ಹಿಂದೂ ಯುವಕರ ಹತ್ಯೆ ಆದ ಕೂಡಲೇ ಕೆಲವರು ಲಿಂಬೆ ಹಣ್ಣು ಹಿಡಿದು ತಯಾರಾಗುತ್ತಾರೆ!!
ಹರ್ಷನ ಹತ್ಯೆಯಾಯಿತು. ಅವನ ಸಹೋದರಿಯ ಮೊದಲ ಹೇಳಿಕೆ ಟಿವಿಗಳಲ್ಲಿ ಪ್ರಸಾರವಾಯಿತು. ಆ ಹೆಣ್ಣು ಜೀವ ಆ ನೋವಿನಲ್ಲಿ ಏನು ಹೇಳಿತೋ, ಮಾಧ್ಯಮಗಳು ಏನು ವಿಶ್ಲೇಷಣೆ ಮಾಡಿದ್ವೋ, ಒಟ್ಟಿನಲ್ಲಿ ಆಕೆ ಹಿಂದೂತ್ವದ ಬಗ್ಗೆ ಬೇಸರದಿಂದ ಮಾತನಾಡಿದ್ಳು ಎಂದು ಕೆಲವರು ಸುದ್ದಿ ಹರಡಿಸಿದರು. ಅದರ ನಂತರ ಇನ್ನು ಕೆಲವರು ಹಿಂದೂತ್ವದ ಹೆಸರಿನಲ್ಲಿ ಬೀದಿಯಲ್ಲಿ ಹೋರಾಡುವ ಯುವಕರಿಗೆ ಯಾರೂ ಗತಿಯಿರಲ್ಲ ಎಂದು ಬರೆದ್ರು. ಅದರ ನಂತರ ಅನೇಕ ಹಿಂದೂ ಮುಖಂಡರು ಹರ್ಷನ ಮನೆಗೆ ಹೋಗಿಬಂದರು. ಇಲ್ಲಿಯ ತನಕ ಒಂದು ಅಂದಾಜಿನ ಪ್ರಕಾರ ಹರ್ಷನ ತಾಯಿಯ ಅಕೌಂಟಿಗೆ ಒಂದು ಕೋಟಿಯಷ್ಟು ಹಣ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಈಗ ಕೆಲವರು ಇದರಲ್ಲಿ ರಾಜಕೀಯ ಲಾಭವನ್ನು ರಾಜಕಾರಣಿಗಳು ತೆಗೆಯುತ್ತಾರೆ ಎಂದು ಹೇಳುತ್ತಿದ್ದಾರೆ. ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿ ಬೆಂಡೆತ್ತಲಾಗುತ್ತಿದೆ. ಹೀಗೆ ಎಲ್ಲದರಲ್ಲಿಯೂ ಕೊಂಕು ನುಡಿಯುವವರು ಇದ್ದೇ ಇರುತ್ತಾರೆ. ಹಾಗಂತ ಭಾರತೀಯ ಜನತಾ ಪಾರ್ಟಿಯ ಸರಕಾರ ಕಾನೂನಾತ್ಮಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತಲೇ ಬರುತ್ತಿದೆ.
ಈ ನಡುವೆ ಕೆಲವರು ಹಿಂದೂಗಳ ನಡುವೆ ನಿಂಬೆ ಹಣ್ಣು ಹಿಂಡಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಮೂಲಕ ಹಿಂದೂ ಯುವಕರು ತಮ್ಮವರ ಮೇಲೆ ನಂಬಿಕೆ ಕಳೆದುಕೊಂಡು ಸಂಘಟನೆಗಳಿಗೆ ಹುಡುಗರು ಬರುವುದು ಕಡಿಮೆಯಾಗಲಿ ಎಂದು ವಿಷ್ನಸಂತೋಷಿಗಳು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ ಹಿಂದೂ ಸಂಘಟನೆಗಳು ವೀಕ್ ಆದರೆ ಆಗ ಲಾಭ ಆಗುವುದು ಯಾರಿಗೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ಹರ್ಷನ ಸಹೋದರಿ ಅಥವಾ ತಾಯಿಯವರ ಬಳಿ ಕೇಳಿದರೆ ಅವರು ಹಿಂದೂ ಸಂಘಟನೆಗಳ ಮೇಲೆ ವಿಶ್ವಾಸದಿಂದಲೇ ಮಾತನಾಡುತ್ತಾರೆ. ಯಾಕೆಂದರೆ ಯಾರೂ ಆ ಕುಟುಂಬವನ್ನು ಬಿಟ್ಟು ಹಾಕಿಲ್ಲ. ಇದು ಸಂಘ ಪರಿವಾರದ ನಿಜವಾದ ಕಮಿಟ್ ಮೆಂಟ್. ಹಿಂದೂತ್ವ ಸಂಘಟನೆಯಲ್ಲಿ ಹಿಂದುಳಿದ ವರ್ಗಗಳ, ಬಡ ಯುವಕರೇ ಇರುವುದು, ಅವರೇ ಬಲಿಯಾಗುವುದು ಎಂದು ಕೆಲವರು ಬ್ರೇನ್ ವಾಶ್ ಮಾಡುವ ಕೆಲಸ ಮಾಡುತ್ತಾರೆ. ಈ ಭರತಖಂಡದಲ್ಲಿ ಹುಟ್ಟಿದ ಶಿವಾಜಿ ಎನ್ನುವ ಯುವಕ ನಂತರ ಮಹಾರಾಜ್ ಆದರು. ಅವರಲ್ಲಿ ಹರಿಯುತ್ತಿದ್ದದ್ದು ಕ್ಷಾತ್ರವೀರ ತೇಜಸ್ಸಿನ ರಕ್ತ. ಅವರೇನೂ ಶ್ರೀಮಂತ ಕುಟುಂಬದವರಲ್ಲ. ಶ್ರೀಮಂತ ವಂಶಸ್ಥರಲ್ಲ. ಆದರೂ ಅವರು ಬೆಳೆಯಲಿಲ್ಲವೇ. ಹಕ್ಕಬುಕ್ಕ ಅವರೇನೂ ರಾಜಮನೆತನದವರಲ್ಲ. ದೊಡ್ಡ ಜಾತಿಯವರೂ ಅಲ್ಲ. ಆದರೆ ಅವರು ವಿದ್ಯಾರಣ್ಯರ ಗರಡಿಯಲ್ಲಿ ಪಳಗಿದರು. ವಿಜಯನಗರದ ಸಾಮ್ರಾಜ್ಯವನ್ನು ಕಟ್ಟಿದರು. ಅದು ಬಿಡಿ, ನಮ್ಮ ಕಣ್ಣ ಮುಂದಿರುವ ಜೀವಂತ ದಂತಕಥೆ ನರೇಂದ್ರ ಮೋದಿ. ಗುಜರಾತಿನ ಬಹಳ ಚಿಕ್ಕ ಜಾತಿಯಲ್ಲಿ ಹುಟ್ಟಿದವರು. ಶ್ರೀಮಂತಿಕೆ ಅವರ ಹತ್ತಿರದಲ್ಲಿ ಸುಳಿಯಲೇ ಇಲ್ಲ. ಚಾ ಮಾರಿ ಕಲಿತ ಹುಡುಗ, ಈಗ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ. ಹಾಗಂತ ಹೋರಾಟಗಳಲ್ಲಿ ಬ್ರಾಹ್ಮಣರು ಯಾಕೆ ಬರಲ್ಲ, ಕೇವಲ ಬಿಲ್ಲವರು ಮಾತ್ರ ಜೈಲಿಗೆ ಹೋಗುತ್ತಾರೆ ಎಂದು ಕೆಲವರು ಮೂದಲಿಸುವುದುಂಟು. ಎಲ್ಲರೂ ಬೀದಿಯಲ್ಲಿ ನಿಂತು ಹೋರಾಟ ಮಾಡಿಯೇ ಸಂಘಟನೆ ಬೆಳೆಯುವುದಿಲ್ಲ. ಅದಕ್ಕೆ ಮಸ್ತಿಷ್ಕ ಮತ್ತು ವಿಟಾಮಿನ್ ಎಂ ಕೂಡ ಬೇಕು. ಅದು ಕೂಡ ಧಾರಾಳವಾಗಿ ಇರಬೇಕು. ಅದನ್ನು ಯಾರು ಸುರಿಯಬೇಕೋ ಅವರು ಸುರಿಯುತ್ತಿದ್ದಾರೆ.
