• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಿಸಿತುಪ್ಪವಾದ್ರಾ ನೂಪುರ್!

Hanumantha Kamath Posted On June 7, 2022


  • Share On Facebook
  • Tweet It

“ಅವರು” ನಮ್ಮ ದೇವರಾದ ಶಿವನನ್ನು ಎಷ್ಟು ಬೇಕಾದರೂ ನಿಂದಿಸಲಿ, ದೇವತೆಗಳ ನಗ್ನ ಚಿತ್ರಗಳನ್ನು ಬಿಡಿಸಲಿ, ನಮ್ಮ ಧರ್ಮವನ್ನು ಎಷ್ಟು ಬೇಕಾದರೂ ಹೀಯಾಳಿಸಲಿ ನಾವು ಮಾತ್ರ ಮೌನವಾಗಿರಬೇಕು. ನಾವು ತಿರುಗಿ ಮಾತನಾಡಬಾರದು. ನಮ್ಮಲ್ಲಿ ಎಷ್ಟೇ ಸತ್ಯ ಇದ್ದರೂ ಕೂಡ. ಭಾರತೀಯ ಜನತಾ ಪಾರ್ಟಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರೇ ಹೇಳಿದ ಹಾಗೆ ನಮ್ಮ ದೇವರನ್ನು ಪದೇ ಪದೇ ಅವರು ನಿಂದಿಸುತ್ತಿರುವುದು ಕೇಳಿ ಕೇಳಿ ಕೊನೆಗೆ ತಾಳಲಾರದೇ ಹಾಗೆ ಹೇಳಬೇಕಾಯಿತು ಎಂದಿದ್ದಾರೆ. ಆಕೆ ಯಾರ ಬಗ್ಗೆ ಆವತ್ತು ಡಿಬೇಟಿನಲ್ಲಿ ಮಾತನಾಡಿದ್ದು ಅಥವಾ ಹೇಳಿದ್ದು ಸತ್ಯ ಅಲ್ಲ ಎಂದು ಯಾರಾದರೂ ಸಾಬೀತುಪಡಿಸಲಿ ನೋಡೋಣ. ಆಗುವುದಿಲ್ಲ. ಆದರೆ ಪ್ಯಾನೆಲ್ ಡಿಸ್ಕಷನ್ ನಲ್ಲಿ ಹಾಗೆ ಹೇಳಿದ್ದು ಮತಾಂಧರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗೆ ಹೇಳಬಾರದಾಗಿತ್ತು ಎನ್ನುವ ಕಾರಣಕ್ಕೆ ಶಾಂತಿಪ್ರಿಯರಿಂದ, ಕಾಂಗ್ರೆಸ್ಸಿನ ಬ್ರದರ್ಸ್ ಗಳಿಂದ ಕಾನ್ಪುರ ಸಹಿತ ದೇಶದ ವಿವಿದೆಡೆ ಗಲಾಟೆಗಳಾದವು. ಕರ್ಮಟ ಮುಸ್ಲಿಂ ರಾಷ್ಟ್ರಗಳು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗಳಿಂದ ಅಧಿಕಾರಿಗಳನ್ನು ಕರೆಸಿ ಸ್ಪಷ್ಟನೆ ಕೇಳಿದವು. ಮುಸಲ್ಮಾನ ರಾಷ್ಟ್ರಗಳಲ್ಲಿ ಭಾರತದ ಉತ್ಪನ್ನಗಳನ್ನು ಮಾರಲು ನಿಷೇಧವಾಯಿತು.

