• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬ್ಯಾರಿಗಳ ವೋಟ್ ಬೇಡಾ ಎಂದು ಹೇಳಬಲ್ಲ ಮುಂದಿನ ಶಾಸಕ ಯಾರು?

Hanumantha Kamath Posted On May 19, 2022


  • Share On Facebook
  • Tweet It

ಬ್ಯಾರಿಗಳ ವೋಟ್ ಬೇಡಾ, ಹಿಂದೂಗಳ ವೋಟಿನಿಂದಲೇ ಗೆಲ್ತೀನಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಬಹಿರಂಗ ವೇದಿಕೆಯಲ್ಲಿ ಘಂಟಾಘೋಷವಾಗಿ ಹೇಳಿದ್ದಾರೆ. ಹಿಂದೆ ಒಮ್ಮೆ ಈ ಮಾತನ್ನು ಉತ್ತರ ಕನ್ನಡ ಸಂಸದ ಮತ್ತು ಒಂದಿಷ್ಟು ದಿನ ಕೇಂದ್ರ ಮಂತ್ರಿಯೂ ಆಗಿದ್ದ ಅನಂತ ಕುಮಾರ್ ಹೆಗ್ಡೆ ಬಹಿರಂಗವಾಗಿ ಹೇಳಿದ್ದರು. ಅದು ಆ ದಿನಗಳಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಒಂದು ಲೋಕಸಭಾ ಕ್ಷೇತ್ರದಲ್ಲಿ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರ ಮತಬ್ಯಾಂಕ್ ಕನಿಷ್ಟ 15 ರಿಂದ 16 ಶೇಕಡಾ ಇರಬಹುದು. ಇದು ಸರಾಸರಿ ಶೇಕಡಾವಾರು. ಕೆಲವು ಕಡೆ ಒಂದೆರಡು ಶೇಕಡಾ ಆಚೀಚೆ ಆಗಬಹುದು. ಇನ್ನು ಕ್ರೈಸ್ತರ ಮತಗಳು ಕೂಡ ಸೇರಿದರೆ ಬಹುತೇಕ ಕಡೆ ಸರಾಸರಿ 20% ಮತಗಳು ಅಲ್ಪಸಂಖ್ಯಾತರದ್ದು ಇರುತ್ತದೆ. ಇವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಿಗೆ ಮತ ಹಾಕುತ್ತಾರಾ ಎನ್ನುವ ಪ್ರಶ್ನೆ ಉದ್ಭವವಾದರೆ ರಾಜಕೀಯದ ಎ,ಬಿ,ಸಿ,ಡಿ ಗೊತ್ತಿದ್ದವನು ಕೂಡ ಇಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲ. ಆದರೂ ಇಡೀ ರಾಜ್ಯದಲ್ಲಿ ಇಷ್ಟು ಬಿಜೆಪಿ ಸಂಸದರೂ, ಶಾಸಕರೂ ಇದ್ದರೂ ಒಬ್ಬಿಬ್ಬರು ಬಿಟ್ಟು ಉಳಿದವರು ಯಾಕೆ ಇಂತಹ ಹೇಳಿಕೆಯನ್ನು ಬಹಿರಂಗವಾಗಿ ಹೇಳಲ್ಲ. ಹಾಗಂತ ಹರೀಶ್ ಪೂಂಜಾ ಅವರ ಹೇಳಿಕೆಯನ್ನು ಬಿಜೆಪಿ ಶಾಸಕರಲ್ಲಿ ಯಾರೂ ಒಪ್ಪಲ್ಲ ಎಂದು ಅರ್ಥವಲ್ಲ. ಬಿಜೆಪಿ ಕಚೇರಿಯಲ್ಲಿ ಸಭೆ ಆದರೆ ಅಲ್ಲಿ ಒಂದು ವೇಳೆ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಇಲ್ಲದೇ ಹೋದರೆ ಪ್ರತಿಯೊಬ್ಬ ಬಿಜೆಪಿ ಮುಖಂಡರು ಕೂಡ “ನಮಗೆ ಯಾವ ಮುಸ್ಲಿಮರೂ ವೋಟ್ ಹಾಕಲ್ಲ” ಎಂದು ಧೈರ್ಯವಾಗಿ ಹೇಳಬಲ್ಲರು. ಆದರೆ ಬಹಿರಂಗವಾಗಿ ಹೇಳಿದರೆ ಮುಸ್ಲಿಮರಿಗೆ ಬೇಸರವಾಗುತ್ತಾ ಎಂದು ಅಂದುಕೊಂಡು ಹೇಳಲು ಹೋಗುವುದಿಲ್ಲ. ಅದರೊಂದಿಗೆ ಎಷ್ಟೋ ಬಿಜೆಪಿ ಮುಖಂಡರಿಗೆ ಮುಸ್ಲಿಮರೊಂದಿಗೆ ವ್ಯವಹಾರಿಕ ಸಂಬಂಧಗಳಿವೆ. ವ್ಯಾಪಾರ, ವಹಿವಾಟುಗಳಿವೆ. ಲಾಭ, ನಷ್ಟದ ಲೆಕ್ಕಾಚಾರಗಳಿವೆ.

