ಉಳ್ಳಾಲ ಫೈಲ್ಸ್, ಗೋಧ್ರಾ ಫೈಲ್ಸ್, ಗೋವಾ ಫೈಲ್ಸ್ ಎಲ್ಲಾ ಕಡೆ ಅನುಭವಿಸಿದ್ದು ಹಿಂದೂಗಳೇ!!
ಕಾಶ್ಮೀರ್ ಫೈಲ್ಸ್ ಬಂದ ಸಮಯ ಚೆನ್ನಾಗಿದೆ. ಸರಿಯಾಗಿ ನೋಡಿದರೆ ಅದು ವರ್ಷದ ಮೊದಲೇ ಬಿಡುಗಡೆಯಾಗಬೇಕಿತ್ತು. ಆದರೆ ಥಿಯೇಟರ್ ಬಂದ್ ಮತ್ತು 50% ವೀಕ್ಷಕರು ಮಾತ್ರ ಎನ್ನುವ ನಿಯಮ ಇದ್ದ ಕಾರಣ ಅದು ಬಿಡುಗಡೆಯಾಗಿರಲಿಲ್ಲ. ಅದು ಬಿಡುಗಡೆಯಾಗುವಾಗ ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಕೂಡ ಆಗಿ ಹೋಗಿತ್ತು. ಆದರೆ ಭಾರತೀಯ ಜನತಾ ಪಾರ್ಟಿಯ ಅದೃಷ್ಟ ಚೆನ್ನಾಗಿತ್ತು. ನಾಲ್ಕರಲ್ಲಿ ಕೂಡ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಒಂದು ವೇಳೆ ಚುನಾವಣೆಯ ಮೊದಲು ರಿಲೀಸ್ ಆಗಿ ಬಿಜೆಪಿ ನಂತರ ಫಲಿತಾಂಶದಲ್ಲಿ ಗೆದ್ದಿದ್ದರೆ ಕಾಂಗ್ರೆಸ್ ಬುದ್ಧಿಜೀವಿಗಳು ಆ ಸಿನೆಮಾದಿಂದಲೇ ಬಿಜೆಪಿ ಗೆದ್ದಿದೆ, ಇಲ್ಲದೇ ಹೋದರೆ ಸಾಧ್ಯವೇ ಇರುತ್ತಿರಲಿಲ್ಲ ಎಂದು ಪುಕಾರು ಎಬ್ಬಿಸಿಬಿಡುತ್ತಿದ್ದರು. ಆ ನಿಟ್ಟಿನಲ್ಲಿ ಯಾವುದೇ ಕಳಂಕ ಇಲ್ಲದೇ ಬಿಜೆಪಿ ತನ್ನದೇ ಸಾಮರ್ತ್ಯದಿಂದ ಆಡಳಿತ ವಿರೋಧಿ ಅಲೆಯ ನಡುವೆಯೂ ಉತ್ತಮ ಸಾಧನೆ ಮಾಡಿದೆ. ಆದರೆ ಈ ಸಿನೆಮಾ ಖಂಡಿತವಾಗಿ ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಚುನಾವಣೆ ಇದೆಯೋ ಅಲ್ಲೆಲ್ಲ ಕಾಂಗ್ರೆಸ್ಸಿಗೆ ಉರುಳಾಗಿ ಪರಿಣಮಿಸುತ್ತದೆ.
ಆಗ ವಿಪಿ ಸಿಂಗ್ ಸರಕಾರ ಇತ್ತು. ಬಿಜೆಪಿ ಬಾಹ್ಯ ಬೆಂಬಲ ಇತ್ತು. ರಾಜ್ಯಪಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ವ್ಯಕ್ತಿಯಾಗಿದ್ದ ಎಂದೆಲ್ಲ ಎಷ್ಟೇ ಕಾಂಗ್ರೆಸ್ಸಿಗರು ಬಾಯಿಬಡಿದುಕೊಂಡರೂ ನೋ ಚಾನ್ಸ್ ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಮೂಡುತ್ತಿಲ್ಲ. ಅದಕ್ಕೆ ಕಾರಣ ಈ ಸಿನೆಮಾ ನೋಡಲ್ಲ ಎಂದು ಸಿದ್ದು ಹಟಕ್ಕೆ ಬಿದ್ದಿರುವುದು. ಅದರೊಂದಿಗೆ ತಾನು ಹಿಂದೂತ್ವಕ್ಕೆ ವಿರೋಧ ಮತ್ತು ಜಾತ್ಯಾತೀತಕ್ಕೆ ಪರ ಎಂದು