• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನೀಲಿಚಿತ್ರಗಳ ನಟಿಯರ ಟ್ವಿಟ್ ಕಂಡು ರಾಹುಲ್ ರೋಮಾಂಚನ!!

Hanumantha Kamath Posted On February 5, 2021


  • Share On Facebook
  • Tweet It

ಕೆಲವರು ವಿದೇಶದಲ್ಲಿ ಕುಳಿತು ನಾವು ರೈತರ ಪರ ಎಂದು ಟ್ವಿಟ್, ಕಮೆಂಟ್ ಮಾಡಿ ಪ್ರತಿಭಟನಾಕಾರರನ್ನು ಹುರಿದುಂಬಿಸುತ್ತಿದ್ದಾರೆ ಎಂದರೆ ಅದನ್ನು ಎಲ್ಲಿಯಾದರೂ ಒಬ್ಬನೇ ಒಬ್ಬ ನೈಜ ರೈತ ನಂಬಿದರೆ ಅವರು ಅಂತರಾಷ್ಟ್ರೀಯ ಮೋಸದ ಬಲೆಗೆ ಬಲಿಯಾದರು ಎಂದೇ ಅರ್ಥ. ಯಾಕೆಂದರೆ ನಿನ್ನೆಯಿಂದ ದೆಹಲಿಯ ರೈತರಿಗೆ ಬೆಂಬಲಿಸುತ್ತಿರುವ ವಿದೇಶಿ ನೀಲಿ ಚಿತ್ರಗಳ ತಾರೆಯಾಗಲಿ, ಪಾಪ್ ಗಾಯಕಿಯರಾಗಲಿ ಇನ್ಯಾರೇ ಆಗಲಿ, ಅವರಿಗೆ ಭಾರತದಲ್ಲಿ ಕೇಂದ್ರ ಸರಕಾರ ತಂದಿರುವ ಕಾಯಿದೆಯ ಬಗ್ಗೆ ಒಂದು ಚೂರು ಜ್ಞಾನವಿಲ್ಲ. ನೀಲಿ ಚಿತ್ರಗಳ ನಟಿ ಮಿಯಾ ಖಲೀಫಾ ದಿಲ್ಲಿಯಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಿದ್ದನ್ನೇ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಟ್ವಿಟ್ ಮಾಡಿದ್ದಾರೆ.

ಹಾಗಾದರೆ ಮೊನ್ನೆ ಕುದುರೆಯ ಮೇಲೆ ಕುಳಿತು ಕೈಯಲ್ಲಿ ತಲವಾರು ಬೀಸಿ ಅಸಂಖ್ಯಾತ ಪೊಲೀಸರನ್ನು ಗಾಯಗೊಳಿಸಿದ ಪ್ರತಿಭಟನಾಕಾರರು ಮಾಡಿದ್ದು ಸರಿಯಾ ಮೀಯಾ ಎಂದು ಕೇಳಬೇಕಿದೆ. ಕೆಲವರು ತಮ್ಮ ಯೋಗ್ಯತೆಯನ್ನು ಅರಿತುಕೊಂಡೆ ಮಾತನಾಡಬೇಕು. ಅಲ್ಲಿ ನೀಲಿ ಚಿತ್ರಗಳಲ್ಲಿ ಮಿಂಚುತ್ತಿದ್ದ ಸನ್ನಿ ಲಿಯೋನ್ ಭಾರತಕ್ಕೆ ಬಂದು ಇಲ್ಲಿನ ಸಿನೆಮಾಗಳಲ್ಲಿ ನಟಿಸುವಾಗ ಆಕೆಗೆ ಒಂದು ಹೆಣ್ಣಾಗಿ ಏನು ಗೌರವ ಕೊಡಬೇಕೊ ಅದನ್ನು ಈ ದೇಶ ಕೊಟ್ಟಿದೆ. ನೀಲಿ ಚಿತ್ರಗಳ ತಾರೆ ಎಂದು ಯಾರೂ ಆಕೆಯನ್ನು ದೂರ ಇಟ್ಟಿಲ್ಲ. ಹಾಗಂತ ಅದೇ ಶ್ರೇಣಿಯಾ ಮಿಯಾ ಖಲೀಫಾ ತಮ್ಮ ಪರಿಧಿ ಮೀರಿ ಮಾತನಾಡಿದರೆ ಅದನ್ನು ಸಹಿಸಿಕೊಳ್ಳಲು ಆಗಲ್ಲ. ಭಾರತದಲ್ಲಿ ಕೆಲವೇ ಕೆಲವು ಶ್ರೀಮಂತ ಮಂಡಿ ವ್ಯಾಪಾರಿ ರಾಜಕಾರಣಿಗಳು ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿ ರೈತರ ಫಸಲನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದನ್ನು ತಡೆಯಲು ಪ್ರಧಾನಿ ಮೋದಿ ತಂದಿರುವ ಈ ಯೋಜನೆಯ ಬಗ್ಗೆ ಆಕೆಗೆ ಗೊತ್ತಿಲ್ಲ. ಮೂರು ಹೊಸ ಕಾಯಿದೆಗಳನ್ನು ನೈಜ ರೈತ ಸ್ವಾಗತಿಸುತ್ತಿದ್ದಾನೆ. ಆದರೆ ಕೆಲವರು ಇದನ್ನು ವಿರೋಧ ಮಾಡುತ್ತಿದ್ದಾರೆ ಎಂದ ಕೂಡಲೇ ಮಂಚದ ಮೇಲೆ ಲಲ್ಲೆ ಹೊಡೆಯುತ್ತಾ ಕ್ಯಾಮೆರಾಕ್ಕೆ ಪೋಸ್ ಕೊಡುತ್ತಿದ್ದವರೆಲ್ಲ ತಮ್ಮ ಬಟ್ಟೆ ಕಳಚಿದಷ್ಟೇ ಸುಲಭವಾಗಿ ಟ್ವಿಟ್ ನಲ್ಲಿ ಇಂತಹ ಗಂಭೀರ ವಿಷಯಕ್ಕೆ ಕೈ ಹಾಕಬಾರದು. ಇನ್ನು ಅಮೇರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂಬಂಧಿ ಮೀನಾ ಹ್ಯಾರಿಸ್ ಎನ್ನುವವರು ಟ್ವಿಟ್ ಮಾಡಿ ದಿಲ್ಲಿಯಲ್ಲಿ ರೈತರ ವಿರುದ್ಧ ಅರೆಸೇನಾ ಪಡೆಗಳನ್ನು ಬಳಸಿ ಬಲ ಪ್ರಯೋಗ ಮಾಡುವುದು ಸಿಟ್ಟು ಬರಿಸುವಂತಹ ಕೆಲಸವಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಾವು ಕಮಲಾ ಹ್ಯಾರಿಸ್ ಅಮೇರಿಕಾ ಉಪಾಧ್ಯಕ್ಷೆ ಆದಾಗ ಭಾರತೀಯ ಮೂಲದವರು ಎಂದು ಸಂಭ್ರಮಿಸಿದವರು. ಕಮಲಾ ತಾಯಿ ಭಾರತ ಬಿಟ್ಟು ಹೋಗಿ ಯಾವುದೋ ಕಾಲವಾಗಿತ್ತು. ಕಮಲಾ ಹ್ಯಾರಿಸ್ ಗೆ ಭಾರತದ ನೆಲದ ಋಣ ಇದ್ದಂತೆ ಕಾಣುತ್ತಿಲ್ಲ. ಆದರೆ ಅವರು ಪ್ರಪಂಚದ ಬಲಿಷ್ಟ ರಾಷ್ಟ್ರವೊಂದರ ಉಪಾಧ್ಯಕ್ಷೆಯಾದಾಗ ನಾವು ಹೆಮ್ಮೆ ಪಟ್ಟಿದ್ದೇವು. ಈಗ ಅವರ ಸಂಬಂಧಿ ಅಲ್ಲಿ ಕುಳಿತು ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಮಾತನಾಡುತ್ತಾರೆ. ಅಮೇರಿಕಾದಲ್ಲಿ ಕಮಲಾ ಹ್ಯಾರಿಸ್ ಮೂಗಿನಡಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಅವರು ಯೋಚಿಸಿದರೆ ಸಾಕೆಂದು ತೋರುತ್ತದೆ. ಇನ್ನು ಸ್ವೀಡನ್ ನ ಗ್ರೇಟಾ ಥನ್ ಬರ್ಗ್ ಭಾರತದ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ದಾರೆ. ಅವರು ಎಂತಹ ಕಪಟಿಗಳು ಎಂದರೆ ಭಾರತದಲ್ಲಿ ಸರಕಾರ ಕೊಡುತ್ತಿರುವ ಸಬ್ಸಿಡಿಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಕಿಡಿಕಾರಿದವರು. ಇಂತವರ ಬಗ್ಗೆ ರೈತರಿಗೆ ಗೊತ್ತಾದರೆ ಅಂತವರನ್ನು ಚಪ್ಪಲಿಯಿಂದ ಹೊಡೆದಾರು. ಹೀಗೆ ಕೆಲಸವಿಲ್ಲದ ಅನೇಕರು ವಿದೇಶದಲ್ಲಿ ಕುಳಿತು ಭಾರತದ ಕಾಯಿದೆಯ ಬಗ್ಗೆ ಗಂಧಗಾಳಿ ಇಲ್ಲದಿದ್ದರೂ ಭಾರತದ ರೈತರ ಬಗ್ಗೆ ಟ್ವಿಟ್ ಮಾಡುತ್ತಿದ್ದಾರೆ. ಇದರಿಂದ ಒಂದಂತೂ ಸ್ಪಷ್ಟ. ರಾಹುಲ್ ಗಾಂಧಿ(!)