• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಮೀರ್ ಸುಪರ್ದಿಯಲ್ಲಿ ಆರ್ಯನ್ ಬದಲಾಗುತ್ತಾನೆ ಎನ್ನುವುದು ದಿಟ!

Hanumantha Kamath Posted On October 24, 2021


  • Share On Facebook
  • Tweet It

ಯಾರಿಗೆಲ್ಲ ಶಾರುಖ್ ಖಾನ್ ಎನ್ನುವ ಖ್ಯಾತ ಬಾಲಿವುಡ್ ನಟನನ್ನು ಮೆಚ್ಚಿಸಬೇಕು ಎನ್ನುವ ಹಪಾಹಪಿ ಇದೆಯೋ ಅವರೆಲ್ಲ ವಿವಿಧ ದಾರಿಗಳನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ಮಹಾರಾಷ್ಟ್ರದ ಲಗಾಡಿ ಘಟಬಂಧನ್ ಸರಕಾರದ ಸಚಿವ ನವಾಬ್ ಮಲೀಕ್ ಆಯ್ದುಕೊಂಡಿರುವ ದಾರಿ ಎನ್ ಸಿಬಿಯ ಮುಂಬೈ ಚೀಫ್ ಸಮೀರ್ ವಾಂಖೆಡೆಯವರನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸುತ್ತೇನೆ ಎನ್ನುವ ಶಪಥ. ಒಂದು ವೇಳೆ ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಿದ್ದರೆ ನವಾಬ್ ಇದರಲ್ಲಿ ಯಶಸ್ವಿ ಆಗುತ್ತಿದ್ದರೋ ಏನೋ. ಆದರೆ ಭಾರತೀಯ ಜನತಾ ಪಾರ್ಟಿಯ ಸರಕಾರ ಇರುವುದರಿಂದ ಇದು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಎನ್ ಸಿಬಿ ಸ್ವತಂತ್ರ ಸಂಸ್ಥೆ. ಅದು ಮಹಾರಾಷ್ಟ್ರ ಸರಕಾರದ ಅಧೀನದಲ್ಲಿ ಇರುತ್ತಿದ್ದರೆ ಶಾರುಖ್ ಖಾನ್ ಮಗನನ್ನು ಜೈಲಿನಲ್ಲಿ ಮೂರು ವಾರ ಬಂಧನದಲ್ಲಿ ಇಡುವುದು ಬಿಡಿ, ಮುಟ್ಟುವುದಕ್ಕೂ ಆಗುತ್ತಿರಲಿಲ್ಲ. ಆದರೆ ಗ್ರಹಚಾರ, ರಾಜ್ಯದಲ್ಲಿ ಯಾವ ಸರಕಾರ ಇದ್ದರೂ ತನ್ನನ್ನು ಯಾರೂ ಟಚ್ ಕೂಡ ಮಾಡಲಾಗುವುದಿಲ್ಲ ಎಂದು ಆರ್ಯನ್ ಅಂದುಕೊಂಡಿದ್ದನೇನೋ.

