ಕುಕ್ಕರ್ ನ ಮೊದಲ ಸೀಟಿ ಉಪ್ಪಿನಂಗಡಿಯಲ್ಲಿ ಹೊಡೆದಿದೆ!!
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದವರು ಹೊಸ ಕಾನೂನು ಜಾರಿಗೆ ತರುವ ಸಿದ್ಧತೆಯಲ್ಲಿದ್ದಾರೆ. ಅದೇನೆಂದರೆ ನಮ್ಮ ಸಂಘಟನೆಯ ಯಾವ ಮುಖಂಡ ಅಥವಾ ಕಾರ್ಯಕರ್ತ ಯಾರಿಗೆ ಹೊಡೆದರೂ, ಹಲ್ಲೆ ಮಾಡಿದರೂ ಅವರನ್ನು ಪೊಲೀಸರು ಕರೆದು ವಿಚಾರಣೆ ಮಾಡಬಾರದು ಎನ್ನುವ ಹೊಸ ನಿಯಮ. ಒಂದು ವೇಳೆ ಪಿಎಫ್ ಐ ಮನಸ್ಥಿತಿಯ ಯಾವುದೇ ಸಂಘಟನೆ ಅಥವಾ ಇವರ ರಾಜಕೀಯ ಪಕ್ಷ ಎಸ್ ಡಿಪಿಐ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಈ ನಿಮಯವನ್ನು ಅವರೇ ತರುತ್ತಾರೆ. ಅದೇನೆಂದರೆ ನಾವು ಯಾರಿಗೆ ಬೇಕಾದರೂ ಹೊಡೆಯುತ್ತೇವೆ, ಪೊಲೀಸರು ವಿಚಾರಣೆ ಮಾಡಬಾರದು. ಅದರ ಒಂದು ಸಣ್ಣ ಝಲಕ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೊರಗೆ ತೋರಿಸಿದ್ದಾರೆ. ಪ್ರತಿಭಟನೆಯ ಹಿನ್ನಲೆ ನಿಮಗೆ ಗೊತ್ತಿಲ್ಲದಿದ್ದರೆ ಮೊದಲು ಅದನ್ನು ನೋಡೋಣ. ಡಿಸೆಂಬರ್ 6 ರಂದು ಮೀನು ಮಾರಾಟ ಮಾಡುತ್ತಿದ್ದ ಕೆಲವು ಹಿಂದೂಗಳ ಮೇಲೆ ಅನ್ಯ ಧರ್ಮಿಗಳು ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಬಂದ ದೂರಿನ ಪ್ರಕಾರ ಹಲ್ಲೆಯನ್ನು ಪಿಎಫ್ ಐನವರೇ ಮಾಡಿದ್ದಾರೆ ಎನ್ನುವ ದೂರು ಮತ್ತು ಸಂಶಯ ಬಂದಿದೆ. ಯಾವುದೇ ಒಂದು ಪ್ರಕರಣದಲ್ಲಿ ದೂರು ಬಂದಾಗ ಪ್ರತಿವಾದಿಗಳು ಯಾರ ಮೇಲೆ ಅನುಮಾನ ಪಡುತ್ತಾರೋ ಅವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಲೇಬೇಕಾಗುತ್ತದೆ. ಅದು ನಡೆದುಬಂದ ಸಂಪ್ರದಾಯ.