ಇನ್ನು ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇಬೇಕು. ಹಾಗಂತ ತಲೆ ಗಟ್ಟಿ ಇದೆ ಎಂದು ಎಲ್ಲೆಲ್ಲಿಯೋ ತಲೆ ಒಡೆದು ನೋಡಬಾರದು. ತಮಗೆ ಕೊಲೆ ಬೆದರಿಕೆ ಇದೆ ಎಂದು ಸಣ್ಣ ಸಂಶಯ ಬಂದರೆ ಅಂತವರು ಒಂದಿಷ್ಟು ಎಚ್ಚರಿಕೆಯಿಂದ ಇರಬೇಕು. ರಾತ್ರಿ ಹೊತ್ತಿನಲ್ಲಿ ಏಕಾಂಗಿಯಾಗಿ ಕತ್ತಲಲ್ಲಿ ಸಂಚರಿಸುವುದಾಗಲಿ, ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ಒಬ್ಬಂಟಿಯಾಗಿ ಎಲ್ಲೆಲ್ಲಿಯೋ ಹೋಗುವುದಾಗಲಿ ಮಾಡಬಾರದು. ಆ ಬಗ್ಗೆ ಸಂಘಟನೆಯ ಹಿರಿಯರು ಬಿಸಿರಕ್ತದ ಯುವಕರಿಗೆ ಮಾರ್ಗದರ್ಶನ ನೀಡಬೇಕು. ಇನ್ನು ಒಂದು ವೇಳೆ ಅಪ್ಪಿತಪ್ಪಿ ಯಾವುದೇ ಕಾರ್ಯಕರ್ತರ ಮೇಲೆ ದಾಳಿಯಾದರೂ ಅದಕ್ಕೆ ಸೂಕ್ತವಾಗಿ ಸ್ಪಂದಿಸಿ ಆಸ್ಪತ್ರೆಯ ಖರ್ಚನ್ನು ವಹಿಸುವುದಾಗಲಿ, ಆತ ಸ್ವಸ್ಥನಾಗುವ ತನಕ ಮನೆಯ ಖರ್ಚು ನೋಡಿಕೊಳ್ಳುವುದಕ್ಕಾಗಿ ತಾಲೂಕುವಾರು ನಿಧಿ ಸಂಗ್ರಹ ಅಥವಾ ಫಂಡ್ ವ್ಯವಸ್ಥೆ ಮಾಡಿದರೆ ಉತ್ತಮ. ಅದರಿಂದ ಅವರಿಗೂ ಧೈರ್ಯ ಬರುತ್ತದೆ. ಈಗ ಹರ್ಷನ ಕುಟುಂಬಕ್ಕೆ ಭಾರತೀಯ ಜನತಾ ಪಾರ್ಟಿಯ ಶಾಸಕರು, ಸಚಿವರು ಮತ್ತು ಅನೇಕ ಮುಖಂಡರು, ನಾಗರಿಕರು ಬೆಂಗಾವಲಾಗಿ ನಿಂತು ಸಹಾಯ ಮಾಡಿದ್ದಾರೆ. ಕೆಲವರು ಕಾಸರಗೋಡುವಿನ ಜ್ಯೋತಿಷ್ ಎನ್ನುವ ಯುವಕನಿಗೂ ಸಹಾಯ ಮಾಡಲು ಮನವಿ ಮಾಡುತ್ತಿದ್ದಾರೆ. ಜ್ಯೋತಿಷನದ್ದು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬರುತ್ತಿದ್ದು, ಸರಿಯಾಗಿ ತನಿಖೆ ಮಾಡಿದರೆ ಅಲ್ಲಿ ಕೂಡ ಸತ್ಯ ಹೊರಗೆ ಬೀಳುತ್ತದೆ. ಅಷ್ಟು ಚಿಕ್ಕ ವಯಸ್ಸಿನ ಯುವಕ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎನ್ನುವುದು ಹೊರ ಪ್ರಪಂಚಕ್ಕೆ ಗೊತ್ತಾಗುತ್ತದೆ. ಕೇರಳದಲ್ಲಿ ಹಿಂದೂ ಯುವಕರನ್ನು ಕೊಂದು ಅವರ ಶವವನ್ನು ನೇತಾಡಿಸಿ ಆತ್ಮಹತ್ಯೆ ಎಂದು ಮಾಡಿದರೆ ಯಾರೂ ಕೆಲವವರು ಇಲ್ಲ. ಹಾಗಂತ ಬಿಜೆಪಿ ಸರಕಾರ ಇದ್ದಾಗಲೂ ಹಿಂದೂಗಳ ಹತ್ಯೆಯಾಗುತ್ತದೆಯಲ್ಲ ಎಂದು ಕೇಳುವವರು ಇದ್ದಾರೆ. ಗಾಂಜಾ ಎಳೆದು ಕೈಯಲ್ಲಿ ತಲವಾರು ಹಿಡಿದು ಹೊರಡುವವರಿಗೆ ಯಾವ ಸರಕಾರ ಇದ್ದರೇನು, ಅವರಿಗೆ ಅಮಲಿನಲ್ಲಿ ಯಾರೂ ಕಾಣುವುದಿಲ್ಲ. ಅವರು ಬೀಸುವುದು ತಲವಾರು ಮಾತ್ರ. ಅದರೊಂದಿಗೆ ಧರ್ಮದ ಅಮಲು ಕೂಡ ಸೇರಿರುತ್ತದೆ. ಅದು ಇನ್ನೂ ಡೇಂಜರ್!!
Leave A Reply