ಉದ್ಭವ್ ನೀವು ಬಾಳಾ ಠಾಕ್ರೆಗೆ ಹುಟ್ಟಿದ್ದಾಗಿದ್ದಲ್ಲಿ ಸಮೀರ್ ಬೆಂಬಲಕ್ಕೆ ನಿಲ್ಲಿ!!

ಸಮೀರ್ ವಾಂಖೆಡೆ ಒಬ್ಬರು ಅಪ್ಪಟ ಮರಾಠಿ ನಾಗರಿಕ. ಈಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವುದು ಕೂಡ ಶಿವಸೇನೆ ನೇತೃತ್ವದ ಸರಕಾರ. ಶಿವಸೇನೆ ಜನ್ಮ ತಾಳಿದ್ದೇ ಮರಾಠ ಅಸ್ಮಿತೆಯ ಮೇಲೆ. ಮರಾಠರ ಧ್ವನಿಯಾಗಿ ನಾವು ಬೆಳೆಯದಿದ್ದರೆ ನಮಗೆ ಮಹಾರಾಷ್ಟ್ರದಲ್ಲಿ ಉಳಿಗಾಲವಿಲ್ಲ ಎನ್ನುವುದನ್ನು ಶಿವಸೇನೆಯ ಸರ್ವೋಚ್ಚ ನಾಯಕ ಬಾಳಾ ಸಾಹೇಬ್ ಠಾಕ್ರೆಯವರು ಅರಿತಿದ್ದರು. ಅವರು ಹೋದ ಬಂದ ಕಡೆ ಮರಾಠಾ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಸತ್ಯ, ಧರ್ಮ, ಪ್ರಾಮಾಣಿಕತೆಯಿಂದ ನಡೆಯಿರಿ, ಯಾರ ತಪ್ಪಿದ್ದರೂ ಬಿಡಬೇಡಿ ಎಂದು ಮರಾಠಾ ಅಧಿಕಾರಿಗಳಿಗೆ ಸಲಹೆ ನೀಡುತ್ತಿದ್ದರು. ಯಾವತ್ತೂ ಮುಖ್ಯಮಂತ್ರಿ ಆಗದಿದ್ದರೂ ಅವರಿಗೆ ಮರಾಠ ಚಕ್ರವರ್ತಿ ಎಂಬ ಹೆಸರಿತ್ತು. ಅಂತಹ ಅನಭೀಷೇಕ್ತ ಮರಾಠಾ ದೊರೆಯ ವಂಶದಲ್ಲಿಯೇ ಉದ್ಭವ್ ಠಾಕ್ರೆ ಹುಟ್ಟಿರುವುದೇ ಆಗಿದ್ದಲ್ಲಿ ಅವರು ಯಾವುದೇ ಕಾರಣಕ್ಕೂ ಸಮೀರ್ ವಿರುದ್ಧ ಮಸಲತ್ತು ನಡೆಸಬಾರದು. ಅಮ್ಚಿ ಮುಂಬೈ, ಅಮ್ಚಿ ಮಹಾರಾಷ್ಟ್ರ, ಅಮ್ಚಿ ಮರಾಠಿ ಎಂದು ಘೋಷಣೆ ಕೂಗುತ್ತಿದ್ದ ಇದೇ ಶಿವಸೇನೆ ಈಗ ಚೌಚೌ ಸರಕಾರದಲ್ಲಿ ಎಲ್ಲಿಯಾದರೂ ಎನ್ ಸಿಪಿ ಮತ್ತು ಕಾಂಗ್ರೆಸ್ ಗೆ ಮಣಿದು ಸಮೀರ್ ವಿರುದ್ಧ ಷಡ್ಯಂತ್ರ ನಡೆಸಿದ್ದೇ ಆದ್ದಲ್ಲಿ ಅದು ಮರಾಠ ನೆಲಕ್ಕೆ ಮಾಡುವ ದ್ರೋಹ.
