• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹನುಮಾನ್ ಚಾಲೀಸಾ ಹಿಡಿದವರಿಗೆ ಈ ರೀತಿ ಹಿಂಸೆಯಾ ಉದ್ಭವ್!!

Hanumantha Kamath Posted On April 26, 2022


  • Share On Facebook
  • Tweet It

ಹನುಮಾನ ಚಾಲೀಸಾ ಓದುತ್ತೇವೆ ಎಂದು ಹೇಳಿದವರನ್ನು ಜೈಲಿಗೆ ಹಾಕಲಾಗಿದೆ ಎಂದು ನೀವು ಎಲ್ಲಿಯಾದರೂ ಓದಿದರೆ ಅದು ಪಾಕಿಸ್ತಾನ ಎಂದು ಅಂದುಕೊಳ್ಳಬೇಡಿ. ಅದು ನಡೆದಿರುವುದು ಭಾರತದಲ್ಲಿಯೇ. ಅದು ಕೂಡ ಮಹಾರಾಷ್ಟ್ರದಲ್ಲಿ ಮತ್ತು ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಶಿವಸೇನೆ ಎನ್ನುವಂತಹ ಹಿಂದೂತ್ವದ ಪಕ್ಷ ಆಳುತ್ತಿದ್ದ ಸಮಯದಲ್ಲಿಯೇ ಹೀಗೆ ನಡೆಯುತ್ತಿದೆ. ದುಷ್ಟರೊಡನೆ ಸೇರಬೇಡಾ, ಕೆಡುತ್ತಿಯಾ ಎಂದು ನಮಗೆ ಚಿಕ್ಕದಿರುವಾಗ ಹಿರಿಯರು ಹೇಳುತ್ತಿದ್ದರು. ನಾವು ಅದನ್ನು ಕೇಳಿದೆವೋ, ಬಿಟ್ಟೆವೋ ದೇವರಿಗೆ ಗೊತ್ತು. ಆದರೆ ಬಾಳಾ ಠಾಕ್ರೆಯವರ ಮಗ ಎಂದು ಹೇಳಲಾಗುತ್ತಿರುವ ಉದ್ಭವ ಠಾಕ್ರೆಯನ್ನು ತಾವಿದಷ್ಟು ದಿನ ಬಾಳಾ ಠಾಕ್ರೆಯವರು ದುಷ್ಟರೊಡನೆ ಸೇರಲು ಬಿಟ್ಟಿರಲಿಲ್ಲ. ಆದರೆ ಯಾವಾಗ ಬಾಳಾ ಠಾಕ್ರೆ ಅಸ್ತಂಗತರಾದರೋ ಆವತ್ತಿನಿಂದ ಉದ್ಭವ್ ಎನ್ನುವ ಮನುಷ್ಯನಿಗೆ ಏನಾಗಿದೆಯೋ ಗೊತ್ತಾಗುತ್ತಿಲ್ಲ. ಅವರೀಗ ದುಷ್ಟರ ಸಂಗದಲ್ಲಿ ಇದ್ದಾರೆ. ಆದ್ದರಿಂದ ಅವರಿಗೆ ಹನುಮಾನಾ ಚಾಲೀಸಾಗಿಂತ ಆಜಾನ್ ಹಿತವೆನಿಸುತ್ತದೆ.

