• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ವಿರೋಧಿಸಿದವರಿಗೆ ಈಗ ಮಾತನಾಡುವ ನೈತಿಕತೆ ಇದೆಯಾ?

Hanumantha Kamath Posted On January 25, 2022
0


0
Shares
  • Share On Facebook
  • Tweet It

ರಾಜ್ಯ ಕಾಂಗ್ರೆಸ್ಸಿಗರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿಗರಿಗೆ ಸುಲಭವಾಗಲಿ ಎಂದು ಎಸೆದ ಟ್ರಿಕ್ ಒಂದು ಇವರಿಗೆ ಲಾಭವಾಗುವುದು ಬಿಡಿ, ನೇರವಾಗಿ ತಮ್ಮ ಕಾಲ ಕೆಳಗಿನ ನೆಲವೇ ಜಾರುವಂತೆ ಮಾಡಿದೆ. ಮುಂದೊಂದು ದಿನ ಹೀಗೆ ಆಗುತ್ತೆ ಎಂದು ಮಾಜಿ ಶಾಸಕರೊಬ್ಬರಿಗೆ ಈ ಹಿಂದೆನೆ ಗೊತ್ತಿದ್ದರೆ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಹಸರನ್ನು ವೃತ್ತವೊಂದಕ್ಕೆ ಇಡಲು ವಿರೋಧಿಸುತ್ತಿರುತ್ತಿರಲಿಲ್ಲವೋ ಏನೋ. ಆದರೆ ಏನು ಮಾಡುವುದು, ಸ್ವಜಾತಿಧರ್ಮದವರ ಪ್ರೀತಿಗೆ ಹೋಗಿ, ಅವರನ್ನು ಎದುರು ಹಾಕಿಕೊಂಡರೆ ಉಳಿಗಾಲವಿಲ್ಲ ಎಂದು ಅಂದುಕೊಂಡು ಲೇಡಿಹಿಲ್ ಎನ್ನುವ ಪ್ರದೇಶದಲ್ಲಿರುವ ವೃತ್ತವೊಂದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಲು ಸಾಧ್ಯವೇ ಇಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹಟಕ್ಕೆ ಕುಳಿತುಕೊಂಡಿತು. ವಿಷಯ ಏನೇ ಇರಲಿ, ಕಾಂಗ್ರೆಸ್ಸಿಗರು ತಮ್ಮ ವೋಟ್ ಬ್ಯಾಂಕಿನ ವಿಷಯ ಬಂದಾಗ ಅವರು ಯಾವತ್ತೂ ಅಲ್ಪಸಂಖ್ಯಾತರನ್ನು ಬಿಟ್ಟು ಕೊಡುವುದಿಲ್ಲ. ನಮ್ಮ ವೋಟ್ ನಮಗೆ ಪ್ರಥಮ ಆದ್ಯತೆ ಎನ್ನುವುದು ಕಾಂಗ್ರೆಸ್ಸಿಗರ ರಕ್ತದಲ್ಲಿಯೇ ಇದೆ.

