• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಿಜೆಪಿ ಹೆಸರಿನಲ್ಲಿ ಮುಸ್ಲಿಂಲೀಗ್ ಸರಕಾರ ರಾಜ್ಯದಲ್ಲಿ ಇದೆಯಾ?

Tulunadu News Posted On February 4, 2021


  • Share On Facebook
  • Tweet It

ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರ ಅದೆಷ್ಟು ಯೂ ಟರ್ನ್ ತೆಗೆದುಕೊಳ್ಳುತ್ತಿದೆ ಎಂದು ಲೆಕ್ಕ ಹಿಡಿಯುವುದು ಕಷ್ಟವಾಗಿದೆ. ಮೊನ್ನೆ ಸಿನೆಮಾ ಥಿಯೇಟರ್ ನಲ್ಲಿ 50% ಜನ ಮಾತ್ರ ಎಂದು ಆದೇಶ ಹೊರಡಿಸಿ ಸಂಜೆ ಹೊತ್ತಿಗೆ ಆದೇಶ ಹಿಂದೆ ಪಡೆದುಬಿಟ್ಟಿತ್ತು. ನಮಗೆ ಗೊತ್ತಿಲ್ಲದೆ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಂತರ ಆರೋಗ್ಯ ಸಚಿವ ಸುಧಾಕರ ಸುದ್ದಿಗೋಷ್ಟಿಯಲ್ಲಿ ಹೇಳಿದರು. ಈಗ ಅದಕ್ಕಿಂತ ಘೋರ ನಿರ್ಧಾರವನ್ನು ರಾಜ್ಯ ಸರಕಾರದ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.

ಅದೇನೆಂದರೆ ಮುಜುರಾಯಿ ಇಲಾಖೆ ಅಡಿಯಲ್ಲಿರುವುದನ್ನು ಬಿಟ್ಟು ಬೇರೆ ಸ್ವತಂತ್ರವಾಗಿರುವ ದೇವಸ್ಥಾನಗಳನ್ನು ನೊಂದಣಿ ಮಾಡಬೇಕು. ದೇವಸ್ಥಾನಗಳ ಆಸ್ತಿಪಾಸ್ತಿ ವಿವರವನ್ನು ಸಲ್ಲಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. ಇತ್ತ ಆದೇಶ ಬರುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರು ಸುದ್ದಿಗೋಷ್ಟಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾವು ವಿರೋಧಿಸಿದ್ದೇವು. ಆ ಬಳಿಕ ಆಗಿನ ಕಾಂಗ್ರೆಸ್ ಸರಕಾರ ವಿವಾದಾತ್ಮಕ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿತ್ತು ಎಂದು ಹೇಳಿದ್ದಾರೆ. ನಾನು ಕೂಡ ಅದೇ ಹೇಳುತ್ತಿರುವುದು. ಕಾಂಗ್ರೆಸ್ ಸರಕಾರ ಅಂತಹ ಆದೇಶ ಹೊರಡಿಸಿದರೆ ಅಂತಹ ಆಶ್ಚರ್ಯ ಇರುವುದಿಲ್ಲ. ಯಾಕೆಂದರೆ ಎಲ್ಲರಿಗೂ ಅವರ ನಿಲುವುಗಳ ಬಗ್ಗೆ ಗೊತ್ತಿದೆ. ಕಾಂಗ್ರೆಸ್ಸ್ ಏನಿದ್ದರೂ ಅಲ್ಪಸಂಖ್ಯಾತರ ಪರ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿರುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸಂಘ ಪರಿವಾರದವರು ಹೋರಾಟ ಮಾಡಿ ಆ ಆದೇಶವನ್ನು ಹಿಂದಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹಾಕಿದ್ದರು. ಅದರಲ್ಲಿ ಯಶಸ್ವಿಯೂ ಆಗಿದ್ದರು. ಅದು ಮುಗಿದ ವಿಷಯ. ಈಗ ಬಿಜೆಪಿ ಸರಕಾರ ಬಂದಿದೆ. ಈಗ ಬಿಜೆಪಿ ಸರಕಾರ ಬಂದ ಬಳಿಕ ಮತ್ತೆ ಆ ಪ್ರಸ್ತಾವಕ್ಕೆ ಜೀವ ಬಂದಿದೆ. ಸರಕಾರದಿಂದ ಸೂಚನೆ ಹೊರಬಿದ್ದಿದೆ. ಹಾಗಾದರೆ ಕಾಂಗ್ರೆಸ್ಸಿಗೂ, ಬಿಜೆಪಿಗೂ ಏನು ವ್ಯತ್ಯಾಸ? ಒಂದು ವೇಳೆ ನಮಗೆ ಗೊತ್ತಿಲ್ಲದೆ ಅಧಿಕಾರಿಗಳು ಇದನ್ನು ಹೊರಡಿಸಿರುವುದೇ ಆದರೆ ಅಧಿಕಾರಿಗಳಿಗೆ ಬುದ್ಧಿ ಇಲ್ಲವೇ? ಅವರಿಗೆ ಬಿಜೆಪಿ ಸರಕಾರ ಬಂದು ಒಂದೂವರೆ ವರ್ಷದ ಮೇಲಾಗಿರುವುದು ಗೊತ್ತಿಲ್ಲವೇ? ಅವರು ಮಲಗಿದ್ದರಾ? ಈಗ ಎಚ್ಚರಗೊಂಡು ಆದೇಶ ಹೊರಡಿಸಿದ್ದಾರಾ? ಇನ್ನು ಮುಜುರಾಯಿ ಇಲಾಖೆ ಎನ್ನುವುದು ಹಿಂದೂಗಳ ಕಾಣಿಕೆ ಹಣದಿಂದ ಬೇರೆ ಧರ್ಮದವರ ಆರಾಧನಾ ಕೇಂದ್ರವನ್ನು ಅಭಿವೃದ್ಧಿ ಮಾಡಲು ಇರುವ ವ್ಯವಸ್ಥೆ ಎಂದೇ ಹೇಳಲಾಗುತ್ತದೆ. ಅವರು ಎ ಗ್ರೇಡ್ ದೇವಸ್ಥಾನಗಳ ಹಣವನ್ನು ಸಂಗ್ರಹಿಸುತ್ತಾರೆ. ಅಲ್ಲಿ ಸಂಗ್ರಹವಾಗುವ ಕೋಟಿ ರೂಪಾಯಿಯಲ್ಲಿ ಸ್ವಲ್ಪ ಚಿಲ್ಲರೆ ಹಣವನ್ನು ಅಲ್ಲಿ ಉಪಯೋಗಿಸಿ ಉಳಿದದ್ದನ್ನು ಬೇರೆಡೆ ಬಳಸುತ್ತಾರೆ. ಇವತ್ತಿಗೂ ನಮ್ಮ ರಾಜ್ಯದಲ್ಲಿ ಅನೇಕ ಬಡ ದೇವಾಲಯಗಳಿವೆ. ಅದನ್ನು ಕೇಳುವವರು ಯಾರೂ ಇಲ್ಲ. ಶ್ರೀಮಂತ ದೇವಸ್ಥಾನಗಳು ಮುಜುರಾಯಿ ಪಾಲಿಗೆ ಕಾಮಧೇನು. ಅವುಗಳ ಹಣದಿಂದ ಅಭಿವೃದ್ಧಿಯಾಗುವುದು ಮಸೀದಿ, ಚರ್ಚುಗಳು. ಅಷ್ಟಕ್ಕೂ ಸ್ವತಂತ್ರ ದೇವಸ್ಥಾನಗಳ ಆಸ್ತಿಪಾಸ್ತಿ ಕೇಳಲು ರಾಜ್ಯ ಸರಕಾರ ಯಾರು? ನೊಂದಣಿ ಮಾಡಿ ಎಂದು ಹೇಳಲು ಇವರಿಗೆ ಅಧಿಕಾರ ಇದೆ ಎಂದಾದರೆ ಇದು ಮುಂದಿನ ದಿನಗಳಲ್ಲಿ ಇಂತಹ ದೇವಸ್ಥಾನಗಳ ಆಸ್ತಿ, ಪಾಸ್ತಿ ಆದಾಯದ ಮೇಲೆ ಕಣ್ಣು ಇಟ್ಟಂತೆ ಆಗಿದೆಯಲ್ವಾ?