ಹಾಗೆ ವಿಚಾರಣೆ ಮಾಡುವ ಸ್ವಾತಂತ್ರ್ಯ ಪೊಲೀಸ್ ಇಲಾಖೆಗೆ ಇದೆ. ಅದನ್ನು ಉಪ್ಪಿನಂಗಡಿ ಪೊಲೀಸರು ಮೊನ್ನೆ ಕೂಡ ಮಾಡಿದ್ದಾರೆ. ವಿಚಾರಣೆ ಕರೆದಿರುವುದು ಎಲ್ಲಾ ಕಡೆ ವೈರಲ್ ಆಗಿದೆ. ಒಂದು ವೇಳೆ ವಿಚಾರಣೆ ಸ್ಪಲ್ಪ ಧೀರ್ಘವಾದರೆ ಏನು ಮಾಡಬೇಕು ಎಂದು ವಾಟ್ಸಪ್ ನಲ್ಲಿ ಚರ್ಚೆ ಕೂಡ ಆಗಿದೆ. ಪೊಲೀಸರನ್ನು ಬಿಡಬಾರದು ಎಂದು ವಾಟ್ಸಪ್ ನಲ್ಲಿ ಅಭಿಪ್ರಾಯ ವ್ಯಕ್ತವಾಗಿರುವುದರ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಒಂದು ರಣತಂತ್ರ ಸ್ಟೇಶನ್ನಿಗೆ ಪಿಎಫ್ ಐ ಮುಖಂಡರನ್ನು ಕರೆದಾಗಲೇ ತಯಾರಾಗಿದೆ. ಅಂದರೆ ವಿಚಾರಣೆಗೆ ಕರೆದದ್ದೇ ತಪ್ಪು ಎನ್ನುವಂತೆ ಪಿಎಫ್ ಐ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದಾರೆ. ಅದರ ನಂತರ ಅಲ್ಲಿಯೇ ಸಂಜೆ ಮತ್ತು ಇಳಿಸಂಜೆ ರಸ್ತೆಯನ್ನು ಬ್ಲಾಕ್ ಮಾಡಿ ನಮಾಜು ಮಾಡಿದ್ದಾರೆ. ರಾತ್ರಿಯಾದರೂ ಅಲ್ಲಿಂದ ಕದಲದೆ ಇದ್ದಾಗ ಪೊಲೀಸರು ನಯವಾಗಿ ಎಚ್ಚರಿಸಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಪೊಲೀಸ್ ಅಧಿಕಾರಿ ಅವರಿಗೆ ಚಾಕುವಿನಿಂದ ಇರಿಯಲಾಗಿದೆ. ಅದರ ನಂತರ ಪೊಲೀಸರು ಲಾಠಿ ಬೀಸಿದ್ದಾರೆ. ಅಲ್ಲಿಗೆ ಗಲಾಟೆ ಜೋರಾಗಿ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದೆ. ನಂತರ ಉಪ್ಪಿನಂಗಡಿ ಠಾಣೆಯ ವ್ಯಾಪ್ತಿಯಲ್ಲಿ 144 ಸೆಕ್ಷನ್ ಹಾಕಲಾಗಿದೆ. ಇದಿಷ್ಟು ನಡೆದ ವಿಷಯ.
ಇದರೊಂದಿಗೆ ಇನ್ನಷ್ಟು ಘಟನೆಗಳು ನಡೆದು ಹೋಯಿತು. ಪೊಲೀಸರು ಲಾಠಿ ಬೀಸಿದಾಗ ಅಲ್ಲಿ ಕೆಲವರಿಗೆ ತಾಗಿದೆ ಹೌದು. ಆದರೆ ಆಸ್ಪತ್ರೆಯಲ್ಲಿ ಮಲಗಿದವರು ತಾವು ಅಮಾಯಕರಂತೆ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ತಾವು ಪ್ರತಿಭಟನೆಯಲ್ಲಿ ಭಾಗವಹಿಸಲೇ ಇಲ್ಲ. ಎಲ್ಲಿಯೋ ಹೋಗುತ್ತಿದ್ದ ತಮ್ಮನ್ನು ಹುಡುಕಿ ಹೊಡೆಯಲಾಗಿದೆ ಎಂದು ಹೇಳಿದ್ದಾರೆ. ಆದರೆ ವಿಡಿಯೋದಲ್ಲಿ ನೋಡುವಾಗ ಹಾಗೆ ಹೇಳಿಕೆ ಕೊಟ್ಟವರು ಪ್ರತಿಭಟನೆಯಲ್ಲಿ ನೇರಾನೇರ ಭಾಗಿಯಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರತಿಭಟನೆಯಲ್ಲಿ ಭಾಗಿಯಾಗಿ ಘೋಷಣೆ ಕೂಗುತ್ತಿದ್ದವರೇ ಪೆಟ್ಟು ತಿಂದಿರುವುದು ಕಾಣುತ್ತದೆ. ಆದರೂ ನಾವು ಅಮಾಯಕರು ಎಂದು ಹೇಳುತ್ತಿದ್ದಾರೆ. ಇನ್ನು ಒಬ್ಬನ ತಲೆಗೆ ಆಳವಾದ ಗಾಯ ಆಗಿರುವುದು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅದನ್ನು ಪೊಲೀಸರು ಹೊಡೆದಿರುವುದು ಎಂದು ಪ್ರತಿಭಟನಾಕಾರ ಹೇಳುತ್ತಿದ್ದಾನೆ. ಆದರೆ ಪೊಲೀಸರ ಬಳಿ ತಲವಾರು ಎಲ್ಲಿಂದ ಬರಲು ಸಾಧ್ಯ, ಅದು ಏನಿದ್ದರೂ ಈ ಪಿಎಫ್ ಐ ಕಾರ್ಯಕರ್ತರೇ ತಂದಿರುತ್ತಾರೆ. ಒಟ್ಟಿನಲ್ಲಿ ಇದು ಪಿಎಫ್ ಐಗಳ ರೋಷ ಈ ಪ್ರಮಾಣದಲ್ಲಿ ಹೊರಗೆ ಬಂದಿರುವುದು ನೋಡಿದಾಗ ಅವರು ತಮ್ಮ ಹಿರಿಯ ಸಹೋದರ ಓವೈಸಿ ಹೇಳಿದ್ದನ್ನು ಇಲ್ಲಿ ಅನುಸರಿಸಲು ಹೋಗುತ್ತಿದ್ದಾರೆ. ಪೊಲೀಸರು ಈ ದೇಶದಲ್ಲಿ 15 ನಿಮಿಷ ಸುಮ್ಮನಿದ್ದರೆ ನಾವು ಏನು ಮಾಡುತ್ತೇವೆ ಎನ್ನುವುದನ್ನು ತೋರಿಸುತ್ತೇವೆ ಎಂದು ಓವೈಸಿ ಹೇಳಿದ್ದರು. ಪಿಎಫ್ ಐ ಕೂಡ ಹಾಗೆ. ಮೀನು ಮಾರಾಟ ಮಾಡುವ ಕ್ಷೇತ್ರಕ್ಕೆ ಹಿಂದೂಗಳು ಸಕ್ರಿಯವಾಗಿ ಇಳಿದರು ಎಂದು ಗೊತ್ತಾಗುತ್ತಿದ್ದಂತೆ ಅವರ ಬಳಿ ಮುಗಿಬಿದ್ದಿದ್ದಾರೆ. ಮೀನು ಮಾರಾಟ ಮಾಡುವ ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ಈ ಮೂಲಕ ಬೇರೆ ಹಿಂದೂಗಳು ಮೀನು ಮಾರಾಟ ಮಾಡುವುದನ್ನು ತಡೆಯುವ ಸಂಚು ರೂಪಿಸಿದ್ದಾರೆ. ಈ ಯುದ್ಧ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಕುಕ್ಕರ್ ನಲ್ಲಿ ಇಟ್ಟ ದಾಲ್ ತರಹ ಆಗಿದೆ. ಉಪ್ಪಿನಂಗಡಿಯಲ್ಲಿ ಕೇಳಿಸಿರುವುದು ಮೊದಲ ಸೀಟಿ. ಅದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು. ಮೊದಲೇ ದಕ್ಷಿಣ ಕನ್ನಡ ಜಿಲ್ಲೆ ಅನೈತಿಕ ಪೊಲೀಸ್ ಗಿರಿಗೆ ಹೆಸರಾಗಿದೆ. ಇದು ಕೂಡ ಅದರ ಮತ್ತೊಂದು ರೂಪವೇ ಆಗಿದೆ. ಈಗಾಗಲೇ ನಾವು ಕೊರೊನಾ ಕೊಟ್ಟ ಹೊಡೆತದಿಂದ ಬಳಲಿದ್ದೇವೆ. ವ್ಯಾಪಾರಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅದರ ನಡುವೆ ಏನಾದರೂ ಗಲಾಟೆ ನಡೆದು ಅದು ಕೋಮುಗಲಭೆಗೆ ತಿರುಗಿಸಿ ಮತ್ತೆ ಕಫ್ಯರ್ೂ, ಬಂದ್ ಆದರೆ ಬಳಲುವುದು ಯಾರು!!
Leave A Reply