ಈಗ ಪರಿಸ್ಥಿತಿ ಎಲ್ಲಿಯವರೆಗೆ ಬಂದು ತಲುಪಿದೆ ಎಂದರೆ ಸಮೀರ್ ಅವರ ವೃದ್ಧ ತಂದೆ ಹಾಗೂ ಸಹೋದರಿಗೆ ಮಾನಸಿಕ ಕಿರುಕುಳ ಕೊಡುವ ಪ್ರಯತ್ನ ನಡೆಯುತ್ತಿದೆ. ಸಮೀರ್ ಪತ್ನಿ ಕ್ರಾಂತಿ ಖ್ಯಾತ ಮರಾಠಿ ಸಿನೆಮಾ ನಟಿ. ತಮ್ಮ ಪತಿಯ ವಿಷಯದಲ್ಲಿ ಟ್ವಿಟರ್ ನಲ್ಲಿ ಏನು ಬರೆದಿದ್ದಾರೆ ಎಂದರೆ ನಾನು ಮತ್ತು ಸಮೀರ್ ಅಪ್ಪಟ ಹಿಂದೂಗಳಾಗಿದ್ದೇವೆ. ಆದರೂ ನಾವು ಎಲ್ಲಾ ಧರ್ಮದವರನ್ನು ಗೌರವ, ಆದರದಿಂದ ಕಾಣುತ್ತೇವೆ. ನಾವು ಬೇರೆ ಧರ್ಮಕ್ಕೆ ಮತಾಂತರವಾಗಿಲ್ಲ. ಸಮೀರ್ ತಂದೆ ಕೂಡ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ತನ್ನ ದಿವಂಗತ ಅತ್ತೆ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರು ಎಂದು ಬರೆದಿದ್ದಾರೆ. ಸದ್ಯ ಸಮೀರ್ ಹೆತ್ತವರ ಧರ್ಮದ ಬಗ್ಗೆನೂ ಕೆಲವರು ಟೀಕಿಸುತ್ತಿರುವುದರಿಂದ ಕೀರ್ತಿ ಹೀಗೆ ಬರೆದಿದ್ದಾರೆ. ಸಮೀರ್ ಮೊದಲ ಮದುವೆಯ ಬಗ್ಗೆನೂ ಬರೆದಿರುವ ಕ್ರಾಂತಿ ಅದು 2016 ರಲ್ಲಿ ವಿಶೇಷ ವಿವಾಹ ಕಾಯ್ದೆಯಲ್ಲಿ ವಿಚ್ಚೇದನಗೊಂಡ ಬಳಿಕ ನಾವು 2017 ರಲ್ಲಿ ಹಿಂದೂ ಧರ್ಮದ ಪ್ರಕಾರವೇ ಮದುವೆಯಾದೆವು ಎಂದು ಬರೆದಿದ್ದಾರೆ. ಅದರ ಫೋಟೋಗಳನ್ನು ಕೂಡ ಅಪಲೋಡ್ ಮಾಡಿದ್ದಾರೆ. ಈಗ ಸಮೀರ್ ವಿರುದ್ಧ ಎಷ್ಟು ವ್ಯವಸ್ಥಿತವಾಗಿ ಷಡ್ಯಂತ್ರ ಹೂಡಲಾಗುತ್ತಿದೆ ಎಂದರೆ ಅವರನ್ನು ಜೈಲಿಗೆ ಹೇಗಾದರೂ ಮಾಡಿ ಕಳುಹಿಸಲೇಬೇಕು ಎಂದು ವಿವಿಧ ಪ್ರಯತ್ನ ಮಾಡಲಾಗುತ್ತಿದೆ. ಅದರೆ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ಸರಕಾರಕ್ಕೆ ಮಹಾರಾಷ್ಟ್ರ ಸರಕಾರ ಇಂತಹುದನ್ನೆಲ್ಲ ಮಾಡಿಯೇ ಮಾಡುತ್ತದೆ ಎನ್ನುವ ನಿರೀಕ್ಷೆ ಮೊದಲೇ ಇತ್ತು.
ಯಾಕೆಂದರೆ ಸಮೀರ್ ಕೈ ಹಾಕಿರುವ ಹುತ್ತವೇ ಅಂತಹುದು. ಅಲ್ಲಿ ನಕ್ಷತ್ರವೇ ಹೊಳೆಯುತ್ತಿರುತ್ತವೆ. ಅದರಲ್ಲಿ ಶಾರುಖ್ ಖಾನ್ ತನ್ನದೇ ಪ್ರಬಲ ಹಿಡಿತ ಹೊಂದಿರುತ್ತಾನೆ. ಅವನ ಮಗನನ್ನು ಹಿಡಿದರೆ ಅರ್ಧ ಬಾಲಿವುಡ್ ಡ್ರಗ್ಸ್ ಅನ್ನು ಸದ್ಯದ ಮಟ್ಟಿಗೆ ದೂರ ಇಡುತ್ತದೆ. ಯಾಕೆಂದರೆ ಶಾರುಖ್ ಮಗನನ್ನು ಮೂರು ವಾರ ಒಳಗೆ ಹಾಕಬಲ್ಲ ಅಧಿಕಾರಿಯೊಬ್ಬ ತಮ್ಮನ್ನು ಅಷ್ಟು ಸುಲಭವಾಗಿ ಬಿಡಲಾರ ಎಂದು ಪ್ರತಿ ಡ್ರಗ್ಗಿಸ್ಟ್ ಗೂ ಗೊತ್ತು. ಅನನ್ಯ ಪಾಂಡೆಯನ್ನು ವಿಚಾರಣೆ ಕರೆದ ಸಮೀರ್ ಆಕೆ ತಡವಾಗಿ ಬಂದದ್ದಕ್ಕೆ ಇದೇನು ನಿಮ್ಮ ಸಿನೆಮಾ ಸೆಟ್ ಅಲ್ಲ. ನನ್ನ ಆಫೀಸ್, ಹೇಳಿದ ಸಮಯಕ್ಕೆ ಇರಬೇಕು ಎಂದು ಮಾತಿನಲ್ಲಿಯೇ ಝಾಡಿಸಿದ್ದಾರೆ. ಈಗ ಸಮೀರ್ ವಿರುದ್ಧ ಹೂಡಲಾಗುತ್ತಿರುವ ಬಾಣ ಏನೆಂದರೆ ಅವರು ಆರ್ಯನ್ ಖಾನ್ ಬಂಧನವಾಗದಂತೆ ನೋಡಿಕೊಳ್ಳಲು 25 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದರು ಎಂದು ಹೇಳಲಾಗುತ್ತಿದೆ.