ಆಗಾಗ ಮಾಧ್ಯಮದ ಮುಂದೆ ಹೇಳುತ್ತಿರುವುದು. ಇನ್ನು ವಿಧಾನ ಪರಿಷತ್ ನಲ್ಲಿ ಕೂಡ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಕಾಶ್ಮೀರ್ ಫೈಲ್ಸ್ ಸಿನೆಮಾದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅಷ್ಟಕ್ಕೂ ವಿಧಾನಸಭೆ, ಪರಿಷತ್ ನ ಕಾಂಗ್ರೆಸ್ ಸದಸ್ಯರು ಈ ಸಿನೆಮಾ ನೋಡಿ ಹೊರಬಂದು ಆ ಸಮಯದಲ್ಲಿ ನಮ್ಮ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಇದ್ದಿದ್ದರೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿತ್ತು ಎಂದು ಹೇಳಿಬಿಟ್ಟರೆ ಮುಗಿಯುತ್ತಿತ್ತು. ಅಷ್ಟೂ ಸಿಂಪಥಿ ಕಾಂಗ್ರೆಸ್ ಕಡೆ ಹೋಗುವ ಸಾಧ್ಯತೆ ಇರಬಹುದಿತ್ತು. ಆದರೆ ಕಾಂಗ್ರೆಸ್ ಹಟಕ್ಕೆ ಬಿತ್ತು. ಮುಸ್ಲಿಮರ ಪರ ಬ್ಯಾಟ್ ಬೀಸಿತು. ಈ ಸಿನೆಮಾ ನೋಡದಿದ್ದರೆ ಮುಸ್ಲಿಮರಿಗೆ ಖುಷಿಯಾಗುತ್ತೆ ಎಂದು ಅಂದುಕೊಂಡಿತು. ತಾವು ಸಿನೆಮಾ ನೋಡಿದರೆ ಕೋಮುವಾದಿಗಳಾಗಿ ಕೇಸರಿ ಶಾಲು ಹಾಕಿ ಸುತ್ತಾಡುವಷ್ಟು ಬ್ರೇನ್ ವಾಶ್ ಆಗುತ್ತೇವೆ ಎಂದು ತಾವೇ ಅಂದುಕೊಳ್ಳಲಾರಂಭಿಸಿತು. ಮುಸ್ಲಿಮರದ್ದು ತಪ್ಪೇ ಇಲ್ಲದೆ ಈ ಸಿನೆಮಾದಲ್ಲಿ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಹೇಳಿತು. ಒಟ್ಟಿನಲ್ಲಿ ಮೋದಿ ಬೆಂಕಿ ಕೊಟ್ಟು ಎಸೆದ ಒಂದು ಲಕ್ಷ್ಮಿ ಬಾಂಬಿನ ಮೇಲೆ ನೀರು ಹಾಕಲು ಹೋಗಿ ಅದು ತನ್ನ ಕಾಲ ಮೇಲೆ ಬಿದ್ದು ಒಡೆಯುವ ತನಕ ಕಾಂಗ್ರೆಸ್ಸಿಗೆ ಕೇಸರಿ ಪಾಳಯದ ರಣತಂತ್ರ ಗೊತ್ತೆ ಆಗಲಿಲ್ಲ. ಈಗ ಇದೇ ಕಾಂಗ್ರೆಸ್ಸಿಗರು ತಾವು ಗೋಧ್ರಾ ಫೈಲ್ಸ್ ಮಾಡುತ್ತೇವೆ ಎಂದು ಹೊರಟಿದ್ದಾರೆ. ಅಲ್ಲಿಗೆ ತಾವು ಬುದ್ಧಿವಂತರಾದೆವು ಎಂದು ಅಂದುಕೊಂಡಿದ್ದಾರೆ. ನಮ್ಮ ಬಳಿ ಕಥೆ ಇದೆ. ನಿರ್ಮಾಪಕರೂ ಇದ್ದಾರೆ. ಆದರೆ ಸಿನೆಮಾ ರಿಲೀಸ್ ಮಾಡಲು ಬಿಡುತ್ತೇವೆ ಎಂದು ಮೋದಿ ಈಗಲೇ ಭರವಸೆ ಕೊಡಬೇಕು ಎಂದು ಕಾಂಗ್ರೆಸ್ ಪಾಳಯದ ನಿರ್ದೇಶಕರೊಬ್ಬರು ಹೇಳಿಕೆ ಕೊಟ್ಟಿದ್ದಾರೆ.
