• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಿಜೆಪಿ ಸರಕಾರ ಇದ್ದಾಗಲೇ ದೇವಸ್ಥಾನಗಳಿಗೆ ಮುಕ್ತಿ ಕೊಡುವುದು ಎಂದರೇನು?

Hanumantha Kamath Posted On September 14, 2021


  • Share On Facebook
  • Tweet It

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವಾಗಲು ರಸ್ತೆ ಅಗಲವಾಗುವ ಸಂದರ್ಭ ಬಂದೇ ಬರುತ್ತದೆ. ಆಗ ಈಗಾಗಲೇ ಇರುವ ಕೆಲವು ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಮಸೀದಿ, ಚರ್ಚ್, ಗೋರಿಗಳು ಅಡ್ಡ ಬಂದರೆ ಏನು ಮಾಡುವುದು ಎನ್ನುವ ಪ್ರಶ್ನೆ ಕಾಡುತ್ತದೆ. ಆಗ ಎಲ್ಲೆಲ್ಲಿ ಈ ಧಾರ್ಮಿಕ ಕೇಂದ್ರಗಳನ್ನು ಅನಿವಾರ್ಯವಾಗಿ ಕೆಡವಲೇಬೇಕೋ ಬೇಡವೋ ಎನ್ನುವುದನ್ನು ಪರಿಶೀಲಿಸಬೇಕು. ಅನೇಕ ನಾಸ್ತಿಕ ಅಧಿಕಾರಿಗಳು ಇರುತ್ತಾರೆ. ಅವರು ರೂಪುರೇಶೆ ಸಿದ್ಧಪಡಿಸುವಾಗ ಕೆಡವಲೇಬೇಕು ಎಂದು ಷರಾ ಬರೆದುಬಿಡುತ್ತಾರೆ. ಆದರೆ ಅನಿವಾರ್ಯವಾಗಿರುವುದಿಲ್ಲ. ಆದರೆ ಅವರಿಗೆ ಏನೂ ಬಿದ್ದು ಹೋಗಿರುವುದಿಲ್ಲ. ಅವರ ದೃಷ್ಟಿಯಲ್ಲಿ ಅದೊಂದು ಕಟ್ಟಡ ಮಾತ್ರ ಆಗಿರುತ್ತದೆ. ಅದರೆ ನಮ್ಮ ದೃಷ್ಟಿಯಲ್ಲಿ ಅದು ನಮ್ಮ ಪವಿತ್ರ ಪೂಜಾ ಸ್ಥಳ. ಅಲ್ಲಿ ನಮ್ಮ ನಂಬಿಕೆಗಳಿವೆ. ದೇವರಿದ್ದಾರೆ. ಯಾರೋ ಬಂದು ಕೆಡವಿ ಹೋಗಲು ಇದೇನೂ ಮೊಹಮ್ಮದ್ ಘಜ್ನಿಯ ಯುಗವೇ. ಕೇಳಿದರೆ ಈ ಅಧಿಕಾರಿಗಳು ಸುಪ್ರೀಂಕೋರ್ಟ್ ನಿಯಮ ಇದೆ ಎಂದು ಸಬೂಬು ಹೇಳುತ್ತಾರೆ. ನ್ಯಾಯಾಲಯಗಳು ಹೇಳಿದ್ದನ್ನು ನಾವು ಪಾಲಿಸಬೇಕು ನಿಜ.

