• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಜ್ರದೇಹಿ ಶ್ರೀಗಳಿಗೆ ಹಿಂದೂ ಸಮಾಜದ ಪರವಾಗಿ ಸಾಷ್ಟಾಂಗ ನಮಸ್ಕಾರ!!

Hanumantha Kamath Posted On November 24, 2021


  • Share On Facebook
  • Tweet It

ಇತ್ತೀಚೆಗೆ ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಶರಣ್ ಪಂಪ್ವೆಲ್ ಮತ್ತು ಸಂಘಟನೆಯ ಕೆಲವು ಯುವಕರು ಒಂದು ಮನೆಗೆ ಭೇಟಿ ನೀಡಿದ್ದರು. ವಿಷಯ ಏನೆಂದರೆ ಆ ಮನೆಯ ಯುವತಿ ಹಿಂದೂ. ಆಕೆ ಮುಸ್ಲಿಂ ಯುವಕನೊಬ್ಬನನ್ನು ಮದುವೆಯಾಗಲಿದ್ದಳು. ಆಕೆಯ ಮನೆಗೆ ತೆರಳಿದ ಸ್ವಾಮೀಜಿ ಹಾಗೂ ಸಂಘಟನೆಯವರು ಅವಳ ಮನವೊಲಿಸಿ ಮುಸ್ಲಿಂ ಯುವಕನನ್ನು ಮದುವೆಯಾಗದಂತೆ ಮಾಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಅವರ ಶ್ರಮ ಯಶಸ್ವಿಯಾಯಿತಾ ಅಥವಾ ಇಲ್ಲವಾ ಎನ್ನುವುದು ಬರುವ ದಿನಗಳಲ್ಲಿ ಗೊತ್ತಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಮೀಜಿಯವರು ಮಾಡಿದ ಈ ಕಾರ್ಯ ಶ್ಲಾಘನೀಯವಾಗಿರುವುದು. ಸಂತರೊಬ್ಬರು ನಿಜವಾಗಿ ಮಾಡಬೇಕಾದ ಕಾರ್ಯವನ್ನೇ ವಜ್ರದೇಹಿ ಶ್ರೀಗಳು ಮಾಡಿದ್ದಾರೆ. ಅಷ್ಟಕ್ಕೂ ಒಬ್ಬ ವ್ಯಕ್ತಿ ಸನ್ಯಾಸಿಯಾಗುವುದು ಯಾಕೆ? ಸರ್ವಸಂಗ ಪರಿತ್ಯಾಗಿಯಾಗಿ ಇಡೀ ಜೀವನವನ್ನು ಕೇವಲ ಮತ್ತು ಕೇವಲ ತಮ್ಮ ಧರ್ಮದ ರಕ್ಷಣೆಗಾಗಿ ಸ್ವಾಮಿಗಳು ಅರ್ಪಿಸಿಬಿಟ್ಟಿರುತ್ತಾರೆ. ಯಾವಾಗ ತಮ್ಮ ಧರ್ಮದವರು ಹಾದಿ ತಪ್ಪುವ ಸಾಧ್ಯತೆಗಳಾದಾಗ ಧರ್ಮ ರಕ್ಷಣೆಗಾಗಿ ಸ್ವಾಮಿಗಳು ಹೀಗೆ ಫೀಲ್ಡಿಗೆ ಇಳಿಯಬೇಕಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಏನಾಗುತ್ತಿದೆ? ಸ್ವಾಮೀಗಳು ತಮ್ಮ ಜಾತಿಯ ರಾಜಕಾರಣಿಗೆ ವಿಧಾನಸಭೆಗೋ, ವಿಧಾನಪರಿಷತ್ತಿಗೋ, ರಾಜ್ಯಸಭೆಗೋ, ಲೋಕಸಭೆಗೋ ಟಿಕೆಟ್ ಕೊಡಿಸಲು ಓಡಾಡುತ್ತಿರುತ್ತಾರೆ.