ಗೋಧ್ರಾ ಫೈಲ್ಸ್ ಮಾಡಿದರೆ ಏನೂ ತಪ್ಪಿಲ್ಲ. ಆದರೆ ಗೋಧ್ರಾ ಫೈಲಿಗೂ ಕಾಶ್ಮೀರ್ ಫೈಲಿಗೂ ವ್ಯತ್ಯಾಸ ಇದೆ. ಗೋಧ್ರಾ ಫೈಲ್ಸ್ ಮಾಡುವುದೇ ಆದರೆ ಅದರ ಹಿನ್ನಲೆಯಿಂದಲೇ ಕಥೆ ಆರಂಭಿಸಬೇಕು. ಕರಸೇವಕರು ಇದ್ದ ರೈಲಿನ ಬೋಗಿ, ಅದಕ್ಕೆ ಹೊರಗಿನಿಂದ ಬೀಗ ಹಾಕಿದ್ದು, ಒಳಗೆ ಸೀಮೆಎಣ್ಣೆ, ಪೆಟ್ರೋಲ್ ಸುರಿದ್ದದ್ದು, ಬೆಂಕಿ ಹಚ್ಚಿದ್ದು, ಅಗ್ನಿಶಾಮಕ ದಳದ ವಾಹನಗಳು ಬರದಂತೆ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಕೆಲವರು ಅಡ್ಡ ಮಲಗಿದ್ದು ಹೀಗೆ ಕಥೆ ಅಲ್ಲಿಂದ ಆರಂಭವಾದರೆ ತುಂಬಾ ಒಳ್ಳೆಯದು. ಇಷ್ಟನ್ನು ತೋರಿಸುವಾಗಲೇ 20 ನಿಮಿಷ ಆಗುತ್ತದೆ. ಜನರಿಗೆ ಆ ಗಲಭೆ ಯಾಕೆ ಆಯಿತು ಎಂದು ಗೊತ್ತಾಗುತ್ತದೆ. ಆದರೆ ಕಾಶ್ಮೀರ್ ಫೈಲ್ಸ್ ನಲ್ಲಿ ನಡೆದದ್ದು ತಮ್ಮ ಮೇಲೆ ಹತ್ಯೆ, ಅತ್ಯಾಚಾರ ಆಯಿತು ಎನ್ನುವ ಕಾರಣಕ್ಕೆ ಜಿಹಾದಿಗಳು ಕಾಶ್ಮೀರಿ ಪಂಡಿತರ ಮೇಲೆ ಮುಗಿಬಿದ್ದದ್ದಲ್ಲ. ಇಲ್ಲಿ ಭೂಮಿ ಒಳ ಹಾಕುವ ದುರಾಸೆ ಇತ್ತು. ಸ್ವತಂತ್ರ ಕಾಶ್ಮೀರ ಕಟ್ಟುವ ಹಪಾಹಪಿ ಇತ್ತು. ಕಾಮಪಿಪಾಸುಗಳ ಅಟ್ಟಹಾಸ ಇತ್ತು ಮತ್ತು ಎಲ್ಲಕ್ಕಿಂತ ಧರ್ಮದ ನಶೆ ಜಿಹಾದಿಗಳ ತಲೆ ಏರಿ ಕುಳಿತಿತ್ತು. ಇನ್ನು ವಿದ್ಯಾ ಮಲ್ಯ ಎನ್ನುವವರು ಎಂಭತ್ತರ ದಶಕದಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಹಿಂದೂ ಯುವತಿಯನ್ನು ಛೇಡಿಸಿದ ಜಿಹಾದಿಯೊಬ್ಬನಿಗೆ ಪ್ರಶ್ನೆ ಮಾಡಿದ್ದಕ್ಕೆ ಪ್ರಶ್ನೆ ಮಾಡಿದವನ ಕುಟುಂಬದ ಸದಸ್ಯರನ್ನು ಅಟ್ಟಾಡಿಸಿ ಹೊಡೆಯಲಾಗಿದ್ದ ಕಥೆಯನ್ನು ಬರೆದಿದ್ದಾರೆ. ಅದನ್ನು ಉಳ್ಳಾಲ ಫೈಲ್ಸ್ ಮಾಡಲೂ ಬಹುದು. ಅತ್ತ ಗೋವಾದಲ್ಲಿ ಹಿಂದೂಗಳ ಮೇಲೆ ಪೋರ್ಚುಗೀಸರು, ಮುಸ್ಲಿಮರು ನಡೆಸಿದ ಕ್ರೂರತ್ವದ ಕಥೆಯನ್ನು ಹಿಡಿದುಕೊಂಡು ಗೋವಾ ಫೈಲ್ಸ್ ಮಾಡಬಹುದು. ಫೈಲ್ಸ್ ಮಾಡಿದರೆ ಹಿಂದೂಗಳ ಅನುಭವಿಸಿದ ನೋವು, ಸಂಕಟಗಳು, ಅತ್ಯಾಚಾರಗಳು ದೇಶದ ಪ್ರತಿ ಭಾಗದಲ್ಲಿಯೂ ಇದೆ. ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಾವಿನ ಕಥಾನಕದ ತಾಷ್ಕೆಂಟ್ ಫೈಲ್ಸ್ ಅನ್ನು ಇದೇ ವಿವೇಕ್ ಅಗ್ನಿಹೋತ್ರಿ ಮಾಡಿದ್ದಿರಬೇಕು. ಫೈಲ್ಸ್ ಗಳು ಹಿಂದೆನೂ ಬಂದಿವೆ, ಮುಂದೆನೂ ಬರಲಿ. ಸತ್ಯ ಜನರಿಗೆ ಗೊತ್ತಾಗಲಿ!!
Leave A Reply