• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಈ ದೇಶದಲ್ಲಿ ಮಗ ಸುರಕ್ಷಿತವಾಗಿ ಡ್ರಗ್ಸ್ ಸೇವನೆ ಮಾಡಲು ಆಗಲ್ಲ ಎನ್ನುವ ಕಾರಣಕ್ಕೆ….

Hanumantha Kamath Posted On October 11, 2021


  • Share On Facebook
  • Tweet It

ಶಾರುಖ್ ಖಾನ್ ತಮ್ಮ ಪುತ್ರನಿಗೆ ಬೇಲ್ ಕೊಡಿಸಲು ಏನೆಲ್ಲ ಪ್ರಯತ್ನಗಳನ್ನು ಮಾಡಿರಬಹುದು ಎಂದು ಒಂದು ಕ್ಷಣ ಲೆಕ್ಕ ಹಾಕಿ. ಪ್ರಧಾನ ಮಂತ್ರಿಯವರು ಚಿತ್ರೋದ್ಯಮದ ಮಂದಿಗೆ ಕರೆದ ಸಭೆಯಲ್ಲಿ ಮೊದಲ ಸಾಲಿನಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕುಳಿತ ಶಾರುಖ್ ಫೋಟೋ ನೀವು ನೋಡಿರಬಹುದು. ಆ ಫೋಟೋದಲ್ಲಿಯೇ ಆತನ ವ್ಯಕ್ತಿತ್ವ ಗೊತ್ತಾಗುತ್ತಿತ್ತು. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಕದಲ್ಲಿ ನಿಂತು ಐಪಿಎಲ್ ಪಂದ್ಯ ಪ್ರಶಸ್ತಿ ಕೊಡುವಾಗ ಅವರ ಕಾಂಟ್ರೆಕ್ಟ್ ಎಲ್ಲಿಯ ತನಕ ಇದೆ ಎಂದು ತಿಳಿಯುತ್ತಿತ್ತು. ದೇಶದ ಪ್ರಧಾನಿಯ ಸಭೆಯಲ್ಲಿ ಭಾಗವಹಿಸುವ, ಸಿಎಂ ಪಕ್ಕದಲ್ಲಿ ನಿಲ್ಲುವ, ದುಬೈಯಲ್ಲಿ ಬಂಗ್ಲೆಗಳನ್ನು ಹೊಂದಿರುವ, ಸ್ವಂತ ವಿಮಾನವನ್ನು ಗಳಿಸಿರುವ ಬಾಲಿವುಡ್ ಅಂಗಳದ ಕಿಂಗ್ ಎಂದೇ ಕರೆಯಲ್ಪಡುವ ಶಾರುಖ್ ತಮ್ಮ ಮಗ ಜೈಲಿಗೆ ಹೋಗದೇ ಇರುವಂತೆ ಮಾಡಲು ತಮ್ಮ ಯಾವೆಲ್ಲ ಸಾಮರ್ತ್ಯ ಎಷ್ಟು ಬಳಸಿರಬಹುದು ಎನ್ನುವ ಅಂದಾಜು ಜನಸಾಮಾನ್ಯರಿಗೆ ಇರಲು ಸಾಧ್ಯವೇ ಇಲ್ಲ. ಆತನ ಬಳಿ ಪ್ರಭಾವಿ ವಕೀಲರನ್ನು ಖರೀದಿಸುವಷ್ಟು ದುಡ್ಡು ಇತ್ತು. ತನ್ನ ಒಂದು ಕರೆಗೆ ದಾಖಲೆಗಳನ್ನು ಉಡಿಸ್ ಮಾಡಬಲ್ಲ ಅಧಿಕಾರಿಗಳ ಗೆಳೆತನ ಇತ್ತು. ಅವನದ್ದೇ ಮನಸ್ಥಿತಿಯನ್ನು ಈಗ ಹೊಂದಿರುವ ರಾಜ್ಯ ಸರಕಾರ ಮಹಾರಾಷ್ಟ್ರದಲ್ಲಿ ಇತ್ತು. ಅವನ ಸ್ನೇಹಿತರ ವಲಯದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಪ್ರಭಾವಿ ಸಚಿವರೂ ಇದ್ದರು. ಅಕ್ಷರಶ: ರಾಜನ ದರ್ಬಾರ್ ನಡೆಸುವ ಒಬ್ಬ ಖಾನ್ ಗೆ ಏನೂ ಮಾಡಲು ಸಾಧ್ಯವಾಗಿಲ್ಲ ಎನ್ನುವುದನ್ನು ಗಮನಿಸಿದಾಗ ಈ ದೇಶದ ನ್ಯಾಯಾಂಗದ ಮೇಲೆ ನಿಮಗೆ ನಮಗೆ ಗೌರವ ದುಪ್ಪಾಟ್ಟಾಗುತ್ತದೆ. ಅಲ್ಲವೇ? ಎಲ್ಲವೂ ಇದ್ದು, ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಅಚೀಚೆ ಮಾಡಬಲ್ಲ ಒಬ್ಬ ಪ್ರಭಾವಿ ಸೆಲೆಬ್ರಿಟಿಗೆ ಅಷ್ಟಾಗಿಯೂ ಮಗ ನ್ಯಾಯಾಂಗ ಬಂಧನಕ್ಕೆ ಹೋಗದಂತೆ ಮಾಡಲು ಸಾಧ್ಯವಾಗಿಲ್ಲ ಎನ್ನುವುದೇ ಈ ದೇಶದ ನ್ಯಾಯಾಂಗ ವ್ಯವಸ್ಥೆ ಇನ್ನು ಪ್ರಭಾವಿಗಳ ಕಪಿಮುಷ್ಟಿಯಲ್ಲಿ ಸಿಲುಕಿಲ್ಲ ಎನ್ನುವುದು ಸ್ಪಷ್ಟ. ಈಗ ಬೇಕಾದರೆ ಶಾರುಖ್ ಧೈರ್ಯದಿಂದ ಹೇಳಬಹುದು. ನಾನು ಪಾಕಿಸ್ತಾನಕ್ಕೆ ಹೋಗುತ್ತೇನೆ. ಈ ದೇಶದಲ್ಲಿ ನಮಗೆ ಹೆದರಿಕೆಯಾಗುತ್ತದೆ. ಇಲ್ಲಿ ಡ್ರಗ್ಸ್ ಸೇವಿಸಲು ನಮಗೆ ಸ್ವಾತಂತ್ರ್ಯ ಇಲ್ಲ ಎಂದು ಅನಿಸಿಯೇ ಶಾರುಖ್ ಆವತ್ತು ಈ ದೇಶದ ಬಗ್ಗೆ ಅಸಮಾಧಾನಗೊಂಡಿರಬಹುದು.