ಆದರೆ ಅವನ ಗ್ರಹಚಾರ ಕೆಟ್ಟು ಹೋಗಿತ್ತು. ಯಾವುದಕ್ಕೂ ಅಂಜದ ಸಮೀರ್ ಮುಂಬೈ ಎನ್ ಸಿಬಿ ಕಚೇರಿಯಲ್ಲಿ ಕುಳಿತು ಆಗಿತ್ತು. ಬಾಲಿವುಡ್ ಅನ್ನು ಒಂದು ಕಡೆಯಿಂದ ಕ್ಲೀನ್ ಮಾಡುತ್ತಾ ಬರುತ್ತೇನೆ ಎಂದು ಆ ಮನುಷ್ಯ ಮನಸ್ಸಿನಲ್ಲಿ ನಿರ್ಧರಿಸಿ ಆಗಿತ್ತು. ಆದರೆ ತಾವು ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ ಗ್ರಾಹಕರಂತೆ ಎಂಟ್ರಿ ಕೊಟ್ಟು ದಾಳಿ ಮಾಡುವಾಗ ಎದುರಿಗೆ ಸಾಕ್ಷಾತ್ ಶಾರುಖ್ ಮಗ ಹುಡುಗಿಯರೊಂದಿಗೆ ಲಲ್ಲೆ ಹೊಡೆಯುತ್ತಾ ಮಸ್ತಿ ಮಾಡುತ್ತಿರುತ್ತಾನೆ ಎನ್ನುವ ಐಡಿಯಾ ಎನ್ ಸಿಬಿ ಅಧಿಕಾರಿಗಳಿಗೆ ಇರಲೇ ಇಲ್ಲ. ಭಾರಿ ಕುಳಗಳು ಇದ್ದೇ ಇರುತ್ತವೆ ಎನ್ನುವ ಗ್ಯಾರಂಟಿ ಇತ್ತಾದರೂ ಹೀಗೆ ನಟ್ಟನಡು ರಾತ್ರಿಯಲ್ಲಿ ದಾರಿ ತಪ್ಪಿದ ಯುವಕ, ಯುವತಿಯರ ನಡುವೆ ವಾರಗಟ್ಟಲೆ ಟಿವಿಯಲ್ಲಿ ಸುದ್ದಿಯಾಗಬಲ್ಲ ಒಬ್ಬ ಯುವಕ ಇರುವ ಸಾಧ್ಯತೆ ಅವರಿಗೆ ಗೊತ್ತಿರಲಿಲ್ಲ. ಆದರೆ ಹಿಡಿದಾಗಿತ್ತು. ಹೊರಗೆ ವಿಷಯ ಬಹಿರಂಗವೂ ಆಗಿತ್ತು. ಸಮೀರ್ ಸ್ಥಾನದಲ್ಲಿ ಬೇರೆ ಯಾವುದೇ ಅಧಿಕಾರಿ ಇದ್ದಿದ್ದರೆ ಹೇಗಾಗುತ್ತಿತ್ತೋ ಗೊತ್ತಿಲ್ಲ. ಆದರೆ ಸಮೀರ್ ಮೌನ ಕ್ರಾಂತಿಯ ಸೇನಾನಿ. 2011 ರಲ್ಲಿ ವಿಮಾನ ನಿಲ್ದಾಣದಲ್ಲಿ ಮೀಕಾ ಸಿಂಗ್ ಬಳಿ ವಿದೇಶಿ ಕರೆನ್ಸಿ ವಿಷಯದಲ್ಲಿ ವಿವಾದ ಆಗುವಾಗಲೂ ಅದರ ನೇತೃತ್ವ ವಹಿಸಿದ್ದು ಇದೇ ಸಮೀರ್ ವಾಂಖೆಡೆ. ಅಷ್ಟೇ ಅಲ್ಲ, ವಿಶ್ವಕಪ್ ಅನ್ನು ಭಾರತಕ್ಕೆ ತರುವಾಗ ಅದಕ್ಕೆ ಸಂಬಂಧಪಟ್ಟ ಪಾವತಿಯನ್ನು ಮಾಡಿಯೇ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಟ್ಟಿದ್ದು ಇದೇ ಸಮೀರ್. ಈ ವ್ಯಕ್ತಿಯ ಕೈಗೆ ಒಮ್ಮೆ ಸಿಕ್ಕಿಬಿದ್ದರೆ ಅದು ಮೊಸಳೆಯ ಹಿಡಿತದಂತೆ ಬಲಿಷ್ಟ. ಇಲ್ಲದಿದ್ದರೆ ಶಾರುಖ್ ಮಗನನ್ನು ಮೂರು ವಾರಕ್ಕೂ ಮಿಕ್ಕಿ ಜೈಲಿನಲ್ಲಿ ಇಡಲು ಒಂದು ಗುಂಡಿಗೆ ಸಾಕಾಗುತ್ತಾ?

