• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಿಂಕಿ ನವಾಜ್ ಬಹಿರಂಗವಾಗಿ ಬೆದರಿಕೆ ಒಡ್ಡಿದರೂ ಪೊಲೀಸ್ ಇಲಾಖೆ ಮೌನ!?

Hanumantha Kamath Posted On October 18, 2021


  • Share On Facebook
  • Tweet It

ದೀಪಕ್ ರಾವ್ ಎನ್ನುವ ಭಾರತೀಯ ಜನತಾ ಪಾರ್ಟಿಯ ಯುವಕಾರ್ಯಕರ್ತನ ಹತ್ಯೆ ಆಗಿ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಆ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಮಂಗಳೂರಿನ ಕಾಟಿಪಳ್ಳದ ಪಿಂಕಿ ನವಾಜ್ ಪೊಲೀಸರ ಕೈಗೆ ಸಿಕ್ಕಿಬಿದ್ದು ತನಿಖೆ ಆಗಿ ಒಂದಿಷ್ಟು ಕಾಲ ಜೈಲಿನಲ್ಲಿದ್ದ. ಬಳಿಕ ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ಯಾವುದೇ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವವರಿಗೆ ಜಾಮೀನು ಭಾಗ್ಯ ಸಿಗುವುದೇ ಅವರ ಅದೃಷ್ಟ. ಹಾಗಿರುವಾಗ ಒಂದೊಮ್ಮೆ ಸಿಕ್ಕಿದರೂ ನ್ಯಾಯಾಲಯ ಕೆಲವು ಷರತ್ತುಗಳನ್ನು ಹಾಕಿಯೇ ಜಾಮೀನು ಕೊಟ್ಟಿರುತ್ತದೆ. ಅದರಲ್ಲಿ ಸಾಮಾನ್ಯ ಷರತ್ತು ಏನೆಂದರೆ ಮುಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಭಾಗಿಯಾದ ಯಾವುದೇ ಸಾಕ್ಷ್ಯಗಳು ಸಿಕ್ಕಿದ್ದಲ್ಲಿ ತಡ ಮಾಡದೇ ಜಾಮೀನು ರದ್ದು ಮಾಡಲಾಗುವುದು ಎಂದು ಹೇಳಲಾಗಿರುತ್ತದೆ. ಅದರೊಂದಿಗೆ ಈ ಪ್ರಕರಣದ ಸಾಕ್ಷಿಗಳನ್ನು ನಾಶ ಮಾಡಬಾರದು. ಸಾಕ್ಷಿಗಳನ್ನು ಬೆದರಿಸಬಾರದು ಎನ್ನುವುದು ಕೂಡ ಸೇರಿರುತ್ತದೆ. ಅದನ್ನು ಒಪ್ಪಿ ಆರೋಪಿ ಹೊರಗೆ ಬಂದಿರುತ್ತಾನೆ. ಆದರೆ ಕೆಲವರಿಗೆ ರಕ್ತದಲ್ಲಿಯೇ ಪೈಶಾಚಿಕ ಬುದ್ಧಿ ಇರುತ್ತದೆ. ಅವರು ಯಾವ ಕಾರಣಕ್ಕೂ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವರಲ್ಲ. ಅವರನ್ನು ಹೆಬಿಚುವಲ್ ಕ್ರಿಮಿನಲ್ ಎಂದೇ ಹೇಳಲಾಗುತ್ತದೆ. ಅವರು ಒಂದು ರೀತಿಯಲ್ಲಿ ರಾಕ್ಷಸರ ಪಳೆಯುಳಿಕೆ ಅಂತವರು.
ಈ ಪಿಂಕಿ ನವಾಝ್ ಎನ್ನುವ ರಾಕ್ಷಸ ಕೂಡ ಹೀಗೆ. ದೀಪಕ್ ರಾವ್ ಹತ್ಯೆಯಲ್ಲಿ ನೇರವಾಗಿ ಇತನೇ ಭಾಗಿಯಾಗಿದ್ದಾನೆ ಎಂದು ಸಾಕ್ಷ್ಯಾಧಾರಗಳೊಂದಿಗೆ ಸಾಬೀತಾದರೆ ಇತನಿಗೆ ಮುಂದೆ ಜೀವಾವಧಿ ಶಿಕ್ಷೆ ಆಗಲಿದೆ. ಆದರೆ ಈಗ ಜಾಮೀನಿನಲ್ಲಿ ಹೊರಗಿದ್ದರೂ ಅವನಿಗೆ ಈ ಪ್ರಕರಣದಲ್ಲಿ ತನಗೆ ಶಿಕ್ಷೆ ಆಗಬಹುದು ಎನ್ನುವ ಆತಂಕ ಶುರುವಾಗಿದೆ. ಸಾಕ್ಷಿಗಳು