• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ತಂಗಿ ವಿಧವೆಯಾದರೂ ಕಾಫೀರರ ಹತ್ಯೆ ಆಗಲೇಬೇಕಾ?

Hanumantha Kamath Posted On May 7, 2022
0


0
Shares
  • Share On Facebook
  • Tweet It

ಹೈದ್ರಾಬಾದಿನಲ್ಲಿ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ಹಿಂದೂ ಯುವಕ ಮದುವೆಯಾದ ಕೆಲವೇ ಸಮಯದಲ್ಲಿ ಬೀದಿ ಹೆಣವಾಗಿದ್ದಾನೆ. ಆಕೆಯ ಸಹೋದರ ಮತ್ತು ಸಂಬಂಧಿಕರು ನಡುರಸ್ತೆಯಲ್ಲಿಯೇ ಅಡ್ಡ ಹಾಕಿ ಯುವಕನ ಮೇಲೆ ತಲವಾರು ಬೀಸಿದ್ದಾರೆ. ಯುವತಿ ಪರಿಪರಿಯಾಗಿ ಬೇಡಿಕೊಂಡರೂ ಆಕೆಯ ರಕ್ತ ಸಂಬಂಧಿಗಳಿಗೆ ಕರುಣೆ ಬರಲಿಲ್ಲ. ಅವರ ಆಕ್ರೋಶಕ್ಕೆ ಒಬ್ಬ ಅಮಾಯಕ ವ್ಯಕ್ತಿ ತನ್ನ ಪತ್ನಿಯ ಕಣ್ಣೇದುರೇ ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ಪ್ರಾಣ ಬಿಡುವಂತಾಗಿದೆ. ಹಾಗಂತ ನಿರ್ಜನ ಪ್ರದೇಶದಲ್ಲಿರುವ ಒಂಟಿ ಮನೆಗೆ ನುಗ್ಗಿ ನಡೆದಿರುವ ಹತ್ಯೆ ಇದಲ್ಲ. ಇದು ಜನನಿಬಿಡ ರಸ್ತೆಯ ಮಧ್ಯದಲ್ಲಿಯೇ ಗಂಡ, ಹೆಂಡತಿ ಬೈಕಿನಲ್ಲಿ ಹೋಗುವಾಗ ತಡೆದು ನಿಲ್ಲಿಸಿ ಹತ್ಯೆ ಮಾಡಲಾಗಿದೆ. ಈ ರಕ್ತದ ಓಕುಳಿ ನಡೆಯುವಾಗ ಅಲ್ಲಿ ಸುತ್ತಲೂ ಸಾರ್ವಜನಿಕರು ಇದ್ದರು. ಹೆಚ್ಚಿನವರು ವಿಡಿಯೋ ಮಾಡುತ್ತಿದ್ದರು. ಪೊಲೀಸರ ವಿಚಾರಣೆಯಲ್ಲಿ ಅವಳು ಹೇಳಿದ ಮಾತು ಹೃದಯಕ್ಕೆ ನಾಟುವಂತಿದೆ. ನನ್ನ ಗಂಡನನ್ನು ಉಳಿಸಿಕೊಡಿ ಎಂದು ಬೇಡಿಕೊಂಡೆ. ಆದರೆ ಯಾರೂ ಬರಲಿಲ್ಲ ಎಂದು ಆ ಯುವತಿ ನೋವು ತೋಡಿಕೊಂಡಿದ್ದಾಳೆ. ಹತ್ಯೆಗೆ ಒಳಗಾಗಿ ನಾಗರಾಜು