ಗೆ ವಿದೇಶದಲ್ಲಿಯೂ ಕೆಲವು ಸ್ನೇಹಿತರಿದ್ದಾರೆ ಎಂದು ಇದರಿಂದ ಗೊತ್ತಾಗುತ್ತಿದೆ. ತಮ್ಮ ವಿದೇಶಿ ಸ್ನೇಹಿತರು ಟ್ವಿಟ್ ಮಾಡುವುದನ್ನೇ ಕಾಯುತ್ತಿದ್ದ ರಾಹುಲ್, ನೋಡಿ ವಿದೇಶದವರಿಗೂ ನಮ್ಮ ಹೋರಾಟದ ಬಗ್ಗೆ ಗೊತ್ತಾಗಿದೆ ಎನ್ನುತ್ತಿದ್ದಾರೆ. ಆದರೆ ರಾಹುಲ್ ನಂತಹ ಕೆಲವರು ಏನೇ ರಾಜಕೀಯ ಪ್ರೇರಿತವಾಗ ಮಾತನಾಡಲಿ ಈ ಬಾರಿ ಬಾಲಿವುಡ್ ಹಾಗೂ ಕ್ರಿಕೆಟಿನ ದಿಗ್ಗಜರು ಮಾತ್ರ ಈ ವಿಷಯದಲ್ಲಿ ವಿದೇಶಿಗರು ಮೂಗು ತೂರಿಸುವುದು ಬೇಡಾ, ನಮ್ಮ ದೇಶದ ವಿಷಯ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನು ಸಚಿನ್ ತೆಂಡೂಲ್ಕರ್ ಅವರಂತಹ ಕ್ರಿಕೆಟ್ ದಂತಕಥೆ ಎನಿಸಿಕೊಂಡವರು ಹೇಳಿರುವುದು ಕಾಂಗ್ರೆಸ್ಸಿಗೆ ಮುಜುಗರ ತಂದಿರಬಹುದು. ಯಾಕೆಂದರೆ ಒಂದು ಅವಧಿಗೆ ಇದೇ ಸಚಿನ್ ಅವರನ್ನು ಕಾಂಗ್ರೆಸ್ಸಿಗರು ರಾಜ್ಯಸಭೆಗೆ ಎಂಪಿ ಮಾಡಿದ್ದರು. ಈಗ ಅದೇ ಸಚಿನ್ ವಿದೇಶಿಗರಿಗೆ ಖಡಕ್ ಉತ್ತರ ಕೊಟ್ಟಿರುವುದು ಹಾಗೂ ರಾಹುಲ್ ವಿದೇಶಿಗರನ್ನು ಹೊಗಳುತ್ತಿರುವುದು ನೋಡುವಾಗ ನಿಜವಾದ ದೇಶಭಕ್ತ ಯಾರೆಂದು ಗೊತ್ತಾಗುತ್ತದೆ. ಇನ್ನು ಲತಾ ಮಂಗೇಶ್ಕರ್ ಕೂಡ ಈ ವಯಸ್ಸಿನಲ್ಲಿಯೂ ಟ್ವಿಟ್ ಮಾಡಿ ವಿದೇಶಿಗರ ಇಬ್ಬಂದಿತನವನ್ನು ಖಂಡಿಸಿರುವುದು ನಿಜಕ್ಕೂ ಪ್ರಶಂಸನೀಯ. ಇನ್ನು ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನೀಲ್ ಶೆಟ್ಟಿ ಸಹಿತ ಅನೇಕ ನಟರು ಭಾರತದ ಕಾಯಿದೆಯಲ್ಲಿ ವಿದೇಶಿಗರಿಗೆ ಏನು ಕೆಲಸ ಎಂದು ಪ್ರಶ್ನಿಸಿದ್ದಾರೆ. ಹೀಗೆ ಭಾರತೀಯ ನಟರು ಬಹಿರಂಗವಾಗಿ ಭಾರತದ ಪರ ನಿಂತಿರುವಾಗ ಗೊಂದಲಕ್ಕೆ ಬಿದ್ದಿರುವ ಶಾರೂಖ್ ಖಾನ್, ಅಮೀರ್ ಖಾನ್ ಅವರಂತವರು ಸದ್ಯ ಮೌನವನ್ನೇ ಉಸಿರಾಡುತ್ತಿದ್ದಾರೆ. ಯಾಕೆಂದರೆ ಅವರಿಗೆ ಗೊತ್ತಿದೆ. ಈ ಸಂದರ್ಭದಲ್ಲಿ ವಿದೇಶಿಗರಿಗೆ ಸಾಥ್ ನೀಡುವುದು ತುಂಬಾ ದುಬಾರಿಯಾಗಬಹುದು.!!

  • Share On Facebook
  • Tweet It


- Advertisement -


Trending Now
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Hanumantha Kamath March 25, 2023
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Hanumantha Kamath March 24, 2023
Leave A Reply

  • Recent Posts

    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
  • Popular Posts

    • 1
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 2
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 3
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 4
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 5
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search