• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಜಕೀಯದಲ್ಲಿ ಕಾಲ ಕೆಳಗಿನ ಮ್ಯಾಟನ್ನೇ ನಂಬುವುದು ಕಷ್ಟವಿರುವಾಗ ಏನಿದೆಲ್ಲ!!

Hanumantha Kamath Posted On April 2, 2021


  • Share On Facebook
  • Tweet It

ಒಬ್ಬ ಗಂಡಸು ಒಂದು ಹೆಂಗಸನ್ನು ಲೈಂಗಿಕವಾಗಿ ಬಳಸುತ್ತಾನೆ. ಅದಕ್ಕೆ ಅವಳ ಸಮ್ಮತಿ ಇರುತ್ತದೆ. ಅದನ್ನು ಅವಳು ಅಥವಾ ಅವಳಿಗೆ ಬೇಕಾದವರು ವಿಡಿಯೋ ಚಿತ್ರೀಕರಣ ಮಾಡುತ್ತಾರೆ. ಅವಳಿಗೆ ನಿಜವಾಗಿ ಬೇಕಾಗಿರುವುದು ಅವನಿಂದ ಒಂದು ಸರಕಾರಿ ಉದ್ಯೋಗ. ಆದರೆ ಅವಳ ಸಂಗಡಿಗರು ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋಣ ಎನ್ನುವ ಕಾರಣದಿಂದ ಅವನು ಮತ್ತು ಅವಳು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನು ಚಿತ್ರೀಕರಣ ಮಾಡಿ ಅವನಿಂದ ಹಣ ವಸೂಲಿ ಮಾಡೋಣ ಎಂದು ಪ್ಲಾನ್ ಹಾಕುತ್ತಾರೆ. ಹೀಗೆ ನಡೆಯುತ್ತಾ ಇರುವಾಗ ಅವನ ಫೋನ್ ಕಾಲನ್ನು ಯಾರೋ ವಿರೋಧಿಗಳು ಅವನ ಟ್ರಾಪ್ ಮಾಡಲು ಶುರು ಮಾಡಿರುತ್ತಾರೆ. ಆಗ ಅವರಿಗೆ ಆ ಗಂಡಸು ಒಂದು ಹೆಂಗಸಿನೊಂದಿಗೆ ಆಗಾಗ ಸಂಪರ್ಕವನ್ನು ಇಟ್ಟುಕೊಂಡಿರುವುದು ಅರಿವಿಗೆ ಬರುತ್ತದೆ. ಅವನಿಗೆ ಘೆಡ್ಡಾ ತೊಡಲು ತಯಾರಾಗುತ್ತಿದ್ದ ವಿರೋಧಿಗಳಿಗೆ ಅವನು ಎಲ್ಲಿಯೋ ಮೇಯುತ್ತಿರುವುದು ಅರಿವಿಗೆ ಬರುತ್ತದೆ. ಈ ನಡುವೆ ಆಕೆಯ ಸಂಗಡಿಗರು ಒಂದು ಉದ್ಯೋಗ ಸಿಕ್ಕಿದರೆ ಅಬ್ಬಬ್ಬ ಎಂದರೆ ಎಷ್ಟು ದುಡಿಯಬಹುದು. ಅದರ ಬದಲು ಆ ಗಂಡಸಿಗೆ ಬ್ಲಾಕ್ ಮೇಲ್ ಮಾಡಿದರೆ ಅದಕ್ಕಿಂತ ಎಷ್ಟೋ ಹೆಚ್ಚು ಸಂಪಾದಿಸಬಹುದು ಎನ್ನುವ ಐಡಿಯಾ ಹೆಂಗಸಿನ ತಲೆಗೆ ಹಾಕುತ್ತಾರೆ. ಆ ಗಂಡಸು ಅವಳಿಗೆ ಕೆಲಸ ಕೊಡಿಸುವ ಮೊದಲೇ ಅವಳ ಸಂಗಡಿಗರು ಕೋಟಿಯ ಬೇಡಿಕೆ ಇಡುತ್ತಾರೆ. ಆದರೆ ಆ ಗಂಡಸು ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಆತನಿಗೆ ಆ ಹೆಂಗಸಿನ ಮುಗ್ಧತೆ ಇಷ್ಟವಾಗಿರುತ್ತದೆ. ಅವನು ಅವಳನ್ನು ಅಕ್ಷರಶ: ಪ್ರೀತಿಸಲು ಶುರು ಮಾಡಿರುತ್ತಾನೆ. ಅವಳು ಮೋಸ ಮಾಡಲಾರರು ಎಂದು ಅಂದುಕೊಂಡಿರುತ್ತಾನೆ. ಇಂತಹ ಹೊತ್ತಿನಲ್ಲಿಯೇ ಆಕೆಯ ಸಂಗಡಿಗರು ಆತನ ವಿರೋಧಿಗಳನ್ನು ಸಂಪರ್ಕಿಸುತ್ತಾರೆ. ಅಲ್ಲಿ ಡೀಲ್ ಸಂಪೂರ್ಣ ಅಲ್ಲವಾದರೂ ಈಗ ಅರ್ಧ ನಂತರ ತಮ್ಮ ಸರಕಾರ ಬಂದ ಮೇಲೆ ಪೂರ್ತಿ ಏನು ಕೊಡಲು ಸಾಧ್ಯವೋ ಅಷ್ಟು ಕೊಡುವ ವಾಗ್ಧಾನವಾಗುತ್ತದೆ. ಹೇಗೂ ಮುಂದಿನ ಬಾರಿ ಈ ಸರಕಾರ ಬರಲ್ಲ ಎಂದು ಆಕೆಯ ಸಂಗಡಿಗರು ಈ ಡೀಲ್ ಒಪ್ಪುತ್ತಾರೆ. ಆ ಮೂಲಕ ಆ ಗಂಡಸನ್ನು ವಿಧಿವತ್ತಾಗಿ ಹಳ್ಳಕ್ಕೆ ಬೀಳಿಸಲು ಹೊಂಡ ತಯಾರಾಗಿರುತ್ತದೆ. ಆ ಪಕ್ಷದಿಂದ ಅಷ್ಟು ಜನರನ್ನು ಎಳೆದು ತರುತ್ತೇನೆ ಎಂದು ಜಂಭದಿಂದ ಹೇಳಿಕೊಳ್ಳುತ್ತಿದ್ದ ಗಂಡಸು ಎಳೆದುಕೊಂಡು ಬರುವುದಿರಲಿ ಈಗ ತಾನೆ ಉಳಿದರೆ ಸಾಕು ಎನ್ನುವ ಲೆವೆಲ್ಲಿಗೆ ಬರುತ್ತಾನೆ. ಅವನು ತನ್ನ ಕರ್ಮವನ್ನೇ ಅನುಭವಿಸುವಲ್ಲಿ ಬ್ಯುಸಿಯಾಗುವುದರಿಂದ ಅವನಿಗೆ ಇನ್ನೆರಡು ವರ್ಷ ತಾನು ಉಳಿದರೆ ಸಾಕು ಎನಿಸಿಬಿಟ್ಟಿದೆ. ಇನ್ನು ಸರಕಾರ ತಂದವನೇ ನಾನು, ನಾನೇ ಮುಂದಿನ ಸಿಎಂ ಎಂದು ದೆಹಲಿಯಲ್ಲಿ ಪುಂಗಿ ಊದುತ್ತಿದ್ದವನಿಗೆ ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಿಂದ ಚೆಕ್ ಅಂಡ್ ಮೇಟ್ ಮಾಡಿ “ವಿಜಯ”ದ ನಗೆ ಬಿರಲಾಗಿದೆ. ರಾಜಕೀಯದಲ್ಲಿ ಎದೆ ಉಬ್ಬಿಸಿ ಕಹಳೆ ಊದುವನಿಗಿಂತ ಬಚ್ಚಲುಕೋಣೆಯಲ್ಲಿ ಹಂಡೆಯ ಕೆಳಗೆ ಬೆಂಕಿ ಉರಿಸಲು ಕೊಳವೆಗೆ ಗಾಳಿ ಊದುವವನು ಹೆಚ್ಚು ಪ್ರಭಾವಶಾಲಿಯಾಗಿರುತ್ತಾನೆ. ಚೆಂಡೆಯಿಂದ ಹೆಚ್ಚು ಶಬ್ದ ಬರಬಹುದು. ಆದರೆ ಶಿವನ ಕೈಯಲ್ಲಿ ಇರುವುದು ಡಮರುಗ. ಆದ್ದರಿಂದ ಗಾತ್ರ ಸಿಕ್ಕದಾದರೂ ಮೌನವಾಗಿ ಎಲ್ಲಿ ತಲುಪಬೇಕೋ ಅಲ್ಲಿ ತಲುಪಲು ಗೊತ್ತಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಕಾಲ ಕೆಳಗಿನ ಮ್ಯಾಟ್ ಎಳೆಯಲು ನಿಮ್ಮ ನೆರಳೇ ನಿಮಗೆ ಸಾಕು. ಈಗ ಯುದ್ಧ ಆರಂಭವಾಗಿದೆ. ಎರಡು ಪಾಳಯಗಳಲ್ಲಿ ದುರ್ಯೋಧನ ಹಾಗೂ ದುಶ್ಯಾಸನರಿದ್ದಾರೆ. ಎರಡೂ ಕಡೆಗಳಲ್ಲಿ ಶಕುನಿಗಳಿದ್ದಾರೆ. ಎರಡು ಕಡೆ ಕರ್ಣರಿದ್ದಾರೆ. ಅಲ್ಲಿ ಡಿಕೆಶಿಗೆ ಸುರೇಶ್ ಇದ್ದರೆ ಇತ್ತ ರಮೇಶ್ ಗೆ ಬಾಲಚಂದ್ರ ಇದ್ದಾರೆ. ಆದರೆ ರಮೇಶ್ ಜಾರಿಬಿದ್ದರೆ ಎರಡೂ ಕಡೆ ಅಳುವವರು ಯಾರೂ ಇಲ್ಲ. ಯಾಕೆಂದರೆ ಬಿಜೆಪಿ ಹಡಗು ದಡ ಸೇರಿಬಿಟ್ಟಿದೆ. ಕಾಂಗ್ರೆಸ್ಸಿಗೆ ಅವನು ನಮ್ಮವನಲ್ಲ ಎನ್ನುವ ಕೋಪ ಇದೆ. ಇದ್ದುದರಲ್ಲಿಯೇ ಸಿದ್ದು ಮುಂದಿನ ಬಾರಿ ಮತ್ತೆ ಬೇಕಾಗಬಹುದು ಎಂದು ರಮೇಶ್ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಟುಕೊಂಡಿದ್ದಾರೆ. ಏನಾದರೂ ಹೆಚ್ಚು ಕಡಿಮೆಯಾಗಿ ರಮೇಶ್ ಒಂದಿಷ್ಟು ಕಾಲ ಒಳಗಿದ್ದರೆ ಡಿಕೆಶಿಯ ಕಾಂಗ್ರೆಸ್ಸಿಗೆ ಅದೇ ನೆಮ್ಮದಿ. ಯಾಕೆಂದರೆ ನೇರ ಯುದ್ಧ ಮಾಡಬಹುದು. ಈ ಹಂತದಲ್ಲಿ ಈಶ್ವರಪ್ಪನವರಂತಹ ಸಂಘನಿಷ್ಟ ಈಶ್ವರಪ್ಪನವರೇ ಮುಖ್ಯಮಂತ್ರಿ ಯಡ್ಡಿಗೆ ಕೆಂಪು ಬಾವುಟ ತೋರಿಸಿದ್ದಾರೆ. ಅವರು ಹೈಕಮಾಂಡಿಗೆ ತಮ್ಮ ನೋವನ್ನು ತೋಡಿಕೊಂಡರೆ ಅದು ಮನೆಯೊಳಗಿನ ಜಗಳ ಎನ್ನಬಹುದು. ಆದರೆ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಲ್ಲಿಗೆ ವಿದ್ಯುಕ್ತವಾಗಿ ಯಡ್ಡಿ ಉಪಚುನಾವಣೆಯ ಬಳಿಕ ಇಳಿಯಲು ವೇದಿಕೆಯನ್ನು ಅವರ ಪಕ್ಷದವರೇ ಸಿದ್ಧಗೊಳಿಸಿದ್ದಾರೆ ಎಂದು ಅರ್ಥ. ಯತ್ನಾಳ್ ಮಾತನಾಡುವಾಗ ಯಮನ ಗೆಟಪ್ಪಿಗೆ ಬರುತ್ತಿದ್ದ ರೇಣು ಈಗ ಈಶ್ವರಪ್ಪನವರೇ ರಣಕಹಳೆ ಊದಿರುವಾಗ ಏನು ತಾನೆ ಮಾಡಿಯಾರು? ಇದೆಲ್ಲ ಆಗಲು ಏನು ಕಾರಣ? ನಮ್ಮಿಂದಲೇ ಅಧಿಕಾರಕ್ಕೆ ಬಂದಿದ್ದೀರಿ ಎನ್ನುವ ಜಂಭ. ಕೈ ಕಾಲು ಹೊಡೆದು, ಹಣ ಸುರಿದು ಅಧಿಕಾರಕ್ಕೆ ತಂದದ್ದು ನಾವು. ನೀವು ಕೇವಲ ಚೆಂದ ನೋಡಿದ್ದಿರಿ. ಈಗ ನಾವು ಏನು ಬೇಕಾದರೆ ಮಾಡುತ್ತೇವೆ. ಬಾಯಿ ಮುಚ್ಚಿಕೊಂಡು ಇರಿ. ಗೂಟದ ಕಾರು, ಆಳು, ಕಾಳು, ಸ್ಥಾನಮಾನ ಸಿಕ್ಕಿದ್ದೆ ದೊಡ್ಡದು ಎನ್ನುವ ಸಂದೇಶ ಸ್ಪಷ್ಟವಾಗಿದೆ. ಅದನ್ನು ಮರೆತ ಈಶು ಬೊಬ್ಬೆ ಹೊಡೆಯುತ್ತಿದ್ದಾರೆ. ಅದು ಕೇವಲ ಅರಣ್ಯರೋದನವೇ ಅಥವಾ ಮೇಲೆ ಮಸಾಲೆ ಅರೆಯುವ ಶಬ್ದ ಕೇಳಿಸುತ್ತಿದೆಯಾ!

  • Share On Facebook
  • Tweet It


- Advertisement -


Trending Now
ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
Hanumantha Kamath September 27, 2023
ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
Hanumantha Kamath September 27, 2023
Leave A Reply

  • Recent Posts

    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
  • Popular Posts

    • 1
      ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • 2
      ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • 3
      ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • 4
      ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • 5
      ರೈಲು ಬೋಗಿಗಳು ಆವತ್ತು ಮತ್ತು ಇವತ್ತು!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search