ಹನುಮಾನ್ ಚಾಲೀಸಾ ಓದುತ್ತೇವೆ ಎಂದು ಹೇಳುವವರು ದೇಶದ್ರೋಹಿಗಳು ಎಂದು ಅನಿಸುತ್ತಾರೆ. ಅಂತವರನ್ನು ಹೆಡೆಮುರಿ ಕಟ್ಟಿ ಜೈಲಿನೊಳಗೆ ಬಿಟ್ಟು ಬರುವ ಸಂಪ್ರದಾಯವನ್ನು ಉದ್ಭವ್ ಮಾಡುತ್ತಿದ್ದಾರೆ. ಪಾಪದವರ ಮೇಲೆ ಹೀಗೆ ಮಾಡಿದರೆ ತಮ್ಮ ಪೌರುಷ ಸುದ್ದಿಯಾಗಲ್ಲ ಎಂದು ಅಂದುಕೊಂಡಿರುವ ಇವರು ನೇರವಾಗಿ ದೊಡ್ಡದ್ದಕ್ಕೆ ಕೈ ಹಾಕಿದ್ದಾರೆ. ನೇರವಾಗಿ ತಮ್ಮದೇ ರಾಜ್ಯದ ಸಂಸದೆ ಹಾಗೂ ಆಕೆಯ ಪತಿ ಶಾಸಕರೂ ಆಗಿರುವ ಜನಪ್ರತಿನಿಧಿಗಳಿಬ್ಬರನ್ನು ಜೈಲಿನ ಕಂಬಿಗಳ ಹಿಂದೆ ನಿಲ್ಲಿಸಿ ಬಂದಿದ್ದಾರೆ. ಈ ಮೂಲಕ ಶಿವಸೇನೆಯ ಒಂದಿಷ್ಟು ಕಾರ್ಯಕರ್ತರಿಗೆ ಅವರು ಹೀರೋ ಅನಿಸುತ್ತಿರಬಹುದು. ಆದರೆ ಮಹಾರಾಷ್ಟ್ರದಲ್ಲಿ ಯಾವುದರಲ್ಲಿಯೂ ಇಲ್ಲದ ಅಸಂಖ್ಯಾತ ಹಿಂದೂಗಳು ಇದ್ದಾರಲ್ಲ, ಅವರ ಪಾಲಿನ ವಿಲನ್ ಆಗಿ ಉದ್ಭವ್ ಕಂಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಶರದ್ ಪವಾರ್ ಪಕ್ಷ ಇದೆಯಲ್ಲ, ಅವರು ಚಪ್ಪಾಳೆ ತಟ್ಟಿ ಸ್ವಾಗತಿಸಿರಬಹುದು. ಆದರೆ ಎಷ್ಟೋ ಜನಸಾಮಾನ್ಯರು ಇದ್ದಾರಲ್ಲ, ಅವರಿಗೆ ಉದ್ಭವ್ ಮೇಲೆ ಅಸಹ್ಯ ಬಂದಿರಬಹುದು. ಇಷ್ಟೇ ಆಗಿದ್ದರೆ ಇದು ಉದ್ಭವ್ ಠಾಕ್ರೆದ್ದು ದ್ವೇಷದ ರಾಜಕೀಯ ಎನ್ನಬಹುದು. ಯಾಕೆಂದರೆ ಅಮರಾವತಿಯ ಸಂಸದೆ ನವನೀತ್ ಕೌರ್ ಪಕ್ಷೇತರರಾಗಿ ಗೆದ್ದವರು. ಅದು ಕೂಡ ಮಹಾರಾಷ್ಟ್ರದಲ್ಲಿ. ಇನ್ನು ಆಕೆಯ ಪತಿ ಕೂಡ ಪಕ್ಷೇತರ ಶಾಸಕ. ಆರಂಭದಲ್ಲಿ ಇವರು ಕಾಂಗ್ರೆಸ್ ಮತ್ತು ಎನ್ ಸಿಪಿಯ ಬೆಂಬಲ ಪಡೆದುಕೊಂಡಿದ್ದರು. ತದನಂತರ ಭಾರತೀಯ ಜನತಾ ಪಾರ್ಟಿಯ ಸಂಪರ್ಕಕ್ಕೆ ಬಂದಿದ್ದಾರೆ. ಇವರಿಬ್ಬರು ಠಾಕ್ರೆಯನ್ನು ಎದುರು ಹಾಕಿಕೊಂಡು ಹನುಮಾನ್ ಚಾಲೀಸಾದ ಹೇಳಿಕೆ ಕೊಟ್ಟರಲ್ಲ, ಠಾಕ್ರೆ ಹಿಂದಿರುವ ಕಾಂಗ್ರೆಸ್ ಮತ್ತು ಎನ್ ಸಿಪಿ “ಛೋಡನೇಕೋ ನಹಿ” ಎಂದಿದೆ. ಯಾಕೆಂದರೆ ಕೌರ್ ಮತ್ತು ರವಿ ಮೇಲೆ ಇವುಗಳಿಗೆ ದ್ವೇಷ ಇದೆ. ಅದರೊಂದಿಗೆ ಇವರ ಹಿಂದೆ ಬಿಜೆಪಿ ಇದೆಯೆಂದು ಗೊತ್ತಾಯಿತ್ತಲ್ಲ, ಈ ಸಂಸದೆ ಹಾಗೂ ಶಾಸಕನಿಗೆ ಎಷ್ಟು ಕಿರುಕುಳ ನೀಡಲಾಗಿದೆ ಎಂದರೆ ಅವರಿಗೆ ಜೀವ ಬಾಯಿಗೆ ಬಂದಂತೆ ಆಗಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಮೆರೆದಿದ್ದ ನವನೀತ್ ಕೌರ್ ಅವರಿಗೆ ಬೈತುಲಾ ಮಹಿಳಾ ಜೈಲಿನಲ್ಲಿ ಕೆಟ್ಟ ಕೋಣೆ ನೀಡಲಾಗಿದೆ. ಅಲ್ಲಿನ ಪರಮ ಕೊಳಕು ಶೌಚಾಲಯ ನೀಡಲಾಗಿದೆ. ಬಾತ್ ರೂಂ ಸರಿಯಾಗಿ ಕೊಟ್ಟಿಲ್ಲ. ಕುಡಿಯುವ ನೀರು ಕುಡಿಯಲು ಯೋಗ್ಯವಲ್ಲದ್ದು ನೀಡಲಾಗಿದೆ. ಇನ್ನು ಪದೇ ಪದೇ ಆಕೆಯ ಜಾತಿಯನ್ನು ಅವಮಾನಿಸುವವರ ಸುತ್ತಲೂ ಹಾಕಲಾಗಿದೆ. ಇದು ಉದ್ಭವ್ ಅವರಿಗೆ ಶೋಭೆ ತರುವುದಿಲ್ಲ ಎಂದು ನಾನು ಹೇಳುತ್ತಿರುವುದು.