ನ್ಯಾಯಾಲಯದಲ್ಲಿ ಖಡಕ್ ಆಗಿ ನಿಂತರೆ ತಾನು ಶಾಶ್ವತವಾಗಿ ಜೈಲಿನಲ್ಲಿಯೇ ಕೊಳೆಯಬೇಕಾಗಬಹುದು ಎಂದು ಅವನಿಗೆ ಅನಿಸಿದೆ. ಅದಕ್ಕಾಗಿ ಆತ ತನ್ನ ವಿರುದ್ಧ ಸಾಕ್ಷಿ ಹೇಳುವವರನ್ನು ಹತ್ಯೆ ಮಾಡುವ ಸಂಚು ರೂಪಿಸಿರುವುದು ಗೊತ್ತಾಗಿದೆ. ಇದಕ್ಕಾಗಿ ಈಗ ಸಾಕ್ಷ್ಯ ಕೂಡ ದೊರೆತಿದೆ. ಈತ ವಾಟ್ಸಪ್ ಗ್ರೂಪ್ ಒಂದನ್ನು ರಚಿಸಿದ್ದು, ಅದರಲ್ಲಿ ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆಯವರನ್ನು ನಿಂದಿಸುತ್ತಿರುವುದು ಕೂಡ ಪತ್ತೆಯಾಗಿದೆ. ಲೋಕೇಶ್ ಬೊಳ್ಳಾಜೆ ಬಿಜೆಪಿಯಿಂದ ಗೆದ್ದಿರುವ ಕಾರ್ಪೋರೇಟರ್. ದೀಪಕ್ ರಾವ್ ಹತ್ಯೆಗೆ ನ್ಯಾಯ ಸಿಕ್ಕಿ ದೀಪಕ್ ರಾವ್ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಲೋಕೇಶ್ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇನ್ನು ದೀಪಕ್ ರಾವ್ ಹತ್ಯೆಯ ಪ್ರಕರಣದಲ್ಲಿ ಯಾರೆಲ್ಲಾ ಸಾಕ್ಷ್ಯ ನುಡಿದಿದ್ದಾರೆಯೋ ಅವರೆಲ್ಲರ ಹೆಸರನ್ನು ನೋಟ್ ಮಾಡಿ ಇಟ್ಟುಕೊಂಡಿರುವುದಾಗಿ ಈ ಪಿಂಕಿ ನವಾಝ್ ಹೇಳಿದ್ದಾನೆ. ಈತ ತನ್ನ ವಾಟ್ಸಪ್ ಗ್ರೂಪಿಗೆ ಕೆಲವು ಹಿಂದೂ ಸಂಘಟನೆಯ ಯುವಕರನ್ನು ಸೇರಿಸಿಕೊಂಡು ಅವರ ಮೈಂಡ್ ವಾಶ್ ಕೂಡ ಮಾಡಿರುವುದು ಕೂಡ ಈಗ ಪತ್ತೆಯಾಗಿದೆ. ರಾಜ್ಯದಲ್ಲಿಯೇ ರಿಂಗಣಿಸಿದ ಈ ಕೊಲೆ ಪ್ರಕರಣದ ಪ್ರಧಾನ ಆರೋಪಿ ಪಿಂಕಿ ನವಾಝ್ ಈಗ ಅತ್ಯಾಚಾರದಂತಹ ಪ್ರಕರಣವೊಂದರಲ್ಲಿ ಕೂಡ ಗುರುತಿಸಿಕೊಂಡಿದ್ದಾನೆ. ಈತ ಹೊರಗೆ ಇದ್ದಷ್ಟು ದಿನ ಸಾಮಾಜಿಕವಾಗಿ ಸಜ್ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈತ ಏನಾದರೂ ಕ್ರಿಮಿನಲ್ ಚಟುವಟಿಕೆ ನಡೆಸಿ ಯಾರಾದರೂ ಅಮಾಯಕರನ್ನು ಹತ್ಯೆ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ, ಸುವ್ಯವಸ್ಥೆ ಹಾಳಾಗುವುದು ನಿಶ್ಚಿತ. ಇದನ್ನು ತಪ್ಪಿಸಬೇಕಾದರೆ ಪೊಲೀಸರು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲೇಬೇಕು. ಏನು ಮಾಡಬಹುದು?
                                                                                                                        Deepak Rao
