• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೀಸಲಾತಿ ಆಸೆ ಹುಟ್ಟಿಸಿದ್ದೇ ಯಡ್ಡಿ, ಈಗ ಒಂದೇ ಕಲ್ಲಿಗೆ…!!

Hanumantha Kamath Posted On February 10, 2021


  • Share On Facebook
  • Tweet It

ಇಡೀ ಕರ್ನಾಟಕ ರಾಜ್ಯದಲ್ಲಿ ಕೇಳಿಸುತ್ತಿರುವುದು ಒಂದೇ ಶಬ್ದ “ಮೀಸಲಾತಿ”. ಅತ್ತ ಪಂಚಮಸಾಲಿಗಳು, ಇತ್ತ ಕುರುಬರು, ಇನ್ನೊಂದೆಡೆ ವಾಲ್ಮೀಕಿಗಳು ಹೀಗೆ ರಾಜ್ಯದ ಪ್ರಮುಖ ಜಾತಿ ಬಾಂಧವರೆಲ್ಲ ಮೀಸಲಾತಿ ಕೇಳುತ್ತಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯ 50% ಗಿಂತಲೂ ಹೆಚ್ಚು ಮೀಸಲಾತಿ ಕೊಡಬಾರದು ಎಂದು ಮಾನ್ಯ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಅದನ್ನು ಕೇಳುವ ವ್ಯವಧಾನಗಳು ರಾಜ್ಯ ಸರಕಾರಗಳಿಗೆ ಎಲ್ಲಿದೆ. ಈಗಾಗಲೇ ಸುಪ್ರೀಂ ನಿರ್ದೇಶನವನ್ನು ಮೀರಿದ ತಮಿಳುನಾಡು, ಮಹಾರಾಷ್ಟ್ರ ಸರಕಾರಗಳು ಪ್ರಕರಣವನ್ನು ಎದುರಿಸುತ್ತಿವೆ. ಒಂದು ವೇಳೆ ನಮ್ಮಲ್ಲಿ ಕೂಡ ಈ ಮೀಸಲಾತಿ ಕಿರಿಕಿರಿಯಿಂದ ಯಾರಾದರೂ ಸುಪ್ರೀಂ ಕೋರ್ಟ್ ಮೆಟ್ಟಲೇರಿದರೆ ಅಲ್ಲಿಯೇ ಪ್ರಕರಣ ವರ್ಷಗಟ್ಟಲೆ ತನಕ ಕೊಳೆಯಲಿದೆ. ನಂತರ ಸುಪ್ರೀಂಕೋರ್ಟ್ ಯಾವ ಕಾರಣಕ್ಕೂ ಅಷ್ಟು ಸುಲಭವಾಗಿ ನಿಯಮಗಳನ್ನು ಸಡಿಲಿಸಿ ಕೇಳಿದವರಿಗೆಲ್ಲ ಮೀಸಲಾತಿ ಕೊಟ್ಟುಬಿಡಿ ಎಂದು ಹೇಳುವುದಿಲ್ಲ. ಕೆಲವು ರಾಜ್ಯಗಳು ಚುನಾವಣಾ ದೃಷ್ಟಿಯಲ್ಲಿಟ್ಟು ಮಾಡಿದ ಮೀಸಲಾತಿಗಳನ್ನು ಕೋರ್ಟ್ ಎತ್ತಿ ಪಕ್ಕಕ್ಕೆ ಬಿಸಾಡಿದೆ. ಹೀಗೆ ಕಾನೂನಾತ್ಮಕವಾಗಿ ಮೀಸಲಾತಿಗಳಿಗೆ ನ್ಯಾಯಾಲಯದ ಬಲ ಕಡಿಮೆ. ಅವು ನಂಬಿರುವುದು ಸರಕಾರಗಳನ್ನು ಮಾತ್ರ. ಅದು ಯಾವುದೇ ಪಕ್ಷದ ಸರಕಾರವಿರಲಿ. ಹಿಂದೆ ರಾಜ್ಯ ಸರಕಾರ ಕೊಡದಿದ್ದರೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುತ್ತಿತ್ತು. ಹಿಂದೆ ಪ್ರತಿ ಬಾರಿ ಪರಸ್ಪರ ವಿರೋಧ ಪಕ್ಷಗಳು ಅಧಿಕಾರದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಇದ್ದಾಗ ಮೈಲೇಜ್ ತೆಗೆದುಕೊಳ್ಳುವ ಕಾರಣದಿಂದ ಒಲೈಕೆವಾದ ನಡೆಯುತ್ತಿತ್ತು. ಈಗ ಏನಿದ್ದರೂ ಒಂದೇ ಪಕ್ಷ ನಮ್ಮ ರಾಜ್ಯ ಮತ್ತು ಕೇಂದ್ರದಲ್ಲಿದೆ. ಆದ್ದರಿಂದ ಇಲ್ಲಿ ಹಟ ಹಿಡಿದರೆ ಅಲ್ಲಿ ಸುಲಭವಾಗುತ್ತೆ ಎಂದು ಯಾವುದಾದರೂ ಜಾತಿಯ ಮುಖಂಡರು, ಸ್ವಾಮೀಜಿಗಳು ಅಂದುಕೊಂಡಿದ್ದರೆ ಅದು ಶುದ್ಧ ತಪ್ಪು.
