ಸುನೀಲ್ ಬಜಿಲಕೇರಿ ಎಂಬ ವೈರಸ್ ಸ್ವಸ್ಥ ಸಮಾಜದ ಆರೋಗ್ಯಕ್ಕೆ ಹಾನಿಕಾರಕ!!
ಫೇಸ್ ಬುಕ್ ತೆರೆದು ಅದರಲ್ಲಿ ವಿಡಿಯೋ ಆನ್ ಮಾಡಿ ಲೈವ್ ಕೊಡುವುದು ಅದೇನೂ ದೊಡ್ಡ ಘನಂದಾರಿ ಕೆಲಸ ಅಲ್ಲ. ಅದರಲ್ಲಿ ಶಾಸಕರನ್ನೋ, ಸಂಸದರನ್ನೋ ಟೀಕಿಸಿದ ಕೂಡಲೇ ಅದೇ ದೊಡ್ಡ ಸಾಧನೆ ಎಂದು ಅಂದುಕೊಳ್ಳಬೇಕಿಲ್ಲ. ಅಷ್ಟಕ್ಕೆ ತನಗೆ ನಾಲ್ಕು ಜನ ಲೈಕ್ ಕೊಡುತ್ತಾರೆ ಎಂದು ಉಬ್ಬಿ ಹೋಗುವುದು ಕೇವಲ ಮೂರ್ಖರ ಲಕ್ಷಣ. ಅಷ್ಟೇ ಮಾಡಿ ಸುನೀಲ್ ಬಜಿಲಕೇರಿ ಎನ್ನುವ ಮನುಷ್ಯ ಕಳೆದ ಕೆಲವು ಸಮಯಗಳಿಂದ ತನ್ನನ್ನು ತಾನು ಸಾಮಾಜಿಕ ಹೋರಾಟಗಾರ ಎಂದು ಕರೆಸಿಕೊಳ್ಳುತ್ತಿದ್ದ. ಆದರೆ ಇದಕ್ಕಿಂತಲೂ ದೊಡ್ಡ ಕೆಲಸ ಮಾಡಿ ತನನ್ನು ಪೋಷಿಸುವವರನ್ನು ಖುಷಿ ಮಾಡಲು ಯಾವಾಗ ಹೊರಟನೋ ಆಗ ಆತನ ಗ್ರಹಚಾರ ಉಲ್ಟಾ ಹೊಡೆದಿದೆ.
ಈ ಮನುಷ್ಯನಿಗೆ ಮೂಡಿಗೆರೆಯ ಹಿಂದೂ ಯುವತಿಯೊಬ್ಬಳು ವಿಡಿಯೋ ಮಾಡಿ ಅದರಲ್ಲಿ ಈ ವ್ಯಕ್ತಿ ಸಮಾಜವನ್ನು ಜಾತಿಯ ಆಧಾರದಲ್ಲಿ ಒಡೆಯುತ್ತಿರುವುದರ ಬಗ್ಗೆ ತೀವ್ರ ಆಕ್ಷೇಪ ಎತ್ತಿದ್ದಳು. ಅದರಲ್ಲಿ ಸುನೀಲ್ ಬಗ್ಗೆ ಅವಳು ವಾಮಾಗೋಚರವಾಗಿ ಬೈದು ಸುನೀಲನಿಗೆ ಮಂಗಳಾರತಿ ಮಾಡಿದ್ದಳು. ಅದರಿಂದ ಸುನೀಲ್ ಒಳಗೊಳಗೆ ಕ್ಷುದ್ರಗೊಂಡಿದ್ದ. ಕಳೆದ ಭಾನುವಾರ ಕರಾವಳಿಯ ನಮ್ಮ ಟಿವಿ ವಾಹಿನಿಯಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರೂ, ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ಬಿರುವೆರ್ ಕುಡ್ಲ ಎನ್ನುವ ಸಂಘಟನೆಯವರು ಆಯೋಜಿಸುವ ಮನದ ಮಾತು ವಿದ್ ಬಿರುವೆರ್ ಕುಡ್ಲ ನೇರಪ್ರಸಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಜನರಿಗೆ ಕರೆ ಮಾಡಿ ಮಾತನಾಡುವ ಅವಕಾಶ ಇತ್ತು. ಕೆಲವರಿಗೆ ಕರೆ ಸಿಕ್ಕಿತ್ತು. ಹಾಗೆ ಇದೇ ಮೂಡಿಗೆರೆಯ ಯುವತಿಗೆ ಕಾಲ್ ಸಿಕ್ಕಿದ್ದು ಆಕೆ ಸಂಸದರನ್ನು ಅಭಿನಂದಿಸಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾಳೆ. ಇದನ್ನು ಸುನೀಲ್ ಬಜಿಲಕೇರಿ ಗಮನಿಸಿದ್ದಾನೆ. ಮರುದಿನ ಒಂದು ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಅದನ್ನು ನೋಡಿದವರಿಗೆ ಇದೇ ಯುವತಿ ನಳಿನ್ ಕುಮಾರ್ ಅವರನ್ನು ನಿರಂತರವಾಗಿ ನಿಂದಿಸಿದಂತೆ ಭಾಸವಾಗಿದೆ. ಈ ಕಾರ್ಯಕ್ರಮ ನೋಡಿದವರಿಗೂ, ನೋಡದವರಿಗೂ ಒಂದು