ನರಳುತ್ತಾ ಸಾಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಅದನ್ನು ನೋಡುವಾಗ ನಿಜಕ್ಕೂ ತುಂಬಾ ಬೇಸರವಾಗುತ್ತದೆ. ಯಾಕೆಂದರೆ ಒಬ್ಬ ಯುವತಿ ತನ್ನ ಗಂಡನನ್ನು ಉಳಿಸಲು ಪರಿತಪಿಸಿದ ದೃಶ್ಯ ನಿಜಕ್ಕೂ ಸಿನೆಮಾದಲ್ಲಿ ನೋಡುವಾಗಲೇ ಅಷ್ಟು ವಿದ್ರಾವಕವಾಗಿರುವಾಗ ನೈಜವಾಗಿಯೂ ನಡೆದರೆ ಹೇಗಾಗಬೇಡಾ. ಕೊನೆಗೂ ಪೊಲೀಸರು ಬಂದು ಜನ ಸೇರಿ ಆ ಹಂತಕರನ್ನು ಹಿಡಿದರು. ಆದರೆ ಅಷ್ಟರಲ್ಲಿ ನಾಗರಾಜುವಿನ ಪ್ರಾಣ ಹಾರಿ ಹೋಗಿತ್ತು. ಪತ್ನಿ ಸುಲ್ತಾನಾ ವಿಧವೆಯಾಗಿ ಆಗಿತ್ತು. ಒಂದು ಮರ್ಯಾದಾ ಹತ್ಯೆಯಿಂದ ಸುಲ್ತಾನಾ ಮನೆಯವರು ಸಾಧಿಸಿದ್ದಾದರೂ ಏನು? ಒಂದು ವೇಳೆ ನಾಗರಾಜು ತಮ್ಮ ಸಹೋದರಿಗೆ ಕಿರುಕುಳ, ಚಿತ್ರಹಿಂಸೆ ನೀಡುತ್ತಿದ್ದರೆ ಆಗಲೂ ಅವನನ್ನು ಕೂರಿಸಿ ಬುದ್ಧಿ ಹೇಳಬಹುದಾಗಿತ್ತು. ಆದರೆ ನಾಗರಾಜು ತನ್ನ ಪತ್ನಿ ಸುಲ್ತಾನಾಳನ್ನು ಎಷ್ಟು ಪ್ರೀತಿಸುತ್ತಿದ್ದ ಎಂದರೆ ಈದ್ ದಿನ ಆಕೆಗೆ ತನ್ನ ಬಂಗಾರದ ಚೈನ್ ಮಾರಿ ಆ ಹಣದಿಂದ ಉಡುಗೊರೆ ತಂದು ಕೊಟ್ಟಿದ್ದ. ಈದ್ ಅವಳ ಹಬ್ಬ, ನಾನು ಯಾಕೆ ಅವಳಿಗೆ ಉಡುಗೊರೆ ಕೊಡುವುದು ಎಂದು ಅಂದುಕೊಂಡಿರಲಿಲ್ಲ. ಅವಳು ಹಿಂದೂವಿಗೆ ಮದುವೆಯಾದ ನಂತರ ಯಾಕೆ ಈದ್ ಆಚರಿಸಬೇಕು ಎಂದು ಹೇಳಿಲ್ಲ. ಅವಳಿಗೆ ಉಡುಗೊರೆ ತರಲು ತನ್ನ ಬಂಗಾರದ ಚೈನ್ ಅಡವು ಯಾಕೆ ಇಡಬೇಕು ಎಂದು ಭಾವಿಸಿಲ್ಲ. ಎಲ್ಲವನ್ನು ತನ್ನ ಪ್ರೀತಿಗೆ ಧಾರೆ ಎರೆದಿದ್ದ. ಹಾಗಿರುವಾಗ ತಮ್ಮ ಸಹೋದರಿ ಎಲ್ಲಿ ಇದ್ದರೂ ಖುಷಿಯಾಗಿರಲಿ ಎಂದು ಆಕೆಯ ಮನೆಯವರು ಅಂದುಕೊಳ್ಳಬೇಕಿತ್ತು.