ಇನ್ನು ಆಶ್ಚರ್ಯ ಎಂದರೆ ಇದು ಕೇವಲ ದೇವಸ್ಥಾನಗಳಿಗೆ ಮಾತ್ರ ಸಂಬಂಧಿಸಿದ ಆದೇಶ. ಅಲ್ಪಸಂಖ್ಯಾತರ ಮಸೀದಿ, ಚರ್ಚ್, ಬಸದಿಗೆ ಯಾವುದೇ ಲೆಕ್ಕಪತ್ರ, ಆಸ್ತಿಪಾಸ್ತಿ ನೀಡಿ ನೊಂದಣಿ ಮಾಡಿಕೊಳ್ಳಿ ಎಂದು ಆದೇಶ ನೀಡಿಲ್ಲ. ಈಗ ಅನಿಸುತ್ತಿರುವುದು ಹಾಗಾದರೆ ಕರ್ನಾಟಕವನ್ನು ಮುಸ್ಲಿಂಲೀಗ್ ಆಳುತ್ತಿದೆಯಾ ಅಥವಾ ಬಿಜೆಪಿ ಆಳುತ್ತಿದೆಯಾ ಎನ್ನುವ ಸಂಶಯ ಬರುತ್ತಿದೆ. ಮುಸ್ಲಿಮರಲ್ಲಿ ವಕ್ಫ್ ಬೋರ್ಡ್ ಇದೆ. ಹಾಗೆ ಕ್ರೈಸ್ತರ ಚರ್ಚ್ ಕೂಡ ಅಭಿವೃದ್ಧಿ ಮಾಡುವ ಯೋಜನೆ ಸರಕಾರಕ್ಕೆ ಇದ್ದರೆ ಅವರವರ ಧರ್ಮದ ಆರಾಧನಾ ಕೇಂದ್ರಗಳ ಆದಾಯದಿಂದ ಅದನ್ನು ಅಭಿವೃದ್ಧಿ ಪಡಿಸಬೇಕು. ಅದು ಬಿಟ್ಟು ದೇವಸ್ಥಾನಗಳ ಆದಾಯದಿಂದ ಚರ್ಚ್, ಮಸೀದಿಗಳನ್ನು ಯಾಕೆ ಅಭಿವೃದ್ಧಿ ಮಾಡಬೇಕು. ಮಂಗಳೂರಿನ ರೊಸಾರಿಯೋ ಚರ್ಚ್ ನ ಮೈದಾನಕ್ಕೆ ಪ್ರವಾಸೋದ್ಯಮ ಇಲಾಖೆ ಇಂಟರ್ ಲಾಕ್ ಹಾಕಿತ್ತು. ಪ್ರವಾಸೋದ್ಯಮ ಇಲಾಖೆಗೆ ಹಣ ಮುಜುರಾಯಿ ಹಣ ನೀಡಿತ್ತು. ನಾವು ಭಕ್ತಿಯಿಂದ ನಮ್ಮ ದೇವರಿಗೆ ಹಾಕುವ ಹಣವನ್ನು ಯಾಕೆ ಬೇರೆ ಧರ್ಮದ ಆರಾಧನಾ ಕೇಂದ್ರಗಳಿಗೆ ಬಳಸಬೇಕು. ಈಗ ನಮ್ಮಲ್ಲಿರುವ ಎ-ಗ್ರೇಡ್ ದೇವಸ್ಥಾನಗಳ ಆದಾಯ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಆಗುತ್ತದೆ. ಅದನ್ನು ಬಳಸಿ ರಾಜ್ಯದ ಸಣ್ಣಸಣ್ಣ ದೇವಾಲಯಗಳನ್ನು ಅಭಿವೃದ್ಧಿ ಮಾಡಬಹುದಲ್ಲವೇ? ಆಗ ಹಣ ಕೂಡ ನಮ್ಮ ಆಶಯದಂತೆ ಖರ್ಚಾಗುತ್ತದೆ. ಅಭಿವೃದ್ಧಿ ಕೂಡ ಸಮಾನಾಂತರವಾಗಿ ಬಳಕೆಯಾಗುತ್ತದೆ. ಆದರೆ ಹೀಗೆ ಯಾವಾಗ ಬಿಜೆಪಿ ಸರಕಾರ ಯೋಚನೆ ಮಾಡುತ್ತದೆ ಎನ್ನುವುದೇ ಗೊತ್ತಿಲ್ಲ. ಇವರದ್ದೇನಿದ್ದರೂ ಚುನಾವಣಾ ಬಂದಾಗ ಮಾತ್ರ ಹಿಂದೂತ್ವ. ಅದನ್ನು ನಂಬಿ ಜನ ಮತ ನೀಡಬೇಕು. ಚುನಾವಣೆ ಮುಗಿದ ಬಳಿಕ ಇವರು ಕಾಂಗ್ರೆಸ್ಸಿಗಿಂತ ಫಾಸ್ಟ್ ಆಗಿ ಹಿಂದೂಗಳ ನಂಬಿಕೆಗೆ ಕೈ ಹಾಕಿಬಿಡುತ್ತಾರೆ. ಇನ್ನು ಇದು ವಿವಾದ ಆಗುತ್ತದೆ ಎಂದ ಕೂಡಲೇ ನಾಳೆ ಸಚಿವರು ನಮಗೆ ಹೀಗೆ ಆದೇಶ ಹೋಗಿದೆ ಎಂದೇ ಗೊತ್ತಿಲ್ಲ. ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎಂದೇ ಹೇಳಬಹುದು. ಯಾಕೆಂದರೆ ರಾಜ್ಯದಲ್ಲಿರುವುದು ಯೂಟರ್ನ್ ಸರಕಾರ!

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Tulunadu News July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Tulunadu News July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search