ಅದೇನೆ ಇರಲಿ, ಶಾರುಖ್ ಮಾತ್ರ ಮಾನಸಿಕವಾಗಿ ಸಂಪೂರ್ಣ ಕುಸಿದು ಹೋಗಿರುವುದು ನಿಜ. ಪ್ರಧಾನಿ ಕರೆದಿದ್ದ ಬಾಲಿವುಡ್ ಕಲಾವಿದರ ಔತಣ ಕೂಟದಲ್ಲಿ ಮೊದಲ ಸಾಲಿನಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದ ಅಹಂಕಾರಿ ಒಬ್ಬ ಮೊನ್ನೆ ಮುಂಬೈ ಜೈಲಿನಿಂದ ಹೊರಗೆ ಬರುವಾಗ ಅಲ್ಲಿ ಕುಳಿತಿದ್ದ ಯಕಶ್ಚಿತ್ ಕೈದಿಗಳ ಕುಟುಂಬದವರಿಗೆ ಕೈ ಮುಗಿದು ಹೊರಗೆ ಬಂದದ್ದೇ ಸಾಕ್ಷಿ ಎನ್ನುತ್ತಾರೆ ಮಾಧ್ಯಮ ಮಂದಿ. ಇಲ್ಲದಿದ್ದರೆ ಪಾಪದವರನ್ನು ಎಡಗಣ್ಣಿನಿಂದಲೂ ನೋಡದ ಖಾನ್ ಈಗ ಮಗನ ಪರಿಸ್ಥಿತಿ ಕಂಡು ಎದೆ ಒಡೆದಿರುವ ಪರಿಸ್ಥಿತಿಗೆ ಬಂದಿದ್ದಾರೆ ಎಂದರೆ ಅದಕ್ಕೆ ಕಾರಣ ಆತ ಮಕ್ಕಳೆಡೆಗೆ ತೋರಿಸಿದ ದಿವ್ಯ ನಿರ್ಲಕ್ಷ್ಯವೋ ಅಥವಾ ಅತಿಯಾದ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಚಾಚಾರವೋ ಅವರೇ ಹೇಳಬೇಕು. ಆದರೆ ನವಾಬ್ ಮಲೀಕ್ ಎನ್ನುವ ಸಚಿವನದ್ದು ಮಾತ್ರ ಅತೀಯಾಯಿತು. ಈತ ಸಮೀರ್ ಮೇಲೆ ನಿತ್ಯ ಒಂದಲ್ಲ ಒಂದು ಆರೋಪಗಳನ್ನು ಹಾಕುತ್ತಲೇ ಬರುತ್ತಿದ್ದಾನೆ. ಸಿನೆಮಾ ತಾರೆಯರು ಮಾಲ್ಡೀವ್ಸ್ ನಲ್ಲಿ ಇದ್ದಾಗ ಸಮೀರ್ ಕೂಡ ಅಲ್ಲಿ ಇದ್ದರು ಎಂದು ನವಾಬ್ ಮಲೀಕ್ ಆರೋಪಿಸಿದ್ದಾರೆ. ಮಾಲ್ಡೀವ್ಸ್ ಗೆ ಸಿನೆಮಾದವರೇ ಹೋಗಬೇಕು ಎನ್ನುವ ನಿಯಮ ಇಲ್ಲ. ಇನ್ನು ಮಾಲ್ಡೀವ್ಸ್ ಎನ್ನುವ ವಿದೇಶಿ ಪ್ರವಾಸಿ ತಾಣ ಪಾಕಿಸ್ತಾನದಲ್ಲಿ ಇಲ್ಲ. ಅಲ್ಲಿ ಯಾವುದೇ ಸರಕಾರಿ ಅಧಿಕಾರಿ ಕಾಲಿಡಬಾರದು ಎಂದೇನಿಲ್ಲ.

