ಮೇ 3 ರಂದು ಮಸೀದಿಯ ಹೊರಗೆ ಅಜಾನ್ ಕೇಳಿಸಬಾರದು!!
ರಾಜ್ ಠಾಕ್ರೆ, ಎರಡೇ ಶಬ್ದ. ಆದರೆ ಇದನ್ನು ಕೇಳದವರು ಭಾರತದಲ್ಲಿಯೇ ಇಲ್ಲ. ಮಹಾರಾಷ್ಟ್ರದಲ್ಲಂತೂ ಸಾಧ್ಯವೇ ಇಲ್ಲ. ಇವರೇನು ಭಾರತದ ಪ್ರಧಾನ ಮಂತ್ರಿ ಆಗಿರಲಿಲ್ಲ, ಹೋಗಲಿ ಮಹಾರಾಷ್ಟ್ರದ ಸಿಎಂ ಆದರೂ ಆಗಿದ್ರಾ? ಅದು ಕೂಡ ಇಲ್ಲ. ವಿಪಕ್ಷ ನಾಯಕ, ಇಲ್ಲ. ಚುನಾವಣೆಗೆ ಸ್ಪರ್ಧಿಸಿ ಶಾಸಕ, ಸಂಸದ ಆಗಿದ್ದಾರಾ? ಇಲ್ಲ. ಹೋಗಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯ, ಅದು ಕೂಡ ಇಲ್ಲ. ಇವರ ಪಕ್ಷ ಕೂಡ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿಲ್ಲ ಮತ್ತು ಮುಂದಕ್ಕೆ ಬರುವ ಲಕ್ಷಣಗಳೂ ಕೂಡ ಇಲ್ಲ. ಆದರೆ ಇವರು ಮುಂಬೈಯಲ್ಲಿ ನಿಂತು ಘರ್ಜಿಸಿದ ವಿಷಯ ಕೇಳಿ ಮಹಾರಾಷ್ಟ್ರದ ಮಸೀದಿಗಳು ಬಿಡಿ, ಸರಕಾರವೇ ಒಂದು ಕ್ಷಣ ಬೆಚ್ಚಿದೆ. ಅಷ್ಟಕ್ಕೂ ಅಲ್ಲಿನ ಸಿಎಂ ಇವರ ಸ್ವಂತ ಕಸಿನ್. ಆದರೆ ಅಧಿಕಾರವೆಂಬ ಮಂಚ ಹಂಚಿಕೊಂಡಿರುವುದು ಕಾಂಗ್ರೆಸ್ ಮತ್ತು ಎನ್ ಸಿಪಿಯೊಂದಿಗೆ. ಆದರೂ ಕಟ್ಟಾ ಹಿಂದೂ ರಕ್ತಕ್ಕೆ ಹುಟ್ಟಿದ ಶಿವಸೇನೆ ಎನ್ನುವ ಪಕ್ಷ ರಾಜ್ ಠಾಕ್ರೆಯ ಈ ಹೊಸ ಘೋಷಣೆಗೆ ಏನು ರಿಯಾಕ್ಷನ್ ಕೊಡಬೇಕು ಎಂದು ಅರ್ಥ ಆಗದೇ ತಲೆಕೆಡಿಸಿಕೊಂಡಿದೆ. ರಾಜ್ ಹೇಳಿದಿಷ್ಟೇ. ಮೇ 2 ಕೊನೆಯ ದಿನ. ಮಹಾರಾಷ್ಟ್ರದ ಅಷ್ಟೂ ಮಸೀದಿಗಳ ಮೇಲಿರುವ ಲೌಡ್ ಸ್ಪೀಕರ್ ತೆಗೆದು ಕಪಾಟಿನೊಳಗೆ ಇಟ್ಟುಬಿಡಿ. ಮೇ 3 ಕ್ಕೆ ಯಾವುದಾದರೂ ಮಸೀದಿ ಮೇಲೆ ಲೌಡ್ ಸ್ಪೀಕರ್ ಇದ್ರೆ ನಾವು ಅಲ್ಲಿಯೇ ಎದುರು ಸೌಂಡ್ ಸಿಸ್ಟಮ್ ಜೊತೆ ಹನುಮಾನ್ ಚಾಲೀಸಾ ಓದಲಿದ್ದೇವೆ. ಹೀಗೆ ಅವರು ಹೇಳಿದ ನಂತರ ಮೇ 3 ಕ್ಕೆ ಏನಾಗಲಿದೆ ಎಂದು ಬಾಳಾ ಠಾಕ್ರೆ ಎನ್ನುವ ಹಿಂದೂ ಹುಲಿಯ ಹೊಟ್ಟೆಯಲ್ಲಿ ಹುಟ್ಟಿರಬಹುದು ಎಂದು ಅಂದುಕೊಳ್ಳುವ ಉದ್ಭವ್ ಠಾಕ್ರೆ ಎನ್ನುವ ಸಿಎಂಗೆ ಗೊತ್ತಿರುತ್ತದೆ.
