• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

15 ವರ್ಷಗಳ ಹಿಂದೆನೆ ಜ್ಞಾನವಾಪಿ ಕೊಳದಲ್ಲಿ ಶಿವಲಿಂಗದ ಬಗ್ಗೆ ಭೈರಪ್ಪ ಬರೆದಿದ್ದರು!!

Hanumantha Kamath Posted On May 18, 2022


  • Share On Facebook
  • Tweet It

ಕಾಶೀ ವಿಶ್ವನಾಥ ದೇವಾಲಯಕ್ಕೆ ತಾಗಿಕೊಂಡಿರುವ ಜ್ಞಾನವಾಪಿ ಮಸೀದಿಯ ಒಳಗೆ ಪ್ರವೇಶಿಸುವ ಮುಸ್ಲಿಮರು ಒಂದು ಕಾಲದಲ್ಲಿ ಕೈ ಕಾಲು ತೊಳೆಯುವ ಕೊಳ ಅಥವಾ ಬಾವಿಯಾಕಾರದ ಒಳಗೆ ಶಿವಲಿಂಗ ಪತ್ತೆಯಾಗಿರುವುದು ನಮಗೆಲ್ಲ ಗೊತ್ತೆ ಇದೆ. ಮಸೀದಿಯ ಒಳಗೆ ಸರ್ವೇ ಮಾಡದೇ ಇರಲು ಆದೇಶ ನೀಡಿ ಎಂದು ಮುಸ್ಲಿಂ ಸಂಘಟನೆಗಳು ಮಾಡಿರುವ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇದು ಮುಸ್ಲಿಂ ಸಂಘಟನೆಗಳಿಗೆ ಆದ ದೊಡ್ಡ ಹಿನ್ನಡೆ. ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಮುಂದಿನ ದಿನಗಳಲ್ಲಿ ದೂರಗಾಮಿ ಪರಿಣಾಮವನ್ನು ಉಂಟು ಮಾಡುತ್ತದೆ. ಈಗಾಗಲೇ ರಾಷ್ಟ್ರದ 36 ಮಸೀದಿಗಳ ಸರ್ವೇ ಮಾಡಿದರೆ ಅದರ ಹಿಂದೆ ತಿರುಚಿದ ಇತಿಹಾಸದ ಸತ್ಯಗಳು ಅಡಗಿವೆ ಎನ್ನುವುದು ಹಲವರ ವಾದ. ಒಂದೊಂದು ಮಸೀದಿಯಲ್ಲಿಯೂ ಆಳಕ್ಕೆ ಹೋದರೆ ಅಲ್ಲಿ ಒಂದಲ್ಲ, ಒಂದು ದೇವಸ್ಥಾನದ ಕುರುಹುಗಳು ಸಿಗಬಹುದು. ಆದ್ದರಿಂದ ಸರ್ವೇಗೆ ಅವಕಾಶ ನೀಡಬೇಡಿ ಎಂದು ಮುಸ್ಲಿಂ ಸಂಘಟನೆಗಳು ಕೇಳಿದಾಗ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದರೆ ಮುಸ್ಲಿಂ ಸಂಘಟನೆಗಳು ಅದನ್ನು ತಮ್ಮ ನೈತಿಕ ಜಯ ಎಂದು ಹೇಳುತ್ತಿದ್ದವು. ಆದರೆ ಇತಿಹಾಸದ ಕರಾಳ ಸತ್ಯಗಳು ಮಾತ್ರ ಅಲ್ಲಿಯೇ ಹುದುಗಿ ಹೋಗುತ್ತಿದ್ದವು.
