• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ನಡೆಸುವವರಿಗೆ common sence ಬೇಕಲ್ಲ, ಶ್ರೀನಿವಾಸ!

Hanumantha Kamath Posted On January 31, 2021
0


0
Shares
  • Share On Facebook
  • Tweet It

ಕರ್ಮವನ್ನು ಮಾಡುವಾಗ ಫಲಾಪೇಕ್ಷೆ ಇಲ್ಲದೆಯೇ, ಕರ್ತವ್ಯವನ್ನು ಮಾಡುತ್ತೇನೆ ಎಂಬ ದೃಷ್ಟಿಯಿಂದ ಮಾಡಿದರೆ, “ಮಹಾಫಲ”ವೇ ಆಗಿರುವ ದೇವರ ಅನುಗ್ರಹವೇ ನಮಗೆ ಸಿಗುವುದು ಎಂದು ಕಾಶೀಮಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಸುಧೀಂದ್ರ ವಾಣಿಯಲ್ಲಿ ಹೇಳಿರುವುದು ಕೇವಲ ಒಂದು ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಯುಗ ಯುಗಗಳಿಗೆ ಕೊಟ್ಟಿರುವ ಸಂದೇಶ. ಈ ಲೌಕಿಕ ಬದುಕಿನಲ್ಲಿ ಅದನ್ನು ಅಳವಡಿಸಿದರೆ ಒಂದಂತೂ ನಿಜ. ನಿಮ್ಮ ಬದುಕಿನಲ್ಲಿ ಬೇರೆ ಏನು ಸಾಧಿಸುತ್ತೀರೊ, ಬಿಡ್ತೀರೊ, ನೆಮ್ಮದಿ, ಸುಖ, ಶಾಂತಿಯನ್ನು ಖಂಡಿತ ಪಡೆಯುತ್ತೀರಿ. ರಾತ್ರಿ ಮಲಗಿದರೆ ಒಳ್ಳೆಯ ನಿದ್ದೆ, ಬೆಳ್ಳಿಗೆ ಎದ್ದರೆ ಒಂದು ಸಂತೃಪ್ತಿಯ ಮನೋಭಾವ ಖಂಡಿತ ನಿಮ್ಮ ಮುಖದಲ್ಲಿರುತ್ತದೆ. ಆದರೆ ಕೆಲವರು ಈ ಸಂದೇಶಕ್ಕೆ ವಿರುದ್ಧವಾಗಿ ಬದುಕುತ್ತಾರೆ. ಅವರು ಫಲಾಪೇಕ್ಷೆ ಇಲ್ಲದೆ ಕರ್ತವ್ಯ ಮಾಡುವುದು ಬಿಡಿ, ಸಮಾಜಕ್ಕೆ ಹೊರೆಯಾಗಿ, ದುರಾಸೆಗೆ ಪ್ರತಿರೂಪವಾಗಿ ಬದುಕುತ್ತಾರೆ.ಮಂಗಳೂರಿನ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಹೊಟೇಲುಗಳನ್ನು ತೆರೆದು ಎರಡು ಕೈಯಲ್ಲಿ ಹಣವನ್ನು ಬಾಚಿಕೊಂಡು ಹೋಗುತ್ತಿದ್ದಾರೆ ಮತ್ತು ಮಾತಿಗೆ ತಪ್ಪಿ ಈಗ ವಿತ್ತಂಡ ವಾದವನ್ನು ಮಂಡಿಸುತ್ತಿದ್ದಾರೆ.
ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಹೊಟೇಲ್ ಶ್ರೀನಿವಾಸ್ ಇದೆ. ಅದರ ಎದುರಿಗೆ ಅದೇ ಹೊಟೇಲಿನ ಮಾಲೀಕರ ಮತ್ತೊಂದು ಹೊಟೇಲಿದೆ. ಅದರ ಹೆಸರು ಕೃಷ್ಣ ಭವನ. ಕೃಷ್ಣಭವನದ ವಿಷಯ ಹೇಳುವ ಮೊದಲು ಹೋಟೇಲ್ ಶ್ರೀನಿವಾಸ್ ಗೆ ಬರೋಣ. ಈ ಹೋಟೇಲಿನ ಕೊನೆಯ ಪ್ಲೋರ್ ಸಂಪೂರ್ಣ ಅಕ್ರಮವಾಗಿ ಕಟ್ಟಲ್ಪಟ್ಟಿದೆ. ಅದನ್ನು ಯಾವತ್ತೂ ಮಂಗಳೂರು ಮಹಾನಗರ ಪಾಲಿಕೆ ಕೆಡವುದಿಲ್ಲ. ಯಾಕೆಂದರೆ ಆ ಹೋಟೇಲಿನವರು ಮಂಗಳೂರಿನ ಅಗರ್ಭ ಶ್ರೀಮಂತರಲ್ಲಿ ಒಬ್ಬರು. ಅವರಿಗೆ ಮಂಗಳೂರಿನ ಒಳಗೆ ಮತ್ತು ಹೊರಗೆ ಕೆಲವು ಶಿಕ್ಷಣ ಸಂಸ್ಥೆಗಳಿವೆ. ಅಧಿಕಾರದಲ್ಲಿರುವ ರಾಜಕಾರಣಿಗಳೊಂದಿಗೆ ಒಳ್ಳೆಯ ಸಂಬಂಧವಿದೆ. ಇವರ ಬೇರೆ ಬೇರೆ ಕಾರ್ಯಕ್ರಮಗಳಿಗೆ ಊರಿನ, ಪರವೂರಿನ ವಿಐಪಿಗಳು ಬರುವುದು ಮಾಮೂಲು. ಅಂತವರು ಏನೂ ಮಾಡಿದರೂ ಅದಕ್ಕೆ ಮನಪಾ ತಪ್ಪು ಎಂದು ಹೇಳುವುದಿಲ್ಲ. ಅಂತಹ ಅನೇಕ ತಪ್ಪುಗಳನ್ನು ಮಾಡುವ ವ್ಯಕ್ತಿಗಳು ಸಮಾಜದಲ್ಲಿ ಗಣ್ಯರು ಅನಿಸಿಕೊಳ್ಳುತ್ತಾರೆ. ಆ ಅಕ್ರಮ ಪ್ಲೋರ್ ನಲ್ಲಿ ಹೊಟೇಲಿನವರು ಹಾಸ್ಟೆಲ್ ಮಾಡಿದ್ದಾರೆ. ಅದರಲ್ಲೂ ಹಣ.
ಬಹುಶ: ಆ ಹಣದಲ್ಲಿ ಒಂದಿಷ್ಟನ್ನು ಪಾಲಿಕೆಯಲ್ಲಿ ಸಂಬಂಧಪಟ್ಟವರಿಗೆ ಎಸೆಯುತ್ತಾರೆನೊ. ಅದಕ್ಕೆ ಆ ಹಾಸ್ಟೆಲಿಗೆ ಏನೂ ಆಗುವುದಿಲ್ಲ. ಆ ಹೋಟೇಲಿನ ನೆಲ ಅಂತಸ್ತಿನಲ್ಲಿ ದರ ಕಡಿತದ ಮಾರಾಟದ ಒಂದು ಅಂಗಡಿ ವರ್ಷಪೂರ್ತಿ ತೆರೆದಿರುತ್ತದೆ. ಬಹುಶ: ಅಲ್ಲಿ ಹೋದವರಿಗೆ ಬೇರೆ ಏನಾದರೂ ಕಡಿತವಾಗುವ ಚಾನ್ಸಿದೆ. ಏಕೆಂದರೆ ಅದು ಆ ಹೋಟೇಲಿನ parking ಜಾಗ. parking ಜಾಗದಲ್ಲಿ ವಿಶಾಲ ಮಳಿಗೆ, ಕಟ್ಟಡದ ಮೇಲೆ ಹಾಸ್ಟೆಲ್. ಕೆಳಗೆ ವಾಹನಗಳು ರಸ್ತೆಯಲ್ಲಿ.ಈ ಬಗ್ಗೆ ದಾಖಲೆ ಸಹಿತ ದೂರು ನೀಡಲಾಗಿದೆ ಏನೂ ಪ್ರಯೋಜನ ವಾಗಿಲ್ಲ.