ಆಶ್ಚರ್ಯ. ಕಾರ್ಯಕ್ರಮ ನೋಡಿದವರಿಗೆ “ಅರೇ ಈ ಯುವತಿ ನಿನ್ನೆ ಹೊಗಳಿದ್ದಾಳೆ. ಆದರೆ ಈ ವಿಡಿಯೋ ಕ್ಲಿಪ್ ನಲ್ಲಿ ಅವಳದ್ದೇ ಧ್ವನಿ ಬೈದಂತೆ ಆಗಿದೆಯಲ್ಲ” ಎಂದು ಅನಿಸಿದೆ. ಕಾರ್ಯಕ್ರಮ ನೋಡದವರಿಗೆ ” ಓ ಓರ್ವ ಹೆಣ್ಣುಮಗಳು ನೇರಪ್ರಸಾರದಲ್ಲಿ ನಳಿನ್ ಅವರಿಗೆ ಬೈದಿದ್ದಾಳೆ” ಎಂದು ಸುದ್ದಿಯಾಗಿದೆ. ಇದರಿಂದ ಬಿಜೆಪಿ ಮುಖಂಡರು ಮತ್ತು ನಳಿನ್ ಪರ ಹಾಗೂ ವಿರೋಧಿ ಎಲ್ಲರೂ ಗೊಂದಲಕ್ಕೆ ಬಿದ್ದಿದ್ದರು. ನಂತರ ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಸ್ಪಷ್ಟವಾದ ವಿಷಯವೇನೆಂದರೆ ಆ ಯುವತಿ ಸುಪ್ರೀತಾ ಗೌಡ ಅವರು ಸುನೀಲ್ ಬಜಿಲಕೇರಿಗೆ ಬೈದ ವಿಡಿಯೋದ ಆಡಿಯೋ ಭಾಗವನ್ನು ತೆಗೆದು ಅದನ್ನು ಆಕೆ ನಳಿನ್ ಅವರನ್ನು ಹೊಗಳಿದ ಭಾಗಕ್ಕೆ ಹೊಂದಿಸಿ ಅವಳೇ ಬೈದ ಹಾಗೆ ಮಾಡಿದ್ದಾರೆ. ಒಂದು ಅಪ್ಪಟ ಪ್ರೋಫೆಶನಲ್ ಎಡಿಟರ್ ಕುಳಿತುಕೊಂಡು ಕುಸುರಿಕೆಲಸದಂತೆ ಯಾವುದೇ ಸಣ್ಣ ಸಂಶಯವೂ ಬರದಂತೆ ಕೆಲಸ ಮಾಡಿ ಮುಗಿಸಿದ್ದಾರೆ. ಇದರಿಂದ ನಳಿನ್ ವಿರೋಧಿಗಳಿಗೆ ಸಂಭ್ರಮಿಸಲು ಕಾರಣಗಳು ಸಿಕ್ಕಿವೆ. ಬಿಜೆಪಿ ಮುಖಂಡರಲ್ಲಿ ಆಕ್ರೋಶ ಹೊರಹೊಮ್ಮಿದೆ. ವಿಪಕ್ಷದ ಹಲವು ಸಜ್ಜನ ಮುಖಂಡರು ಮಾತ್ರ ಇಂತಹ ಬೆಳವಣಿಗೆಯಿಂದ ಬೇಸರ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಇವತ್ತು ಡಿಜಿಟಲ್ ಯುಗದಲ್ಲಿ ಯಾರ ವಿಡಿಯೋವನ್ನು ಯಾರ ಧ್ವನಿಗೂ ಸೇರಿಸಿ ಎಡಿಟ್ ಮಾಡಿ ವೈರಲ್ ಮಾಡಬಹುದಾಗಿದೆ. ತಂತ್ರಜ್ಞಾನವನ್ನು ದುರುಪಯೋಗ ಮಾಡುವುದರಿಂದ ಮಾಡಿದವರು ತಾವು ಬುದ್ಧಿವಂತರು ಎಂದು ಅಂದುಕೊಂಡಿರಬಹುದು. ಸೈಬರ್ ಕ್ರೈಂ ಪೊಲೀಸರು ತಮಗೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಭಾವನೆ ಬಂದಿರಬಹುದು. ಆ ಧೈರ್ಯದಿಂದಲೇ ಲಿಮಿಟ್ ಮೀರಿ ಸುನೀಲ್ ಸಂಚು ಹೂಡಿದ್ದ. ಅದರಿಂದಲೇ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹೊರಗಿದ್ದಾಗ ನಿತ್ಯ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ನಮ್ಮ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅನ್ನು ಫೇಸ್ ಬುಕ್ಕಿನಲ್ಲಿ ಟೀಕಿಸುತ್ತಿದ್ದವನು ಮೊನ್ನೆ ನಮ್ಮ ಸೇವಾಂಜಲಿ ಯುವಕರು ಪೊಲೀಸ್ ಠಾಣೆಗೆ ಕೊಡುವ ಊಟವನ್ನೇ ಮಾಡಬೇಕಾದ ಪರಿಸ್ಥಿತಿ ಅವನಿಗೆ ಬಂದಿತ್ತು.
ಒಬ್ಬ ಸಾಮಾಜಿಕ ಹೋರಾಟಗಾರ ಎನಿಸಿಕೊಂಡವನು ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ಹೀರೋ ಆಗಲು ಹೋಗಬಾರದು. ಸಾಮಾಜಿಕ ಹೋರಾಟಗಾರರಿಗೆ ಮಾಡಲು ತುಂಬಾ ಕೆಲಸ ಇದೆ. ಮಾಹಿತಿ ಹಕ್ಕಿನಲ್ಲಿ ಜನರಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನು ಪಡೆದು ಎಷ್ಟೋ ಕೆಲಸಗಳನ್ನು ಮಾಡಬಹುದು. ಕೆಲವರು ಆರ್ ಟಿಐ ಕಾರ್ಯಕರ್ತರ ಸೋಗಿನಲ್ಲಿ ಮಾಹಿತಿಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡಿರುವ ಉದಾಹರಣೆಗಳು ಇರಬಹುದು. ಹಾಗಂತ ಎಲ್ಲಾ ಸಾಮಾಜಿಕ ಹೋರಾಟಗಾರರು ಅದನ್ನೇ ಮಾಡುತ್ತಿಲ್ಲ. ಶಾಸಕರಿಗೆ, ಸಂಸದರಿಗೆ ಅವರದ್ದೇ ಆಗಿರುವ ಹೊಣೆಗಾರಿಕೆ ಇರುತ್ತದೆ. ಅದನ್ನು ಮಾಡಲು ಅವರದ್ದೇ ಆಗಿರುವ ಮಿತಿಯೂ ಇರಬಹುದು. ಅದನ್ನು ಮಾಡಲು ಅವರಿಗೆ ಅವಕಾಶ ನೀಡಬೇಕು. ಅವರು ತಪ್ಪು ಮಾಡಿದಾಗ ಸಕರಾತ್ಮಕವಾದ ಟೀಕೆಗಳು ಸಹಜ. ಹಾಗಂತ ವೈಯಕ್ತಿಕ ನಿಂದನೆ, ಕೀಳುಮಟ್ಟದ ಹೀಯಾಳಿಕೆ, ಒಂದು ಚೂರು ಗೌರವ ನೀಡದೇ ತೆಗಳುತ್ತಾ ಬರುವುದನ್ನು ಯಾರೂ ಕೂಡ ಒಪ್ಪುವುದಿಲ್ಲ. ಅಂತವರನ್ನು ವಿರೋಧ ಪಕ್ಷಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿ ನಂತರ ಎಸೆಯುತ್ತಾರೆ ವಿನ: ನಾಳೆ ಇಂತಹ ವ್ಯಕ್ತಿಗಳು ತಪ್ಪು ಮಾಡಿದಾಗ ಯಾರೂ ಮಾನವಂತರು ಮುಂದೆ ಬಂದು ಸಮರ್ಥಿಸಲು ಹೋಗುವುದಿಲ್ಲ. ಸುನೀಲ್ ಕೇವಲ ತನ್ನ ವೈಯಕ್ತಿಕ ತೆವಲಿಗೆ, ಸ್ವಾರ್ಥಕ್ಕೆ, ದುರಾಸೆಗೆ ಮತ್ತು ಒಂದಿಷ್ಟು ವಿರೋಧಿಗಳ ತಾಳಕ್ಕೆ ಕುಣಿಯುತ್ತಾ ಇದ್ದಾನೆ. ಆ ಸುಪ್ರೀತಾ ಗೌಡ ಎನ್ನುವ ಹೆಣ್ಣುಮಗಳಿಗೆ ಹೆದರಿಸಿ ಆಸಿಡ್ ಹಾಕುತ್ತೇನೆ ಎಂದು ಬೆದರಿಸಿದ ಕೇಸು ಕೂಡ ಇವನ ಮೇಲಿದೆ. ನಮ್ಮನ್ನು ಅನೇಕ ರೀತಿಯ ಉತ್ತಮ ಸಾಮಾಜಿಕ ಚಿಂತಕರಿದ್ದಾರೆ. ಆದರೆ ಅವರಲ್ಲಿ ಹಿಡನ್ ಏಜೆಂಡಾ ಇಲ್ಲ. ಸುನೀಲ್ ಹಾರಾಡುವುದು ಯಾರೋ ಊದಿದ ಗಾಳಿಯಿಂದ. ಬೆಲೂನು ಒಳಗೆ ಗಾಳಿ ಇದ್ದದ್ದು ದಿನ ಮಾತ್ರ ಅದು ಹಾರಾಡುತ್ತದೆ. ಗಾಳಿ ಹಾಕುವವರು ಕೈ ಬಿಟ್ಟರೆ ಅದು ಡಸ್ಟ್ ಬಿನ್ ಗೆ!
Leave A Reply