ಈ ನಡುವೆ ಜ್ಞಾನವಾಪಿಯ ಒಳಗೆ ಆದ ಸರ್ವೇ ಕಾರ್ಯದ ವಿಷಯ ಬಹಿರಂಗಗೊಳಿಸಲು ಕಾರಣರಾಗಿದ್ದಾರೆ ಎನ್ನುವ ಕಾರಣಕ್ಕೆ ಕಮೀಷನರ್ ಅವರನ್ನು ಅಮಾನತುಮಾಡಲಾಗಿದೆ. ಇನ್ನು ಮುಚ್ಚಿದ ಲಕೋಟೆಯಲ್ಲಿ ವರದಿ ಕೊಡಬೇಕಿದ್ದರೂ ಅದೀಗ ಮಾಹಿತಿ ಲೀಕ್ ಆಗಿರುವುದನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಶಿವಲಿಂಗ ಪತ್ತೆಯಾಗಿದೆ ಎಂದು ಎಲ್ಲಾ ಕಡೆ ಸುದ್ದಿಯಾಗಿರುವುದರಿಂದ ಸುಪ್ರೀಂಕೋರ್ಟ್ ಕೂಡ ತನ್ನ ಆದೇಶದಲ್ಲಿ ಶಿವಲಿಂಗಕ್ಕೆ ಸೂಕ್ತ ಸೆಕ್ಯೂರಿಟಿ ನೀಡಲು ಹೇಳಿದೆ. ಇನ್ನು ಅಲ್ಲಿ ಪೊಲೀಸ್ ಬಂದೋಬಸ್ತ್ ನಲ್ಲಿ ಮಸೀದಿ ಇರುವಾಗ ನಮಾಜ್ ಮಾಡಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಇನ್ನು 350 ವರ್ಷಗಳಿಂದ ನಂದಿ ಶಿವನನ್ನು ನೋಡಲು ಕಾತರಿಸುತ್ತಿತ್ತು ಎಂದು ಈ ಸರ್ವೆಯಲ್ಲಿ ಭಾಗಿಯಾಗಿದ್ದ ಹಿಂದೂ ವಕೀಲರೊಬ್ಬರು ಹೇಳಿದ್ದರು. ಇದರ ಅರ್ಥ ಏನೆಂದರೆ ಈ ಮಸೀದಿಯ ಒಳಗಿದ್ದ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದ್ದರೆ ಅತ್ತ ಇರುವ ಜಾಗದಲ್ಲಿ ಒಂದು ನಂದಿ ವಿಗ್ರಹ ಇದೆ. ಈ ನಂದಿ ವಿಗ್ರಹಕ್ಕೂ ಶಿವಲಿಂಗಕ್ಕೂ ನಡುವೆ ಒಂದು ಗೋಡೆ ಕಟ್ಟಲಾಗಿದೆ. ಆ ಗೋಡೆಯನ್ನು ಕೆಡವಿದರೆ ಇನ್ನಷ್ಟು ಹಿಂದೂ ದೇವರಗಳ ವಿಗ್ರಹ ಸಿಗಬಹುದು ಎನ್ನುವುದು ಹಿಂದೂ ವಕೀಲರ ವಾದ. ಆದರೆ ಶಿವಲಿಂಗ ಸಿಕ್ಕಿದೆ ಎಂದು ಹಿಂದೂ ವಕೀಲರು ಹೇಳುವುದನ್ನು ನಾವು ಒಪ್ಪಿಕೊಂಡರೆ ಇದು ಭವಿಷ್ಯದಲ್ಲಿ ಇನ್ನೊಂದು ಮಸೀದಿಯನ್ನು ನಾವು ಕಳೆದುಕೊಂಡಂತೆ ಎಂದು ಮುಸ್ಲಿಂ ವಕೀಲರಿಗೆ ಓವೈಸಿ ಹೇಳಿದ್ದಾರೆ. ಓವೈಸಿ ಮೂಲತ: ವಕೀಲ. ಬ್ಯಾರಿಸ್ಟರ್ ಗೌರವ ಇದೆ. ಬ್ಯಾರಿಸ್ಟರ್ ಎಂದರೆ ಉನ್ನತ ನ್ಯಾಯಾಲಯಗಳಲ್ಲಿ ವಾದಿಸಲು ಬಾರ್ ಕೌನ್ಸಿಲ್ ಗಳಿಂದ ವಿಶೇಷ ಮಾನ್ಯತೆ ಪಡೆದ ವಕೀಲ ಎಂದೇ ಅರ್ಥ. ಇವರು ಯಾವಾಗಲೂ ಕಾನೂನಿನ ಪರಿಧಿಯಲ್ಲಿಯೇ ಮಾತನಾಡಬೇಕು. ಅದು ಬಿಟ್ಟು ನಾವು ಇದನ್ನು ಒಪ್ಪಿದರೆ ಮುಂದೆ ಬೇರೆ ಮಸೀದಿಗಳನ್ನು ಕೂಡ ಕಳೆದುಕೊಳ್ಳಬೇಕಾದಿತು ಎಂದು ಅಪ್ಪಟ ಮತಾಂಧರಂತೆ ಮಾತನಾಡುವುದು ಅವರ ಪದವಿಗೆ ಗೌರವ ತಂದುಕೊಡುವುದಿಲ್ಲ. ಓವೈಸಿ ಮಾತು ಕೇಳಿ ಮುಸ್ಲಿಂ ವಕೀಲರು ಏನು ಹೇಳಿದ್ದಾರೆ ಎಂದರೆ ಅದು ಶಿವಲಿಂಗ ಅಲ್ಲ, ಅದು ಫೌಂಟೇನ್ ಎಂದು ಹೇಳಿದ್ದಾರೆ. ಅದು ಫೌಂಟೇನ್ ಅಥವಾ ಶಿವಲಿಂಗವೋ ಎನ್ನುವುದನ್ನು ತಜ್ಞರು ಪರಿಶೀಲಿಸಿದ ನಂತರವೇ ಗೊತ್ತಾಗಲಿದೆ. ಅದಕ್ಕಾಗಿ ತಾಳ್ಮೆ ಬೇಕು.