ತಮ್ಮ ರಾಜಕೀಯ ಜೀವನದ ಕೊನೆಯ ಇನ್ಸಿಂಗ್ಸಿನ ಸ್ಲಾಗ್ ಓವರ್ ಗಳನ್ನು ಆಡುತ್ತಿರುವ ಬಿ.ಎಸ್ ಯಡಿಯೂರಪ್ಪ ತಾವು ಒಂದು ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯಲು ಸಕತ್ ಪ್ಲಾನ್ ಹಾಕಿರುವುದು ಮೋದಿ, ಶಾ ಇರುವ ಹೈಕಮಾಂಡಿಗೆ ಗೊತ್ತಿಲ್ಲ ಎಂದಲ್ಲ. ರಾಜ್ಯದಲ್ಲಿ ಮಗುವನ್ನು ಚಿವುಟಿ, ಕೇಂದ್ರದಿಂದ ತೊಟ್ಟಿಲು ತೂಗುವ ಕೆಲಸ ನಡೆಯಲಿ ಎಂದು ಯಡ್ಡಿ ಬಯಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಯಾವುದೇ ಒಂದು ಜಾತಿಗೆ ಇಲ್ಲಿ ಮೀಸಲಾತಿ ಕೊಡಬೇಕಾದರೆ ಅದು ಯಡ್ಡಿ ಕೈಯಲ್ಲಿ ಇಲ್ಲ. ಅದು ಕೇಂದ್ರದಿಂದ ಶಿಫಾರಸ್ಸಾಗಿ ಬರಬೇಕು. ಕುತೂಹಲಕಾರಿ ಅಂಶ ಎಂದರೆ ಒಂದು ವೇಳೆ ಕೇಂದ್ರ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಜಾತಿಗಳ ಬೇಡಿಕೆಗಳನ್ನು ಮನ್ನಿಸಿ ಮೀಸಲಾತಿ ಕೊಡಲು ಒಪ್ಪಿದರೆ ಅದರ ಕ್ರೆಡಿಟ್ ತೆಗೆದುಕೊಳ್ಳಲು ಯಡ್ಡಿ ರೆಡಿಯಾಗಿದ್ದಾರೆ. ಅದೇ ಕೇಂದ್ರ ಮೀಸಲಾತಿ ನಯಿ ಎಂದರೆ ನನಗೆ ಕೊಡಲು ಮನಸ್ಸಿತ್ತು, ಕೇಂದ್ರ ಸರಕಾರ ಒಪ್ಪುತ್ತಿಲ್ಲ ಎಂದು ಜಾತಿ ಮುಖಂಡರ, ಸ್ವಾಮೀಜಿಗಳ ಕೋಪವನ್ನು ಕೇಂದ್ರದತ್ತ ತಿರುಗಿಸುವುದು ಯಡ್ಡಿ ಇನ್ನೊಂದು ಉಪಾಯ. ಒಟ್ಟಿನಲ್ಲಿ ತಾವು ಸೇಫ್ ಆಗಬೇಕು ಎನ್ನುವುದು ಯಡ್ಡಿ ಲೆಕ್ಕಾಚಾರ. ಅಷ್ಟಕ್ಕೂ ವಿವಿಧ ಜಾತಿ ಮುಖಂಡರ ಮನಸ್ಸಿನಲ್ಲಿ, ಸ್ವಾಮೀಜಿಗಳ ಹೃದಯದಲ್ಲಿ ಮೀಸಲಾತಿ ಬೀಜವನ್ನು ಬಿತ್ತಿದ್ದೇ ಯಡ್ಡಿಯೂರಪ್ಪ. ತಾವು ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ಹೋಗಿಬಂದ ಕಡೆಯಲ್ಲೆಲ್ಲ ನಿಮ್ಮನ್ನು ಎಸ್ ಸಿ ಕೋಟಾದಲ್ಲಿ ಸೇರಿಸ್ತೀನಿ, ಅದು ಸಿಗುತ್ತೆ, ಇದು ಸಿಗುತ್ತೆ ಎಂದು ಆಸೆ ಹುಟ್ಟಿಸಿ ಇಡೀ ಜಾತಿಗೆ ಜಾತಿಗಳೇ ತಮ್ಮ ಬೆನ್ನ ಹಿಂದೆ ನಿಲ್ಲುವಂತೆ ಮಾಡಿದ್ದು ಇದೇ ಯಡ್ಡಿ. ಅದರಿಂದಾಗಿ ಇವತ್ತು ಪ್ರತಿ ಜಾತಿಗಳು ಯಡ್ಡಿಯವರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಂತೆ ವರ್ತಿಸಿರುವುದು. ಅವರಿಗೆ ಇವತ್ತಲ್ಲ, ನಾಳೆ ಯಡ್ಡಿ ಕೇಂದ್ರದ ನಾಯಕರೊಂದಿಗೆ ಕುಳಿತು ಏನಾದರೂ ಮಾಡಿ ತರುತ್ತಾರೆ ಎನ್ನುವ ಧೃಡ ವಿಶ್ವಾಸ ಯಡ್ಡಿಯಷ್ಟೇ ಪ್ರಖರವಾಗಿ ಅವರ ಮಗ ವಿಜೇಯೇಂದ್ರ ಕೂಡ ನಂಬಿಸಿದ್ದಾರೆ. ಅದರಂತೆ ಇವತ್ತು ಬಿಜೆಪಿ ಗೆಲ್ಲಲು ಕಠಿಣವಾಗಿರುವ ಕೆಲವು ಪ್ರಾಂತ್ಯಗಳಲ್ಲೂ ವಿಜೇಯೇಂದ್ರ ಬಿಜೆಪಿ ಧ್ವಜವನ್ನು ಅರಳಿಸಿರುವುದು. ಆದರೆ ಯಡ್ಡಿ ಭರವಸೆ ಕೊಟ್ಟಿದ್ದನ್ನೆಲ್ಲ ಈಡೇರಿಸಿಬಿಟ್ಟರೆ ನಾಳೆ ತಂದೆ,ಮಗನ ಡಿಮಾಂಡ್ ಜಾಸ್ತಿಯಾಗಿ ನಮ್ಮನ್ನೇ ಹೆದರಿಸಿಬಿಡುತ್ತಾರೆ ಎಂದು ಗೊತ್ತಿರುವ ಬಿಜೆಪಿ ಹೈಕಮಾಂಡ್ ಇದನ್ನು ಕಿವಿಗೆ ಹಾಕಿಕೊಂಡಿಲ್ಲ. ನೀವು ಹೀಗೆ ನಿರ್ಲಕ್ಷ್ಯ ಮಾಡಿದರೆ ಮುಂದಿನ ಚುನಾವಣೆಯಲ್ಲಿ ನಾನಂತೂ ಸಿಎಂ ಆಗಲು ನೀವು ಬಿಡಲ್ಲ, ಪಕ್ಷ ಕೂಡ ಅಧಿಕಾರಕ್ಕೆ ಬರುವ ಆಸೆ ಬಿಡುವುದು ಒಳಿತು ಎನ್ನುವ ಸಂದೇಶವನ್ನು ಯಡ್ಡಿ ಕೊಟ್ಟಂತೆ ಕಾಣುತ್ತಿದೆ. ಒಟ್ಟಿನಲ್ಲಿ ಯಡ್ಡಿ ಹೆಣೆದ ಬಲೆಗೆ ತಿಮಿಂಗಿಲಗಳು ಬೀಳುತ್ತವಾ ಎಂದು ನೋಡಬೇಕು.