ಆದರೆ ಕಾಂಗ್ರೆಸ್ ಪಕ್ಷ ಹಾಗಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾದವರನ್ನು, ತಮ್ಮದೇ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ ಮುಸ್ಲಿಮರನ್ನು ಎದೆಯ ಮೇಲೆ ಕೂರಿಸಿಕೊಂಡು ನಮ್ಮ ಬ್ರದರ್ಸ್ ಎಂದು ಹೇಳಬಲ್ಲರು. ಆ ಧೈರ್ಯ ಅವರಿಗೆ ಇದೆ. ಮುಸ್ಲಿಮರು ಕೂಡ ಕಾಂಗ್ರೆಸ್ ತಮ್ಮ ಪಕ್ಷ ಎಂದೇ ಪ್ರೀತಿಯಿಂದ ಅದನ್ನು ಅಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಕೆಲವೊಮ್ಮೆ ಸಾಫ್ಟ್ ಹಿಂದೂತ್ವದತ್ತ ವಾಲಿ ಮುಸ್ಲಿಮರನ್ನು ಕತ್ತಲೆಯಲ್ಲಿ ಇಟ್ಟಾಗ ಬೇಸರಿಸಿ ಕೆಲವು ಮುಸ್ಲಿಮರು ಬೇರೆ ಪ್ರಾದೇಶಿಕ ಪಕ್ಷಗಳತ್ತ ಆಸೆಕಣ್ಣಿನಿಂದ ನೋಡಿದರಾದರೂ ಕಾಂಗ್ರೆಸ್ ಮುಸ್ಲಿಮರ ಬಗ್ಗೆ ಖಡಕ್ ಆಗಿ ಬೆನ್ನಿಗೆ ನಿಂತಾಗ ಯಾವತ್ತೂ ಮುಸ್ಲಿಮರು ಅಪಸ್ವರ ಎತ್ತಿಲ್ಲ. ಅದರಲ್ಲಿಯೂ ಕರ್ನಾಟಕದಲ್ಲಿ ಮುಸ್ಲಿಮರು ಬಿಜೆಪಿ ಅಭ್ಯರ್ಥಿಗಳು ತಲೆಕೆಳಗೆ ಕಾಲು ಮೇಲೆ ಮಾಡಿ ನಿಂತರೂ ವೋಟ್ ಹಾಕಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲ ಬೇಕಾದರೆ ಉತ್ತರ ಪ್ರದೇಶವನ್ನೇ ತೆಗೆದುಕೊಳ್ಳಿ, ಅಲ್ಲಿ ಯೋಗಿ ಆದಿತ್ಯನಾಥ್ ಅವರು ಮುಸ್ಲಿಮರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಳೆದ ಬಾರಿ ಚುನಾವಣೆ ಸಮೀಪಿಸುತ್ತಿರುವಾಗ ಗೋರಖ್ ಪುರದಲ್ಲಿ ಮಾಧ್ಯಮಗಳು ಸರ್ವೇ ನಡೆಸಿದಾಗ ಮುಸ್ಲಿಮರು ಗುಂಪುಗುಂಪಾಗಿ “ಹಮಾರಾ ವೋಟ್ ಬಾಬಾ ಕಿಲಿಯೇ” ಎಂದು ಘಂಟಾಘೋಷವಾಗಿ ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ ಇಡೀ ಗೋರಖಪುರದಲ್ಲಿ ಬಾಬಾ ಅಂದರೆ ಯೋಗಿ ಆದಿತ್ಯನಾಥ್ ಅವರಿಗೆ ಸಿಕ್ಕಿದ ಮುಸ್ಲಿಮರ ವೋಟ್ 9 ಮಾತ್ರ. ಆದ್ದರಿಂದ ಮುಸ್ಲಿಮರ ಮುಂದೆ ಸ್ವರ್ಗ ಕಿತ್ತು ತಂದು ಕಾಲಬುಡ ಇಟ್ಟರೂ ಅವರು