ಇನ್ನು ಸಮೀರ್ ಹಡಗಿನಲ್ಲಿದ್ದ ಬಿಜೆಪಿಯವರನ್ನು ಈ ಕೇಸಿನಲ್ಲಿ ಬಂಧಿಸಿಲ್ಲ ಎಂದು ಮಲೀಕ್ ವಾದ. ಒಂದು ವೇಳೆ ಹಾಗೆ ಆಗಿದ್ದಲ್ಲಿ ಅದು ನ್ಯಾಯಾಲಯದಲ್ಲಿ ಪ್ರಕರಣವಾಗಿ ದಾಖಲಾಗಲಿ. ಆದರೆ ಡ್ರಗ್ಸ್ ಕೇಸಿನಲ್ಲಿ ತಮ್ಮ ಅಳಿಯನನ್ನು ಬಂಧಿಸಿದ್ದರು ಎನ್ನುವ ಒಂದೇ ಕಾರಣಕ್ಕೆ ಸಮೀರ್ ವಿರುದ್ಧ ಮಲೀಕ್ ಮುಗಿಬಿದ್ದಿರುವುದು ಕೂಡ ಹೌದು. ಮಲೀಕ್ ಅಳಿಯನಿಗೆ ಸದ್ಯ ಜಾಮೀನು ಸಿಕ್ಕಿದೆ. ಆತನ ಬಳಿ ಸಿಕ್ಕಿದ್ದು ಡ್ರಗ್ಸ್ ಅಲ್ಲ ಯಾವುದೋ ಬೇರೆ ಗಿಡಮೂಲಿಕೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾದ ಕಾರಣ ಬೇಲ್ ಸಿಕ್ಕಿದೆ. ಹಾಗಂತ ಸಮೀರ್ ತಮಗೆ ಬೇಕಾದವರನ್ನು ಬಂಧಿಸಬಾರದು, ವಿಚಾರಣೆಗೆ ಕರೆಯಬಾರದು ಎಂದು ಮಹಾರಾಷ್ಟ್ರದ ಸರಕಾರ ಅಂದುಕೊಳ್ಳಬಾರದು. ಮಲೀಕ್ ಆರೋಪ ಮಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿರುವ ಸಮೀರ್ ಮಾಧ್ಯಮದವರು ಮೊನ್ನೆ ಪ್ರಶ್ನೆ ಕೇಳಿದಾಗ ಹೇಳಿದಿಷ್ಟು ” ಅವರು ಸಚಿವರು, ರಾಜಕೀಯದಲ್ಲಿರುವವರು, ನಾವು ಸರಕಾರಿ ಹುದ್ದೆಯಲ್ಲಿರುವವರು. ಅವರು ಮಾತನಾಡುವ ಶೈಲಿಯಲ್ಲಿ ನಾವು ಮಾತನಾಡಲು ಆಗುವುದಿಲ್ಲ” ಈ ಒಂದು ಮಾತು ಸಾಕು. ಸಮೀರ್ ಎಂತಹ ತೂಕದ ಮನುಷ್ಯ ಎಂದು ಗೊತ್ತಾಗುತ್ತದೆ. ಆದರೆ ಒಂದಂತೂ ನಿಜ. ಅವರ ಸುಪರ್ದಿಯಲ್ಲಿ ಆರ್ಯನ್ ಆದಷ್ಟು ಸುಧಾರಿಸಲಿ. ಆತನಿಂದ ಮುಂದೆ ಯಾವುದೇ ಅಪರಾಧಿಕ ಕೃತ್ಯ ಆಗದೇ ಇರಲಿ. ತಂದೆ ಮಾಡಿಟ್ಟ ಕೋಟಿಗಟ್ಟಲೆ ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿ ದೇಶದ ಒಳಿತಿಗೆ, ಬಡಜನರ ಏಳಿಗೆಗೆ ಬಳಕೆಯಾಗಲಿ ಎಂದು ಹಾರೈಸೋಣ, ಏನಂತೀರಾ!

  • Share On Facebook
  • Tweet It


- Advertisement -


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Hanumantha Kamath February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Hanumantha Kamath January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search