• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಬಿಲ್ಲವರಿಗಿಂತ ಬ್ಯಾರಿಗಳೇ ಮೇಲಾದರೆ ಜಗದೀಶ್ ಅಧಿಕಾರಿ ಎಸ್ ಡಿಪಿಐ ಸೇರಲಿ!!

Hanumantha Kamath Posted On February 7, 2021
0


0
Shares
  • Share On Facebook
  • Tweet It

ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ.  ಅಧಿಕಾರಿ ಒಂದು ಕಾಲದಲ್ಲಿ ಕಟ್ಟಾ ಕಾಂಗ್ರೆಸ್ಸಿಗ. ಜನಾರ್ಧನ ಪೂಜಾರಿಯವರೊಂದಿಗೆ ಉತ್ತಮ ಓಡನಾಟವಿತ್ತು. ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಬೇಕೆಂಬ ಆಸೆ ಇತ್ತು. ಅದು ಈಗಲೂ ಇದೆ. ಮೂಡಬಿದ್ರೆಯಲ್ಲಿ ಅಭಯಚಂದ್ರ ಜೈನ್ ಇರುವ ತನಕ ಕಾಂಗ್ರೆಸ್ಸಿನ ಬೇರೆಯವರಿಗೆ ಶಾಸಕರಾಗಲು ಅವರು ಬಿಡುವುದಿಲ್ಲ ಎಂದು ಅರಿತ ಬಳಿಕ ಭಾರತೀಯ ಜನತಾ ಪಾರ್ಟಿಗೆ ವಲಸೆ ಬಂದರು. ಮೂಡಬಿದ್ರೆಯಲ್ಲಿ ಕಾಂಗ್ರೆಸ್ಸಿಗರೊಬ್ಬರು ಪಕ್ಷ ಬಿಟ್ಟು ಬಿಜೆಪಿಗೆ ಬರುವುದೆಂದರೆ ಅದು ಒಂದು ಕಾಲದಲ್ಲಿ ದೊಡ್ಡ ವಿಷಯ. ಹಾಗಿರುವಾಗ ಕಾಂಗ್ರೆಸ್ಸಿನ ಪ್ರಬಲ ಮುಖಂಡ ಬಿಜೆಪಿಗೆ ಬಂದಾಗ ಸಹಜವಾಗಿ ಅವರಿಗೆ ಉತ್ತಮ ಸ್ವಾಗತ ಸಿಕ್ಕಿತು. ಒಂದಷ್ಟು ಹುಂಬತನ, ಯಾರನ್ನು ಕೂಡ ಎದುರಾಕಿಕೊಳ್ಳಬಲ್ಲ ಧೈರ್ಯ ಮತ್ತು ಮುಂಬೈ ಶ್ರೀಮಂತರ ಸ್ನೇಹವೂ ಇದ್ದ ಕಾರಣ ಜಗದೀಶ್ ಅಧಿಕಾರಿಯವರಿಗೆ ಇವತ್ತಲ್ಲ ನಾಳೆ ಬಿಜೆಪಿಯಿಂದ ಮೂಡಬಿದ್ರೆಯಲ್ಲಿ ಶಾಸಕರಾಗುವ ಕನಸು ಬಲಗೊಳ್ಳುತ್ತಾ ಹೋಯಿತು. ಮೂಡಬಿದ್ರೆಯಲ್ಲಿ ಬಿಜೆಪಿ ಆಫೀಸನ್ನು ಕೂಡ ತೆರೆದು ತಮ್ಮ ಇಮೇಜನ್ನು ಗಟ್ಟಿಗೊಳಿಸುತ್ತಾ ಹೋದರು. ಆದರೆ ರಾಜಕೀಯದಲ್ಲಿ ಯಾರ ಗಾಡ್ ಫಾದರ್ ಯಾರು ಎನ್ನುವುದು ಕೂಡ ಮುಖ್ಯವಾಗುತ್ತದೆ. ಉಮಾನಾಥ ಕೋಟ್ಯಾನ್ ಅದೃಷ್ಟ ಹಾಗೂ ಮೇಲಿನವರ ಕೃಪೆಯಿಂದ ಒಮ್ಮೆ ವಿಧಾನಸಭೆಗೆ ಸೋತರೂ ನಂತರ ಪುನ: ಟಿಕೆಟ್ ಸಿಕ್ಕಿ ಗೆದ್ದುಬಿಟ್ಟರು. ಉಮಾನಾಥ್ ಕೋಟ್ಯಾನ್ ಅವರಿಗೆ ಎರಡನೇ ಬಾರಿ ಟಿಕೆಟ್ ಸಿಗುವ ಮೊದಲು ಜಿಲ್ಲಾ ಬಿಜೆಪಿಯಲ್ಲಿ ಹಲವು ಸುತ್ತಿನ ಸಂಧಾನ ಸಭೆಗಳು ನಡೆದದ್ದು ಸುಳ್ಳಲ್ಲ. ಕೋಟ್ಯಾನ್ ರಿಗೆ ಟಿಕೆಟ್ ಘೋಷಣೆ ಆದಾಗ ಬಿಜೆಪಿ ಕಚೇರಿ ತನ್ನದು ಎಂದು ಬೀಗ ಹಾಕಿ ಹೋದವರು ಇದೇ ಜಗದೀಶ್ ಅಧಿಕಾರಿ. ಕೊನೆಗೂ ಸಮಾಧಾನ ಮಾಡಲು ಅವರಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಲಾಯಿತು.
ಅಂತಹ ಜಗದೀಶ್ ಅಧಿಕಾರಿಯವರಿಗೆ ಈಗ ಆಧುನಿಕ ತಂತ್ರಜ್ಞಾನ ಮುಂದುವರೆದಿರುವುದು ಗೊತ್ತಿಲ್ಲವೋ ಅಥವಾ ಅವರ ಸಮಯವೇ ಸರಿಯಿಲ್ಲವೋ ಏನೋ. ಮೈಕ್ ಮುಂದೆ ನಿಂತು ಕಾರ್ಯಕ್ರಮವೊಂದರಲ್ಲಿ ಬಿಲ್ಲವರ ಆರಾಧ್ಯಶಕ್ತಿ ಕೋಟಿ ಚೆನ್ನಯ್ಯ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಹೈಕಮಾಂಡ್ ಆಗಿದ್ದ ಜನಾರ್ಧನ ಪೂಜಾರಿಯವರ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರವಾಗುವಂತೆ ಮಾತನಾಡಿದ್ದಾರೆ. ಬಿಲ್ಲವರಿಗಿಂತ ಬ್ಯಾರಿಗಳೇ ಮೇಲು ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ಅವರ ಭಾಷಣದ ತುಣುಕು ಎಲ್ಲಾ ಕಡೆ ವೈರಲ್ ಆಗಿದೆ. ಏಕಕಾಲದಲ್ಲಿ ತಮ್ಮ ಕಾಲ ಮೇಲೆ ಇಟ್ಟಿಗೆ ಅಲ್ಲ, ಬಂಡೆ ಕಲ್ಲನ್ನೇ ಎಳೆದು ಹಾಕಿ ಜಗದೀಶ್ ಅಧಿಕಾರಿ ತಮ್ಮ ವಿರುದ್ಧ ಜನರು ಸಿಡಿದೇಳುವಂತೆ ಮಾಡಿದ್ದಾರೆ. ಇಲ್ಲಿ ಮೂರ್ನಾಕು ವಿಷಯಗಳು ಸಾಕಷ್ಟು ಸುದ್ದಿಯಾಗಿರುವುದು ಎಲ್ಲರಿಗೂ ತಿಳಿದಿದೆ. ಕೋಟಿ ಚೆನ್ನಯ್ಯ ಅವರು ಪೌರಾಣಿಕ ಶಕ್ತಿಗಳು. ಆ ಶಕ್ತಿಗಳ ಬಗ್ಗೆ ಏನೂ ಗೊತ್ತಿಲ್ಲದವರು ಒಂದು ವಾಕ್ಯ ಕೂಡ ಹಗುರವಾಗಿ ಮಾತನಾಡುವುದು ಬಿಡಿ, ವಿಷಯ ಮುಟ್ಟುವುದಕ್ಕೂ ಹೋಗಬಾರದು. ಇನ್ನು ಜನಾರ್ಧನ ಪೂಜಾರಿ. ಅವರು ಯಾವುದೇ ಪಕ್ಷದಲ್ಲಿ ಇರಲಿ, ಅವರು ಆ ಪಕ್ಷದ ಆಸ್ತಿ ಇದ್ದ ಹಾಗೆ. ರಾಷ್ಟ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಇದ್ದ ಹಾಗೆ, ಕರಾವಳಿಗೆ ಜನಾರ್ಧನ ಪೂಜಾರಿ. ತಮ್ಮ ಆರು ದಶಕಗಳ ರಾಜಕೀಯ ಜೀವನದಲ್ಲಿ ಎಲ್ಲಿಯೂ ಕಪ್ಪುಚುಕ್ಕೆ ಇಲ್ಲದ ರಾಜಕೀಯ ಸಂತನಂತೆ ಬದುಕಿ ಮಾದರಿಯಾದವರು ಜನಾರ್ಧನ ಪೂಜಾರಿ. ಸಂಸದ, ಕೇಂದ್ರ ಮಂತ್ರಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪೂಜಾರಿಯವರು ಅಕ್ಷರಶ: ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಎಡಬಲದಲ್ಲಿ ಕುಳಿತುಕೊಳ್ಳುವಷ್ಟು ಅಧಿಕಾರ ಕೇಂದ್ರದಲ್ಲಿದ್ದವರು. ಅಂತವರ ಬಗ್ಗೆ ರಾಜಕೀಯದಲ್ಲಿ ಅಂಬೆಗಾಲು ಹಾಕುವವರು ಮಾತನಾಡಲೇಬಾರದು. ಇನ್ನು ಬಿಲ್ಲವರಿಗಿಂತ ಬ್ಯಾರಿಗಳೇ ಮೇಲು ಎಂದು ಒಬ್ಬ ಬಿಜೆಪಿ ಮುಖಂಡ ಹೇಳುವುದೇ ಪರಮ ಅಸಹ್ಯ. ಇನ್ನು ಎದುರಿಗೆ ಬಿಲ್ಲವರನ್ನು ಹೊಗಳಿ ಹಿಂದಿನಿಂದ ತೆಗಳಿರುವುದು ಕೂಡ ಕೆಲವರಿಗೆ ಸಾಕ್ಷ್ಯ ದೊರೆತಿದೆ ಎಂದು ಹೇಳಲಾಗುತ್ತಿದೆ. ರಾಜಕೀಯದ ಏಣಿಯಲ್ಲಿ ಮೇಲೆ ಹತ್ತಲು ತಯಾರಾದ ಯಾವುದೇ ರಾಜಕಾರಣಿ ತನ್ನ ದೇಹದಲ್ಲಿರುವ ಎರಡು ಕಣ್ಣುಗಳು ಯಾವುದಕ್ಕೂ ಸಾಲುವುದಿಲ್ಲ ಎನ್ನುವ ಎಚ್ಚರಿಕೆಯನ್ನು ವಹಿಸಬೇಕು. ಹಿಂದಿನ ಕಾಲದಲ್ಲಿ ಆಧುನಿಕ ತಂತ್ರಜ್ಞಾನ ಏನೂ ಇಲ್ಲದೆ ಇದ್ದ ಕಾಲದಲ್ಲಿ ಏನು ಹೇಳಿದರೂ ನಡೆಯುತ್ತಿತ್ತು. ನನ್ನ ಹೇಳಿಕೆ ತಿರುಚಲಾಗಿದೆ ಎನ್ನುವುದು ಸಾಧ್ಯವಿತ್ತು. ಈಗ ಅದು ಸಾಧ್ಯವಿಲ್ಲ. ಇದೇ ಜಗದೀಶ್ ಅವರಿಗೆ ಸಂಚಕಾರ ಬಂದಿರುವುದು. ಸಾಲಮೇಳದಿಂದ ಹಿಡಿದು ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ತಡೆಹಿಡಿಯುವ ತನಕ ಪೂಜಾರಿ ಪಕ್ಷಾತೀತವಾಗಿ ಎಲ್ಲರ ಮನ ತಲುಪಿದವರು. ಇನ್ನು ಬಿಲ್ಲವರಿಗಿಂತ ಬ್ಯಾರಿಗಳೇ ಮೇಲಾದರೆ ಜಗದೀಶ್ ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಅಥವಾ ಎಸ್ ಡಿಪಿಐಗೆ ಸೇರಬಹುದಲ್ಲ. ಅಂತಿಮವಾಗಿ ತಮ್ಮ ಕ್ಷಮೆಯಾಚನೆಯಿಂದ ಈ ಪ್ರಕರಣ ಮುಗಿಯುತ್ತದೆ ಎಂದು ಜಗದೀಶ್ ಅಧಿಕಾರಿ ಅಂದುಕೊಂಡಿದ್ದರೆ ಅದು ಅವರ ಊಹೆ. ಏನೇ ಆಗಲಿ, ಈ ಘಟನೆಯಿಂದ ಅಧಿಕಾರಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗೆ ತಾವೇ ಬ್ರೇಕ್ ಹಾಕಿದ್ದಾರೆ. ಅವರ ರಾಜಕೀಯ ಜೀವನದ ಗಾಡಿ ಬ್ರೇಕ್ ಫೇಲ್ ಆಗಿದೆ. ಇದು ಅವರ ವೈಯಕ್ತಿಕ ಹೇಳಿಕೆ ಎಂದು ಹೇಳಿ ಅವರನ್ನು ಆರು ವರ್ಷಗಳ ತನಕ ಪಕ್ಷದಿಂದ ಅಮಾನತು ಮಾಡಿದರೆ ಪಕ್ಷಕ್ಕೆ ಕ್ಷೇಮ. ಇಲ್ಲದಿದ್ದರೆ ಜಗದೀಶ್ ಅಧಿಕಾರಿ ತಮ್ಮೊಂದಿಗೆ ಪಕ್ಷವನ್ನು ಕೂಡ ಮುಳುಗಿಸಿಬಿಟ್ಟರು ಎಂದೇ ಅರ್ಥ!
0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Hanumantha Kamath May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Hanumantha Kamath May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search