ಹಲವು ನಾಯಕರಿಗೆ ಫೋನ್ ಮಾಡಿ ವಶೀಲಿಬಾಜಿ ಮಾಡುತ್ತಾರೆ. ಇನ್ನು ಬಹಿರಂಗ ವೇದಿಕೆಯಲ್ಲಿ ತಮ್ಮ ಜಾತಿಯ ಶಾಸಕನಿಗೆ ಸಚಿವ ಸ್ಥಾನ ಕೊಡಿ, ಮುಖ್ಯಮಂತ್ರಿ ಮಾಡಿ ಎಂದು ಹೇಳಿಕೆ ಕೊಡುತ್ತಿರುತ್ತಾರೆ. ನಂತರ ಉನ್ನತ ರಾಜಕೀಯ ಮುಖಂಡರ ಮನೆ, ಕಚೇರಿಗೆ ಹೋಗಿ ಅಲ್ಲಿ ಶಿಫಾರಸ್ಸು ಮಾಡುವ ಸ್ವಾಮೀಜಿಗಳು ಇದ್ದಾರೆ. ಮೀಸಲಾತಿಗಾಗಿ ಪ್ರತಿಭಟನೆ, ನಂತರ ಸಿಎಂ ಮನೆಗೆ ಭೇಟಿ, ಮಾಧ್ಯಮಗಳಿಗೆ ಸಂದರ್ಶನ ಹೀಗೆ ಆಗಾಗ ಪ್ರಚಾರದಲ್ಲಿರುವ ಸ್ವಾಮಿಗಳು ಇದ್ದಾರೆ. ಕೆಲವು ಸ್ವಾಮಿಗಳು ಎನಿಸಿಕೊಂಡವರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೂ ಇದೆ. ಕೆಲವು ಸ್ವಾಮಿಗಳು ಬ್ಲ್ಯಾಕ್ ಮ್ಯಾಜಿಕ್ ನಲ್ಲಿ ತೊಡಗಿಸಿಕೊಂಡದ್ದೂ ಇದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಮೀಜಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಧರ್ಮ ರಕ್ಷಣೆಗಾಗಿ ನಿಜವಾಗಿ ಏನು ಮಾಡಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ನಿಜಕ್ಕೂ ಹಿಂದೂ ಸಮಾಜಕ್ಕೆ ಈಗ ಆಗಬೇಕಾಗಿರುವುದು ಅದೇ. ಒಂದು ಕಡೆ ಮತಾಂತರದ ದಾಳಿ, ಮತ್ತೊಂದೆಡೆ ಲವ್ ಜಿಹಾದ್ ಇದರ ನಡುವೆ ಹಿಂದೂ ಸಮಾಜದ ಯುವತಿಯರು ಬೇರೆ ಕಡೆ ಹೋಗದಂತೆ ಅವರಿಗೆ ತಿಳಿ ಹೇಳಬೇಕಾದ ಕೆಲಸ ಕೇಸರಿ ಸಂಘಟನೆಗಳದ್ದು. ಆದರೆ ಕೇವಲ ಸಂಘಟನೆಯವರು ಹೋದರೆ ಅದಕ್ಕೆ ಒಂದಕ್ಕೊಂದು ಬಣ್ಣ ಬಳಿದು ತೊಂದರೆಯಾಗುತ್ತದೆ, ಅನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಮತ್ತೊಂದು ವಿವಾದ ಆಗುವ ಸಾಧ್ಯತೆ ಕೂಡ ಇತ್ತು. ಇನ್ನು ಸ್ವಾಮೀಜಿಯವರು ಕೂಡ ಒಬ್ಬರೇ ಹೋಗಲು ಸಾಧ್ಯವಿಲ್ಲ. ಅವರನ್ನು ಗೌರವಪೂರ್ವಕವಾಗಿ ಕರೆದುಕೊಂಡು ಹೋಗಬೇಕಾಗುತ್ತದೆ. ಅದನ್ನು ವಿಶ್ವ ಹಿಂದೂ ಪರಿಷತ್ ನವರು ಮಾಡಿದ್ದಾರೆ.