ಹಾಗಂತ ಅವು ಹೇಳಿದ್ದನ್ನೆಲ್ಲವನ್ನು ನಾವು ಪಾಲಿಸುತ್ತಿದ್ದೇವಾ? ಈಗ ಮಂಗಳೂರು ಮಹಾನಗರ ಪಾಲಿಕೆಯನ್ನೇ ತೆಗೆದುಕೊಳ್ಳಿ. ಅಲ್ಲಿ ನಗರದಲ್ಲಿ ಅನಧಿಕೃತವಾಗಿ ಕಟ್ಟಿರುವ ಅನೇಕ ಕಟ್ಟಡಗಳನ್ನು ಕೆಡವಬಹುದು ಎಂದು ನ್ಯಾಯಾಲಯ ಹೇಳಿದೆ. ಕೆಲವರು ಕೋರ್ಟಿಗೆ ಹೋಗಿ ಸ್ಟೇ ಅಂದರೆ ತಡೆಯಾಜ್ಞೆ ತಂದಿದ್ದಾರೆ. ಅವರದ್ದು ಬಿಡಿ, ಉಳಿದ ಎಷ್ಟೋ ಕಟ್ಟಡಗಳ ಮಾಲೀಕರು ತಡೆಯಾಜ್ಞೆ ತಂದಿಲ್ಲ. ಅದನ್ನು ನಮ್ಮ ಪಾಲಿಕೆ ಕೆಡವಬಹುದಲ್ಲ. ಅದನ್ನು ಯಾಕೆ ನ್ಯಾಯಾಲಯದ ಆಜ್ಞೆ ಎಂದು ಕೆಡವಲು ಮುಂದೆ ಬರುತ್ತಿಲ್ಲ. ಅದರ ಅರ್ಥ ಶ್ರೀಮಂತರ ಕಟ್ಟಡಗಳು ಎಂದರೆ ಕೈ ಹಾಕಲು ಹೆದರಿಕೆ. ಅದೇ ದೇವಸ್ಥಾನಗಳು ಎಂದರೆ ನಾವು ಯಾರೂ ಮುಂದೆ ಬರುವುದಿಲ್ಲ. ಏನು ಬೇಕಾದರೂ ಮಾಡಬಹುದು ಎನ್ನುವ ಭಂಡತನವಾಗಿದೆ ಅಲ್ವೇ? ಇನ್ನು ನಮ್ಮ ಜನಪ್ರತಿನಿಧಿಗಳನ್ನು ತೆಗೆದುಕೊಳ್ಳಿ. ಅವರ ಹಾಸಿಗೆಯ ಮೇಲಿನ ಶೌರ್ಯದ ಸಿಡಿಗಳು ಬರುತ್ತದೆ ಎನ್ನುವ ಸಣ್ಣ ಸುಳಿವು ಸಿಕ್ಕಿತು ಎಂದ ಕೂಡಲೇ ನೇರ ಕೋರ್ಟಿನಿಂದ ತಡೆಯಾಜ್ಞೆ ತರುತ್ತಾರೆ. ಇಂತಹ ಮಹಾನುಭಾವರು ಈ ವಿಷಯದಲ್ಲಿ ಮೀಡಿಯಾಗಳ ಮುಂದೆ ಬಂದು ಸುದ್ದಿಗೋಷ್ಟಿ ಮಾಡುತ್ತಾರೆ. ಪ್ರತಿಭಟನೆ ಮಾಡುತ್ತಾರೆ. ಅದರ ಬದಲು ಇವರು ಮೊದಲೇ ಈ ಬಗ್ಗೆ ಸಭೆಗಳು ಆಗುವಾಗ ಆ ಭಾಗದ ಜನರನ್ನು ಕರೆಸಿ ಅವರ ಮುಂದೆ ಈ ವಿಷಯ ಇಟ್ಟು, ಅವರಿಂದ ಸೂಕ್ತ ಸಲಹೆ, ಅಭಿಪ್ರಾಯಗಳನ್ನು ಸ್ವೀಕರಿಸಿ ಮುಂದುವರೆದರೆ ಎಷ್ಟು ಉತ್ತಮ ಇತ್ತು, ಅಲ್ವೆ? ಈ ಮಂಗಳೂರಿನ ಕುಳೂರು ಸೇತುವೆ ಹೊಸದಾಗಿ ನಿರ್ಮಾಣವಾಗುತ್ತಿದೆ. ಅದನ್ನು ನಿರ್ಮಿಸುವಾಗ ಅಲ್ಲೊಂದು ಅಯ್ಯಪ್ಪ ಸ್ವಾಮಿಯ ಗುಡಿ ಅಡ್ಡಬರುವ ಸಾಧ್ಯತೆ ಇತ್ತು. ಗುಡಿಯನ್ನು ಕೆಡವದೇ ಕಾಮಗಾರಿ ಮುಗಿಯುವುದು ಸಾಧ್ಯವೇ ಇರಲಿಲ್ಲ. ಆದರೆ ಈ ಕುರಿತು ಈ ಭಾಗದ ಸಂಸದರು, ಶಾಸಕರು ದೇವಳದ ಪ್ರಮುಖರೊಂದಿಗೆ ಸಭೆ ನಡೆಸಿ ಆ ಮಂದಿರಕ್ಕೆ ಬೇರೆ ಕಡೆ ಸ್ಥಳಾವಕಾಶ ಕೊಟ್ಟು ಅದನ್ನು ಊರಿನ ಗಣ್ಯರ ಸಹಕಾರದೊಂದಿಗೆ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದ್ದಾರೆ. ಆ ಬಳಿಕ ಈಗ ಇದ್ದ ದೇವಾಲಯ ಕೆಡವಲಾಗಿದೆ. ಇದರಿಂದ ಏನೂ ಗೊಂದಲ ಆಗದೇ ಎಲ್ಲವೂ ಸುಖಾಂತ್ಯವಾಗಿದೆ. ಇದನ್ನು ಮೈಸೂರಿನಲ್ಲಿಯೂ ಅಳವಡಿಸಬಹುದಿತ್ತು.

ಇನ್ನು ನಮ್ಮ ರಾಜ್ಯ ಸರಕಾರ ಕೂಡ ಇಂತಹ ವಿಷಯದಲ್ಲಿ ಪಕ್ಕಾ ಎಡಬಿಡಂಗಿ ತರಹ ಆಡಬಾರದು. ದೇವಸ್ಥಾನಗಳ ಹೆಸರಿನಲ್ಲಿಯೇ ಅಧಿಕಾರಕ್ಕೆ ಬಂದವರು, ದೇವರ ಡಬ್ಬಿಯ ಹಣದಿಂದಲೇ ಅಭಿವೃದ್ಧಿ ಕಾರ್ಯ ಮಾಡುವವರು ಇಂತಹ ವಿಷಯ ಬಂದಾಗ ಅಭಿವೃದ್ಧಿ ಮುಖ್ಯ ಎಂದು ಒದರಲು ಶುರು ಮಾಡಿದರೆ ಕಾಂಗ್ರೆಸ್ ಸರಕಾರಕ್ಕೂ ನಿಮಗೂ ಏನು ವ್ಯತ್ಯಾಸ? ಒಂದು ವೇಳೆ ಕಾಂಗ್ರೆಸ್ ಹೀಗೆ ಮಾಡಿದ್ದರೆ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ಎಂದು ರಾಜ್ಯವ್ಯಾಪಿ ಮುಷ್ಕರ ಮಾಡುತ್ತಿರಲಿಲ್ಲವೇ? ಈಗ ನಿಮ್ಮದೇ ಸರಕಾರ ಇದೆ ಎಂದ ಕಾರಣಕ್ಕೆ ನೀವೇ ಯಾರ ವಿರುದ್ಧ ಹೋರಾಟ ಮಾಡುವುದು ಎನ್ನುವುದು ನಿಮಗೆ ಗೊತ್ತು. ಈಗ ಸರಕಾರ ತಂದಿರುವ ನಿಯಮ ಪ್ರಕಾರ ಈ ಧಾರ್ಮಿಕ ಕೇಂದ್ರಗಳು ಭೂಮಿಯನ್ನು ಒಂದಿಷ್ಟು ಅತಿಕ್ರಮಣ ಮಾಡಿಕೊಂಡಿದ್ದರೆ ಅದನ್ನು ನಿಮ್ಮದೇ ನಿಯಮದ ಪ್ರಕಾರ ಸಕ್ರಮಕ್ಕೆ ಕೈಗೊಳ್ಳಬಹುದಲ್ಲ. ಹೇಗೂ ಮನೆಗಳು 50% ಹಾಗೂ ವಾಣಿಜ್ಯ ಕಟ್ಟಡಗಳು 25% ಅನಧಿಕೃತವಾಗಿದ್ದರೆ ಅದಕ್ಕೆ ನಿಗದಿಗೊಳಿಸಿದ ದಂಡವನ್ನು ಕಟ್ಟಿ ಸಕ್ರಮ ಮಾಡುವುದು ನಿಮ್ಮದೇ ಸರಕಾರ ಇರುವಾಗ ಎಷ್ಟೊತ್ತಿನ ಮಾತು. ಅದು ಬಿಟ್ಟು ನ್ಯಾಯಾಲಯ ಹೇಳಿದ ಕೂಡಲೇ ಜಿಸಿಬಿ ರಸ್ತೆಗೆ ಇಳಿಸುವುದೇ ಆಗಿದ್ದರೆ ಶ್ರೀಮಂತರ, ಪ್ರಭಾವಿಗಳ ಅಕ್ರಮ ಕಟ್ಟಡಗಳನ್ನು ಮೊದಲು ಕೆಡವಿ. ನಂತರ ದೇವಸ್ಥಾನಗಳ ವಿಷಯಕ್ಕೆ ಬನ್ನಿ. ಇನ್ನು ಭಾರತೀಯ ನತಾ ಪಾರ್ಟಿಯ ಮುಖಂಡರು, ಜನಪ್ರತಿನಿಧಿಗಳು ಈಗ ರಾಜ್ಯ, ರಾಷ್ಟ್ರದಲ್ಲಿ ಇರುವುದು ನಿಮ್ಮದೇ ಸರಕಾರ ಎಂದು ಮರೆಯಬಾರದು. ಅದು ಬಿಟ್ಟು ಇನ್ನು ಕೂಡ ವಿಪಕ್ಷಗಳ ಗೆಟಪ್ಪಿನಲ್ಲಿ ಬಂದು ಉಗ್ರ ಹೇಳಿಕೆ ನೀಡಿ ನಾವು ಯಾವತ್ತೂ ಹಿಂದೂ ವೋಟ್ ಬ್ಯಾಂಕಿಗಾಗಿ ಇಂತಹ ಡ್ರಾಮಗಳನ್ನು ಮಾಡುತ್ತೇವೆ ಎಂದು ಸಾಬೀತುಪಡಿಸಲು ಹೋಗಬಾರದು. ಇದು ಏನಾಗಿದೆ ಎಂದರೆ ಯಾರೋ ಬಾಬರ್ ಹಿಂದಿನ ಬಾಗಿಲಿನಿಂದ ಭಾರತದೊಳಗೆ ಬಂದು ಅಲ್ಲಿಂದ ನೇರ ಮೈಸೂರಿಗೆ ತೆರಳಿ ದೇವಸ್ಥಾನದ ಎದುರು ನಿಂತು ಆಕ್ರಮಣ್ ಎಂದು ಹೇಳಿದ ಹಾಗೆ ಆಯಿತು. ಅದಕ್ಕೆ ನಮ್ಮ ಹಿಂದೂಸ್ತಾನದ ಹಿಂದೂನಾಯಕ ಪ್ರತಾಪ್ ಸಿಂಹ ಅಡ್ಡ ನಿಂತಂತೆ ಆಯಿತು. ಯಾಕೋ ಈ ಕಥೆ ಬರೆಯುವವರು ಹೊಸ ಹೊಸ ಐಡಿಯಾಗಳನ್ನು ಹೆಣೆಯಬೇಕೆ ವಿನ: ಮತ್ತೆ ಮತ್ತೆ ಅದೇ ಡಬ್ಬಾ ಕಥೆಗಳನ್ನು ಬರೆದು ಪಾಪ, ಬಿಜೆಪಿ ಸರಕಾರದ ಮಾನ ಕಳೆಯಬಾರದು ಮತ್ತು ಅದೇ ಪೇಲವ ಕಥೆಗಳಿಗೆ ಹೀರೋ ಆಗಲು ಪ್ರತಾಪ್ ಸಿಂಹ ಒಪ್ಪಬಾರದು!

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search