• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೇರಳದಲ್ಲಿ ನಿಕ್ಸೇನಾ ಮತಾಂಧರ ವಿರುದ್ಧ ತೆಗೆದುಕೊಂಡ ನಿರ್ಧಾರ ಚಿಕ್ಕದ್ದಲ್ಲ!!

Hanumantha Kamath Posted On May 26, 2022


  • Share On Facebook
  • Tweet It

ಕೇರಳ ದೇವರ ಸ್ವಂತ ನಾಡು ಎಂದು ಬ್ರಾಂಡ್ ಆಗಿದ್ದರೂ ಯಾವ ದೇವರದ್ದು ಎಂದು ಇಲ್ಲಿಯ ತನಕ ಯಾರೂ ಪ್ರಶ್ನಿಸಿಲ್ಲ. ಆದರಿಂದ ಮತಾಂಧರು ಅದನ್ನು ತಮ್ಮ ದೇವರ ನಾಡು ಎಂದು ಮಾಡಲು ಹೊರಟಿದ್ದಾರೆ. ಆದರೆ ತಾವು ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರಾಗಲು ಏನು ಮಾಡಬೇಕು ಎಂದು ಮೂಲಭೂತವಾದಿಗಳು ಯೋಚಿಸುವಾಗ ಅವರ ಮುಂದಿದ್ದದ್ದು ಎರಡೇ ದಾರಿ. ಒಂದು ಈಗ ಬಹುಸಂಖ್ಯಾತರನ್ನು ತಮ್ಮ ಮತಕ್ಕೆ ಮತಾಂತರಿಸಿ ತಾವು ಬಹುಸಂಖ್ಯಾತರಾಗುವುದು ಇಲ್ಲದೇ ಹೋದರೆ ಯಾರು ಮತಾಂತರಕ್ಕೆ ಒಪ್ಪಲ್ಲವೋ ಅವರನ್ನು ಅವರ ಸ್ವಂತ ದೇವರ ಬಳಿ ಕಳುಹಿಸಿಕೊಡುವುದು. ಇದನ್ನು ಹಿಂದೆ ಮೊಗಲರು ಮಾಡಿಕೊಂಡು ಬರುತ್ತಿದ್ದರು. ಅಷ್ಟೇ ಅಲ್ಲ, ಭಾರತದ ಮೇಲೆ ದಂಡೆತ್ತಿ ಬಂದ ಅಷ್ಟೂ ಮುಸ್ಲಿಂ ರಾಜರು ಮಾಡಿದರು. ಯಾಕೆಂದರೆ ಅವರಿಗೆ ಉಳಿದವರು ಕಾಫೀರರಾಗಿಯೇ ಇದ್ದರು. ಈಗ ಮೊಗಲರನ್ನು ತಮ್ಮ ಪೂರ್ವಜರು ಎಂದು ನಂಬಿಕೊಂಡಿರುವ ಒಂದಿಷ್ಟು ತಳಿಗಳು ಇನ್ನೂ ಭಾರತದಲ್ಲಿವೆ. ಅವರಲ್ಲಿ ಹೆಚ್ಚಿನವರು ಕೇರಳದಲ್ಲಿ ಇದ್ದಾರೆ. ಇಡೀ ಕೇರಳವನ್ನು ಮುಸ್ಲಿಂ ಮತಾಂಧರ ತವರು ಮನೆ ಮಾಡಲು ಅವರು ಸಜ್ಜಾಗಿದ್ದಾರೆ. ಸಜ್ಜನ ಮುಸಲ್ಮಾನರ ಸಂಖ್ಯೆ ಸಾಸಿವೆಯಷ್ಟು ಕಡಿಮೆ ಇರುವುದರಿಂದ ಇವರ ಆನೆಗಾತ್ರದ ಎದುರು ಅದು ಕಾಣುವುದಿಲ್ಲ. ಇನ್ನು ಕೇರಳದಲ್ಲಿ ಜನರು ಕೂಡ ತಮ್ಮ ಆಯ್ಕೆಯನ್ನಾಗಿ ಮತಾಂಧರತ್ತ ಹೆಚ್ಚು ವಾಲುವುದರಿಂದ ಯಾವ ಪಕ್ಷದ ಸರಕಾರ ಬಂದರೂ ಇಲ್ಲಿ ರಕ್ತದ ಕೋಡಿ ಪಕ್ಕದ ಅರಬಿ ಸಮುದ್ರವನ್ನು ಸೇರಿ ಅದರ ಬಣ್ಣದೊಂದಿಗೆ ಒಂದಾಗುತ್ತಿರುತ್ತದೆ. ಅಂತಹ ಮತಾಂಧರು ತಮ್ಮ ಸಂಘಟನೆಗೆ ಪಿಎಫ್ ಐ ಎನ್ನುವ ಹೆಸರು ಇಟ್ಟಿದ್ದಾರೆ. ಅದರ ಪೂರ್ಣ ನಾಮ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಅದರ ಕೆಳಗೆ ಸೋಶಿಯಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹೀಗೆ ಬೇರೆ ಬೇರೆ ಸಂಘಟನೆಗಳು ತಮ್ಮ ಏಕೈಕ ಗುರಿಯನ್ನು ಈಡೇರಿಸಲು ನಿರಂತರವಾಗಿ ಹೋರಾಡುತ್ತಿರುತ್ತದೆ. ಆ ಏಕೈಕ ಉದ್ದೇಶ ಯಾವುದೇಂದರೆ ಮತಾಂತರ. ಮೊದಲು ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಉದ್ದೇಶ ಇತ್ತೀಚೆಗೆ ಒಳಚರಂಡಿ ಓಡೆದು ತ್ಯಾಜ್ಯ ಹೇಗೆ ಹೊರಗೆ ಚಿಮ್ಮುತ್ತದೆಯೋ ಅದೇ ರೀತಿಯಲ್ಲಿ ಗಟಾರಿನಿಂದ ಮುಖ್ಯರಸ್ತೆಗೆ ಬಂದು ಸಮಾಜವನ್ನು ಅಸಹ್ಯ ಮಾಡುತ್ತಿದೆ. ಇನ್ನು ಈ ಮೂತಭೂತವಾದಿಗಳ ಗುರಿ ಕೇವಲ ಹಿಂದೂಗಳು ಮಾತ್ರವಲ್ಲ. ಇವರು ಕ್ರೈಸ್ತರಿಗೂ ಅಷ್ಟೇ ಅಪಾಯಕಾರಿ. ಕ್ರೈಸ್ತರು ಕೇರಳದಲ್ಲಿ ಇದನ್ನು ಶಾಂತ ರೀತಿಯಲ್ಲಿ ಶತಮಾನಗಳಿಂದ ಮಾಡಿಕೊಂಡು ಬರುತ್ತಿದ್ದರೆ, ಈ ಮೂಲಭೂತವಾದಿಗಳು ಸಭೆ, ಮೆರವಣಿಗೆ ಮಾಡಿ ಬಂಡೆದೆಯಿಂದ ಮಾಡುತ್ತಾ ಬರುತ್ತಿದ್ದಾರೆ. ಇದರಿಂದ ಹಿಂದೂಗಳಷ್ಟೇ ಕ್ರೈಸ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕ್ರೈಸ್ತ ಧರ್ಮಗುರುಗಳೊಬ್ಬರು ಹಿಂದಿನ ವರ್ಷ ಅಂಕಿಅಂಶಗಳೊಂದಿಗೆ ತಮ್ಮ ಸಮುದಾಯದ ಜನರು ವಿಶೇಷವಾಗಿ ಹೆಣ್ಣುಮಕ್ಕಳು ಮತಾಂತರ ಆಗಿರುವುದಕ್ಕೆ ಸಾಕ್ಷ್ಯ ನೀಡಿದ್ದಾರೆ. ಸಾವಿರಾರು ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಹೆಸರಿನಲ್ಲಿ ಮೈಂಡ್ ವಾಶ್ ಮಾಡಿ ಮತಾಂತರ ಮಾಡಲಾಗುತ್ತಿದೆ. ಅದಕ್ಕೆ ಹಿಂದೂಗಳ ಹಾಗೆ ಕ್ರಿಶ್ಚಿಯನ್ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ.

