• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಹತ್ತು ಬಲ್ಬ್ 1 ದಿನ ಉರಿಸಲಾಗದವರು ಸ್ಮಾರ್ಟ್ ಸಿಟಿ ಮಾಡುವುದು ಹೌದಾ?

Hanumantha Kamath Posted On October 11, 2021
0


0
Shares
  • Share On Facebook
  • Tweet It

ನಾನು ಕಳೆದ ವಾರ ಮಂಗಳೂರಿನ ರಥಬೀದಿಯಲ್ಲಿ ದೇವಸ್ಥಾನದ ಎದುರಿಗೆ ಹಾಕಿರುವ ಸ್ಮಾರ್ಟ್ ಸಿಟಿಯ ಎರಡು ಲೈಟ್ ಕಂಬಗಳ ಬರೆದಿದ್ದೆ. ಲೈಟ್ ಕಂಬಗಳು ಕೇವಲ ಶೋಪೀಸ್ ಆಗಿ ಉಳಿದಿವೆ. ಅದು ರಾತ್ರಿ ಹೊತ್ತಿನಲ್ಲಿ ತಮ್ಮ ಜನ್ಮದ ಉದ್ದೇಶವನ್ನು ಪೂರೈಸಲಾರದೇ ಬಿಕ್ಕಿ ಬಿಕ್ಕಿ ಅಳುತ್ತಿವೆ. ಸ್ಮಾರ್ಟ್ ಸಿಟಿಯ ಸ್ಮಾರ್ಟ್ ಲೈಟ್ ಕಂಬಗಳ ಕಥೆಯನ್ನು ನಿಮಗೆ ಹೇಳಿದ್ದೆ. ಕೊನೆಗೂ ಒಂದಷ್ಟರಮಟ್ಟಿಗೆ ನಮ್ಮ ಜಾಗೃತ ಅಂಕಣದ ಶ್ರಮ ಫಲಪ್ರದವಾಗಿದೆ. ಆ ಎರಡು ಲೈಟ್ ಕಂಬಗಳಲ್ಲಿ ಹಾಕಿರುವ ತಲಾ ಐದು ಬಲ್ಬ್ ಗಳು ಉರಿದಿವೆ. ಆದರೆ ಎಷ್ಟು ಹೊತ್ತು? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಆ ಬಲ್ಬ್ ಉರಿದ ಕೆಲವು ಗಂಟೆಗಳ ತನಕ ಕಾಯಬೇಕಾಯಿತು. ಬೆಳಿಗ್ಗೆ ಹತ್ತು ಗಂಟೆಗೆ ಸ್ಮಾರ್ಟ್ ಸಿಟಿಯ ಕಾರ್ಮಿಕರು ಬಂದು ಆ ಎಲ್ಲಾ ಬಲ್ಬ್ ಗಳನ್ನು ಉರಿಯುವಂತೆ ಮಾಡಿದರು. ಒಮ್ಮೆ ಅಲ್ಲಿದ್ದ ಎಲ್ಲರಿಗೂ ಸಮಾಧಾನವಾಯಿತು. ಆದರೆ ರಾತ್ರಿಯಾಗುತ್ತಿದ್ದಂತೆ ಒಂದು ಲೈಟ್ ಕಂಬದ ಎರಡು ಮತ್ತು ಇನ್ನೊಂದು ಲೈಟ್ ಕಂಬದ ಒಂದು ಬಲ್ಬ್ ಉರಿಯುತ್ತಿಲ್ಲ. ಒಂದು ಸಾವಿರ ಕೋಟಿ ರೂಪಾಯಿ ವರ್ಷಕ್ಕೆ ಅನುದಾನ ಬರುವ ಸ್ಮಾರ್ಟ್ ಸಿಟಿಗೆ ಹತ್ತು ಬಲ್ಬ್ ಗಳನ್ನು ಉರಿಸಲು ಆಗುವುದಿಲ್ಲ ಎಂದರೆ ಇವರು ಇನ್ನೆಂತಹ ಅಭಿವೃದ್ಧಿಯನ್ನು ಮಾಡಬಹುದು. ಇವರಿಗೆ ಕನಿಷ್ಟ ಹತ್ತು ಬಲ್ಬ್ ಗಳನ್ನು ಉರಿಯುವಂತೆ ಮಾಡಲು ಆಗುವುದಿಲ್ಲ ಎಂದರೆ ಇನ್ನು ಮೋದಿಯವರ ಕನಸನ್ನು ಇವರು ನನಸು ಮಾಡುತ್ತಾರೆ ಎಂದು ನಂಬಿಕೆ ಇಡಲು ಆಗುತ್ತಾ? ಒಂದು ದಿನ ಕೂಡ ಸಂಪೂರ್ಣವಾಗಿ ಎಲ್ಲ ಹತ್ತು ಬಲ್ಬ್ ಗಳು ಉರಿದಿಲ್ಲ ಎಂದರೆ ಏನು ಕಥೆ? ಈ ಒಂದು ಉದಾಹರಣೆಯೇ ಸಾಕು. ಮಂಗಳೂರಿನ ಸ್ಮಾರ್ಟ್ ಸಿಟಿಯ ಕಥೆ ಎತ್ತ ಸಾಗುತ್ತಿದೆ ಎಂದು ಗೊತ್ತಾಗುತ್ತದೆ. ಬಲ್ಬ್ ಉರಿಯದೇ ಹೋದರೆ ನನಗೆ ಏನಂತೆ ಎಂದು ಬುದ್ಧಿವಂತರು ಹೇಳುತ್ತಾ ತಿರುಗಬಹುದು. ಆದರೆ ಅನ್ನ ಬೆಂದಿದೆಯಾ ಎಂದು ನೋಡಲು ಊಟವೇ ಮಾಡಬೇಕಿಲ್ಲ. ಒಂದು ಅಗಳು ಮುಟ್ಟಿ ನೋಡಿದರೂ ಸಾಕು. ಹಾಗೆ ಸ್ಮಾರ್ಟ್ ಸಿಟಿಯ ಅಭಿವೃದ್ಧಿ ಕಾರ್ಯಗಳು ಮಂಗಳೂರಿನಲ್ಲಿ ಹೇಗೆ ನಡೆಯುತ್ತಿವೆ ಎಂದು ನೋಡಲು ಇಡೀ ಮಂಗಳೂರು ಸುತ್ತಬೇಕಿಲ್ಲ. ಟೆಂಪಲ್ ಸ್ಕೇರ್ ನ ಎರಡು ಲೈಟ್ ಕಂಬಗಳನ್ನು ನೋಡಿದರೂ ಸಾಕು.