ಮಹಾರಾಷ್ಟ್ರದಲ್ಲಿ ಅಂದು ಹೆಚ್ಚುವರಿ ಭದ್ರತಾ ದಳಗಳನ್ನು ತಯಾರು ಮಾಡಿ ಇಟ್ಟುಕೊಳ್ಳಬೇಕಾಗಬಹುದು. ಆದರೆ ಈಗಿನ ಬೆಳವಣಿಗೆಯನ್ನು ನೋಡುವಾಗ ಮಿಲಿಟರಿಯನ್ನೇ ತರಬೇಕಾದೀತೋ ಎಂದು ಅನಿಸುತ್ತದೆ. ಅದಕ್ಕೆ ಕಾರಣ ರಾಜ್ ಠಾಕ್ರೆ ನಮ್ಮ ಮಸೀದಿಗಳಿಗೆ ಕೈ ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಾಂಬ್ ಹಾಕಿದ್ದು ಪಿಎಫ್ ಐ ರಾಷ್ಟ್ರೀಯ ಅಧ್ಯಕ್ಷ. ಅಲ್ಲಿಗೆ ಮಹಾರಾಷ್ಟ್ರದಲ್ಲಿ ಆಂತರಿಕ ಯುದ್ಧ ಬಹುತೇಕ ನಿಶ್ಚಿತ ಎಂದು ಯಾರಿಗಾದರೂ ಅನಿಸುತ್ತದೆ. ಹಾಗಾದರೆ ಇದನ್ನು ತಡೆಯುವುದು ಹೇಗೆ? ಒಂದು ವಿಚಾರ ನಿಯಂತ್ರಣ ಮೀರಿದಾಗ ಅದು ಹೀಗೆ ಆಗುವುದು. ಹಿಜಾಬ್ ತೆಗೆದಿಟ್ಟು ಕ್ಲಾಸ್ ಒಳಗೆ ಕುಳಿತು ಪಾಠ ಕೇಳಿ ಎನ್ನುವುದನ್ನು ಉಡುಪಿಯ ಆರು ಜನ ಮುಸ್ಲಿಂ ಹುಡುಗಿಯರು ಯಾವ ರೀತಿ ಬಿಂಬಿಸಿದರು ಎಂದರೆ ತಮ್ಮ ಶಿಕ್ಷಣದ ಹಕ್ಕನ್ನೇ ಮೊಟಕುಗೊಳಿಸಲಾಯಿತು ಎನ್ನುವಂತೆ ಸೀನ್ ಕ್ರಿಯೇಟ್ ಮಾಡಿದರು. ಅವರು ಆ ವಿಷಯವನ್ನು ವೈಭವಿಕರಿಸದಿದ್ದರೆ ಇವತ್ತು ಬಡಪಾಯಿ ಮುಸ್ಲಿಂ ವ್ಯಾಪಾರಿಗಳು ಹಿಂದೂಗಳ ಜಾತ್ರೆಯಲ್ಲಿ ವ್ಯಾಪಾರ ಕೂಡ ಮಾಡಬಹುದಿತ್ತು, ಹಲಾಲ್ ಉತ್ಪನ್ನಗಳಿಗೆ ಏನೂ ವ್ಯಾಪಾರದ ಕೊರತೆ ಆಗುತ್ತಿರಲಿಲ್ಲ ಮತ್ತು ಅಜಾನ್ ಎಂದಿನಂತೆ ಗಟ್ಟಿಯಾಗಿ ಇಟ್ಟು ನಿಮ್ಮ ದರ್ಬಾರ್ ನಡೆಸಬಹುದಿತ್ತು.