ಇತ್ತೀಚೆಗೆ ಪಿಎಫ್ ಐ, ಎಸ್ ಡಿಪಿಐ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಹೋಗಿದ್ದಾರೆ. ಒಬ್ಬ ಪ್ರತಿಭಟನಾಕಾರನ ಹೆಗಲ ಮೇಲಿದ್ದ ಬಾಲಕ ಬಹಿರಂಗವಾಗಿ ಹಿಂದೂ, ಕ್ರೈಸ್ತರಿಗೆ ಎಚ್ಚರಿಕೆ ನೀಡುತ್ತಿದ್ದ. ಮತಾಂತರ ಆಗಿ ಅಥವಾ ಸಾಯಲು ತಯಾರಾಗಿ ಎನ್ನುವ ಅರ್ಥದ ಮಾತುಗಳನ್ನು ಆ ಬಾಲಕ ಹಾಕುತ್ತಿದ್ದ. ಇದು ಒಂದು ರೀತಿಯಲ್ಲಿ 1990 ರಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಮಾಡುತ್ತಿದ್ದರಲ್ಲ, ಅದನ್ನು ನೆನಪಿಸುತ್ತಿತ್ತು. ಇಂತಹ ಘಟನೆ ದೇಶದ ಬೇರೆ ಕಡೆ ಆಗಿದ್ದರೆ ಅಲ್ಲಿನ ರಾಜಕೀಯ ವಾತಾವರಣದ ಮೇಲೆ ಆದರೆ ಪರಿಸ್ಥಿತಿ ಹೇಗೆ ಇರುತ್ತಿತ್ತು ಎಂದು ಅಂದಾಜಿಸಬಹುದು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿತ್ತು. ಘೋಷಣೆ ಕೂಗಿದವರನ್ನು ಹಿಡಿದು ಒಳಗೆ ಹಾಕುವ ಸಾಧ್ಯತೆ ಇತ್ತು. ಆದರೆ ಕೇರಳದಲ್ಲಿ  ಹೀಗೆ ಆಗುವಾಗ ಸಾಮಾನ್ಯವಾಗಿ ಯಾರೂ ಕೂಡ ಧೈರ್ಯವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದಿಲ್ಲ. ಯಾಕೆಂದರೆ ದೂರು ಕೊಡಲು ಹೋದವರು ಮರುದಿನದ ಸೂರ್ಯೋದಯವನ್ನು ನೋಡುತ್ತಾರೋ ಇಲ್ವೋ ಎಂದು ಹೇಳುವುದು ಕಷ್ಟವಿದೆ. ಮೊನ್ನೆಯೂ ಹಾಗೆ ಆಗಿದೆ. ದೂರು ಕೊಡಲು ಯಾರೂ ಮುಂದೆ ಬರಲ್ಲ ಎಂದು ಮತಾಂಧ ಸಂಘಟನೆಗಳು ಅಂದುಕೊಂಡಿದ್ದವು. ಆದರೆ ಜಿ ಜಿ ನಿಕ್ಸೇನಾ ಎನ್ನುವ ಹೆಣ್ಣುಮಗಳಿಗೆ ಇದನ್ನು ನೋಡಿ ಕೂರಲು ಸಾಧ್ಯವಾಗಲಿಲ್ಲ. ನೋಡಲು ಸಿನೆಮಾ ಹಿರೋಯಿನ್ ನಂತೆ ಕಾಣುವ ನಿಕ್ಸೇನಾ ತಾವು ನಿಜ ಜೀವನದಲ್ಲಿಯೂ ಹಿರೋಯಿನ್ ಎಂದು ಸಾಬೀತುಪಡಿಸಿದ್ದಾರೆ. ಕೇರಳದ ಆಲಪುಯ ಜಿಲ್ಲೆಯ ಕೊಟ್ಟಾರಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೊಲೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಅವರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ದೇವರಿಗೆ ಗೊತ್ತು. ಆದರೆ ಆ ನಿಕ್ಸೇನಾ ತೆಗೆದುಕೊಂಡ ಧೈರ್ಯ ಚಿಕ್ಕದಲ್ಲ. ಗಂಡಸರೇ ಹಿಂದೆ ಮುಂದೆ ನೋಡಿದಾಗ ತಾನು ತೆಗೆದುಕೊಂಡ ನಿರ್ಧಾರದ ಗಂಭೀರತೆಯ ಅರಿವು ಅವರಿಗಿದೆ. ನಿಕ್ಸೇನಾ ಅವರಂತಹ ಹೆಣ್ಣುಮಕ್ಕಳ ಸಂತತಿ ಕೇರಳದಲ್ಲಿ ಜಾಸ್ತಿಯಾಗಲಿ ಎನ್ನುವುದು ಆಶಯ. ಮತಾಂತರ, ಲವ್ ಜಿಹಾದ್ ಮೂಲಕ ಕೇರಳವನ್ನು ತಮ್ಮ ಮುಷ್ಟಿಯಲ್ಲಿ ತೆಗೆದುಕೊಳ್ಳಲು ಹೊರಟಿರುವ ನೀಚರಿಗೆ ನಿಕ್ಸೇನಾ ಪ್ರಕರಣದಲ್ಲಿ ಸೂಕ್ತ ಶಿಕ್ಷೆ ಆದರೆ ಕೇರಳ ಬದುಕೀತು!

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Hanumantha Kamath June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Hanumantha Kamath June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search