• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೋಡಿಹಳ್ಳಿ ಹಾಗೂ ಟೀಕಾಯತ್ ರೈತರ ಹೀರೋಗಳೋ, ವಿಲನ್ ಗಳೋ!!

Hanumantha Kamath Posted On June 1, 2022


  • Share On Facebook
  • Tweet It

ರೈತ ಚಳುವಳಿ ಅಥವಾ ಹೋರಾಟ ಎಂದರೆ ಅದಕ್ಕೊಂದು ಘನತೆ ಇರುತ್ತದೆ. ರೈತರು ಸರಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ ಎಂದರೆ ವಿಷಯ ಏನೇ ಇರಲಿ, ಸಾಮಾನ್ಯ ಜನ ಕ್ಷಣಾರ್ಧದಲ್ಲಿ ಅದು ಸರಕಾರದ್ದೇ ತಪ್ಪು ಎಂದು ನಿರ್ಧರಿಸಿ ಆಗಿರುತ್ತದೆ. ಅದರಲ್ಲಿಯೂ ಒಂದು ವರ್ಷ ದೆಹಲಿಯ ಗಡಿಯಲ್ಲಿ ನೂರಾರು ರೈತರೊಂದಿಗೆ ನಿತ್ಯ ಪ್ರತಿಭಟನೆ ಮಾಡಿರುವುದು ಅದರ ನಾಯಕ ರಾಕೇಶ್ ಟಿಕಾಯತ್ ಘನತೆಯನ್ನು ಹೆಚ್ಚಿಸಿದ್ದು ಸುಳ್ಳಲ್ಲ. ಆದರೆ ರೈತ ಮುಖಂಡ ಟಿಕಾಯತ್ ಯಾವಾಗ ಫೈವ್ ಸ್ಟಾರ್ ಹೋಟೇಲಿನಲ್ಲಿ ಜ್ಯೂಸ್ ಕುಡಿದು, ಅಲ್ಲಿಯೇ ಮಲಗಿ, 10 ಕೋಟಿ ರೂಪಾಯಿ ಬೆಲೆಬಾಳುವ ಮನೆ ಕಟ್ಟಿಸಿ, ವಿಪಕ್ಷಗಳೊಂದಿಗೆ ಚೌಕಾಬಾರ ಆಡುತ್ತಾ ಕಾಲ ಕಳೆದುಬಿಟ್ಟರು. ಆದರೆ ಟಿಕಾಯತ್ ಯಾವಾಗ ಇದನ್ನೆಲ್ಲ ಮುಚ್ಚಿಟ್ಟು ರೈತ ಸಂಕಷ್ಟದಲ್ಲಿದ್ದಾನೆ ಎಂದು ಸುಣ್ಣಬಣ್ಣ ಹಚ್ಚಿ ಹೇಳಿದರೋ ಅದರ ಬಳಿಕ ಅವರ ಮೇಲಿದ್ದ ಗೌರವ ಕಡಿಮೆಯಾಗುತ್ತಾ ಇತ್ತು. ಹಾಗೇ ಟಿಕಾಯತ್ ರಾಷ್ಟ್ರಮಟ್ಟದಲ್ಲಿ ಹೆಸರು ಕೆಡಿಸಿಕೊಳ್ಳುತ್ತಾ ಇದ್ದರೆ ರಾಜ್ಯಮಟ್ಟದಲ್ಲಿ ಹೆಸರು ಕೆಡಿಸಿಕೊಂಡವರು ಕೋಡಿಹಳ್ಳಿ ಚಂದ್ರಶೇಖರ್. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿರುವ ಕೋಡಿಹಳ್ಳಿಯವರ ಸ್ಟಿಂಗ್ ಆಪರೇಶನ್ ಮಾಡಿದ ವಾಹಿನಿ ಅವರು ಕೆಎಸ್ ಆರ್ ಟಿಸಿ ಬಸ್ಸಿನ ಸಿಬ್ಬಂದಿಗಳ ಮುಷ್ಕರವನ್ನು ನಿಲ್ಲಿಸಲು ಕೋಟಿಗಟ್ಟಲೆ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿಯನ್ನು ಪ್ರಚಾರಪಡಿಸಿತ್ತು. ಲಾಕ್ ಡೌನ್ ಬಳಿಕ ರಾಜ್ಯ ರಸ್ತೆ ಸಾರಿಗೆ ನೌಕರರು ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ವಾರಗಟ್ಟಲೆ ಸರಕಾರಿ ಬಸ್ಸುಗಳು ಬೀದಿಗೆ ಇಳಿಯಲೇ ಇಲ್ಲ. ಇದರಿಂದ ನಿಗಮಕ್ಕೆ ನಿತ್ಯ ಕೋಟಿಗಟ್ಟಲೆ ರೂಪಾಯಿ ನಷ್ಟವಾಗುತ್ತಿತ್ತು. ಸರಕಾರದ ಇಮೇಜು ಕೂಡ ಕಳೆಗುಂದುತ್ತಾ ಇತ್ತು. ಆದರೆ ಆ ಹೋರಾಟಕ್ಕೆ ಸೂಕ್ತವಾದ ನಾಯಕತ್ವ ಇರಲಿಲ್ಲ. ಆಗ ದಿಢೀರನೇ ನಾನು ಇದ್ದೀನಿ ಎಂದು ನೌಕರರ ಮಧ್ಯ ಕಾಣಿಸಿಕೊಂಡವರು ಇದೇ ಕೋಡಿಹಳ್ಳಿ.

