ಕುರಾನ್ ಶಾಂತಿ ಬೋಧಿಸುತ್ತದೆ ಎಂದರೆ ಮತಾಂತರ ಆಗಿ ಸಂತೋಷ್!!
ಕರ್ನಾಟಕದಲ್ಲಿ ಸಂತೋಷ್ ಗುರೂಜಿ ಎನ್ನುವವರಿದ್ದಾರೆ. ತಮ್ಮ ಒಂದಿಷ್ಟು ಔಷಧಗಳ ಮಾರ್ಕೆಟಿಂಗ್ ಮಾಡುವುದಕ್ಕಾಗಿ ಖ್ಯಾತ ವಾಹಿನಿಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಅದರಿಂದಲೇ ಒಂದಿಷ್ಟು ಜನರಿಗೆ ಪರಿಚಿತರಾದರು. ತೀರ್ಥಹಳ್ಳಿ ಸಮೀಪ ಬಿಜ್ಜುವಳ್ಳಿಯೆಂಬ ಪುಟ್ಟ ಗ್ರಾಮದಲ್ಲಿ ರಸ್ತೆ ಬದಿಯಲ್ಲಿಯೇ ಆಶ್ರಮ, ಮನೆ ಕಟ್ಟಿಕೊಂಡಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಸುದ್ದಿಯಾಗುತ್ತಿರುತ್ತಾರೆ. ಒಂದಿಷ್ಟು ದಿನ ಬಂಟ ಸಮುದಾಯದ ಕುಲಾಧಿಪತಿಯಾಗುತ್ತೇನೆ ಎಂದು ಬೈಂದೂರಿನಲ್ಲಿ ಓಡಾಡಿದರು. ಆದರೆ ಬಂಟರು ಇವರನ್ನು ತಮ್ಮ ಸಮುದಾಯದ ಕುಲಗುರು ಎಂದು ಒಪ್ಪಲೇ ಇಲ್ಲ. ಮಠ ಕಟ್ಟುತ್ತೇನೆ ಎಂದು ಹೊರಟರು. ಮಠಾಧೀಪತಿಗಳು ಸಿಕ್ಕಿಹಾಕಿಕೊಳ್ಳಬಾರದ ಅದ್ಯಾವುದೋ ಕೇಸಿನಲ್ಲಿ ಸಿಲುಕಿಕೊಂಡಿದ್ದರು. ಹೀಗೆ ಇರುವಾಗಲೇ ಧರ್ಮ, ಯಾಗ, ಪೂಜೆ ಎಂದು ತಮ್ಮ ಪಾಡಿಗೆ ಇದ್ದರೆ ವರ್ಚಸ್ಸಾದರೂ ಹೆಚ್ಚಾಗುತ್ತಿತ್ತೋ ಏನೋ, ಧರ್ಮ ಸಮರದಲ್ಲಿ ಶಾಂತಿ ಸ್ಥಾಪಿಸುತ್ತೇನೆ ಎಂದು ಹೊರಟರು. ಅವರ ಶಾಂತಿ ಸ್ಥಾಪನೆಗೆ ಯಾರ ವಿರೋಧವೂ ಇಲ್ಲ. ಮಾಡ್ಲಿ, ಅದು ಅಗತ್ಯ. ಆದರೆ ಏಕಾಏಕಿ ಮುಸ್ಲಿಮರ ಮುಂದೆ ಕುಳಿತು ಅವರನ್ನೇ ಓಲೈಕೆ ಮಾಡಿಕೊಳ್ಳಲು ಹೋಗಬಾರದಲ್ಲ, ಹಾಗೆ ಮಾಡಿದರೆ ಇವರಿಗೂ ರಾಜಕಾರಣಿಗಳಿಗೂ ವ್ಯತ್ಯಾಸ ಏನು? ಅಷ್ಟಕ್ಕೂ ಸಂತೋಷ್ ಗುರೂಜಿ ಆಡಿದ ಮಾತಾದರೂ ಏನು? ಭಗವದ್ಗೀತೆಗಿಂತ ಕುರಾನಿನಲ್ಲಿ ಹೆಚ್ಚು ಶಾಂತಿ ಬೋಧಿಸಲಾಗಿದೆ. ಛೀ, ನಾಚಿಕೆ ಆಗಲ್ವೇ, ಸಂತೋಷ್ ಅವರೇ. ನೀವು ಕಾವಿ ಕಳಚಿಟ್ಟು ಕಾಂಗ್ರೆಸ್ ಕಚೇರಿಯಲ್ಲಿ ಕುರ್ಚಿ ಹಾಕಿ ಕೂರಬಹುದಲ್ಲಾ? ಹೇಗೂ ನೀವು ಈ ಪರಿ ಮುಸ್ಲಿಮರನ್ನು ಓಲೈಸಿರುವುದರಿಂದ ಮುಂದೆ ಸ್ವಗ್ರಾಮ ತೀರ್ಥಹಳ್ಳಿಯ ಆಸುಪಾಸಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಬಹುದಲ್ಲ. ನಿಮಗೆ ಇಂತಹ ದುರ್ಭುದ್ಧಿ ಹೇಗೆ ಬಂತು? ನೀವು ಹೇಳಿದ ಮಾತನ್ನು ಮೈಯಲ್ಲಿ ಹಿಂದೂ ರಕ್ತ ಇರುವ ಯಾವ ವ್ಯಕ್ತಿ ಕೂಡ ಆಡುವುದಿಲ್ಲ. ಯಾಕೆಂದರೆ ಕಾಫೀರರನ್ನು ನಾಶ ಮಾಡಿ ಎಂದು ಬೋಧಿಸಿದ ಧರ್ಮಗ್ರಂಥ ಯಾವುದು ಸಂತೋಷ್ ಜಿ? ಬಹುವಿಗ್ರಹ ಆರಾಧಕರ ಬಗ್ಗೆ ಅದರಲ್ಲಿ ಇರುವ ವಾಕ್ಯಗಳನ್ನು ತಾವು ಎಂದಾದರೂ ಓದಿದ್ದೀರಾ? ಇನ್ನು ಭಗವದ್ಗೀತೆಯಲ್ಲಿ ನಿಮಗೆ ಕುರಾನಿಗಿಂತ ಭಯಾನಕವಾದದ್ದು ಏನು ಕಾಣಿಸಿತು? ನಿಮಗೆ ಅದರಲ್ಲಿ ಅಷ್ಟು ಶಾಂತಿ ಕಾಣಿಸಿದರೆ ಅದನ್ನೇ ಅಪ್ಪಿ ಹಿಡಿದು ದಿನಕ್ಕೆ ಐದು ಸಲ ನಮಾಜು ಮಾಡಿಯಲ್ಲ, ಈ ಕಾವಿಯ ಮರ್ಯಾದೆ ತೆಗೆಯಬೇಡಿ. ಶಾಂತಿ ಸೌಹಾರ್ದ ಎಂದು ಹೋಗಿ ಹಾಗೆ ಮುಸ್ಲಿಮರನ್ನು ಹೊಗಳಲು ಅಲ್ಲೇನು ಪಾದಪೂಜೆ ಮಾಡಿ ದೊಡ್ಡ ಕವರ್ ಕೊಟ್ಟಿದ್ರಾ? ಒಮ್ಮೆ ಗುರೂಜಿ ಆಗುವವರು ಹೇಗಿರಬೇಕು ಎಂದರೆ ಎರಡೂ ಧರ್ಮಗಳನ್ನು ಓದದಿದ್ದರೂ ಪರವಾಗಿಲ್ಲ, ಹಿಂದೂ ಧರ್ಮಗ್ರಂಥಗಳನ್ನಾದರೂ ಸರಿಯಾಗಿ ಅಧ್ಯಯನ ಮಾಡಿರಬೇಕು. ನೀವು ಈ ಕಾವಿಧಾರಿಗಳಿಗೆ ಅವಮಾನ ಮಾಡಿದ್ದೀರಿ? ಬೇಕಾದರೆ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ. ಅವರ ಪಾದಧೂಳಿಗೂ ನೀವು ಸಮನಲ್ಲ, ಅದು ಬೇರೆ ವಿಷಯ. ಆದರೆ ಒಂದಿಷ್ಟು ಹೊತ್ತು ಪೇಜಾವರ ಶ್ರೀಗಳೊಂದಿಗೆ ಮಾತನಾಡಿದರೆ ನಿಮ್ಮ ಜ್ಞಾನ ಒಂದಿಷ್ಟು ಹೆಚ್ಚಾದರೂ ಹೆಚ್ಚಾಗಬಹುದು. ತಮ್ಮ ಬಳಿ ಕೆಲವು ದಿನ ಹಿಂದೆ ಬಂದಿದ್ದ ಮುಸ್ಲಿಂ ಹಿರಿಯರಿಗೆ, ವ್ಯಾಪಾರಿಗಳಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದ ಪೇಜಾವರ ಶ್ರೀಗಳು ಮೊದಲು ನೀವು ಸರಿಯಾಗಿ ಬನ್ನಿ, ನಂತರ ಮಾತನಾಡೋಣ ಎಂದಿದ್ದಾರೆ. ಹಾಗಂತ ಪೇಜಾವರ ಶ್ರೀಗಳು ಮುಸ್ಲಿಮರಿಗೆ ಅವಮಾನ ಮಾಡಿಲ್ಲ. ಆದರೆ ವಾಸ್ತವವನ್ನು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಅದನ್ನು ಒಂದು ಸಮಾಜದ ಹಿತಚಿಂತಕರು ಮಾಡಬೇಕಾಗಿರುವುದು. ಅದು ಬಿಟ್ಟು ನೀವೆ ಸೂಪರ್ ಕಣ್ರೀ. ಎಷ್ಟು