ಲವ್ ಜಿಹಾದ್ ವಿರುದ್ಧದ ಕಾಯಿದೆ ಜಾರಿಗೆ ತರುವುದು ಯಾವಾಗ!!
Posted On December 23, 2021

ಲವ್ ಜಿಹಾದ್ ಎನ್ನುವ ಶಬ್ದವನ್ನು ಪುಷ್ಟೀಕರಿಸುವಂತೆ ರಾಷ್ಟ್ರದ ಮೊತ್ತಮೊದಲ ಕೇಸು ಅಧಿಕೃತವಾಗಿ ದಾಖಲಾಗಿದೆ. ಉತ್ತರ ಪ್ರದೇಶದ ಖಾನಪುರದ ಜಾವೇದ್ ಎನ್ನುವ ವ್ಯಕ್ತಿ ಮುನ್ನ ಎನ್ನುವ ಹೆಸರನ್ನು ಇಟ್ಟು ಹಿಂದೂ ಯುವತಿಯೊಂದಿಗೆ ಪ್ರೇಮದಾಟ ಶುರು ಮಾಡಿದ್ದ. ಈ ರೀತಿಯ ಮೋಡಸ್ ಆಪರೆಂಡಿ (ಮೋಡ್ ಆಫ್ ಆಪರೇಶನ್) ಹೊಸದೇನಲ್ಲ. ಇತ್ತೀಚಿನ ವರ್ಷಗಳಲ್ಲಿ ಹಿಂದೂ ಯುವತಿಯರು ಮುಸ್ಲಿಂ ಯುವಕರಿಂದ ಅಂತರವನ್ನು ಕಾದುಕೊಂಡು ಬರುತ್ತಿರುವುದರಿಂದ ಲವ್ ಜಿಹಾದ್ ನಲ್ಲಿ ತೊಡಗಿಕೊಂಡಿರುವ ಮುಸ್ಲಿಂ ಯುವಕರು ತಮ್ಮನ್ನು ಹಿಂದೂ ಎಂದು ತೋರ್ಪಡಿಸಲು ಹಿಂದೂ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಯುವಕ-ಯುವತಿಯರು ತಾರುಣ್ಯಕ್ಕೆ ಬರುತ್ತಿದ್ದಂತೆ ಅವರ ಮನಸ್ಸು ಚಿಟ್ಟೆಯಂತೆ ಹಾರುತ್ತಿರುತ್ತದೆ. ಅಂತಹ ಯುವತಿಯರ ಮೇಲೆ ಕಣ್ಣೀಡುವ ಈ ಜಿಹಾದಿಗಳು ಅವರೊಂದಿಗೆ ತಮ್ಮನ್ನು ತಾವು ಹಿಂದೂ ಹೆಸರಿನಿಂದ ಪರಿಚಯಿಸಿಕೊಳ್ಳುತ್ತಾರೆ. ಅದು ಅಂಗಡಿಯಲ್ಲಿ ಮೊಬೈಲಿಗೆ ಕರೆನ್ಸಿ ಚಾರ್ಜ್ ಹಾಕುವುದರಿಂದ ಹಿಡಿದು ಮಾರ್ಕೆಟ್ ನಲ್ಲಿ ತರಕಾರಿ ಮಾರುವ ತನಕ, ಚಪ್ಪಲಿ ಮಾರುವವನಿಂದ ಹಿಡಿದು ಮೀನು ಮಾರುವ ತನಕ ಪರಿಚಯವಾಗುವ ಹಿಂದೂ ಯುವತಿಯರ ಫೋನ್ ನಂಬರ್ ಅನ್ನು ಹೇಗಾದರೂ ಪಡೆದುಕೊಂಡು ಅದಕ್ಕೆ ಹಾಯ್ ನಿಂದ ಶುರು ಮಾಡಿ ಪ್ರೀತಿ, ಪ್ರೇಮದ ಬಲೆಯಲ್ಲಿ ಬೀಳುವ ತನಕ ಈ ಹಿಂದೂ ಹೆಸರಿನ ಮುಸ್ಲಿಂ ಪುಂಡರ ಪ್ರಯತ್ನ ನಡೆಯುತ್ತಲೇ ಇರುತ್ತದೆ.
