• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಾಸ್ಕ್ ಧರಿಸಿದರೆ ಮೋದಿಯನ್ನು ಒಪ್ಪಿಕೊಂಡ ಹಾಗೆ ಎಂದು ಅಂದುಕೊಳ್ಳಬೇಕಾಗಿಲ್ಲ ಡಾಕ್ಟ್ರೇ!!

Hanumantha Kamath Posted On May 21, 2021


  • Share On Facebook
  • Tweet It

ಇಡೀ ವೈದ್ಯಕೀಯ ಲೋಕವೇ “ಮಾಸ್ಕ್ ಹಾಕಿ” ಎಂದು ವಿನಂತಿ ಮಾಡುತ್ತಾ ಜಾಗೃತಿ ಹುಟ್ಟಿಸುತ್ತಿದೆ. ಆದರೆ ಬುದ್ಧಿವಂತರ ಜಿಲ್ಲೆಯ ಅತೀ ಬುದ್ಧಿವಂತ ವೈದ್ಯರೊಬ್ಬರು ತಾವು ಮಾಸ್ಕ್ ಹಾಕಲ್ಲ ಎಂದು ಸೂಪರ್ ಮಾರ್ಕೆಟಿನ ಪಾಲುದಾರರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾರೆ. ಈ ಬಗ್ಗೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಅದೇ ವೈದ್ಯ ಮಾಸ್ಕ್ ಹಾಕಿಕೊಂಡು ನಂತರ ಪೊಲೀಸ್ ಠಾಣೆಯಲ್ಲಿ ಹಾಜರಾಗುತ್ತಾರೆ. ನಡೆದದ್ದು ಇಷ್ಟು. ಆದರೆ ಈ ಸುದ್ದಿ ಎಷ್ಟು ಬೇಗ ವೈರಲ್ ಆಯಿತು ಎಂದರೆ ಅದಕ್ಕೆ ಕಾರಣ ಆ ಅಂಗಡಿಯ ಸಿಸಿಟಿವಿ ಫೂಟೇಜ್ ಮತ್ತು ಆ ವೈದ್ಯರ ಹೆಸರು ಡಾ.ಶ್ರೀನಿವಾಸ ಕಕ್ಕಿಲಾಯ. ಕಕ್ಕಿಲಾಯರು ಮಂಗಳೂರಿಗೆ ಹೊಸಬರೇನಲ್ಲ. ಹಿರಿಯ ತಲೆಮಾರಿಗೆ ಅವರ ತಂದೆ ಕೂಡ ಗೊತ್ತು. ಯಾಕೆಂದರೆ ಇವರ ತಂದೆ ಬಿ.ವಿ.ಕಕ್ಕಿಲಾಯ ರಾಜ್ಯಸಭಾ ಸದಸ್ಯರು ಮತ್ತು ಶಾಸಕರಾಗಿದ್ದವರು. ಡಾ.ಶ್ರೀನಿವಾಸ ಕಕ್ಕಿಲಾಯರ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯ ಎಡಪಂಥಿಯರಲ್ಲಿದೆ. ಒಂದಷ್ಟು ಕಾಂಗ್ರೆಸ್ಸಿಗರು ಕೂಡ ಡಾ.ಶ್ರೀನಿವಾಸ ಕಕ್ಕಿಲಾಯ ಅವರ ಪರವಾಗಿ ತಮ್ಮ ಸಾಮಾಜಿಕ ತಾಣಗಳಲ್ಲಿ ಬರೆಯುತ್ತಿದ್ದಾರೆ. ಭರತ್ ಲಾಲ್ ಮೀನಾ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ 1995 ರಲ್ಲಿ ಜಿಲ್ಲೆಯಲ್ಲಿ ಮಲೇರಿಯಾ ನಿರ್ಮೂಲನದಲ್ಲಿ ಕಕ್ಕಿಲಾಯರ ಯೋಗದಾನ ಕೂಡ ಇದೆ. ಅದೆಲ್ಲ ಓಕೆ, ಆದರೆ ಇದು ಯಾವುದೂ ಅವರು ಸರಕಾರದ ವಿರುದ್ಧ ವರ್ತಿಸಲು ಲೈಸೆನ್ಸ್ ನೀಡುವುದಿಲ್ಲವಲ್ಲ. ಮಾಸ್ಕ್ ಹಾಕಿದರೂ ಅಥವಾ ಹಾಕದಿದ್ದರೂ ಕೊರೊನಾ ಬರಬಹುದು ಅಥವಾ ಬರದೇ ಇರಬಹುದು. ಹಾಗಂತ ನಮಗೆ ಸರಕಾರಕ್ಕಿಂತ ಜಾಸ್ತಿ ಗೊತ್ತಿದೆ ಎಂದು ನಮಗೆ ಇಷ್ಟ ಬಂದ ಹಾಗೆ ವರ್ತಿಸಲು ಆಗುವುದಿಲ್ಲ. ನಿಮಗೆ ಮೋದಿಯವರ ಮೇಲೆ ಕೋಪ ಇರಬಹುದು. ನಿಮಗೆ ಅಮಿತ್ ಶಾ ಅವರ ಮುಖ ಕಂಡರೆ ಆಗುವುದಿಲ್ಲ ಕೂಡ ಇರಬಹುದು. ನಿಮಗೆ ಭಾರತೀಯ ಜನತಾ ಪಾರ್ಟಿಯ ಹೆಸರು ಕೇಳಿದರೆ ಮೈಯೆಲ್ಲ ಉರಿಯಬಹುದು. ಹಾಗಂತ ನಾನು ಬೆತ್ತಲೆಯಾಗಿ ಎಂಜಿ ರೋಡಿನಲ್ಲಿ ಓಡಿ ಸರಕಾರದ ವಿರುದ್ಧ ಪ್ರತಿಭಟಿಸುತ್ತೇನೆ ಎಂದರೆ ಆಗುತ್ತಾ? ಮಾಸ್ಕ್ ಹಾಕಬೇಕು ಎಂದು ಮೋದಿ ಹೇಳಿದರೂ ಅದರ ಹಿಂದೆ ದೊಡ್ಡ ವೈದ್ಯ ತಂಡದ ಸಲಹೆ ಇದೆ. ಇದು ಜಾಗತಿಕ ಸಾಂಕ್ರಾಮಿಕ ರೋಗ. ಮೋದಿಯವರ ಸರಕಾರದ ತಪ್ಪು ನಿಯಮಗಳಿಂದ ನಮ್ಮ ದೇಶದಲ್ಲಿ ಹುಟ್ಟಿದ ಕಾಯಿಲೆ ಅಲ್ಲ. ನಮ್ಮ ದೇಶದಿಂದ ಕೊರೊನಾ ಹೊರಟು ಹೋಗಿಲ್ಲ. ಅಮೇರಿಕಾದಂತಹ ರಾಷ್ಟ್ರಗಳು ಎರಡು ಡೋಸ್ ಲಸಿಕೆ ತೆಗೆದುಕೊಂಡವರು ಮಾಸ್ಕ್ ಧರಿಸಲೇಬೇಕು ಎನ್ನುವ ನಿಯಮದಿಂದ ವಿನಾಯಿತಿ ನೀಡಿರಬಹುದು. ಆದರೆ ಭಾರತದಲ್ಲಿ ಅಂತಹ ನಿಯಮ ಇಲ್ಲ. ಇನ್ನು ಮಾಸ್ಕ್ ಹಾಕದೇ ರೋಗಿಗಳನ್ನು ಒಬ್ಬ ವೈದ್ಯ ಪರೀಕ್ಷಿಸಿದ್ದಾರೆ ಎನ್ನುವ ಕಾರಣಕ್ಕೆ ಆ ವೈದ್ಯ ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಓಡಾಡುವಂತಿಲ್ಲ. ಅದರಲ್ಲಿಯೂ ಸೂಪರ್ ಮಾರ್ಕೆಟ್ ನಂತಹ ಪ್ರದೇಶದಲ್ಲಿ ಅಂಗಡಿಯವರು ಹೇಳಿದ ಬಳಿಕವೂ ಗಲಾಟೆಗೆ ಇಳಿದರೆ ಅದರಿಂದ ಆಗುವುದೇನು? ಇನ್ನು ಅವರ ವಿರುದ್ಧ ಪ್ರಕರಣ ದಾಖಲಿಸುವಂತದ್ದನ್ನು ಏನೂ ಅವರು ಮಾಡಿಲ್ಲ ಎಂದು ಕೆಲವರ ಹೇಳಿಕೆ. ಒಬ್ಬ ವೈದ್ಯ ಸಾರ್ವಜನಿಕವಾಗಿ ತಾವು ಮಾಸ್ಕ್ ಧರಿಸಲ್ಲ, ಸರಕಾರದ ನಿಯಮ ಪಾಲಿಸಲ್ಲ ಎಂದು ಹೇಳಿದಾಗ ಅವರನ್ನು ಹಾಗೆ ಬಿಟ್ಟರೆ ಅದರಿಂದ ಸಮಾಜದ ಮೇಲೆ ದೂರಗಾಮಿ ಪರಿಣಾಮ ಉಂಟಾಗುತ್ತದೆ. ವೈದ್ಯರೇ ಧರಿಸಲ್ಲ ಎಂದ ಮೇಲೆ ನಾವು ಯಾಕೆ ಧರಿಸಬೇಕು. ಮೊದಲು ಕಕ್ಕಿಲ್ಲಾಯ ವೈದ್ಯರಿಗೆ ಹೇಳಿ ಎಂದು ಪೊಲೀಸರನ್ನೇ ನಾಗರಿಕರು ಪ್ರಶ್ನೆ ಮಾಡಲ್ವಾ? ಈಗಲೇ ನಮ್ಮ ಜಿಲ್ಲೆಯಲ್ಲಿ ಅದರಲ್ಲಿಯೂ ನಗರದಲ್ಲಿ ಮಾಸ್ಕ್ ಎಷ್ಟೋ ಜನರಿಗೆ ಕೇವಲ ಪೊಲೀಸರು ನೋಡುವಾಗ ಕುತ್ತಿಗೆಯ ಮೇಲೆ ಮೂಗಿನ ಬಳಿ ಎಳೆದುಕೊಳ್ಳುವ ಬಟ್ಟೆಯ ತುಂಡಾಗಿದೆ. ಹೀಗಿರುವಾಗ ಇಂತಹ ವೈದ್ಯರೇ ಹೀಗೆ ಉಢಾಪೆಯಿಂದ ವರ್ತಿಸಿದರೆ ಜನರಿಗೆ ಹೋಗುವ ಸಂದೇಶ ಏನು? ಒಂದು ವೇಳೆ ಒಬ್ಬ ಕುಡುಕ, ಮತಿಹೀನ ಹೀಗೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದರೆ ಅವನ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸುವುದಿಲ್ಲ. ಅವನಿಗೆ ತಲೆಸರಿ ಇಲ್ಲ ಎನ್ನುತ್ತೇವೆ. ಆದರೆ ಇದು ಹಾಗಲ್ಲ. ಇನ್ನು ಈ ಬಗ್ಗೆ ಸರಕಾರದ ನಿಯಮ ಉಲ್ಲಂಘಿಸಿದರೆ ಶಿಕ್ಷಿಸಲು ಪ್ರತ್ಯೇಕ ಕಾನೂನಿದೆ. ಸಾಂಕ್ರಾಮಿಕ ರೋಗ ಅಧಿನಿಯಮದ ಅಡಿಯಲ್ಲಿ ಇದು ಐದು ವರ್ಷ ಶಿಕ್ಷಾರ್ಹ ಅಪರಾಧವೂ ಹೌದು. ಇದೆಲ್ಲ ಗೊತ್ತಿಲ್ಲದೇ ನಿರ್ಲಕ್ಷ್ಯ ಮಾಡಲು ಕಕ್ಕಿಲಾಯ ಅವಿದ್ಯಾವಂತರಲ್ಲ. ವಿದ್ಯೆ ಬುದ್ಧಿಯನ್ನು ಮತ್ತು ಅದಕ್ಕಿಂತ ಹೆಚ್ಚಾಗಿ ವಿವೇಕವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಅದು ತಪ್ಪೆಂದು ಸಾಬೀತಾಗಿದೆ. ಇಷ್ಟೆಲ್ಲ ಆದ ಮೇಲೆ ಅವರು ಪೊಲೀಸ್ ಠಾಣೆಗೆ ಬರುವಾಗ ಮಾಸ್ಕ್ ಧರಿಸಿದ್ದರು ಎನ್ನುವುದನ್ನು ನೋಡುವಾಗ ಅವರಿಗೆ ಪೊಲೀಸರ ಮೇಲೆ ಇರುವ ಭಯ ಬಡಪಾಯಿ ಸ್ಟೋರಿನವರ ಮೇಲೆ ಇಲ್ಲ ಎಂದು ಸಾಬೀತಾಗುತ್ತದೆ. ಅಂಗಡಿಯವರು ವಿನಂತಿ ಮಾಡುವಾಗ ತಾವು ಅದನ್ನು ಕ್ಯಾರೇ ಮಾಡದೇ ರಿಟನ್ ಬೈದರೆ ಅವರು ತೆಪ್ಪಗೆ ಕುಳಿತುಕೊಳ್ಳುತ್ತಾರೆ ಎಂದು ಅಂದುಕೊಂಡಿರಬೇಕು. ಕೆಲವರ ಮಾನಸಿಕ ಸ್ಥಿತಿಯೇ ಹಾಗಿರುತ್ತದೆ. ತಾವು ಕಾರಿನಲ್ಲಿ ಹೋದರೆ ಎದುರಿನ ಬೈಕಿನವನು ಕಾಣಿಸುವುದೇ ಇಲ್ಲ. ನಾವು ಮೊದಲಿಗೆ ಯೋಚಿಸಬೇಕಾಗಿರುವುದು ನಾವು ನಾಗರಿಕ ಸಮಾಜದಲ್ಲಿ ವಾಸಿಸುತ್ತೇವೆ. ಇಲ್ಲಿ ಒಂದಿಷ್ಟು ನಿಯಮಗಳಿವೆ ಮತ್ತು ಅದನ್ನು ಪಾಲಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಹಿಮಾಲಯವೋ, ದಂಡಾರಣ್ಯವೋ ಇದೆ. ಅಲ್ಲಿ ಯಾರದ್ದೋ ಒತ್ತಡ ಇರುವುದಿಲ್ಲ. ಬೆತ್ತಲೆ ಓಡಾಡಿಕೊಂಡಿರಬಹುದು!
  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Hanumantha Kamath June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Hanumantha Kamath June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search