ನವನೀತ್ ಕೌರ್ ನಿಮ್ಮ ವಿರುದ್ಧ ಮಾತನಾಡಿರಬಹುದು. ಆದರೆ ಆಕೆ ಕ್ರಿಮಿನಲ್ ಅಲ್ಲ. ಬಾಂಬ್ ಇಟ್ಟು ಸಿಕ್ಕಿಬಿದ್ದವಳಲ್ಲ. ಅವಳು ಲಕ್ಷಾಂತರ ಜನರ ಮತದಿಂದ ಗೆದ್ದು ಬಂದವರು. ಸಂಸದೆಯಾಗಿ ಕೆಲಸ ಮಾಡುತ್ತಿರುವವರು. ಒಬ್ಬ ಭಯೋತ್ಪಾದಕಿಯನ್ನು ನಡೆಸಿಕೊಂಡಷ್ಟು ಕೆಟ್ಟದಾಗಿ ನೀವು ನಡೆಸಿಕೊಳ್ಳಬೇಕಾಗಿಲ್ಲ. ಇದೆಲ್ಲದರ ವಿರುದ್ಧ ಕೌರ್ ಸಂಸತ್ತಿನ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲಿಂದ ಮಹಾರಾಷ್ಟ್ರ ಸರಕಾರಕ್ಕೆ ವಿವರಣೆ ಕೇಳಿ ಸೂಚನೆ ಬರಬಹುದು. ಯಾಕೆಂದರೆ ಇದನ್ನು ಮಾನವೀಯತೆ ಉಳ್ಳ ಯಾರಾದರೂ ಒಪ್ಪಲು ಸಾಧ್ಯವೇ ಇಲ್ಲ. ಹಿಂದೆ ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪುರೋಹಿತ್ ಅವರನ್ನು ಆಗಿನ ಮಹಾರಾಷ್ಟ್ರ ಸರಕಾರ ಕೆಟ್ಟದಾಗಿ ನಡೆಸಿಕೊಂಡಾಗ ಇದೇ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿತ್ತು.

ಹಿಂದೂಗಳನ್ನು ನಡೆಸಿಕೊಳ್ಳುವುದು ಈ ರೀತಿ ಸರಿಯಾ ಎಂದು ಪ್ರತಿಭಟನೆ ಮಾಡಿತ್ತು. ಆಗ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿತ್ತು. ಈಗ ನಿಮ್ಮದೇ ಸರಕಾರ ಇದೆ. ನೀವು ಯಕಶ್ಚಿತ್ ಒಂದು ಹೇಳಿಕೆಗೆ ಈ ಪರಿ ವರ್ತಿಸಿದರೆ ಹೇಗೆ ಉದ್ಭವ್? ನವನೀತ್ ಹಾಗೂ ರವಿ ರಾಣಾ ಅವರನ್ನು ಚಿತ್ರಹಿಂಸೆ ನೀಡುವ ಮೂಲಕ ನೀವು ನಿಮ್ಮ ಕಸಿನ್ ರಾಜ್ ಠಾಕ್ರೆ ಅವರಿಗೆ ಪರೋಕ್ಷ ಎಚ್ಚರಿಕೆ ಕೊಡಲು ಹೊರಟಿರುವಂತಿದೆ. ಈ ವಿಷಯ ಹಿಡಿದುಕೊಂಡು ಬಿಜೆಪಿಯ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಸುದ್ದಿಗೋಷ್ಟಿ ಮಾಡಿದ್ದಾರೆ. ಬಿಜೆಪಿ ಇಂತಹ ವಿಷಯಗಳನ್ನು ಬಿಡುವ ಪ್ರಶ್ನೆಯೇ ಬರೋದಿಲ್ಲ. ಆದರೆ ಬಿಜೆಪಿಗೆ ಇಂತಹ ವಿಷಯವನ್ನು ಹರಿವಾಣದಲ್ಲಿ ಇಟ್ಟುಕೊಂಡು ಕೊಡುವವರು ಮೊದಲೇ ಯೋಚಿಸಲ್ವಾ ಎನ್ನುವುದು ಪ್ರಶ್ನೆ ಮತ್ತು ಆಶ್ಚರ್ಯ!!

  • Share On Facebook
  • Tweet It


- Advertisement -


Trending Now
ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
Hanumantha Kamath February 6, 2023
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
Leave A Reply

  • Recent Posts

    • ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
  • Popular Posts

    • 1
      ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • 2
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 3
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 4
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search