ಆದರೆ ಉಡುಪಿಯಲ್ಲಿ ಆ ಹುಡುಗಿಯರನ್ನು ಮುಂದಿಟ್ಟು ಮುಸ್ಲಿಂ ಸಂಘಟನೆಗಳು ಬಿಚ್ಚಿದ ಬಾಲವನ್ನು ಈಗ ಹಿಂದೂ ಸಂಘಟನೆಗಳು ಕಟ್ ಮಾಡಲು ತಯಾರಾಗಿರುವಾಗ ಈಗ ಏನೂ ಆಗದಂತೆ ಆ ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿ ಸಿಎಂ ಅವರಿಗೆ ಟ್ವಿಟ್ ಮಾಡಿ ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅನುಮತಿ ಕೇಳುವ ನಾಟಕ ಮಾಡುತ್ತಿದ್ದಾಳೆ. ಈಗ ಲೌಡ್ ಸ್ಪೀಕರ್ ವಿಷಯ ಮಹಾರಾಷ್ಟ್ರದಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆಯೋ ಅದೇ ಕಾವು ನಂತರ ಕರಾವಳಿಯಲ್ಲಿ ಕೂಡ ಹುಟ್ಟಿಕೊಳ್ಳಲಿದೆ. ಈಗಾಗಲೇ ಮಾನ್ಯ ನ್ಯಾಯಾಲಯಗಳು ಈ ಶಬ್ದ ಮಾಲಿನ್ಯದಿಂದ ಆಗುವ ತೊಂದರೆಯ ಬಗ್ಗೆ ಆದೇಶ ನೀಡಿವೆ. ಆದರೆ ಇಲ್ಲಿಯ ತನಕ ಯಾವುದೇ ಹಿಂದೂ ಸಂಘಟನೆಗಳು ಆಜಾನ್ ನಿಮ್ಮ ಮಸೀದಿಯ ಹೊರಗೆ ಕೇಳಿಸಬಾರದು ಎಂದು ಎಚ್ಚರಿಕೆ ಕೊಟ್ಟಿರಲಿಲ್ಲ. ಇರ್ಲಿ ಬಿಡಿ, ಏನಾದರೂ ಮಾಡಿಕೊಳ್ಳಿ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಯಾವಾಗ ಹೈಕೋರ್ಟ್ ಆದೇಶದ ವಿರುದ್ಧ ಮುಸ್ಲಿಮರು ಕರ್ನಾಟಕ ಬಂದ್ ಕರೆಕೊಟ್ಟರಲ್ಲ, ಅದರ ನಂತರ ಈ ದೇಶದ ಸಂವಿಧಾನ ಅನುಸರಿಸದವರು ಈ ದೇಶದ ನಿಯಮಗಳನ್ನು ಹೇಗೆ ಅನುಸರಿಸಬೇಕು ಎಂದು ತೋರಿಸಿಕೊಡುತ್ತೇವೆ ಎಂದು ಹಿಂದೂ ಸಂಘಟನೆಗಳು ತಮ್ಮ ತೋಳು ಮಡಚಿ ಹೊರಟಿವೆ.
ಇನ್ನು ಹನುಮಾನ ಚಾಲೀಸವನ್ನು ಪಠಿಸಲು ತಯಾರಾಗಿರುವ ತಂಡಗಳಿಗೆ ಉಚಿತವಾಗಿ ಲೌಡ್ ಸ್ಪೀಕರ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮಧ್ಯ ಪ್ರದೇಶದ ಸಂಸದರೊಬ್ಬರು ಘೋಷಿಸಿದ್ದಾರೆ. ಹಿಂದೂಗಳು ಈ ರೀತಿಯಲ್ಲಿ ಘೋಷಣೆ ಮಾಡಿದರೆ ಅವರನ್ನು ಕೋಮುವಾದಿಗಳು ಎಂದು ಹಣೆಪಟ್ಟಿ ಕಟ್ಟುವವರು ಇದ್ದಾರೆ. ಅದೇ ಪಿಎಫ್ ಐ ಸಂಘಟನೆಯವರು ನಮ್ಮ ರಾಮ ನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಿದರೂ ಅವರನ್ನು ಕೇಳುವವರು ಯಾರೂ ಇಲ್ಲ. ಪ್ರಸ್ತುತ ಪಿಎಫ್ ಐ ಸಂಘಟನೆಯನ್ನು ನಿಷೇಧಿಸೋಣವೇ ಎಂದು ಕೇಂದ್ರ ಸರಕಾರ ಚಿಂತನೆ ಮಾಡುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಮೇ 3 ರಂದು ಪಿಎಫ್ ಐ ಗಲಾಟೆ ಮಾಡಲು ಹೊರಟರೆ ಅದು ಅದರ ಅಂತ್ಯದ ಮೊದಲ ದಿನವಾದರೂ ಅಚ್ಚರಿ ಇಲ್ಲ..!
Leave A Reply