ಇನ್ನೂ ಈ ಹೋಟೇಲಿನ ಎದುರುಗಡೆ ಇವರದ್ದೇ ಇನ್ನೊಂದು ಹೊಟೇಲಿದೆ. ಕೃಷ್ಣಭವನ. ಈ ಗಣಪತಿ ಹೈಸ್ಕೂಲ್ ರಸ್ತೆಯನ್ನು ಅಗಲ ಮಾಡುವ ವಿಷಯ ಬಂದಾಗ ಮೊದಲಿಗೆ ಕೃಷ್ಣಭವನದ ಎದುರು ಇರುವ ಜಾಗವನ್ನು ಅಗಲೀಕರಣಕ್ಕೆ ಬಿಟ್ಟುಕೊಡುತ್ತೇವೆ ಎಂದು ಮಾಲೀಕರು ಒಪ್ಪಿದ್ದರು. ಸರಿ, ಪಾಲಿಕೆಯ ಅಧಿಕಾರಿಗಳು ಜಾಗದ ಗುರುತು ಹಾಕಿ, ಅಲ್ಲಿ ಪಾಲಿಕೆಯ ವತಿಯಿಂದ ಗೋಡೆ ಕಟ್ಟಿ ಕೊಟ್ಟಿದ್ದರು. ನಿಮಗೆ ಗೊತ್ತೆ ಇದೆ. ಯಾವುದೆ ಒಂದು ರಸ್ತೆ ಅಗಲ ಮಾಡುವ ಸಂದರ್ಭ ಬಂದಾಗ ರಸ್ತೆಯ ಎರಡು ಬದಿಯ ಅಂಗಡಿಯವರು ಸಮಾನವಾಗಿ ಜಾಗವನ್ನು ಬಿಟ್ಟುಕೊಡಬೇಕಾಗುತ್ತದೆ. Indian Road Congress ನಿಯಮಗಳ ಪ್ರಕಾರ ಅದು ಅತೀ ಅಗತ್ಯ. ಆದರೆ ಈ ಹೋಟೇಲಿನ ಮಾಲೀಕರ ವಾದ ಏನು ಗೊತ್ತಾ? ನಾವು ಹೋಟೆಲ್ ಶ್ರೀನಿವಾಸ್ ಇದರ ಎದುರಿನ ಜಾಗ ಬಿಟ್ಟುಕೊಡುವುದಿಲ್ಲ, ಬೇಕಾದರೆ ಕೃಷ್ಣಭವನದ ಎದುರಿನ ಜಾಗ ತೆಗೆದುಕೊಳ್ಳಿ. Common sence ಇರುವ ಯಾವುದೇ ವ್ಯಕ್ತಿಗೆ ಇದರಿಂದ ನಗು ಬರದೇ ಇರಲು ಸಾಧ್ಯವಿಲ್ಲ. ಹಾಗೆ ಮಾಡಲು ಎಲ್ಲಿಯಾದರೂ ಸಾಧ್ಯವಿದೆಯಾ? ಇದು ಸಾಧ್ಯವಿಲ್ಲ ಎಂದು ಗೊತ್ತಿಲ್ಲದಷ್ಟು ಅವರು ಮುಗ್ಧರು ಅಲ್ಲ, ಮೂರ್ಖರು ಅಲ್ಲ ಎಂದು ಅಂದುಕೊಂಡಿದ್ದೇನೆ. ಯಾಕೆಂದರೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುವವರು ಅವರು. ತಮಗೆ ಬೇಡವೆನಿಸಿದ ಜಾಗದಲ್ಲಿ ಬಿಟ್ಟುಕೊಡುತ್ತೇನೆ, ಬೇಕಾದ ಜಾಗದಲ್ಲಿ ಕೊಡಕ್ಕೆ ಆಗಲ್ಲ ಎನ್ನುತ್ತಿರುವುದನ್ನು ನೋಡಿದರೆ ಅದಕ್ಕೆ ಏನು ಹೇಳಬೇಕು ಎಂದು ಪಾಲಿಕೆ ತಿರ್ಮಾನಿಸಿದಂತೆ ಕಾಣುವುದಿಲ್ಲ. ಇದರ ನಡುವೆ ಕೃಷ್ಣಭವನದ ಎದುರು ಪಾಲಿಕೆ ತನ್ನ ಖರ್ಚಿನಲ್ಲಿ ಕಟ್ಟಿದ ಗೋಡೆಯ ಕಲ್ಲುಗಳನ್ನು ಕೃಷ್ಣಭವನದವರು ಕೆಡವುತ್ತಿದ್ದರು ಸರಕಾರದ ವಸ್ತುಗಳನ್ನು ಹಾಳುಗೆಡವುದು ಕೂಡ ತಪ್ಪು ಎನ್ನುವುದು ಕೂಡ ಗೊತ್ತಿಲ್ಲದಷ್ಟು ದಡ್ಡರಾ ಈ ಹೋಟೆಲಿನವರು ಅಥವಾ ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವಷ್ಟು ದೈರ್ಯ ಇವರಿಗೆ.
0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Hanumantha Kamath July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Hanumantha Kamath July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search