ಒಂದು ಸತ್ಯ ಹೇಳಿಕೆಗೆ ಈ ಪರಿ ವಿರೋಧಗಳು ಕಂಡುಬಂದವು. ಇಷ್ಟು ಒತ್ತಡ ಬಂದ ನಂತರ ಭಾರತೀಯ ಜನತಾ ಪಾರ್ಟಿ ಕೇಂದ್ರದ ಮುಖಂಡರು ನೂಪುರ್ ಶರ್ಮಾ ಎನ್ನುವ ವಿದ್ಯಾವಂತೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಬೆಂಕಿಯ ಚೆಂಡಾಗಿದ್ದ, ದಿಟ್ಟ ವಕ್ತಾರೆಯನ್ನು ಆರು ತಿಂಗಳ ತನಕ ಪಕ್ಷದಿಂದ ಉಚ್ಚಾಟನೆ ಮಾಡಿದರು. ಅದರೊಂದಿಗೆ ದೆಹಲಿಯ ಪಕ್ಷದ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಅವರಿಗೂ ಕೂಡ ಅದೇ ದಾರಿ ತೋರಿಸಲಾಗಿದೆ. ಬಿಜೆಪಿ ಮುಖಂಡರು ಕೊಟ್ಟಿರುವ ಕಾರಣ ಏನೆಂದರೆ ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಆದ ಕಾರಣ ಅಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ” ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಗೆ ಆ ವಕ್ತಾರೆಯನ್ನು ಉಚ್ಚಾಟಿಸದೇ ಇರಲು ಸಾಧ್ಯವಿರಲಿಲ್ಲ. ಯಾಕೆಂದರೆ ಉಚ್ಚಾಟಿಸದೇ ಹೋದರೆ ಆ ಹೇಳಿಕೆಯನ್ನು ಬಿಜೆಪಿ ಒಪ್ಪಿದೆ ಎಂದೇ ವಿಶ್ವ ಅಂದುಕೊಳ್ಳುತ್ತದೆ. ಹಾಗಂತ ನೂಪುರ್ ಶರ್ಮಾ ಡಿಬೇಟಿನಲ್ಲಿ ಕುಳಿತಾಗ ಹಿಂದೂ ದೇವರ ಬಗ್ಗೆ ಯಾರು ಏನು ಹೇಳಿದರೂ ಕೇಳಬೇಕಾ? ಮತಾಂಧರ ಕೆಲವು ಹೇಳಿಕೆಗಳು ಹೇಗಿರುತ್ತೆ ಎಂದರೆ ರಕ್ತ ಕುದಿಯುತ್ತದೆ. ಶಿವಲಿಂಗವನ್ನು ಕಾರಂಜಿ ಎಂದರೂ ನಾವು ಕೇಳಬೇಕು. ಶಿವಲಿಂಗದ ಮೇಲೆ ಕಾಲಿಟ್ಟು ಫೋಟೋ ತೆಗೆದವರನ್ನು ಕೂಡ ಸಹಿಸಬೇಕು. ಅಣು ಸ್ಥಾವರದ ಗೋಳವನ್ನು ತೋರಿಸಿ ಇದು ಶಿವಲಿಂಗವೇ ಎಂದು ವ್ಯಂಗ್ಯವಾಗಿ ಹೇಳಿದರೂ ಸಹಿಸಿಕೊಳ್ಳಬೇಕು. ರಸ್ತೆಯ ಬ್ಯಾರಿಕೇಡನ್ನು ಲಿಂಗದ ತರಹ ನಿರ್ಮಿಸಿ ಇದು ಮುಂದೆ ಶಿವಲಿಂಗ ಆಗಲಿದೆ ಎಂದರೂ ಗೊತ್ತಿಲ್ಲದವರಂತೆ ಇರಬೇಕು. ಹಾಗಂತ ಅವರ ಮತದ ಬಗ್ಗೆ ಏನೂ ಸತ್ಯ ಹೇಳಬಾರದು. ಹೇಳಿದರೆ ಅವರು ತಕ್ಷಣ ಕಲ್ಲನ್ನು ಎತ್ತಿ ಬೀದಿಗೆ ಬರುತ್ತಾರೆ. ಅಂಗಡಿಗಳಿಗೆ ಬೆಂಕಿ ಕೊಡುತ್ತಾರೆ. ಗಲಭೆಯನ್ನು ಮಾಡಿ ಶಾಂತಿ, ಸುವ್ಯವಸ್ಥೆಯನ್ನು ಹಾಳು ಮಾಡುತ್ತಾರೆ. ಅದೇ ಅವರ ಜನ ಡಿಬೇಟಿನಲ್ಲಿ ಹೇಗೆ ಬೇಕಾದರೂ ಹಿಂದೂ ದೇವರ ಬಗ್ಗೆ ಮಾತನಾಡಿದರೂ ನಾವು ಹೊರಗೆ ಬರುವಾಗ ಕೈಕುಲುಕಿ ನಮಸ್ಕಾರ ಹೇಳಿ ಬರಬೇಕು.

