಗಿ ಜನರನ್ನು ಗೊತ್ತುಪಡಿಸುವುದು, ಅವರಿಗೆ ವೇತನ ಸಹಿತ ವಿವಿಧ ಭತ್ಯೆಗಳನ್ನು ನೀಡುವುದು ಹೀಗೆ ಧರ್ಮ ಪ್ರಚಾರಕ್ಕೆ ಏನೇನೂ ಖರ್ಚು ಆಗುತ್ತದೆಯೋ ಅದನ್ನೆಲ್ಲಾ ನೀಡಲು ವಿದೇಶಗಳಲ್ಲಿ ಅಂತಹುದೇ ಮನಸ್ಥಿತಿಯ ಜನರು ಇದ್ದಾರೆ. ಅವರು ಹಣ ಕಳುಹಿಸುತ್ತಾರೆ. ಆ ಹಣವನ್ನು ಈ ಪೌಲ್ ದಿನಕರನ್ ನಂತವರು ಯಥೇಚ್ಚವಾಗಿ ಬಳಸುತ್ತಾರೆ. ಅವರನ್ನು ನಂಬಿ ಬೇರೆ ಬೇರೆ ಧರ್ಮದ ಜನ ಅವರ ಭಾಷಣಗಳಿಗೆ ಬರುತ್ತಾರೆ. ಅಲ್ಲಿ ಅವರನ್ನು ಮತಿಭ್ರಮಣೆ ತರಹ ಮಾಡಿ ಮನಸ್ಸು ತಿರುಗಿಸಿ ಕ್ರೈಸ್ತ ಧರ್ಮವೇ ಶ್ರೇಷ್ಟ ಎಂದು ಅಂದುಕೊಳ್ಳುವಂತೆ ಮಾಡುತ್ತಾರೆ. ಹೀಗೆ ಹಲವು ವರ್ಷಗಳಿಂದ ಹಣವನ್ನು ದಿನಕರನ್ ಗಳಿಸುತ್ತಿರುವಂತೆ ಅಮಾಯಕರು ಮಾಡಿದ್ದಾರೆ. ಈಗ ರೇಡ್ ಆಗಿರುವುದರಿಂದ ಎಲ್ಲವೂ ಬಟ್ಟಬಯಲಾಗಿದೆ. ಹಾಗಂತ ಇದು ಯಾವುದೇ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಬರುವುದಿಲ್ಲ. ಯಾಕೆಂದರೆ ಪ್ರತಿ ಮಾಧ್ಯಮಗಳಲ್ಲಿ ಇವರ ಜಾಹೀರಾತು ಅದು ಇದು ಇದ್ದೇ ಇರುತ್ತದೆ. ಆದ್ದರಿಂದ ಹೊರ ಪ್ರಪಂಚಕ್ಕೆ ಇದು ಗೊತ್ತಾಗುವುದು ಕಡಿಮೆ. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಇಂತವರಿಗೆ ಸಾಕಷ್ಟು ರಾಜಾಶ್ರಯವಿತ್ತು. ಇಂತವರು ಏನು ಮಾಡಿದರೂ ಅವರಿಗೆ ಬೆಂಬಲವಿತ್ತು. ಐಟಿ ಇಲಾಖೆಯವರು ರೇಡ್ ಮಾಡುವುದು ಬಿಡಿ, ಅವರ ಹತ್ತಿರಕ್ಕೂ ಸುಳಿಯುವುದಿಲ್ಲ. ಆದರೆ ಈಗ ಸರಕಾರ ಕೇಂದ್ರದಲ್ಲಿ ಬದಲಾಗಿದೆ. ಇಂತಹ ದಿನಕರ್ ನಂತವರ ವಿರುದ್ಧ ಸೂಕ್ತ ದಾಖಲೆಗಳನ್ನು ಒಟ್ಟು ಮಾಡಿ ಐಟಿ ಇಲಾಖೆಯವರು 28 ಕಡೆ ಮುಗಿಬಿದ್ದಿದ್ದಾರೆ. ಈಗ ನಿರೀಕ್ಷೆಯಂತೆ ದಿನಕರನ್ ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸಬೇಕಾಗುತ್ತದೆ. ಐಟಿಯೊಂದಿಗೆ ಇಡಿ ಕೂಡ ತನಿಖೆ ನಡೆಸುತ್ತದೆ. ಖಂಡಿತವಾಗಿ ಇಲ್ಲಿ ದಿನಕರನ್ ತಮ್ಮ ಮೇಲಿನ ಆರ್ಥಿಕ ಅಪರಾಧವನ್ನು ಸುಳ್ಳು ಎಂದು ತೋರಿಸುವಲ್ಲಿ ವಿಫಲರಾದರೆ ಅವರಿಗೆ ಶಿಕ್ಷೆಯಾಗುತ್ತದೆ. ಇದು ಮನುಕುಲಕ್ಕೆ ಸೂಕ್ತ ಸಂದೇಶ ನೀಡಿದಂತಾಗುತ್ತದೆ. ಭಾರತದ ನೆಲದಲ್ಲಿ ವಾಸಿಸಿ, ಇಲ್ಲಿನ ಮಣ್ಣಿನಲ್ಲಿ ಬೆಳೆದ ಆಹಾರ ಸೇವಿಸಿ, ಇಲ್ಲಿ ಹರಿಯುವ ನದಿಯ ನೀರನ್ನು ಕುಡಿದು, ಇಲ್ಲಿ ಬೀಸುವ ಗಾಳಿಯನ್ನು ಸೇವಿಸಿ ಇಲ್ಲಿನ ಕಾನೂನಿಗೆ ದ್ರೋಹ ಮಾಡುವವರನ್ನು ಯಾವ ಕಾರಣಕ್ಕೂ ಅವರದ್ದೇ ಮತದವರು ಕೂಡ ನಂಬಬಾರದು ಮತ್ತು ಒಪ್ಪಬಾರದು. ಮನಸ್ಸು ಗಟ್ಟಿ ಮಾಡಿ ಬಹಿಷ್ಕರಿಸಬೇಕು!
Leave A Reply