ನಾನು ಹೇಳುವುದೇನೆಂದರೆ ಈ ಜಾತಿ ಆಧಾರಿತ ಮೀಸಲಾತಿಯನ್ನೇ ತೆಗೆದುಬಿಡಬೇಕು. ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ನಿಜಕ್ಕೂ ಯಾವ ಜಾತಿಯ ಜನರಿಗೆ ಸಮಾಜದಲ್ಲಿ ತುಳಿಯುವ ಪ್ರಸಂಗಗಳು ನಿರ್ಮಾಣವಾಗಿತ್ತೋ ಆಗ ಅಂಬೇಡ್ಕರ್ ಸಾಹೇಬ್ರು ಮೀಸಲಾತಿ ತಂದಿದ್ದರು. ಅದು ಕೂಡ ಭಾರತ ಇರುವಷ್ಟು ದಿನ ಮೀಸಲಾತಿ ಇರುತ್ತೆ ಎಂದು ಅವರು ಬರೆದಿಲ್ಲ. ಇನ್ನು ಮುಂದಾದರೂ ಪ್ರಧಾನಿ ಮೋದಿಯವರು ನಿಜಕ್ಕೂ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಮಾತ್ರ ಮೀಸಲಾತಿ ಕೊಟ್ಟು ಉಳಿದವರಿಗೆ ಅದರಿಂದ ಹೊರಗೆ ಕಳುಹಿಸಿದರೆ ನಿಜವಾದ ಬಡವನ ಆರ್ಶೀವಾದ ಖಂಡಿತ ಸಿಗುತ್ತದೆ!

  • Share On Facebook
  • Tweet It


- Advertisement -


Trending Now
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Hanumantha Kamath March 25, 2023
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Hanumantha Kamath March 24, 2023
Leave A Reply

  • Recent Posts

    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
  • Popular Posts

    • 1
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 2
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 3
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 4
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 5
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search