ಲೇಡಿಹಿಲ್ ಪ್ರದೇಶದಲ್ಲಿರುವ ವೃತ್ತಕ್ಕೆ ಸರಿಯಾಗಿ ನೋಡಿದರೆ ಅಧಿಕೃತವಾಗಿ ಯಾವುದೇ ಹೆಸರಿಲ್ಲ. ಎಲ್ಲರೂ ಲೇಡಿಹಿಲ್ ವೃತ್ತ ಎಂದು ಕರೆಯುತ್ತಿದ್ದ ಕಾರಣ ಅದು ರೂಢಿಯಾಗಿದೆಯೇ ವಿನ: ದಾಖಲೆಗಳಲ್ಲಿ ಇರುವ ಹೆಸರು ಅಲ್ಲ. ಇನ್ನು ಲೇಡಿಹಿಲ್ ಯಾರು? ಅವಳ ಕೊಡುಗೆ ಏನು? ಮತಾಂತರ ಮಾಡಲು ಬಂದಿದ್ದ ಹೆಂಗಸಾ ಅಥವಾ ಗಂಡಸಾ ಯಾರಿಗೆ ಗೊತ್ತು. ಅವಳನ್ನು ತಮ್ಮವಳೆಂದು ಕ್ರಿಶ್ಚಿಯನ್ನರು ಅಂದುಕೊಂಡರೆ ಅದಕ್ಕಿಂತ ಮುಠಾಳತನ ಬೇರೆ ಇಲ್ಲ. ಹಾಗಿರುವಾಗ ಅಂತಹ ಒಂದು ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬಹುದಿತ್ತು. ಯಾಕೆಂದರೆ ನಾರಾಯಣ ಗುರುಗಳು ಕಟ್ಟಿಸಿದ ಕರ್ನಾಟಕದ ಏಕೈಕ ದೇವಾಲಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ರಾಜಬೀದಿಯಂತೆ ಕಂಗೊಳಿಸುತ್ತಿರುವ ಪ್ರದೇಶದಲ್ಲಿರುವ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಸೂಕ್ತವಾಗುತ್ತಿತ್ತು. ಅದರಂತೆ ಬಿರುವೆರ್ ಕುಡ್ಲ ಎನ್ನುವ ಸಂಘಟನೆ ಮಾಡಿದ ಮನವಿಯಂತೆ ಪಾಲಿಕೆಯ ಭಾರತೀಯ ಜನತಾ ಪಾರ್ಟಿಯ ಆಡಳಿತ ಈ ಕುರಿತು ನಿರ್ಣಯವನ್ನು ಮಂಡಿಸಿತು. ಆದರೆ ಯಾವ ಕಾರಣಕ್ಕೂ ಇದನ್ನು ಒಪ್ಪಬಾರದು ಎಂದು ಸೂಚನೆ ನೀಡಿದವರು ಕಾಂಗ್ರೆಸ್ಸಿನ ಮಾಜಿ ಶಾಸಕರೊಬ್ಬರು ಮತ್ತು ಅವರೊಂದಿಗೆ ಸೇರಿದವರು ಈಗ ಮಾಜಿ ವಿಧಾನಪರಿಷತ್ ಸದಸ್ಯರಾಗಿರುವ ಐವನ್. ಪಾಲಿಕೆಯ ಕಾಂಗ್ರೆಸ್ಸಿನಲ್ಲಿರುವ ಅನೇಕರು ಅಲ್ಪಸಂಖ್ಯಾತರೂ ಆಗಿರುವ ಕಾರಣ ಅವರು ಕೂಡ ಇದನ್ನು ಸವಾಲಾಗಿ ಸ್ವೀಕರಿಸಿದರು. ಯಾವಾಗ ಆಕ್ಷೇಪಗಳು ಬಂತೋ ಬಿಜೆಪಿಯವರಿಗೂ ಏನೂ ಮಾಡಲು ಆಗಲಿಲ್ಲ. ಅದರೊಂದಿಗೆ ಕೆಲವರಿಂದ ಮನವಿಯನ್ನು ಕೂಡ ಕೊಡಿಸಿ ಕಾಂಗ್ರೆಸ್ಸಿಗರು ಈ ವಿಷಯದಲ್ಲಿ ಪಾಲಿಕೆಯ ಬಿಜೆಪಿಗೆ ಪ್ಲಸ್ ಆಗದಂತೆ ನೋಡಿಕೊಂಡರು. ಆ ಮೂಲಕ ತಾವು ಅನೈತಿಕವಾಗಿ ಗೆಲುವು ಸಾಧಿಸುವಂತೆ ನೋಡಿಕೊಂಡರು. ಮಾತನಾಡಿದರೆ ತಾವು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು ಇಡಲು ಹೇಳಿದ್ವಿ ಎನ್ನುತ್ತಾರೆ. ವೃತ್ತಕ್ಕೆ ಹೆಸರು ಇಡಲು ಪ್ರಕ್ರಿಯೆ ಸುಲಭ. ಆದರೆ ರೈಲ್ವೆ ನಿಲ್ದಾಣಗಳಿಗೆ ಹೆಸರು ಇಡಲು ಕೇಂದ್ರ ಸರಕಾರದ ನಿಯಮಗಳು ಅಷ್ಟು ಸರಳೀಕೃತವಾಗಿಲ್ಲ. ಅದು ಕಷ್ಟಸಾಧ್ಯ ಎಂದು ಗೊತ್ತಿದ್ದ ಕಾರಣ ಮತ್ತು ಸಿಕ್ಕಿದರೆ ಮೈಲೇಜ್ ತಮಗೆ ಸಿಗಲಿ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಹೊಸ ದಾಳ ಉರುಳಿಸಿತ್ತು. ಆದ್ದರಿಂದ ಅತ್ತ ವೃತ್ತಕ್ಕೂ ಹೆಸರಿಡಲು ಬಿಡದೆ, ಇತ್ತ ರೈಲ್ವೆ ನಿಲ್ದಾಣಕ್ಕೂ ಹೆಸರಿಡಲು ಆಗದೆ ಕಾಂಗ್ರೆಸ್ ಆವತ್ತು ಗೆದ್ದಿತ್ತು. ಈಗ ಅದೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಿದೆ.