ಆದರೆ ಈ ಮೈಂಡ್ ವಾಶ್ ಎನ್ನುವುದು ಹೇಗಿರುತ್ತೆ ಎಂದರೆ ಕಾಫೀರನಿಗೆ ಮದುವೆ ಮಾಡಿ ಕೊಡುವುದಾ ಎನ್ನುವ ಮನೋಸ್ಥಿತಿ ಅವರಿಂದ ಇಂತಹ ಕೃತ್ಯ ಮಾಡಿಸುತ್ತದೆ. ಅದಕ್ಕೆ ಸಾಕ್ಷ್ಯ ಏನೆಂದರೆ ಒಬ್ಬರ ಮೌಲ್ವಿಯ ಮಾತುಗಳು.
ಆ ನಾಗರಾಜು ದಲಿತ ಸಮಾಜದವನು. ಅಷ್ಟೇ ಅಲ್ಲ ದಲಿತರಲ್ಲಿಯೇ ಕಟ್ಟ ಕಡೆಯ ಜಾತಿಯವನು. ಅಂತವರಿಗೆ ದಲಿತರೇ ಹೆಣ್ಣು ಕೊಡುವುದಿಲ್ಲ. ಹಾಗಿರುವಾಗ ಅವನು ನಮ್ಮ ಸಮುದಾಯದ ಹೆಣ್ಣನ್ನು ಹೇಗೆ ಮದುವೆಯಾದ ಎಷ್ಟು ಪ್ರಶ್ನಿಸಿದ್ದು ಒಬ್ಬ ಮೌಲ್ವಿ. ಮುಸ್ಲಿಮ್ ಯುವಕರು ಹಿಂದೂ ಯುವತಿಯರನ್ನು ಮದುವೆಯಾಗಿ ಅವರ ಬಾಳು ಹಾಳು ಮಾಡಿ ನರಕಕ್ಕೆ ದೂಡಿದದ್ದನ್ನು ಎಷ್ಟೋ ಪ್ರಕರಣಗಳಲ್ಲಿ ನೋಡಿದ್ದೇವೆ. ಕೇಳಿದ್ದೇವೆ. ಓದಿದ್ದೇವೆ. ಹತ್ತರಲ್ಲಿ ಒಂಭತ್ತು ಲವ್ ಜಿಹಾದ್ ಮದುವೆಗಳು ಟ್ರಾಜಿಡಿಯಲ್ಲಿಯೇ ಕೊನೆಗೊಳ್ಳುತ್ತವೆ. ಆದರೆ ಹಿಂದೂ ಯುವಕರು ಮುಸ್ಲಿಮ್ ಯುವತಿಯರನ್ನು ಮದುವೆಯಾದರೆ ಹತ್ತರಲ್ಲಿ ಒಂಭತ್ತು ಯಶಸ್ವಿಯಾಗುತ್ತವೆ. ಒಂದು ಹೀಗೆ ಸಾವಿನಲ್ಲಿ ಪರ್ಯಾವಸನಗೊಳ್ಳುತ್ತವೆ. ಹಾಗಾದರೆ ಇದಕ್ಕೆ ಅಂತ್ಯವಿಲ್ಲವೇ? ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ಯಾಕೆ ಆತಂಕದಲ್ಲಿಯೇ ಬಾಳಬೇಕಾಗುತ್ತದೆ. ಯಾವಾಗ ಅವಳ ಅಣ್ಣ, ತಮ್ಮಂದಿರು ದಾಳಿ ಮಾಡುತ್ತಾರೆ ಎಂದು ಹೆದರಿ ಯಾಕೆ ಇರಬೇಕಾಗುತ್ತದೆ. ಯಾಕೆಂದರೆ ಅವರಲ್ಲಿ ಮತಾಂತರ ಮತ್ತು ಕಾಫೀರರ ಹತ್ಯೆ ಎರಡನ್ನು ಕಲಿಸಲಾಗುತ್ತದೆ. ತಮ್ಮ ಸಮುದಾಯದ ಹೆಣ್ಣುಮಕ್ಕಳು ಬೇರೆ ಸಮುದಾಯದವರನ್ನು ಮದುವೆಯಾಗುವುದನ್ನು ಅವರು ಒಪ್ಪುವುದಿಲ್ಲ. ಇಲ್ಲದಿದ್ದರೆ ಒಬ್ಬ ಅಣ್ಣ ತನ್ನ ತಂಗಿ ವಿಧವೆಯಾದರೂ ಪರವಾಗಿಲ್ಲ ಎಂದು ಆಕೆಯ ಗಂಡನನ್ನು ಹತ್ಯೆ ಮಾಡುತ್ತಾನಾ? ಇದನ್ನು ಪ್ರತಿ ಸಮಾಜದವರು ಕೂಡ ಖಂಡಿಸಬೇಕು. ವಿಶೇಷವಾಗಿ ಮುಸ್ಲಿಂ ಸಮುದಾಯದ ಮುಖಂಡರು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ. ಹೆದರಿಕೆ ನೀವು ಹುಟ್ಟಿಸಿ ಏನೂ ಸಾಧಿಸಲಾರಿರಿ. ನಿಮ್ಮ ಭಗವಂತ ಕೂಡ ಇದನ್ನು ಹೇಳಿರಲಾರ. ಯಾವುದೋ ತಲೆಕೆಟ್ಟವರು ಹೇಳಿದ್ದನ್ನು ಕೇಳಿ ಹಿಂದೂಗಳ ಹತ್ಯೆ ಮಾಡುತ್ತಾ ಹೋದರೆ ಇದಕ್ಕೆ ತಕ್ಕ ಉತ್ತರ ಸಿಕ್ಕಾಗ ನಿಮ್ಮ ಸಮುದಾಯ ಪಶ್ಚಾತ್ತಾಪ ಪಡಬೇಕಾದಿತು!

0
Shares
  • Share On Facebook
  • Tweet It




Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Hanumantha Kamath January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Hanumantha Kamath January 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
  • Popular Posts

    • 1
      ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • 2
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 3
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 4
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!

  • Privacy Policy
  • Contact
© Tulunadu Infomedia.

Press enter/return to begin your search