ಯಾವುದೇ ಅಧಿಕಾರಿ ಸತ್ಯ ಹರಿಶ್ಚಂದ್ರನ ಸಾಕ್ಷಾತ್ ಕಸಿನ್ ತರಹವೇ ಇರುತ್ತಾರೆ ಎಂದು ನಾನು ಹೇಳುವುದಿಲ್ಲ. ಅಂತಹ ಅಧಿಕಾರಿಗಳನ್ನು ಮಸೂರ ಹಿಡಿದು ಹುಡುಕುವ ಕಾಲ ಇದು. ಆದರೆ ಸಮೀರ್ ಹಿನ್ನಲೆ ನೋಡಿದರೆ ಅವರು ಮಹಾರಾಷ್ಟ್ರ ಸರಕಾರಕ್ಕೆ ವಂಚನೆಯಾಗುತ್ತಿದ್ದ ಕೋಟ್ಯಾಂತರ ರೂಪಾಯಿ ಹಣವನ್ನು ತಂದು ಖಜಾನೆ ತುಂಬಿಸಿದ್ದಾರೆ ಎನ್ನುವ ವಿಷಯ ಅಲ್ಲಿನ ಕಸ್ಟಮ್ಸ್ ಆಫೀಸರ್ಸ್ ಹೇಳುತ್ತಾರೆ. ವಿಶ್ವಕಪ್ ಭಾರತಕ್ಕೆ ತರುವಾಗ ಅದರಲ್ಲಿ ನಿಗದಿಗಿಂತ ಹೆಚ್ಚು ಬಂಗಾರ ಬಳಸಲಾಗಿದೆ ಎನ್ನುವ ಕಾರಣಕ್ಕೆ ಕಸ್ಟಮ್ಸ್ ಸುಂಕ ವಸೂಲಿ ಮಾಡಿಯೇ ಹೊರಗೆ ಬಿಟ್ಟಿದ್ದರು ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ. ಇಂತಹ ಅನೇಕ ಕಥೆಗಳು ಸಮೀರ್ ಹೆಸರಿನಲ್ಲಿವೆ. ಆದರೆ ಈಗ ಅವರು ಒಬ್ಬ ಮುಸ್ಲಿಂ ಹೀರೋ ಮಗನ ಕೊರಳ ಪಟ್ಟಿಗೆ ಕೈ ಹಾಕಿದ ಎಂದ ಕೂಡಲೇ ಕಾಂಗ್ರೆಸ್, ಎನ್ ಸಿಪಿಗಳು ತಮ್ಮ ಒಡಹುಟ್ಟಿದವರ ಕೊರಳಿಗೆ ಕೈ ಹಾಕಿದ್ದಾರೆ ಎಂದು ನಟ್ಟನಡುರಾತ್ರಿಯಲ್ಲಿ ಮಕ್ಕಳು ಎದ್ದು ಹಾಸಿಗೆಯಲ್ಲಿ ಅಳುತ್ತಾ ಕೂರುತ್ತವಲ್ಲ ಹಾಗೆ ವರ್ತಿಸುತ್ತವೆ. ಅದನ್ನು ಶಿವಸೇನೆ ಮಾಡಬಾರದು. ಯಾಕೆಂದರೆ ಉದ್ಭವ್ ಹುಲಿಯ ಹೊಟ್ಟೆಯಲ್ಲಿ ಹುಟ್ಟಿದವರು. ಇಂತಹ ಸಮಯದಲ್ಲಿ ಬಾಳಾ ಠಾಕ್ರೆ ಇದ್ದಿದ್ದರೆ ಯಾರ ಪರವಾಗಿ ನಿಲ್ಲುತ್ತಿದ್ದರು ಎಂದು ಉದ್ಭವ್ ಠಾಕ್ರೆಗೆ ಗೊತ್ತಿದೆ. ಆದರೆ ರಾಜಕಾರಣದಲ್ಲಿ ಕುರ್ಚಿಯ ಆಸೆಗೆ ಅವರು ಏನು ಮಾಡುತ್ತಾರೆ ಎನ್ನುವುದನ್ನು ಮರಾಠಿ ನಾಗರಿಕ ದೂರದಿಂದ ನೋಡುತ್ತಿದ್ದಾನೆ. ಉದ್ಭವ್ ತಂದೆಯ ಅಂತರಾಳದ ಧ್ವನಿಗೆ ಓಗೂಡುತ್ತಾರಾ ಅಥವಾ ಅಧಿಕಾರದ ಮಿರ್ಚಿ ಅಷ್ಟು ಸಿಹಿಯಾ?
Leave A Reply