ಒಂದು ವೃತ್ತಕ್ಕೆ ಕ್ರೈಸ್ತ ಮತಗಳ ಆಸೆಯಿಂದ ಬಿಲ್ಲವರ ವಿರುದ್ಧ ಹೋದವರು ಈಗ ದೆಹಲಿಯ ಪ್ರಜಾಪ್ರಭುತ್ವದ ಪೆರೇಡ್ ನಲ್ಲಿ ಕೇರಳದ ಸ್ತಬ್ಧಚಿತ್ರ ರದ್ದಾಗಿರುವುದಕ್ಕೆ ಇಷ್ಟು ಅಳುವಂತಹ ಅಗತ್ಯ ಏನಿತ್ತು ಎಲ್ಲರೂ ಕೇಳುತ್ತಿದ್ದಾರೆ. ಅಷ್ಟು ನಾರಾಯಣ ಗುರುಗಳ ಮೇಲೆ ಪ್ರೀತಿ ಇದ್ದರೆ ಇಷ್ಟು ವರ್ಷ ಕಾಂಗ್ರೆಸ್ ಇತ್ತಲ್ಲ, ಈಡಿಗ ಸಮುದಾಯದವರೇ ಆಗಿರುವ ಬಂಗಾರಪ್ಪನವರಾಗಲಿ, ಹಿಂದುಳಿದ ಸಮಾಜದ ಮೊಯಿಲಿಯವರಾಗಲಿ ಯಾಕೆ ಪ್ರಯತ್ನ ಪಟ್ಟಿಲ್ಲ. ಈ ವಿಷಯವನ್ನು ಮೊದಲ ಬಾರಿ ಎತ್ತಿ ವಿವಾದ ಮಾಡಿದ ಸಿದ್ದುವೇ ಯಾಕೆ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕರ್ನಾಟಕದಿಂದ ಕಳುಹಿಸಲಿಲ್ಲ. ಇನ್ನು ಜನಾರ್ಧನ ಪೂಜಾರಿ, ಆಸ್ಕರ್ ಕೂಡ ಕರಾವಳಿಯವರೇ ಅಲ್ವೇ? ಇವರು ಕೂಡ ಕೆಪಿಸಿಸಿ ಅಧ್ಯಕ್ಷರೂ, ಕೇಂದ್ರ ಸಚಿವರೂ ಆಗಿದ್ದರಲ್ಲವೇ ಅವರು ಯಾಕೆ ಯಾವತ್ತೂ ಈ ಪ್ರಯತ್ನ ಮಾಡಿಲ್ಲ. ಯಾಕೆಂದರೆ ನಾರಾಯಣ ಗುರುಗಳ ಬಗ್ಗೆ ಕೇರಳದ ಕಮ್ಯೂನಿಸ್ಟರು ರಾಜಕೀಯ ಮಾಡಿ ಲಾಭ ಗಳಿಸುವ ಕೆಟ್ಟ ಉದ್ದೇಶವನ್ನು ಇವರ ತಲೆಯಲ್ಲಿ ತುಂಬಿರಲಿಲ್ಲ. ಆವತ್ತು ನಾರಾಯಣ ಗುರುಗಳನ್ನು ಯೇಸುಕ್ರಿಸ್ತರಂತೆ ಶಿಲುಬೆಗೆ ಏರಿಸಿ ಮೊಳೆ ಹೊಡೆದ ಕಮ್ಯೂನಿಸ್ಟರ ಕೃತ್ಯವನ್ನು ವಿರೋಧಿಸದ ದಕ್ಷಿಣ ಕನ್ನಡ ಕಾಂಗ್ರೆಸ್ಸಿಗರು ಈಗ ಕೇರಳದ ಸ್ತಬ್ಧಚಿತ್ರ ರದ್ದಾಗಿರುವುದಕ್ಕೆ ತಮ್ಮದೇ ಮನೆಗೆ ಬೆಂಕಿ ಬಿದ್ದಂತೆ ಒದ್ದಾಡುತ್ತಿದ್ದಾರೆ. ಅಲ್ಲಿನ ಅರೆಬೆಂದ ಕಮ್ಯೂನಿಸ್ಟರು ಏನು ಬೇಕಾದರೂ ಮಾಡಬಲ್ಲರು. ಏಕೆಂದರೆ ಅವರಿಗೆ ಮೋದಿ ಬದ್ಧ ವೈರಿ. ಒಟ್ಟಿನಲ್ಲಿ ಕಮ್ಯೂನಿಸ್ಟರು ಅರ್ಧ ರಾತ್ರಿಯಲ್ಲಿ ಕೊಡೆ ಕಳುಹಿಸಿದ್ದಕ್ಕೆ ಅರೆನಗ್ನರಾಗಿ ಕಾಂಗ್ರೆಸ್ಸಿಗರು ಕುಣಿಯುತ್ತಿರುವುದು ಮಾತ್ರ ಹುಚ್ಚರ ಜಾತ್ರೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ!

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Hanumantha Kamath January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search