ರೈತರ ನಾಯಕನಿಗೂ, ಸಾರಿಗೆ ಬಸ್ಸುಗಳ ಸರಕಾರಿ ನೌಕರರ ನಾಯಕನಿಗೂ ವ್ಯತ್ಯಾಸ ಇರುತ್ತದೆ. ಆದರೆ ಕೋಡಿಹಳ್ಳಿಗೆ ಒಂದು ವರ್ಚಸ್ಸು ಇತ್ತು. ಈ ಹೋರಾಟದಲ್ಲಿ ನೌಕರರ ಹಾಗೂ ಸರಕಾರದ ನಡುವೆ ಒಂದು ಸೇತುವೆಯಾಗಿ ಸೇವೆ ಸಲ್ಲಿಸುವುದಕ್ಕೆ ಅವರು ಸಜ್ಜಾಗಿದ್ರು. ನಂತರ ಹೇಗೋ ಆ ಹೋರಾಟ ನಿಂತಿತು. ಸರಕಾರ ನಿಗಮದ ಸಿಬ್ಬಂದಿಗಳ ಕಣ್ಣೀರಿಗೆ ಕರಗಿತು. ಆದರೆ ಅದಾಗಿ ವರ್ಷದೊಳಗೆ ಒಂದು ವಿಡಿಯೋ ಕ್ಲಿಪ್ ಅನ್ನು ವಾಹಿನಿಯೊಂದು ಪ್ರಸಾರ ಮಾಡಿತು. ಅದೊಂದು ಸ್ಟಿಂಗ್ ಆಪರೇಶನ್. ಅದರ ತನಿಖೆ ಈಗ ನಡೆಯುತ್ತಿದೆ. ಅದರ ಸತ್ಯಾಸತ್ಯತೆ ನಂತರ ಬಹಿರಂಗಗೊಳ್ಳಲಿದೆ. ಒಂದಂತೂ ಸ್ಪಷ್ಟ. ಜನರು ಇನ್ನು ರೈತ ಮುಖಂಡರನ್ನು ಅದೇ ದೃಷ್ಟಿಯಿಂದ ನೋಡುತ್ತಾರಾ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕು. ಆದರೆ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ರೈತ ಚಳುವಳಿ ದಾರಿ ತಪ್ಪುತ್ತಿದೆಯಾ ಎನ್ನುವುದನ್ನು ವಿಮರ್ಶೆ ಮಾಡಿಕೊಳ್ಳಲು ಟಿಕಾಯತ್ ರಾಷ್ಟ್ರದ ಬೇರೆ ಬೇರೆ ಮೂಲಗಳಿಂದ ರೈತ ನಾಯಕರನ್ನು ಬೆಂಗಳೂರಿಗೆ ಕರೆಸಿದ್ದರು. ಆ ಸಭೆಯ ಫಲಿತಾಂಶದ ಬಗ್ಗೆ ವಿವರಣೆ ನೀಡಲು ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಟಿ ಕರೆದಿದ್ದರು. ಆ ಪತ್ರಿಕಾಗೋಷ್ಟಿಯ ನಡುವೆ ಒಬ್ಬ ಎದ್ದು ಹೋಗಿ ಅವರ ಮುಂದಿದ್ದ ವಾಹಿನಿಗಳ ಮೈಕುಗಳಲ್ಲಿ ಒಂದನ್ನು ತೆಗೆದು ಟಿಕಾಯಿತ್ ಗೆ ಹೊಡೆದಿದ್ದಾನೆ. ಅಷ್ಟರಲ್ಲಿ ಇನ್ನೊಬ್ಬ ಮಸಿಯನ್ನು ತಂದು ಟಿಕಾಯತ್ ಮುಖಕ್ಕೆ ಬಿಸಾಡಿದ್ದಾನೆ. ಇಷ್ಟಾಗುವಾಗ ಟಿಕಾಯತ್ ಮತ್ತು ಮಸಿ ಎಸೆದವರ ಬೆಂಬಲಿಗರ ನಡುವೆ ಗಲಾಟೆ ಶುರುವಾಗಿದೆ. ಕೆಲವರು ಮೋದಿ, ಮೋದಿ ಎಂದು ಕೂಗಿದ್ದಾರೆ. ಮೋದಿ ವಿರುದ್ಧ ಟಿಕಾಯತ್ ರೈತ ಕಾಯಿದೆಗಳನ್ನು ಹಿಂಪಡೆಯಲು ಹೋರಾಟ ನಡೆಸಿದ್ದಕ್ಕೆ ಪ್ರತಿಯಾಗಿ ಈ ಪ್ರತೀಕಾರ ನಡೆದಿದೆ ಎಂದು ಅಂದಾಜಿಸಲಾಗಿದೆ. ರಾಜ್ಯ ಸರಕಾರ ಮಸಿ ಎಸೆದವರ ಜೊತೆ ಶಾಮೀಲಾಗಿದೆ ಎಂದು ಟಿಕಾಯತ್ ಜೊತೆಗಿದ್ದವರು ಹೇಳಿದ್ದಾರೆ. ಸದ್ಯ ಮೂರು ಜನರನ್ನು ಬಂಧಿಸಲಾಗಿದೆ. ಈಗ ವಿಷಯ ಇರುವುದು ಟಿಕಾಯತ್ ಮೋದಿ ವಿರುದ್ಧ ಪ್ರತಿಭಟನೆ ಮಾಡಿದರು ಎನ್ನುವ ಕಾರಣಕ್ಕೆ ಮಸಿ ಬಳಿದದ್ದಾ, ನಕಲಿ ರೈತರಿಂದ ದೆಹಲಿಯಲ್ಲಿ ಗಲಾಟೆ ಮಾಡಿಸಿದರು ಎನ್ನುವ ಕಾರಣಕ್ಕೆ ಮಸಿ ಬಳಿದದ್ದಾ ಅಥವಾ ನಿಜಕ್ಕೂ ಆ ಕಾಯಿದೆಗಳು ರೈತ ವಿರೋಧಿಯಾಗಿದ್ದವು ಎನ್ನುವ ಕಾರಣಕ್ಕೆ ಟಿಕಾಯತ್ ಹೋರಾಡಿದ್ದರು ಎಂದು ಮಸಿ ಬಳಿದದ್ದಾ ಎನ್ನುವುದನ್ನು ಮಸಿ ಬಳೆದವರೇ ಹೇಳಬೇಕು. ಆದರೆ ಮಸಿ ಬಳಿಯುವುದು ಸ್ವಸ್ಥ ಸಮಾಜದಲ್ಲಿ ಉತ್ತಮ ಬೆಳವಣಿಗೆಯಲ್ಲ. ಯಾಕೆಂದರೆ ಇದರಿಂದ ಮಸಿ ಬಳಿಸಿಕೊಂಡವರು ಜನರ ದೃಷ್ಟಿಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಇದರಿಂದ ಕೋಡಿಹಳ್ಳಿ ಪ್ರಕರಣ ಸೈಡ್ ಲೈನ್ ಆಗುತ್ತದೆ. ಒಬ್ಬ ರೈತ ಮುಖಂಡ ಪ್ರಾಮಾಣಿಕನಾಗಿ ರೈತ ಕುಲವನ್ನು ಮುನ್ನಡೆಸಿದರೆ ಆಗ ಅಂತಹ ನಾಯಕರು ಇತಿಹಾಸದಲ್ಲಿ ಚಿರಸ್ಥಾಯಿಗಳಾಗಿರುತ್ತಾರೆ. ಆದರೆ ಯಾವಾಗ ಅಮಾಯಕ ರೈತರನ್ನು ಬಳಸಿ ಅವರಲ್ಲಿ ಸುಳ್ಳು ಸುದ್ದಿ ಹರಡಿಸಿ ಸರಕಾರದ ವಿರುದ್ಧ ಎತ್ತಿಕಟ್ಟಿದರೆ ಆಗ ಒಂದು ದಿನ ನಾಯಕರೆನಿಸಿದವರು ಸಿಕ್ಕಿ ಬೀಳುತ್ತಾರೆ. ಅದರಿಂದ ಉಳಿದ ರೈತ ಮುಖಂಡರ ಮೇಲೆ ಜನರಿಗೆ ಸಂಶಯ ಮೂಡುತ್ತದೆ. ಈಗ ಕೋಡಿಹಳ್ಳಿ ಹಾಗೂ ಟಿಕಾಯತ್ ಇಬ್ಬರೂ ಜನರ ದೃಷ್ಟಿಯಲ್ಲಿ ಸಂಶಯದ ತೂಗುಗತ್ತಿಯ ಮೇಲೆ ನಡೆಯುತ್ತಿದ್ದಾರೆ. ಉತ್ತಮ ಕೆಲಸ ಮಾಡುವಾಗ ಟೀಕೆ, ಆರೋಪ ಸಹಜವಾಗಿದೆ. ಆದರೆ ಆರೋಪಗಳ ಹಿಂದೆ ಸತ್ಯಾಂಶ ಇದ್ದರೆ ಅದು ಆ ವ್ಯಕ್ತಿಯ ಅವನತಿಯ ಆರಂಭ. ಟೀಕಾಯತ್ ಹಾಗೂ ಕೋಡಿಹಳ್ಳಿ ಈಗ ಅದೇ ನೆರಳಿನಲ್ಲಿ ನಡೆಯುತ್ತಿದ್ದಾರೆ!!

  • Share On Facebook
  • Tweet It


- Advertisement -


Trending Now
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Hanumantha Kamath May 30, 2023
ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
Hanumantha Kamath May 29, 2023
Leave A Reply

  • Recent Posts

    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
  • Popular Posts

    • 1
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 2
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 3
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 4
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search