ಪಿಂಕಿ ನವಾಝ್ ನನ್ನು ಸುಮ್ಮನೆ ಬಿಟ್ಟ ಕಾರಣ ಆತ ಈ ಲೆವೆಲ್ಲಿಗೆ ಬೆಳೆದಿದ್ದಾನೆ ಎನ್ನುವುದು ನಿಜ. ದೀಪಕ್ ರಾವ್ ಸ್ಮರಣಾರ್ಥ ಬಸ್ ತಂಗುದಾಣ ಕೃಷ್ಣಾಪುರದಲ್ಲಿ ನಿರ್ಮಾಣವಾಗುವಾಗಲೂ ಇದೇ ಪಿಂಕಿ ನವಾಜ್ ಹಾಗೂ ಆತನ ಸಹಚರರು ಸಾಕಷ್ಟು ಅಡೆತಡಗಳನ್ನು ಒಡ್ಡಿದ್ದರು. ಉದ್ಘಾಟನೆ ಮಾಡುವ ಹಿಂದಿನ ದಿನವೂ ಅದನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನಗಳನ್ನು ಪಿಂಕಿ ನವಾಝ್ ಮಾಡಿದ್ದಾನೆ. ಈತನನ್ನು ಹೆಡೆಮುರಿ ಕಟ್ಟಿ ಒಳಗೆ ಹಾಕುವ ಜವಾಬ್ದಾರಿ ಪೊಲೀಸ್ ಅಧಿಕಾರಿಗಳ ಮೇಲಿದೆ. ಈತ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ, ಬೆದರಿಕೆ ಹಾಕಿರುವ ಆಡಿಯೋವನ್ನು ಸರಕಾರಿ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರೆ ಸಾಕು. ನ್ಯಾಯಾಲಯ ಅದನ್ನು ಪರಿಶೀಲಿಸಿ ತಕ್ಷಣ ಬೇಲ್ ರದ್ದು ಮಾಡಿಬಿಡುತ್ತದೆ. ನಂತರ ಈತನ ಉಪಟಳ ಅಮಾಯಕರಿಗೆ ಇರುವುದಿಲ್ಲ. ಇಂತಹ ವಿಷಯದಲ್ಲಿ ಪೊಲೀಸರು ತಡ ಮಾಡಬಾರದು. ಏಕೆಂದರೆ ಪಿಂಕಿ ನವಾಝ್ ವಿರೋಧಿ ಯಾರೇ ಆಗಲಿ, ಅಂತವರ ಪ್ರಾಣ ಅಮೂಲ್ಯ. ಅದನ್ನು ಕಳೆದುಹೋದ ಬಳಿಕ ಪೊಲೀಸರು ಯಾವ ತನಿಖೆ, ವಿಚಾರಣೆ ಮಾಡಿದರೂ ಹೋದ ಜೀವ ಹಿಂದಿರುಗಿ ಬರುವುದಿಲ್ಲ. ಅದರ ಬದಲು ಈಗಲೇ ಪೊಲೀಸ್ ಕಮೀಷನರ್ ಫೀಲ್ಡಿಗೆ ಇಳಿದರೆ ಮುಗಿಯಿತು. ಆಗುತ್ತಾ?
Video:  https://www.facebook.com/TulunaduNews/videos/1264600307310918
  • Share On Facebook
  • Tweet It


- Advertisement -


Trending Now
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Hanumantha Kamath March 24, 2023
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Hanumantha Kamath March 23, 2023
Leave A Reply

  • Recent Posts

    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
  • Popular Posts

    • 1
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 2
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 3
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 4
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 5
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search