• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಉಡ್ತಾ ಪಂಜಾಬನ್ನು ಸರಿ ಮಾಡಬೇಕಾದ ಭಗವಂತನೇ ತೂರಾಡದಿರಲಿ!!

Hanumantha Kamath Posted On March 14, 2022
0


0
Shares
  • Share On Facebook
  • Tweet It

ಪಂಜಾಬ್ ಮುಖ್ಯಮಂತ್ರಿ ಎಂದು ಪ್ರಾಜೆಕ್ಟ್ ಆಗಿರುವ ಭಗವಂತ ಮಾನ್ ಅವರು ಫಲಿತಾಂಶ ಬಂದ ದಿನ ಕುಡಿದು ಟೈಟಾಗಿರುವಂತೆ ಕಾಣುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಅದು ಹಳೆ ವಿಡಿಯೋ ಆಗಿದ್ದರೆ ಪರವಾಗಿಲ್ಲ. ಯಾಕೆಂದರೆ ಮಾನ್ ಗೆ ಅಂತಹ ಒಂದು ಹಿನ್ನಲೆ ಇದೆ. ಸಂಸತ್ತಿಗೆ ಕುಡಿದು ಹೋಗಿ ಬಳಿಕ ಕ್ಷಮೆಯಾಚಿಸಿದ ವ್ಯಕ್ತಿ ಅವರು. ಚುನಾವಣಾ ಪ್ರಚಾರ ಸಭೆಗಳಲ್ಲಿ ಕುಡಿದು ಭಾಷಣ ಮಾಡುತ್ತಾರೆ ಎನ್ನುವುದನ್ನು ಅವರ ಪಕ್ಕದಲ್ಲಿ ನಿಂತವರು ಅನುಭವಿಸಿದ್ದಾರೆ. ಈಗಿನ ಕಾಲದಲ್ಲಿ ಕುಡಿಯದವರು ಯಾರಿದ್ದಾರೆ ಎಂದು ಆಮ್ ಆದ್ಮಿ ಬೆಂಬಲಿಗರು ಹೇಳಬಹುದು. ಮಾನ್ ಕುಡಿತ್ತಾರೆ ಎಂದು ಗೊತ್ತಿದ್ದು ಅವರನ್ನು ಎರಡು ಬಾರಿ ಅವರ ಕ್ಷೇತ್ರದವರು ಲೋಕಸಭೆಗೆ ಗೆಲ್ಲಿಸಿದರೋ ಅಥವಾ ಉತ್ತಮ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಎಂದು ಗೆಲ್ಲಿಸಿದರೋ ಎಂದು ಆ ಕ್ಷೇತ್ರದವರಿಗೆ ಮಾತ್ರ ಗೊತ್ತು. ಉಕ್ರೇನ್ ಅಧ್ಯಕ್ಷ ಕೂಡ ಒಂದು ಕಾಲದ ಹಾಸ್ಯನಟ, ನಿರೂಪಕರಾಗಿದ್ದರು. ಜನ ನಂತರ ಅವರನ್ನೇ ರಾಜಕೀಯದಲ್ಲಿ ಬೆಂಬಲಿಸಿದರು. ತಮಿಳುನಾಡಿನಲ್ಲಿ ಸ್ಟಾರ್ ನಟರನ್ನೇ ಮುಖ್ಯಮಂತ್ರಿ ಮಾಡಿದ ಉದಾಹರಣೆಗಳಿವೆ. ಕಲಾವಿದರನ್ನು ಶಾಸಕ, ಸಂಸದ ಮಾಡಿದ ಎಷ್ಟೋ ದೃಷ್ಟಾಂತಗಳು ನಮ್ಮ ಮುಂದೆ ಇದೆ. ಆದರೆ ರಾಜಕೀಯಕ್ಕೆ ಬರುವವರಿಗೆ ಜೀವನದ ಉತ್ತುಂಗದಂತೆ ಆಗಿರುವ ಸಿಎಂ ಸ್ಥಾನಕ್ಕೆ ಬಂದ ಬಳಿಕ ಅದರದ್ದೇ ಆಗಿರುವ ಗೌರವ ಮತ್ತು ಸ್ಥಾನಮಾನವನ್ನು ಅದನ್ನು ಹೊತ್ತಿರುವವರು ಪಾಲಿಸಬೇಕು. ಮಾನ್ ಕುಡಿದು ತೂರಾಡಿದ್ದು ಇಲ್ಲಿಯ ತನಕ ಕೇವಲ ಪಂಜಾಬ್ ಗಡಿಯೊಳಗೆ ವೈರಲ್ ಆಗಿ ಕೊನೆಗೊಳ್ಳುತ್ತಿತ್ತು. ಯಾಕೆಂದರೆ ಆ ಮನುಷ್ಯನಿಗೆ ಅದು ಬಿಟ್ಟು ಹೊರಗಿನ ಲೋಕದ ಅಗತ್ಯವಿರಲಿಲ್ಲ. ಆದರೆ ಇನ್ನು ಆಗಲ್ಲ. ಭಗವಂತ ಮಾನ್ ತನ್ನ ಪರಿಧಿಯಿಂದ ಹೊರಗೆ ಬರುವ ಸಂದರ್ಭ ಬಂದಿದೆ. ಈಗ ಅವರು ಪಂಜಾಬ್ ಮುಖ್ಯಮಂತ್ರಿ. ಅವರು ಎರಡು ರಾಷ್ಟ್ರೀಯ ಪಕ್ಷಗಳ ದೈತ್ಯ ಸಂಹಾರಿ. ಎರಡು ಪಕ್ಷಗಳು ಮಾನ್ ಏನು ತಪ್ಪು ಮಾಡುತ್ತಾರೆ ಎಂದು ಕಾದು ಕುಳಿತಿವೆ. ಕೇಂದ್ರದ ಕೃಷಿ ಕಾಯ್ದೆಗಳಿಗೆ ವಿರೋಧವಾಗಿ ತಾವು ವರ್ಷದ ತನಕ ಮಾಡಬೇಕಾದ ಪ್ರತಿಭಟನೆ, ಸಾವು ನೋವುಗಳಿಂದ ರೈತರಿಗೆ ಭಾರತೀಯ ಜನತಾ ಪಾರ್ಟಿಯ ಮೇಲಿದ್ದ ಕೋಪ ಮತ್ತು ಸಿದ್ದು-ಅಮರಿಂದರ್ ಸಿಂಗ್-ಚೆನ್ನಿ ರಾಜಕೀಯ ಜುಗಲಬಂಧಿಯಿಂದ ಜನರಿಗೆ ಆದ ಅಸಹನೆಗೆ ಪ್ರತಿಯಾಗಿ ಕೇವಲ 20 ಸೀಟುಗಳಿದ್ದ ಆಮ್ ಆದ್ಮಿಯನ್ನು ಜನರು 90 ಕ್ಕೆ ತಂದು ನಿಲ್ಲಿಸಿದ್ದಾರೆ. ಜನರಿಗೆ ಎಲ್ಲಿ ತನಕ ಕೋಪ ಇತ್ತೆಂದರೆ ಮುಖ್ಯಮಂತ್ರಿ ಚೆನ್ನಿ ವಿರುದ್ಧ ಮೊಬೈಲ್ ಅಂಗಡಿಯಲ್ಲಿ ರಿಪೇರಿ ಕೆಲಸಕ್ಕೆ ಇದ್ದವನನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ್ದಾರೆ. ಗೆದ್ದ ಎಷ್ಟೋ ಜನ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇದ್ದವರು ನಿಲ್ಲಿಸಿದ ಒಂದೇ ಕಾರಣಕ್ಕೆ ಈಗ ಎಂಎಲ್ ಎ ಆಗಿದ್ದಾರೆ. ಇದು ಒಂದು ರೀತಿಯಲ್ಲಿ ತಡರಾತ್ರಿ ಎಂದು ಕೊಡೆ ಹಿಡಿದಂತೆ. ಹಾಗೆ ಆಗದೇ ಇರಬೇಕಾದರೆ ಈಗ ಗೆದ್ದವರು ಜನರು ತಮ್ಮನ್ನು ಯಾಕೆ ಗೆಲ್ಲಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವಿಧಾನಸಭಾ ಚುನಾವಣೆ ಗೆಲ್ಲಬೇಕಾದರೆ ಕನಿಷ್ಟ 5 ಕೋಟಿ ಬೇಕಾಗಬಹುದು ಎನ್ನುವ ಕಾಲದಲ್ಲಿ ಚಿಲ್ಲರೆ ರೂಪಾಯಿಗಳಿಗೆ ಗೆದ್ದಿರುವುದು ಚಿಕ್ಕ ವಿಷಯವೇನಲ್ಲ. ಇಂತವರನ್ನು ಜನ ಸೂಕ್ಷ್ಮವಾಗಿ ನೋಡುತ್ತಿರುತ್ತಾರೆ. ಇಂತವರ ಜವಾಬ್ದಾರಿ ಕೂಡ ದೊಡ್ಡದಿದೆ. ಜನ ಒಮ್ಮೆ ಅವಕಾಶ ಕೊಟ್ಟು ನೋಡುತ್ತಾರೆ. ಆದರೆ ಕೆಲಸ ಮಾಡದಿದ್ದರೆ ಪ್ರತಿ ಬಾರಿ ಗೆಲ್ಲುವುದು ಸಾಧ್ಯವಿಲ್ಲ. ಹೀಗಿರುವಾಗ ಸ್ವತ: ಮುಖ್ಯಮಂತ್ರಿಯೇ ಮನಸ್ಸು ಬಂದಾಗ ಬಾಟಲಿಗೆ ಕೈ ಹಾಕುತ್ತಾರೆ ಎಂದರೆ ಪಂಜಾಬ್ ಹೇಗಾಗಬೇಡಾ. ಮೊದಲನೇಯದಾಗಿ ಪಂಜಾಬಿನ 70 ಶೇಕಡಾ ಯುವಜನಾಂಗ ನಶೆಯ ಅಮಲಿನಲ್ಲಿ ಬಿದ್ದು ದಶಕಗಳೇ ಕಳೆದು ಹೋಯಿತು. ಅವರು ಯಾಕೆ ಹಾಗೆ ಕುಡಿತಕ್ಕೆ, ಡ್ರಗ್ಸಿಗೆ ದಾಸರಾದರು ಎನ್ನುವುದಕ್ಕೆ ಬಾಲಿವುಡ್ ನಲ್ಲಿ ಸಿನೆಮಾ ಬಂದಿದೆ. ಉಡ್ತಾ ಪಂಜಾಬ್ ಅನ್ನು ಚಲತಾ ಪಂಜಾಬ್ ಮಾಡುವ ಬದಲು ತಾವೇ ಇಡೀ ದಿನ ಗ್ಲಾಸ್ ಕೈಗೆತ್ತಿಕೊಳ್ಳುವ ಸಿಎಂ ಅಧಿಕಾರಕ್ಕೆ ಬಂದರೆ ಏನಾಗಬಹುದು. ಇನ್ನು ಮೊದಲ ಬಾರಿಗೆ ಗೆದ್ದಿರುವುದು ಅದೃಷ್ಟ ಎಂದು ಹೇಳುವವರ ಎದುರು ಎರಡನೇ ಬಾರಿ ಗೆದ್ದು ಅದನ್ನು ಸುಳ್ಳು ಎಂದು ಸಾಬೀತುಪಡಿಸುವ ಜವಾಬ್ದಾರಿ ಕೇಜ್ರಿವಾಲ್ ತಂಡದ ಮೇಲಿದೆ. ಕೆಲವು ಘಟಾನುಘಟಿ ನಾಯಕರು ಆಮ್ ಆದ್ಮಿ ಪಕ್ಷ ಬಿಟ್ಟು ಹೋಗುವಾಗಲೂ ಹೆದರದ ಕ್ರೇಜಿವಾಲ್ ಈಗ ತಮ್ಮದೇ ಪಕ್ಷದ ಮುಖ್ಯಮಂತ್ರಿ ಕುಡಿದು ತೂರಾಡುತ್ತಾರೆ ಎನ್ನುವುದು ಮಾಧ್ಯಮಗಳಲ್ಲಿ ಬರದ ರೀತಿಯಲ್ಲಿ ನೋಡಿಕೊಳ್ಳಬೇಕು. ಇದಕ್ಕೆ ಹೆದರಬೇಕಾದ ಪರಿಸ್ಥಿತಿ ಇದೆ. ಪಂಜಾಬನಲ್ಲಿ ಆಪ್ ಗೆದ್ದಿರುವುದು ಇವರು ಏನಾದರೂ ಸುಧಾರಣೆ ಮಾಡಬಹುದು ಎನ್ನುವುದೇ ವಿನ: 70 ಶೇಕಡಾ ಮದ್ಯವಸನಿಗಳ ರಾಜ್ಯವನ್ನು ನೂರು ಶೇಕಡಾ ಮದ್ಯವಸನಿಗಳ ನಾಡಾಗಿ ಮಾಡಬಾರದು. ಇನ್ನು ಸಿಎಂ ಪರಮ ಕುಡುಕ ಎಂದಾದರೆ ಅವರ ಸಚಿವ ಸಂಪುಟ ಹೇಗಿರಬೇಡಾ. ನಮ್ಮ ರಾಜ್ಯದಲ್ಲಿಯೂ ಕೆಲವು ಸಚಿವರು, ಶಾಸಕರು ರಾತ್ರಿ 8 ರ ನಂತರ ಕಾಲ್ ತೆಗೆಯಲ್ಲ ಎಂದು ಆರೋಪ ಹೊತ್ತುಕೊಂಡಿದ್ದರು. ಅವರಲ್ಲಿ ಕೆಲವರು ಮುಂದಿನ ಬಾರಿ ಸೋತಿದ್ದರು. ಹಾಗೆ ಪಂಜಾಬ್ ಸಿಎಂ ವರ್ತಿಸದಿರಲಿ. ಭಗವಂತ ಮಾನ್ ಪಂಜಾಬನ್ನು ನಶೆಯ ಅಮಲಿನಿಂದ ಹೊರತೆಗೆಯಲಿ. ಹೊಸ ಮನ್ವಂತರಕ್ಕೆ ಇದು ಕಾರಣವಾಗಲಿ ಎಂದು ಹಾರೈಕೆ

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search