ಇನ್ನು ಸ್ಮಾರ್ಟ್ ಸಿಟಿ ಮಂಡಳಿಯಲ್ಲಿ ಒಬ್ಬರು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಐಎಎಸ್ ಶ್ರೇಣಿಯ ಅಧಿಕಾರಿ ಇರಬೇಕು. ಈಗ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಅದರಲ್ಲಿ ಇದ್ದ ಹಾಗೆ ಇದರಲ್ಲಿ ಒಬ್ಬರು ಎಂಡಿ ಐಎಎಸ್ ಆಫೀಸರ್ ಕಡ್ಡಾಯವಾಗಿ ಇರಲೇಬೇಕು. ಇಲ್ಲದೇ ಹೋದರೆ ಸ್ಮಾರ್ಟ್ ಸಿಟಿ ಮಂಡಳಿ ಹಳ್ಳ ಹಿಡಿಯುತ್ತದೆ. ಈಗ ಮಂಗಳೂರಿನಲ್ಲಿ ಆಗುತ್ತಿರುವುದೇ ಅದು. ಇಲ್ಲಿ ಐಎಎಸ್ ಬಿಡಿ, ಪೂರ್ಣಾವಧಿಯಾಗಿ ಒಬ್ಬ ಕೆಎಎಸ್ ಶ್ರೇಣಿಯ ಅಧಿಕಾರಿ ಕೂಡ ಇಲ್ಲ. ಹಾಗಾದರೆ ಹೇಗೆ ನಮ್ಮದು ಸ್ಮಾರ್ಟ್ ಸಿಟಿ ಆಗುವುದು. ಈಗ ಒಂದು ವರ್ಷದಿಂದ ಮೆಸ್ಕಾಂ ಇಲಾಖೆಯ ಅಧಿಕಾರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಇದರಿಂದ ಏನಾಗುತ್ತದೆ. ಅವರು ಸರಿಯಾಗಿ ಅಲ್ಲಿ ಕೂಡ ಕೆಲಸ ಮಾಡಲು ಆಗುವುದಿಲ್ಲ. ಇಲ್ಲಿ ಕೂಡ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಇದರಿಂದ ಆರು ತಿಂಗಳಲ್ಲಿ ಆಗುವ ಕೆಲಸ ಎರಡು ವರ್ಷ ಹಿಡಿಯುತ್ತದೆ. ಇದಕ್ಕೆ ಮಂಗಳೂರು ನಗರದ ಅನೇಕ ರಸ್ತೆಗಳು ಸಾಕ್ಷಿಯಾಗಿವೆ. ಈಗ ಎಂಜಿ ರಸ್ತೆಯನ್ನೇ ತೆಗೆದುಕೊಳ್ಳಿ. ಪಿವಿಎಸ್ ಬಿಲ್ಡಿಂಗ್ ನಿಂದ ಮುಂದೆ ಮಾನಸ ಟವರ್ಸ್ ಬಳಿ, ಡೊಂಗರಕೇರಿ ದೇವಸ್ಥಾನದ ಎದುರಿನ ರಸ್ತೆ, ಗಣಪತಿ ಹೈಸ್ಕೂಲ್ ರಸ್ತೆ ಹೀಗೆ ಅನೇಕ ರಸ್ತೆಗಳ ಅಭಿವೃದ್ಧಿ, ಒಳಚರಂಡಿ, ಕಾಂಕ್ರೀಟಿಕರಣ ಒಂದೂವರೆ ವರ್ಷದಿಂದ ಆಮೆಗತಿಯಲ್ಲಿ ನಡೆಯುತ್ತದೆ. ಜನ ಅಭಿವೃದ್ಧಿಗಾಗಿ ಒಂದಿಷ್ಟು ಸಹಕರಿಸಬೇಕು ಎಂದು ಜನಪ್ರತಿನಿಧಿಗಳು ಹೇಳುವುದು ಮತ್ತು ಅದು ಮಾಧ್ಯಮದಲ್ಲಿ ನಾವು ಓದುವುದು ನಡೆಯುತ್ತಲೇ ಇದೆ. ಕೆಲವು ದಿನ ಇದೆಲ್ಲ ಓಕೆ. ಜನ ಸಹಕರಿಸಬಹುದು ಅಥವಾ ಸಹಿಸಿಕೊಳ್ಳಬಹುದು. ಆದರೆ ಜನ ಮಾತನಾಡುವುದಿಲ್ಲ ಎಂದು ಜನಪ್ರತಿನಿಧಿಗಳು ಅದನ್ನೇ ಗ್ರಾಟೆಂಡ್ ಆಗಿ ತೆಗೆದುಕೊಳ್ಳಬಾರದು. ಯಾಕೆಂದರೆ ಈಗ ಮೌನವಾಗಿ ಸಹಿಸಿಕೊಂಡ ಮತದಾರ ಚುನಾವಣೆಯಲ್ಲಿ ಉತ್ತರ ಕೊಡುವಾಗ ಕಾಲ ಮಿಂಚಿ ಹೋಗುವ ಸಾಧ್ಯತೆ ಇದೆ. ಸ್ಮಾರ್ಟ್ ಸಿಟಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಒಂದೊಂದು ರಸ್ತೆಯ ಕಥೆ ಒಂದೊಂದು ರೀತಿಯಲ್ಲಿದೆ.
ಇನ್ನು ಯಾವುದೇ ಒಂದು ಪ್ರದೇಶದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವಾಗ ಅಲ್ಲಿ ರಸ್ತೆಯ ಮೇಲೆ ಉಬ್ಬು ರೀತಿಯಲ್ಲಿ ಎತ್ತರ ಬರಬಾರದು. ನೀವು ಒಂದು ರಸ್ತೆಯಲ್ಲಿ ಸಂಚರಿಸುವಾಗ ಅಲ್ಲಿ ಕೆಳಗೆ ಅಂಡರ್ ಪಾಸ್ ಇದೆ ಎನ್ನುವ ಅನುಭವ ಕೂಡ ನಿಮಗೆ ಬರಬಾರದು. ಅದು ಉತ್ತಮ ಕಾಮಗಾರಿಯ ಲಕ್ಷಣ. ಆದರೆ ನೀವು ಪುರಭವನದ ಬಳಿ ಆಗುತ್ತಿರುವ ಅಂಡರ್ ಪಾಸ್ ನೋಡುವಾಗ ಅಲ್ಲಿ ರಸ್ತೆ ಎತ್ತರವಾಗಿದೆ. ಆದರೆ ಇದನ್ನು ಯಾರೂ ನೋಡುತ್ತಿಲ್ಲ. ಸ್ಮಾರ್ಟ್ ಸಿಟಿಯ ವಿಷಯದಲ್ಲಿ ಏನೇ ಕಾಮಗಾರಿ ಆಗಲಿ, ಅದನ್ನು ಪರಿಶೀಲಿಸುವ, ಸರಿಯಾಗದೇ ಇದ್ದರೆ ಪ್ರಶ್ನಿಸುವ ಕರ್ತವ್ಯ ಪಾಲಿಕೆಗೆ ಇದೆ. ಆದರೆ ಸ್ಮಾರ್ಟ್ ಸಿಟಿಯ ಕಾಮಗಾರಿಯಲ್ಲಿ ಏನೇ ಲೋಪ ಆದರೂ ಪಾಲಿಕೆಯ ಇಂಜಿನಿಯರ್ ಗಳು ಅತ್ತ ಕಡೆ ತಲೆ ಹಾಕಿ ಕೂಡ ಮಲಗುವುದಿಲ್ಲ. ಯಾಕೆಂದರೆ ಅದರಲ್ಲಿ ಅವರಿಗೆ ಏನೂ ಕಮೀಷನ್ ಸಿಗುವುದಿಲ್ಲ. ಕಮೀಷನ್ ಸಿಗದ ಕಡೆ ಕೆಲಸ ಮಾಡಲು ಅಧಿಕಾರಿಗಳ ಮನಸ್ಸು ಒಪ್ಪುವುದಿಲ್ಲ. ಜನರಿಗೆ ಉಪಯೋಗವಾಗುತ್ತದೆ ಎಂದು ಕೆಲಸ ಮಾಡಲು ನಮ್ಮದೇನು ಸಮಾಜಸೇವಾ ಸಂಘಟನೆ ಅಲ್ಲ ಎಂದು ಅಧಿಕಾರಿಗಳು, ಪಾಲಿಕೆ ಇಂಜಿನಿಯರ್ಸ್ ಹೇಳುತ್ತಿರಬಹುದು. ಇದು ಗಮನಿಸಬೇಕಾದವರು ಬೇಗ ಗಮನಿಸಿದರೆ ಒಳ್ಳೆಯದು!

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search