ಶಾರುಖ್ ಖಾನ್ ಮಗನ ವಿಷಯದಲ್ಲಿ ಎನ್ ಸಿಬಿ ತೆಗೆದುಕೊಂಡಿರುವ ಕ್ರಮಗಳನ್ನು ಗಮನಿಸಿದಾಗ ಅವರು ಸುಲಭಕ್ಕೆ ಬಗ್ಗುವ ಇಲಾಖೆಯವರಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಖಾನ್ ವಕೀಲರು ಆರ್ಯನ್ ಕೇವಲ ಸೇವಿಸಿದ್ದ, ಆತ ಪೆಡ್ಲರ್ ಆಗಿರಲಿಲ್ಲ ಎಂದು ಹೇಳುತ್ತಾರೆ. ಆದರೆ ಎನ್ ಸಿಬಿ ಆರ್ಯನ್ ಬಳಿ ಡ್ರಗ್ಸ್ ಇತ್ತೆಂದೊ ಅಥವಾ ಆತನ ಗೆಳೆಯರ ಬಳಿ ಇತ್ತು ಎಂದೋ ಒಟ್ಟಿನಲ್ಲಿ ತಮ್ಮ ಬಳಿ ಇರುವ ಸಾಕ್ಷ್ಯಗಳ ಬಗ್ಗೆ ಧೃಡ ವಿಶ್ವಾಸ ಹೊಂದಿದೆ. ಆದರೆ ಒಬ್ಬಿಬ್ಬರು ಸೆಲೆಬ್ರಿಟಿಗಳ ಮಕ್ಕಳು ಹೀಗೆ ತಪ್ಪು ಮಾಡಿದಾಗ ಸಿಕ್ಕಿಬಿದ್ದರೆ ಆಗ ಅವರಿಗೆ ಸೂಕ್ತವಾದ ಶಿಕ್ಷೆ ಆದರೆ ಇದರಿಂದ ನಿಜವಾಗಿಯೂ ಡ್ರಗ್ಸ್ ಸೇವನೆ ಅಥವಾ ಮಾರಾಟದ ವಿಷಯದಲ್ಲಿ ಯುವಕ, ಯುವತಿಯರಿಗೆ ಹೆದರಿಕೆ ಉಂಟಾಗಬಹುದು. ಇಲ್ಲಿಯ ತನಕ ಏನಾಗುತ್ತಿತ್ತು ಎಂದರೆ ನಾವು ಸಿಕ್ಕಿಬಿದ್ದರೂ ನಮ್ಮ ಪೋಷಕರು ನಮ್ಮನ್ನು ಬಿಡಿಸಿಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸ ಶ್ರೀಮಂತ ಮನೆತನದ ಮಕ್ಕಳಲ್ಲಿ ಇದೆ. ಅದಕ್ಕಾಗಿ ಅವರು ಪೊಲೀಸರನ್ನು ಕ್ಯಾರೇ ಮಾಡುವುದಿಲ್ಲ. ಇನ್ನು ಈ ಡ್ರಗ್ಸ್ ಜಾಲಕ್ಕೆ ಶ್ರೀಮಂತರ ಮಕ್ಕಳ ಜೊತೆ ಕೆಲವು ಬಡ ಮನೆಯ ಹೆಣ್ಣುಮಕ್ಕಳು ಕೂಡ ಸೇರಿಬಿಡುತ್ತಾರೆ. ಅದರಲ್ಲಿಯೂ ಶ್ರೀಮಂತರು ಅನ್ಯಧರ್ಮದವರಾಗಿದ್ದರೆ ಅವರು ಈ ಹೆಣ್ಣುಮಕ್ಕಳನ್ನು ಯಾವುದಕ್ಕೆಲ್ಲ ಉಪಯೋಗಿಸುತ್ತಾರೆ ಎನ್ನುವುದು ಗೊತ್ತಾಗುವುದೇ ಇಲ್ಲ. ಆ ಯುವತಿಯರ ಭವಿಷ್ಯ ಹಾಳಾಗಿ ಎಕ್ಕುಟ್ಟು ಹೋದ ಮೇಲೆಯೇ ಗೊತ್ತಾಗುವುದು. ಇನ್ನು ಎನ್ ಸಿಬಿ ಒಂದು ರೀತಿಯಲ್ಲಿ ಸಿಬಿಐ ಅಥವಾ ಐಟಿ ಇಲಾಖೆ ಇದ್ದ ಹಾಗೆ. ಅವರು ಎಲ್ಲವನ್ನು ತಯಾರು ಮಾಡಿಕೊಂಡೆ ಮುಗಿ ಬೀಳುತ್ತಾರೆ. ಒಮ್ಮೆ ಸಿಕ್ಕಿ ಬಿದ್ದ ಮೇಲೆ ನಂತರ ಅವರಿಂದ ಪಾರಾಗಿ ಬಿಡುವುದು ಕಷ್ಟ. ಆದ್ದರಿಂದ ದಿನಕ್ಕೆ ಹತ್ತು ಲಕ್ಷ ಫೀಸ್ ತೆಗೆದುಕೊಳ್ಳುವ ವಕೀಲರನ್ನು ನೀವು ನೇಮಿಸಿದರೂ ಅದರಿಂದ ಪ್ರಯೋಜನವಾಗುವುದಿಲ್ಲ. ಇನ್ನು ನ್ಯಾಯಾಧೀಶರು ಕೂಡ ಬಹಳ ಕಠೋರವಾಗಿದ್ದರೆ ಅವರು ಕೂಡ ಯಾವುದೇ ಲಾಬಿಗೂ ಬಗ್ಗದೇ ತಮ್ಮ ಕರ್ತವ್ಯವನ್ನು ಪೂರೈಸಿಬಿಡುತ್ತಾರೆ. ಇದರಿಂದ ಜನಸಾಮಾನ್ಯರಿಗೆ ಹೋಗುವ ಸಂದೇಶ ಏನೆಂದರೆ ಇಲ್ಲಿ ಸಿಕ್ಕಿಬಿದ್ದರೆ ಪ್ರಭಾವಿಗಳಾದರೂ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಅಲ್ಲಿ ವಿದೇಶದಲ್ಲಿ ನಮ್ಮ ದೇಶಕ್ಕಿಂತ ಡ್ರಗ್ಸ್ ಕಾನೂನುಗಳು ಕಠಿಣವಾಗಿದೆ. ಖ್ಯಾತ ಹಾಲಿವುಡ್ ನಟ ಜಾಕಿಚೇನ್ ಮಗ ಇಂತಹುದೇ ಡ್ರಗ್ಸ್ ಕೇಸಿನಲ್ಲಿ ಸಿಲುಕಿ ಏಳೆಂಟು ವರ್ಷ ಜೈಲಿನಲ್ಲಿ ಇದ್ದ ಎಂದು ಉದಾಹರಣೆಗಳಿವೆ. ಅಲ್ಲಿ ಹೀರೋ ಅಥವಾ ರಾಜಕಾರಣಿ ಎಂದು ವಿಶೇಷವಾದ ಸವಲತ್ತು ಇಲ್ಲ. ತಪ್ಪು ಮಾಡಿದರೆ ಸೀದಾ ಅಂದರ್ ಮತ್ತು ನೋ ಬಾಹರ್. ಸದ್ಯ ಆರ್ಯನ್ ಖಾನ್ ಒಳಗೆ ಇದ್ದಾನೆ. ಕೆಲವು ಬಾಲಿವುಡ್ ನಟರು ಶಾರುಖ್ ಅನುಕಂಪ ಗಿಟ್ಟಿಸಲು ಮೊಸಳೆಯ ಕಣ್ಣೀರು ಸುರಿಸುತ್ತಿದ್ದಾರೆ. ಇದು ಅಗ್ನಿ ಪರೀಕ್ಷೆ, ಪಾರಾಗಿ ಬಾ ಎನ್ನುತ್ತಿದ್ದಾರೆ. ಅಷ್ಟಕ್ಕೂ ಆರ್ಯನ್ ಖಾನ್ ಗಡಿಯಲ್ಲಿ ನಿಂತು ಶತ್ರುಗಳೊಂದಿಗೆ ಹೋರಾಡುತ್ತಿಲ್ಲ. ಐಷಾರಾಮಿ ಹಡಗಿನಲ್ಲಿ ಮದ್ಯ, ಮಾನಿನಿಯರೊಂದಿಗೆ ಚೆಲ್ಲಾಟವಾಡುತ್ತಾ, ಅದು ಸಾಕಾಗದೇ ಡ್ರಗ್ಸ್ ತೆಗೆದುಕೊಳ್ಳುತ್ತಾ ಮೋಜು ಉಡಾಯಿಸುತ್ತಾ ಮಾಡಿದ ತಪ್ಪಿಗೆ ಒಳಗಿದ್ದಾನೆ. ಅದನ್ನು ಬಾಲಿವುಡ್ ನಕಲಿ ಹೀರೋಗಳು ಅರಿತುಕೊಳ್ಳಬೇಕು!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search