ಇನ್ನು ನಮ್ಮ ಮೇಲೆ ದಾಳಿ ಮಾಡಿದ ಮುಸಲ್ಮಾನ ದೊರೆಗಳು ಆ ಕಾಲದಲ್ಲಿ ತಮ್ಮ ಸುತ್ತಮುತ್ತಲಿನ ದೇವಸ್ಥಾನಗಳನ್ನು ನಾಶ ಮಾಡಲು ಷಡ್ಯಂತ್ರ ರೂಪಿಸುವಾಗ ದೇವಸ್ಥಾನದ ಪುರೋಹಿತರಿಗೆ ಅದು ಮೊದಲೇ ಗೊತ್ತಾದಾಗ ಅವರು ಏನು ಮಾಡಿದರು ಎನ್ನುವುದನ್ನು ಇತಿಹಾಸ ಹೇಳುತ್ತದೆ. ನಾವು ದೇವಸ್ಥಾನವನ್ನು ಉಳಿಸಲು ಹೇಗೂ ಆಗುವುದಿಲ್ಲ. ಅದರ ಬದಲು ಕನಿಷ್ಟ ದೇವರ ವಿಗ್ರಹಗಳನ್ನು ಉಳಿಸೋಣ ಎಂದು ಅರ್ಚಕರು ಅದನ್ನು ದೇವಳದ ಆವರಣದ ಕೊಳ, ಬಾವಿ ಏನು ಸಿಗುತ್ತದೆಯೋ ಅದಕ್ಕೆ ಹಾಕುತ್ತಿದ್ದರು. ಅದರ ನಂತರ ಮೊಗಲ್ ರಾಜರು ದೇವಳದ ಮೇಲೆ ದಾಳಿ ಮಾಡಿ ಅದನ್ನು ಮಸೀದಿ ಮಾಡುತ್ತಿದ್ದರು. ಆದರೆ ಅಷ್ಟು ರಾಜರಿಗೆ ಆಗಲಿ, ಅವರ ಮಂತ್ರಿ, ಸೇನಾಧಿಪತಿಗಳಿಗೆ ಆಗಲಿ ಗೊತ್ತಿಲ್ಲದ ಸಂಗತಿ ಎಂದರೆ ದೇವರ ವಿಗ್ರಹಗಳು ಅದೇ ಆವರಣದ ಕೊಳದಲ್ಲಿ ಇದ್ದಾವೆ ಎನ್ನುವುದು. ಆ ಕೊಳದ ನೀರಿನಿಂದಲೇ ಕೈ ಕಾಲು ತೊಳೆದು ಅವರು ಮಸೀದಿ ಪ್ರವೇಶಿಸುತ್ತಿದ್ದರು. ಈಗ ಜ್ಞಾನವಾಪಿ ಮಸೀದಿಯೊಳಗೆ ಹೀಗೆ ಅಗಿತ್ತು ಎನ್ನುವುದನ್ನು ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರು ತಮ್ಮ ಆವರಣದಲ್ಲಿ ಬರೆದಿದ್ದಾರೆ. ಈ ವಿಷಯ ಹೊರಗೆ ಬಂದ ಮೇಲೆ ಅವರು ಬರೆದದ್ದಲ್ಲ, ಅವರು ಹದಿನೈದು ವರ್ಷಗಳ ಹಿಂದೆನೆ ಬರೆದ ಆವರಣ ಹೊತ್ತಗೆಯಲ್ಲಿ ಜ್ಞಾನವಾಪಿಯ ಉಲ್ಲೇಖವಿದೆ. ಅವರು ಅಷ್ಟು ಸಂಶೋಧನೆ ಮಾಡಿ ನಂತರ ಆ ಬಗ್ಗೆ ಅಂಶಗಳನ್ನು ನಮೂದಿಸಿದ್ದಾರೆ. ಇತಿಹಾಸ ಸುಳ್ಳು ಹೇಳಲ್ಲ. ಅದನ್ನು ನೋಡುವವರು ಯಾವ ಮನಸ್ಥಿತಿ ಇಟ್ಟುಕೊಂಡಿದ್ದರು ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search