ಒಂದು ವೇಳೆ ಮಿಕ ಬಲೆಗೆ ಬಿತ್ತು ಎಂದ ಕೂಡಲೇ ನಂತರ ಅದನ್ನು ಹೇಗೆ ವಶ ಮಾಡಬೇಕು ಎನ್ನುವುದು ಅವರಿಗೆ ಹೇಳಿಕೊಡಬೇಕಾಗಿಲ್ಲ. ಮೊಬೈಲಿಗೆ ಸಂದೇಶ ಹಾಕುವುದರಿಂದ ಹಿಡಿದು ಅವಳನ್ನು ಮಂಚಕ್ಕೆ ಎಳೆಯುವ ತನಕ ನಿತ್ಯ ಪ್ರಯತ್ನ ಮಾಡಿ ಯಶಸ್ವಿಯಾಗುವ ಯುವಕ ಕೊನೆಗೆ ಅವಳಿಗೆ ಹೇಳುವ ಅಂತಿಮ ಆದೇಶವೇ ಮತಾಂತರವಾಗು. ಆಕೆ ಕೊನೆಗೆ ಏನೂ ಉಪಾಯ ಇಲ್ಲದೆ ಮತಾಂತರ ಆದರೆ ನಂತರ ಮದುವೆ ಎನ್ನುವ ಹೆಸರಿನಲ್ಲಿ ಆಕೆಯ ಮೇಲೆ ನಿತ್ಯ ಅತ್ಯಾಚಾರ ನಡೆದು ಕೊನೆಗೆ ಯಾರಿಗಾದರೂ ಮಾರಿ ಅಥವಾ ಮೋರಿಯ ಹೆಣದಂತೆ ಮಾಡುವ ಜಾಲವನ್ನು ಲವ್ ಜಿಹಾದ್ ಎಂದು ಕರೆದರೆ ಅದರಲ್ಲಿ ತಪ್ಪಿಲ್ಲ. ಯಾಕೆಂದರೆ ಹಾಗೆ ಮಾಡಿದರೆ ತಮಗೆ ಸ್ವರ್ಗದಲ್ಲಿ ಅಪ್ಸರೆಯರು ಸಿಗುತ್ತಾರೆ ಎಂದು ಬ್ರೇನ್ ವಾಶ್ ಮಾಡಿಕೊಂಡು ಫೀಲ್ಡಿಗೆ ಇಳಿಯುವ ಜಿಹಾದಿಗಳು ಭೂಲೋಕದ ಹಿಂದೂ ಅಪ್ಸರೆಯರನ್ನು ನರಕಕ್ಕೆ ಕಳುಹಿಸಿದರೆ ಮಾತ್ರ ತಮಗೆ ಸ್ವರ್ಗ ಪ್ರಾಪ್ತಿ ಎಂದು ಗುರಿ ಇಟ್ಟುಕೊಂಡಿರುತ್ತಾರೆ. ಆದರೆ ಇದಕ್ಕೆ ಸಾಕ್ಷಿ ಇಲ್ಲ ಎನ್ನುವ ಕಾರಣಕ್ಕೆ ಇಲ್ಲಿಯ ತನಕ ಇಂತಹ ಜಿಹಾದಿಗಳಿಗೆ ಶಿಕ್ಷೆ ಆಗುತ್ತಿರಲಿಲ್ಲ. ಯಾಕೆಂದರೆ ಮರ್ಯಾದೆಯ ಕಾರಣದಿಂದಲೋ ಅಥವಾ ಜೀವಭಯದಿಂದಲೋ ಮೋಸಕ್ಕೆ ಒಳಗಾದ ಯಾವ ಯುವತಿ ಕೂಡ ನ್ಯಾಯಾಲಯದಲ್ಲಿ ನಿಂತು ಬಡಿದಾಡಲು ಹೋಗುತ್ತಿರಲಿಲ್ಲ. ಯಾಕೆಂದರೆ ಪ್ರೀತಿ ಮಾಡುವಾಗ ಎಷ್ಟು ನಯದಿಂದ ವರ್ತಿಸುವ ಈ ಜಿಹಾದಿಗಳು ಅವಳ ತಿರುಗಿ ಬಿದ್ದರೆ ಯಾವ ರಾಕ್ಷಸನಿಗಿಂತಲೂ ಕಡಿಮೆ ಇರುವುದಿಲ್ಲ ಎನ್ನುವುದು ಅವಳಿಗೆ ಕೆಲವು ದಿನಗಳಲ್ಲಿಯೇ ಗೊತ್ತಾಗಿರುತ್ತದೆ. ಆದರೆ ಮೋಸಕ್ಕೆ ಒಳಗಾದ ಸಂತ್ರಸ್ತ ಹಿಂದೂ ಯುವತಿಯರು ಅಪರೂಪಕ್ಕೆಂಬಂತೆ ಕೆಲವು ಸಲ ಹೋರಾಡಲು ಅಣಿಯಾಗುತ್ತಾರೆ.