ಅಷ್ಟೇ ಅಲ್ಲ, ನೂಪುರ್ ಶರ್ಮಾ ಅವರ ತಲೆಗೆ ಮೂಲಭೂತವಾದಿಗಳು ಒಂದು ಕೋಟಿ ರೂಪಾಯಿಯನ್ನು ನಿಗದಿಗೊಳಿಸಿದ್ದಾರೆ. ಅವರನ್ನು ಅತ್ಯಾಚಾರ ಮಾಡಿ ಹತ್ಯೆಗೈಯಬೇಕು ಎಂದು ಕೆಲವರು ಬೆದರಿಕೆ ಹಾಕಿದ್ದಾರೆ. ನೂಪುರ್ ಕುಟುಂಬದವರ ಮೇಲೆಯೂ ದಾಳಿಗಳಾಗುವ ಸಾಧ್ಯತೆ ಇದೆ. ಇದರಿಂದ ರಕ್ಷಣೆ ಕೋರಿ ನೂಪುರ್ ದೆಹಲಿ ಪೊಲೀಸರ ಬಳಿ ಮನವಿ ಮಾಡಬಹುದು. ಆದರೆ ಅವರ ಜೀವಕ್ಕೆ ಬೆಲೆ ಇಲ್ಲವೇ? ಅವರು ಪಕ್ಷದ ಪರವಾಗಿ ಹೋರಾಡುತ್ತಿದ್ದದ್ದು ಯಾರಿಗಾಗಿ? ತಮ್ಮ ಪಕ್ಷವನ್ನು ಸಮರ್ಥವಾಗಿ ಡಿಫೆಂಡ್ ಮಾಡಬೇಕು ಎನ್ನುವ ಕಾರಣಕ್ಕೆ ವಕ್ತಾರರನ್ನು ನೇಮಿಸಲಾಗುತ್ತದೆ. ಅವರನ್ನು ಡಿಬೇಟಿಗೆ ಆಹ್ವಾನಿಸಿದಾಗ ಅವರು ಆ ಸಬ್ಜೆಕ್ಟಿಗೆ ಅನುಗುಣವಾಗಿ ವಿಷಯ ಸಿದ್ಧಪಡಿಸಿಕೊಂಡು ಹೋಗುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಚರ್ಚೆಗಳು ನೇರಪ್ರಸಾರದಲ್ಲಿ ಇರುವುದರಿಂದ ವಕ್ತಾರರು ಕೂಡ ಹೆಚ್ಚಿನ ಜಾಗೃತಿಯನ್ನು ಹೊಂದಿರಬೇಕಾಗುತ್ತದೆ. ಇನ್ನು ಎಷ್ಟೇ ತಯಾರಿ ನಡೆಸಿಕೊಂಡು ಕುಳಿತರೂ ಎದುರಿನವ ಚರ್ಚೆಯ ಅನುಗುಣವಾಗಿ ಇವರು ಉತ್ತರ ಕೊಡುವುದಾಗಿ ಇರಬಹುದು ಅಥವಾ ಸ್ಪಷ್ಟೀಕರಣ ಕೊಡುವುದು ಆಗಿರಬಹುದು. ಕೆಲವು ಬಾರಿ ಡಿಬೇಟಿನಲ್ಲಿರುವವರು ಅನವಶ್ಯಕವಾಗಿ ಕೀಚಾಯಿಸಿ ನಿಮ್ಮ ಕಾಲೆಳೆಯುವ ಕೆಲಸ ಮಾಡಿರುತ್ತಾರೆ. ಆಗ ಸುಮ್ಮನೆ ಕುಳಿತರೆ ನಿಮ್ಮ ಪಕ್ಷದವರೇ ನೀವು ಇವತ್ತು ಖಡಕ್ಕಾಗಿ ಉತ್ತರ ಕೊಟ್ಟಿಲ್ಲ. ಚಪ್ಪೆಯಾಗಿ ಮಾತನಾಡಿದ್ದೀರಿ ಎಂದು ಫೀಡ್ ಬ್ಯಾಕ್ ಕೊಡುತ್ತಾರೆ. ಆದ್ದರಿಂದ ಒಬ್ಬ ವಕ್ತಾರರ ನಡೆ ನೇರಪ್ರಸಾರದಲ್ಲಿ ಹಲಗಿನ ಅಂಚಿನ ಮೇಲೆ ನಡೆದ ಹಾಗೆ. ನಿಖರವಾಗಿ, ಸತ್ಯವನ್ನು ಖಡಕ್ ಶಬ್ದಗಳಲ್ಲಿ ಹೇಳಿ ಶಹಬ್ಬಾಸ್ ಗಿಟ್ಟಿಸಬೇಕು. ಒಂದು ಚೂರು ಆಚೀಚೆ ಆದರೆ ಅದು ಕುತ್ತಿಗೆಗೆ ಬರುತ್ತದೆ. ಈಗ ನೂಪುರ್ ಶರ್ಮಾ ವಿರುದ್ಧ ದೇಶದ ಅನೇಕ ಕಡೆ ಪ್ರಕರಣ ದಾಖಲಾಗಿದೆ. ಅದನ್ನು ಕೂಡ ನೂಪುರ್ ಎದುರಿಸಬೇಕು. ಅದರೊಂದಿಗೆ ಮತಾಂಧರ ಬೆದರಿಕೆಗಳು. ಈ ಹೊತ್ತಿನಲ್ಲಿ ಐ ಸ್ಟ್ಯಾಂಡ್ ವಿದ್ ನೂಪುರ್ ಶರ್ಮಾ ಎಂದು ಕೆಲವರು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲವಾಗಿ ಮಾತನಾಡಿದ್ದಾರೆ. ಆದರೆ ಬಿಜೆಪಿ ಮಾತ್ರ ನೂಪುರ್ ಶರ್ಮಾ, ರೋಹಿತ್ ಚಕ್ರತೀರ್ಥ ಅಂತವರನ್ನು ಕೈಬಿಟ್ಟು, ಹಾರ್ದಿಕ್ ಪಟೇಲ್ ಅಂತವರನ್ನು ಪಕ್ಷಕ್ಕೆ ಸೇರಿಸಿ ಜಾತ್ಯಾತೀತವಾಗುತ್ತಿದೆ!!

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Hanumantha Kamath June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Hanumantha Kamath June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search