ಶಾಂತಿ ಪ್ರಿಯರು, ಎಲ್ಲವೂ ನಮ್ಮ ಹುಡುಗರಿಂದಲೇ ಆದದ್ದು ಎನ್ನುವ ಅರ್ಥದಲ್ಲಿ, ಮುಸ್ಲಿಮರ ನಾಲ್ಕು ಚಪ್ಪಾಳೆಗೆ ಮನಸೋತು ಹೇಳಿಬರುತ್ತೀರಿ ಎಂದರೆ ನಿಮ್ಮನ್ನು ನಮ್ಮ ಧರ್ಮದ ಮುಖಂಡರು ಎಂದು ಹೇಳಲು ಆಗುತ್ತದೆಯಾ? ಇದು ಏನಾಗಿದೆ ಎಂದರೆ ಕೆಲವರಿಗೆ ಕಾವಿ ಧರಿಸುವ ಷೋಕಿ. ನಾಲ್ಕು ಜನ ಕಾಲಿಗೆ ಬೀಳುತ್ತಾರೆ, ಪಾದಪೂಜೆ ಮಾಡುತ್ತಾರೆ, ಸಮಾರಂಭಗಳಿಗೆ ಕರೆಯುತ್ತಾರೆ, ಗೌರವ ಸಿಗುತ್ತದೆ, ಗುರೂಜಿ ಎಂದು ಹೇಳಿಕೊಂಡು ವಿಶೇಷ ಆಸನ ವ್ಯವಸ್ಥೆ ಮಾಡುತ್ತಾರೆ, ತಮ್ಮ ಮಾತುಗಳನ್ನು ನಾಲ್ಕು ಜನ ಕೇಳುತ್ತಾರೆ, ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇದ್ದಾಗ ಸ್ವಲ್ಪ ಗೌರವ ಹೆಚ್ಚು ಸಿಗುತ್ತದೆ ಎನ್ನುವ ಕಾರಣಕ್ಕೆ ಕಾವಿಧಾರಿ ಆಗುವವರು ಇದ್ದಾರೆ. ತಮ್ಮ ಔಷಧ ಹೆಚ್ಚು ಮಾರಾಟವಾಗಲಿ ಎನ್ನುವ ಕಾರಣಕ್ಕೆ ಸಂತೋಷ್ ಅವರು ಈ ರೀತಿ ಕಾವಿ ಧರಿಸಿದ್ರೆ ಅದರಿಂದ ಅವರು ಕಾವಿಗೆ ಮಾಡುವ ಘೋರ ಅವಮಾನ ಎಂದೇ ಅಂದುಕೊಳ್ಳಬೇಕಾಗುತ್ತದೆ. ಹೀಗೆ ಸಂತೋಷ್ ಗುರೂಜಿ ಹೇಳಿರುವುದರಿಂದ ಅವರಿಗೂ ಜಾಕೀರ್ ನೈಕ್ ಹೇಳುವುದಕ್ಕೂ ಏನು ವ್ಯತ್ಯಾಸ? ಜಾಕೀರ್ ನೈಕ್ ಕೂಡ ಮುಸ್ಲಿಂ ಮತವೇ ಶ್ರೇಷ್ಟ ಎಂದು ಹೇಳಿಬರುತ್ತಿದ್ದಾನೆ. ಅದರಿಂದಲೇ ಇಸ್ಲಾಂ ಅನುಯಾಯಿಗಳಲ್ಲಿ ಅವನನ್ನು ಬೆಂಬಲಿಸುವವರ ದೊಡ್ಡ ಪಡೆಯೇ ಇದೆ. ಅವನು ತನ್ನ ಭಾಷಣದಲ್ಲಿ ಹಿಂದೂ ದೇವರನ್ನು, ದೇವತೆಗಳನ್ನು ಹೀಗಳೆಯುತ್ತಾನೆ. ಈಗ ಇಂತವರು ಕೂಡ ಕುರಾನ್ ಹೆಚ್ಚು ಶಾಂತಿ ಬೋಧಿಸುತ್ತದೆ ಎಂದು ಹೇಳಿ ಬಂದರೆ ಮುಂದೆ ಏನಾಗುತ್ತದೆ, ಹಿಂದೂ ಧರ್ಮದ ಮೇಲೆ ಅಪನಂಬಿಕೆ ಮೂಡಲ್ವಾ? ನಾಲಿಗೆ ಇದೆ ಎಂದು ಏನಾದರೂ ಹೇಳಿ ಹೇಗೆ ಜೀರ್ಣಿಸಿಕೊಳ್ಳುತ್ತೀರಿ. ಇಲ್ಲಿಯ ತನಕ ಈ ಬಾಯಿಚಪಲದ ಕಾಯಿಲೆ ಕೇವಲ ರಾಜಕಾರಣಿಗಳಿಗೆ ಇದೆ ಎಂದು ಅಂದುಕೊಂಡಿದ್ವಿ. ಈ ರಾಜಕಾರಣಿಗಳ ಸಹವಾಸದಲ್ಲಿಯೇ ಇರುವ ಕೆಲವು ಕಾವಿಧಾರಿಗಳಿಗೂ ಈ ಕಾಯಿಲೆ ತಟ್ಟಿದೆ ಎಂದು ಅನಿಸುತ್ತಿದೆ!
Leave A Reply