ಅದಕ್ಕೆ ಸಾಕಷ್ಟು ಧೈರ್ಯ ಮತ್ತು ಆತ್ಮವಿಶ್ವಾಸ ಬೇಕು. ಹಾಗೆ ತನ್ನ ಮೇಲೆ ನಡೆದ ವ್ಯವಸ್ಥಿತ ಲವ್ ಜಿಹಾದ್ ಷಡ್ಯಂತ್ರದ ವಿರುದ್ಧ ಹೋರಾಡಿ ಈಗ ನ್ಯಾಯ ಪಡೆದಿರುವ ಉತ್ತರ ಪ್ರದೇಶದ ಯುವತಿ ಬೇರೆಯವರಿಗೆ ಸ್ಫೂರ್ತಿಯಾಗಿದ್ದಾಳೆ. ಅವಳಿಗೆ ಮೋಸ ಮಾಡಿದ ಮುಸ್ಲಿಂ ಯುವಕನ ಅಪರಾಧ ಸಾಬೀತಾಗಿದೆ. ಅವನಿಗೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂಪಾಯಿ ದಂಡವನ್ನು ನ್ಯಾಯಾಲಯ ವಿಧಿಸಿದೆ. ಮುಂದಿನ ದಿನಗಳಲ್ಲಿ ದಂಡದ ಪ್ರಮಾಣ ಹೆಚ್ಚಾಗಬೇಕಿದೆ. ಯಾಕೆಂದರೆ ಒಬ್ಬ ಯುವತಿಯ ಶೀಲ ಮತ್ತು ನಂಬಿಕೆಯ ಮೇಲೆ ಆಗಿರುವ ಪ್ರಹಾರಕ್ಕೆ 30 ಸಾವಿರ ರೂಪಾಯಿಯೊಂದಿಗೆ ತಾಳೆಗಟ್ಟುವುದು ಸರಿಯಾಗುವುದಿಲ್ಲ. ಅವನ ಆಸ್ತಿಪಾಸ್ತಿಯನ್ನು ಕೂಡ ಮುಟ್ಟುಗೋಲು ಹಾಕಬೇಕು. ಆಗ ನಿಜವಾದ ಬುದ್ಧಿ ಬರುತ್ತದೆ. ಅಂತಹ ಒಂದು ಕಠಿಣ ಕಾನೂನನ್ನು ಜಾರಿಗೆ ತರಲೇಬೇಕಿದೆ. ಆದರೆ ಹಾಗೆ ತರಲು ಹೋದರೆ ಮತ್ತೆ ಈ ಕಾಂಗ್ರೆಸ್ಸಿಗರು ವಿರೋಧ ಮಾಡಿಯೇ ಮಾಡುತ್ತಾರೆ. ಲವ್ ಜಿಹಾದ್ ಎನ್ನುವುದೇ ಇಲ್ಲ ಎನ್ನುವ ಮೂಲಕ ಸ್ವತ: ಮುಸ್ಲಿಂ ಜಿಹಾದಿಗಳಿಗೂ ಮುಜುಗರವಾಗುವಂತೆ ಸದನದಲ್ಲಿ ಹೋರಾಡುತ್ತಾರೆ. ಡಿಕೆಶಿ ಅಲ್ಲಿಯೇ ವಿಧೇಯಕದ ಬಿಲ್ ಹರಿದುಹಾಕುತ್ತಾರೆ. ಸಿದ್ದು ಆಚೀಚೆ ಮುಸ್ಲಿಂ ಶಾಸಕರನ್ನು ನಿಲ್ಲಿಸಿ ಲವ್ ಜಿಹಾದ್ ಇದ್ರೆ ಎಲ್ಲಿದೆ ಎಂದು ತೋರಿಸಿ ಎನ್ನುತ್ತಾರೆ. ನಮ್ಮ ಖಾದರ್, ಇಬ್ರಾಹಿಂ, ಜಮೀರ್ ತರಹದವರು ಅಮಾಯಕ ಮುಖ ಹೊತ್ತುಕೊಂಡು ಕ್ಯಾಮೆರಾದ ಮುಂದೆ ನಿಂತು ಹಾಗಂದ್ರೇನು ಎಂದು ಕೇಳುತ್ತಾರೆ. ಆದರೆ ಇವರಿಗೆ ಗೊತ್ತಿಲ್ಲದಂತಹ ವಿಷಯಗಳು ಪ್ರಪಂಚದಲ್ಲಿ ತುಂಬಾ ಆಗುತ್ತಿದೆ ಎಂದು ಇವರಿಗೆ ಹೇಳಲೇಬೇಕಾಗಿದೆ. ಕೇರಳ ಹೈಕೋರ್ಟ್ ಲವ್ ಜಿಹಾದ್ ಇದೆ ಎಂದು ಹೇಳಿದೆ. ಕೇರಳದ ಧರ್ಮಗುರುಗಳೊಬ್ಬರು ನಮ್ಮ ಕ್ರಿಶ್ಚಿಯನ್ ಯುವತಿಯರನ್ನು ಲವ್ ಜಿಹಾದ್ ಹೆಸರಿನಲ್ಲಿ ದೌರ್ಜನ್ಯಕ್ಕೆ ಒಳಪಡಿಸಲಾಗುತ್ತದೆ ಎಂದು ಹೇಳಿರುವುದು ಮಾಧ್ಯಮದಲ್ಲಿ ವರದಿಯಾಗಿದೆ. ಇನ್ನು
ಹಿಂದೂ ಯುವತಿಯರನ್ನು ಕೇರಳದ ಪೊನ್ನಾನಿಗೆ ಕರೆದುಕೊಂಡು ಹೋಗಿ ಮತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿರುವುನ್ನು ಸ್ವತ: ಅನುಭವಿಸಿರುವ ಯುವತಿಯರೇ ಹೇಳಿದ್ದಾರೆ. ಇಷ್ಟೆಲ್ಲ ಇದ್ದ ಮೇಲೆಯೂ ಲವ್ ಜಿಹಾದ್ ಇಲ್ಲ ಎಂದು ಹೇಳುವುದಕ್ಕೆ ಆತ್ಮಸಾಕ್ಷಿಯ ಮೇಲೆ ಕಲ್ಲು ಇಟ್ಟರೆ ಮಾತ್ರ ಸಾಧ್ಯ. ಈಗಾಗಲೇ ಮತಾಂತರ ನಿಷೇಧದ ಕಾಯಿದೆ ಜಾರಿಗೆ ಬರುವ ಹಂತದಲ್ಲಿದೆ. ಮುಂದಿನದು ಲವ್ ಜಿಹಾದ್ ವಿರುದ್ಧದ ಕಾಯಿದೆ ಆಗಲಿ!!
ಹಿಂದೂ ಯುವತಿಯರನ್ನು ಕೇರಳದ ಪೊನ್ನಾನಿಗೆ ಕರೆದುಕೊಂಡು ಹೋಗಿ ಮತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿರುವುನ್ನು ಸ್ವತ: ಅನುಭವಿಸಿರುವ ಯುವತಿಯರೇ ಹೇಳಿದ್ದಾರೆ. ಇಷ್ಟೆಲ್ಲ ಇದ್ದ ಮೇಲೆಯೂ ಲವ್ ಜಿಹಾದ್ ಇಲ್ಲ ಎಂದು ಹೇಳುವುದಕ್ಕೆ ಆತ್ಮಸಾಕ್ಷಿಯ ಮೇಲೆ ಕಲ್ಲು ಇಟ್ಟರೆ ಮಾತ್ರ ಸಾಧ್ಯ. ಈಗಾಗಲೇ ಮತಾಂತರ ನಿಷೇಧದ ಕಾಯಿದೆ ಜಾರಿಗೆ ಬರುವ ಹಂತದಲ್ಲಿದೆ. ಮುಂದಿನದು ಲವ್ ಜಿಹಾದ್ ವಿರುದ್ಧದ ಕಾಯಿದೆ ಆಗಲಿ!!
- Advertisement -
Leave A Reply