ಬಿಜೆಪಿಗೆ ಮತ ಹಾಕಲ್ಲ. ಹಾಗಂತ ತಮಗೆ ವೋಟ್ ಹಾಕದಿದ್ದರೂ ಯಡಿಯೂರಪ್ಪನವರು ತಾವು ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರಿಗಾಗಿ ಅತೀ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದರು. ಸರಿ ನೋಡಿದರೆ ಸಿದ್ಧು ಸರಕಾರವಾಗಲಿ, ಧರಂ ಸಿಂಗ್ ಸರಕಾರವಾಗಲಿ, ಯಾವುದೇ ಕಾಂಗ್ರೆಸ್ ಸರಕಾರ ಯಡ್ಡಿ ಕೊಟ್ಟಷ್ಟು ಅನುದಾನ ಕೊಟ್ಟಿಲ್ಲ. ಆದರೂ ಬಿಜೆಪಿಗೆ ಮುಸ್ಲಿಮರು ವೋಟ್ ಹಾಕಲ್ಲ. ಹಾಗಂತ ಬಿಜೆಪಿಯವರು ಕಾಂಗ್ರೆಸ್ಸಿನ ಹಾಗೆ ಸಾರಸಗಟಾಗಿ ಒಂದು ಧರ್ಮದ ಪರ ನಿಲ್ಲುತ್ತಾರಾ, ಇಲ್ಲ. ಮುಸ್ಲಿಮರ ಜೊತೆ ಕಿರಿಕ್ ಮಾಡಿ ಹಿಂದೂ ಕಾರ್ಯಕರ್ತರು ಒಳಗೆ ಹೋದರೆ ಆತ ಹಿಂದೂ ಆದರೆ ಸಾಕಾಗುವುದಿಲ್ಲ, ಯಾವ ಸಂಘಟನೆ, ಅದು ನಮ್ಮ ಛತ್ರಿಯಡಿ ಬರುತ್ತದಾ ಎಂದು ನೋಡಿ ಅವನನ್ನು ಬಿಡಿಸಬೇಕಾ ಎಂದು ಯೋಚಿಸುವ ಬಿಜೆಪಿ ಶಾಸಕರೂ ಇದ್ದಾರೆ. ಅದರಿಂದ ಎಷ್ಟೋ ಹಿಂದೂ ಕಾರ್ಯಕರ್ತರು ಬಿಜೆಪಿ ಶಾಸಕರಿಂದ ಅಸಮಾಧಾನಗೊಂಡು ದೂರ ಸರಿದ ನಿದರ್ಶನಗಳು ನಮ್ಮಲ್ಲಿ ಸಾಕಷ್ಟು ಇದೆ. ಆದ್ದರಿಂದ ಖಡಕ್ಕಾಗಿ ಹಿಂದೂಗಳ ಪರ ನಿಲ್ಲಬೇಕಾಗಿರುವ ಅಗತ್ಯ ಬಿಜೆಪಿ ಶಾಸಕರುಗಳಿಗೆ ಇದೆ. ಅಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟು ಎಲ್ಲರನ್ನು ಸಂತೃಪ್ತಿಗೊಳಿಸುವ ಕಾರ್ಯ ಅಗತ್ಯ ಇಲ್ಲ. ಹಾಗಂತ ನೀವು ಮುಸ್ಲಿಮರನ್ನು ದ್ವೇಷಿಸಬೇಕು ಎಂದೆನಿಲ್ಲ. ನೀವು ಅವರನ್ನು ಪ್ರೀತಿಸಿ, ದ್ವೇಷಿಸಿ ಅಥವಾ ಅವರನ್ನು ಅಡುಗೆ ಕೋಣೆಗೆ ಕರೆಸಿ ಊಟ ಹಾಕಿಸಿ, ಊಟ ಆದ ನಂತರ ವೀಳ್ಯದೆಲೆ ಕೊಡಿ, ಆದರೂ ಅವರು ನಿಮಗೆ ವೋಟ್ ಹಾಕಲ್ಲ. ಅದನ್ನು ಹರೀಶ್ ಪೂಂಜಾ ಬೇಗ ಅರ್ಥ ಮಾಡಿಕೊಂಡಿದ್ದಾರೆ. ಉಳಿದವರಿಗೆ ಇನ್ನು ಆಸೆ ಇದೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search