ಪ್ರೇಮ ಕುರುಡು ಎನ್ನುತ್ತಾರೆ. ಆದರೆ ಹಿಂದೂ ಯುವತಿಯರು ಮುಸ್ಲಿಂ ಯುವಕರನ್ನು ಮದುವೆಯಾಗಿ ಪಡಬಾರದ ಸಂಕಷ್ಟವನ್ನೆಲ್ಲ ಪಟ್ಟಿರುವುದನ್ನು ನಾವು ನೋಡಿದ್ದೇವೆ. ಮೊದಲಿಗೆ ಹೇಗಿದ್ದ ಹಿಂದೂ ಯುವತಿಯರು, ಮುಸ್ಲಿಂ ಕುಟುಂಬದಲ್ಲಿ ಕಾಲಿಟ್ಟ ಬಳಿಕ ಏನೆಲ್ಲ ಅನುಭವಿಸಿ ನರಳಿದರು ಎನ್ನುವುದನ್ನು ಈ ಸಮಾಜ ನೋಡಿದೆ. ಆದರೆ ಅನೇಕ ಹಿಂದೂ ಯುವತಿಯರಿಗೆ ಬುದ್ಧಿ ಬಂದಿಲ್ಲ. ಅವರು ಮತ್ತೊಮ್ಮೆ ಬ್ಲೈಂಡ್ ಆಗಿ ಯಾರೋ ತೋಡಿದ ಬಾವಿಯಲ್ಲಿ ಬೀಳುತ್ತಾರೆ. ಇತ್ತೀಚೆಗೆ ಕೇರಳದ ಹಿಂದೂ ಯುವತಿಯೊಬ್ಬಳು ಸುಳ್ಯದ ಮುಸ್ಲಿಂ ಯುವಕನನ್ನು ಮದುವೆಯಾಗಿ ನಂತರ ಆತನಿಗೆ ಕಿರಿಕಿರಿ ಅನುಭವಿಸಿ, ಕಷ್ಟಪಟ್ಟು, ಅವನಿಂದಲೂ ದೂರವಾಗಿ ಕೊನೆಗೆ ಹಿಂದೂ ಧರ್ಮಕ್ಕೆ ಮರುಮತಾಂತರ ಆದ್ರೆ ಮಾತ್ರ ಮನೆಗೆ ಬಾ ಎಂದು ಪೋಷಕರು ಹೇಳಿದಾಗ ಅತ್ತ ಹೋಗದೆ, ಇತ್ತ ಉಳಿಯಲು ಆಗದೇ ಅತಂತ್ರ ಸ್ಥಿತಿಗೆ ತಲುಪಿದ್ದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ. ಗಂಡ ಬರುತ್ತಾನೆ ಎಂದು ಅವನ ಅಂಗಡಿಯ ಹೊರಗೆ ಕಾದು ಕುಳಿತ ಆ ಹೆಣ್ಣುಮಗಳು ದಿನಗಟ್ಟಲೆ ಗಂಡ ಎನಿಸಿಕೊಂಡವ ಬರದೇ ಇದ್ದಾಗ ಪೊಲೀಸರ ಮೊರೆ ಹೋಗಿದ್ದಳು. ಆದರೆ ಯಾವ ಪ್ರಯೋಜನ ಕೂಡ ಆಗಲಿಲ್ಲ. ಹಾಗಂತ ಹಿಂದೂ ಯುವತಿ, ಮುಸ್ಲಿಂ ಯುವಕನನ್ನು ಮದುವೆಯಾದರೆ ಸುಖವಾಗಿ ಇರಲ್ವಾ? ಎಂದು ಕೆಲವು ಯುವತಿಯರು ಶಾರುಖ್ ಖಾನ್ ಮತ್ತು ಗೌರಿ ಖಾನ್ ದಾಂಪತ್ಯವನ್ನು ತೋರಿಸುತ್ತಾರೆ. ಆದರೆ ಅಂತಹುದು ಎಷ್ಟಿದೆ. ಹೆಚ್ಚಿನವರು ಅಮೀರ್ ಖಾನ್ ರೇಂಜಿನವರೇ ಇರುತ್ತಾರೆ. ಮದುವೆಯಾದ ಕೂಡಲೇ ಮತಾಂತರ ಆಗು ಎನ್ನುತ್ತಾರೆ. ನಂತರ ಕುರಾನ್ ಓದು, ಅದು ಮಾಡು, ಇದು ಮಾಡು ಎನ್ನುತ್ತಾರೆ. ಆರಂಭದಲ್ಲಿ ಪ್ರೇಮದ ಅಮಲು ಇರುತ್ತದೆ. ಅದು ಯಾವಾಗ ಇಳಿಯುತ್ತೋ ವಾಸ್ತವ ಅರ್ಥವಾಗುತ್ತದೆ. ಆತ ಅಷ್ಟರಲ್ಲಿ ಇನ್ನೊಂದು ಮದುವೆ ಆದರೆ ನಂತರ ನರಕ ಶುರು. ಅಷ್ಟಕ್ಕೂ ಸ್ವಾಮಿಗಳು ಇದೆಲ್ಲ ಯಾಕೆ ಮಾಡುತ್ತಾರೆ, ಅವರಿಗೆ ಇದರಿಂದ ವೈಯಕ್ತಿಕವಾಗಿ ಏನೂ ಲಾಭವಿಲ್ಲ. ಮುಂದೆ ಅಂತಹ ಮದುವೆ ಆಗುವ ಹಿಂದೂ ಹೆಣ್ಣುಮಕ್ಕಳು ಸಂಕಷ್ಟಪಡದಿರಲಿ ಎನ್ನುವ ಕಾರಣಕ್ಕೆ ಅವರಿಗೆ ಬುದ್ಧಿವಾದ ಹೇಳುತ್ತಾರೆ. ಕೆಲವರು ಕೇಳುತ್ತಾರೆ. ಕೇಳದಿದ್ದರೆ ಅವರ ಗ್ರಹಚಾರ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search