ಸತ್ಯವನ್ನು ಬೆಳಕಿಗೆ ಒಡ್ಡಿದ ನೂಪುರ್ ಶರ್ಮಾ!
ಭಾರತದಲ್ಲಿ ನೂಪುರ್ ಶರ್ಮಾ ನಂತವರು ಮಾತನಾಡಿದ ವಿಷಯದಿಂದ ಮುಸ್ಲಿಂ ರಾಷ್ಟ್ರಗಳಲ್ಲಿ ಆಕ್ರೋಶ ಜಾಸ್ತಿಯಾಗಿ ಅಲ್ಲಿ ಉದ್ಯೋಗದಲ್ಲಿರುವ ಭಾರತೀಯರನ್ನು ಹಿಂದಕ್ಕೆ ಕಳುಹಿಸಿದರೆ ಏನು ಮಾಡುವುದು ಎನ್ನುವ ಚಿಂತೆ ಕೆಲವರದ್ದು. ಯಾಕೆಂದರೆ ನಿರಂತರವಾಗಿ ಹಿಂದೂ-ಮುಸ್ಲಿಂ ಸಂಘರ್ಷಗಳಾದರೆ ಅದರಿಂದ ಸಮಸ್ಯೆ ದೊಡ್ಡದಾಗಿ ಅದು ಮುಸ್ಲಿಂ ರಾಷ್ಟ್ರಗಳಲ್ಲಿರುವ ಹಿಂದೂಗಳ ಕುತ್ತಿಗೆಗೆ ಬಂದು ಅವರು ಭಾರತಕ್ಕೆ ವಲಸೆ ಬಂದರೆ ಆಗ ಇಲ್ಲಿ ಅಷ್ಟು ಜನರಿಗೆ ಉದ್ಯೋಗ ಸೃಷ್ಟಿಸಲು ಸಾಧ್ಯಾನಾ ಎನ್ನುವ ಆತಂಕ ಸಹಜ. ಆದರೆ ಯಾವ ರಾಷ್ಟ್ರ ಕೂಡ ಏಕ್ ದಂ ಭಾರತದಂತಹ ದೇಶದ ನಾಗರಿಕರನ್ನು ಕೆಲಸದಿಂದ ವಜಾಗೊಳಿಸಿ ಕಳುಹಿಸುವ ಕೆಲಸ ಮಾಡಲಾರದು. ಯಾಕೆಂದರೆ ಎಷ್ಟೋ ರಾಷ್ಟ್ರಗಳಲ್ಲಿ ಭಾರತೀಯರು ದುಡಿಯುತ್ತಿರುವುದರಿಂದಲೇ ಆ ರಾಷ್ಟ್ರದ ಏಳಿಗೆಗೆ ಸಹಕಾರಿಯಾಗಿದೆ. ಇನ್ನು ಸ್ವದೇಶಿಯವರನ್ನೇ ಕೆಲಸಕ್ಕೆ ಇಡಬೇಕು ಎನ್ನುವ ಪ್ರಯತ್ನವನ್ನು ಮುಸ್ಲಿಂ ರಾಷ್ಟ್ರಗಳು ಮಾಡಿಲ್ಲ ಎಂದಲ್ಲ. ಮಾಡಿವೆ. ಆದರೆ ಆ ಮಟ್ಟಿಗಿನ ಯಶಸ್ಸು ಸಿಕ್ಕಿಲ್ಲ. ಆದ್ದರಿಂದ ಅನಿವಾರ್ಯವಾಗಿ ಭಾರತೀಯರನ್ನು ಉಳಿಸಿಕೊಂಡಿವೆ. ಭಾರತೀಯರು ಮೂಲತ: ನಂಬಿಕಸ್ತರು, ಶ್ರಮಜೀವಿಗಳು ಎನ್ನುವುದು ಕೂಡ ಪ್ಲಸ್ ಪಾಯಿಂಟ್. ಆದ್ದರಿಂದ ಭಾರತೀಯರ ಉದ್ಯೋಗಕ್ಕೆ ಅರಬ್ ರಾಷ್ಟ್ರಗಳಲ್ಲಿ ಕಂಟಕ ಆಗುತ್ತದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಅಷ್ಟಕ್ಕೂ ನೂಪುರ್ ಶರ್ಮಾ ಸರಕಾರದ ಪ್ರತಿನಿಧಿಯಲ್ಲ. ಅವರು ಶಾಸಕರೋ, ಸಂಸದರೋ, ಸಚಿವರೋ ಅಲ್ಲವೇ ಅಲ್ಲ. ಅವರು ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯೆ ಕೂಡ ಅಲ್ಲ. ಅವರು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ವಕ್ತಾರೆ. ಅವರು ಪಕ್ಷವನ್ನು ವಾಹಿನಿಯಲ್ಲಿ ಪ್ರತಿನಿಧಿಸುತ್ತಾರೆ. ಪಕ್ಷದ ಸಿದ್ಧಾಂತವನ್ನು ಅವರು ಸಮರ್ಥವಾಗಿ ಮುಂದಿಡುವುದು ಅವರ ಕರ್ತವ್ಯ. ಹಾಗಂತ ಅವರು ಹೇಳಿದ ಎಲ್ಲಾ ವಿಷಯಗಳನ್ನು ಕೂಡ ಸರಕಾರವೇ ಹೇಳಿ ಕಳುಹಿಸಿದ್ದು ಅಂತ ಅಲ್ಲ. ಅವರು ಇತ್ತೀಚೆಗೆ ಪ್ರವಾದಿಯವರ ಬಗ್ಗೆ ಹೇಳಿದ್ದಾರೆ ಎನ್ನಲಾದ ಮಾತುಗಳಲ್ಲಿ ವಾಸ್ತವತೆ ಇದ್ದರೂ ಅದು ಮುಸ್ಲಿಮರಿಗೆ ನೋವು ತರುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ. ಅವರನ್ನು ಆರು ವರ್ಷದ ತನಕ ಪಕ್ಷದಿಂದ ಅಮಾನತು ಮಾಡಿದೆ.
ಇದು ಬಿಜೆಪಿ ಈ ದೇಶದ ಎಲ್ಲಾ ಭಾರತೀಯರಿಗೂ ಕೊಡುವ ಗೌರವ. ಆದರೆ ಭಾರತೀಯರೇ ಆಗಿರುವ ಕಾನ್ಪರ ಸಹಿತ ಕೆಲವು ಕಡೆ ಮುಸ್ಲಿಮರು ಏನು ಮಾಡಿದರು? ದೇಶದ ಸಂಪತ್ತನ್ನು, ಖಾಸಗಿಯವರ ಸ್ವತ್ತನ್ನು ನಾಶ ಮಾಡಿದರು. ಅದು ಕೂಡ ವ್ಯವಸ್ಥಿತವಾಗಿ ಆದ ಗಲಭೆ ಎಂದು ನೋಡಿದ ಯಾರಿಗಾದರೂ ಗೊತ್ತೆ ಆಗುತ್ತದೆ. ತರಕಾರಿ, ಹಣ್ಣು ಮಾರುವ ತಳ್ಳುಗಾಡಿಗಳಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬಂದು ಅಮಾಯಕರ ಮೇಲೆ ಬಿಸಾಡಿದ ಘಟನೆಗಳು ನಡೆದವು. ಕೆಲವು ಮುಸ್ಲಿಂ ರಾಷ್ಟ್ರಗಳು ಭಾರತದ ವಿರುದ್ಧ ಕೆಂಡಕಾರಿದವು. ಭಾರತದ ಉತ್ಪನ್ನಗಳನ್ನು ತಮ್ಮ ದೇಶದಲ್ಲಿ ಮಾರುವುದಿಲ್ಲವೆಂದು ನಿಷೇಧ ಹೇರಿದವು. ಒಟ್ಟಿನಲ್ಲಿ ಭಾರತದಲ್ಲಿ ನರೇಂದ್ರ ಮೋದಿ ಸರಕಾರ ಬಂದ ಬಳಿಕ ಮುಸಲ್ಮಾನರಿಗೆ ಅಭದ್ರತೆ ಕಾಡುತ್ತಿದೆ ಎಂದು ಪ್ರಪಂಚಕ್ಕೆ ಸಾರುವ ಪ್ರಯತ್ನವನ್ನು ಪಾಕಿಸ್ತಾನ ಎಷ್ಟು ವ್ಯವಸ್ಥಿತವಾಗಿ ಮಾಡಿತು ಎಂದರೆ ಅದಕ್ಕೆ ಕೆಲವು ದೇಶಗಳು ಜೊತೆಗೂಡಿದವು. ಆದರೆ ನಿಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ನೀವು ಏನು ರಕ್ಷಣೆ ಕೊಟ್ಟಿದ್ದಿರಿ ಎಂದು ಭಾರತ್ ತೀಕ್ಣವಾಗಿ ಹೇಳಿದ ನಂತರ ಅದು ತೆಪ್ಪಗಾಯಿತು. ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರ ಸಂಖ್ಯೆ ಕಾಲಾಂತರದಲ್ಲಿ ಏರುತ್ತಾ ಬರುತ್ತಿದೆ. ಅದೇ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ. ಅಲ್ಲಿನ ದೇವಾಲಯಗಳನ್ನು ಧ್ವಂಸಗೊಳಿಸಿ ವಿಕೃತ ಸಂತೋಷಪಡಲಾಗಿದೆ. ಇಷ್ಟೆಲ್ಲಾ ಇದ್ದು ಅದು ಭಾರತದ ವಿರುದ್ಧ ಮಾತನಾಡುತ್ತದೆ. ಇನ್ನು ಈ ವಿಷಯದಲ್ಲಿ ಭಾರತದ ವಿರುದ್ಧ ಕಿಡಿಕಾರಿದ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗಿದೆ ಎಂದು ಪ್ರಪಂಚಕ್ಕೆ ಗೊತ್ತಿದೆ. ಇವರೆಲ್ಲಾ ಭಾರತದ ಒಂದು ಚಾನೆಲ್ ನಲ್ಲಿ ಮುಸಲ್ಮಾನ ಅತಿಥಿಗಳು ನಿರಂತರವಾಗಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಹಿಂದೂ ದೇವರ ವಿಷಯದಲ್ಲಿ ಕೆಣಕಿದ್ದಕ್ಕೆ ಸಿಕ್ಕ ಪ್ರತ್ಯುತ್ತರದಿಂದ ಅಸಮಾಧಾನಗೊಂಡಿವೆ. ಆದರೂ ಆಕ್ರೋಶದಲ್ಲಿ ತಾವಾಡಿದ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ನೂಪುರ್ ಶರ್ಮಾ ಹೇಳಿದ್ದಾರೆ. ಇಷ್ಟಿದ್ದರೂ ಅವರ ತಲೆ ತೆಗೆದವರಿಗೆ ಒಂದು ಕೋಟಿ ರೂಪಾಯಿಯನ್ನು ಯಾರೋ ಮತಾಂಧರು ಘೋಷಿಸಿದ್ದಾರೆ. ಅವರನ್ನು ಅತ್ಯಾಚಾರ ಮಾಡಿ ಕೊಲ್ಲಬೇಕೆಂದು ಯಾವುದೋ ಮೂಲೆಯಲ್ಲಿ ಕುಳಿತ ಹೇಡಿಯೊಬ್ಬ ಕರೆಕೊಟ್ಟಿದ್ದಾನೆ. ಇವರನ್ನು ಶಾಂತಿಪ್ರಿಯರು ಎನ್ನಲಾಗುತ್ತದೆ. ಇವರ ಬೆಂಬಲಕ್ಕೆ ನಮ್ಮ ದೇಶದ ಕೆಲವು ರಾಜಕೀಯ ಪಕ್ಷಗಳು ಕೂಡ ನಿಲ್ಲುತ್ತವೆ. ನೂಪುರ್ ಶರ್ಮಾ ನಮ್ಮ ದೇಶದ ಸುಸಂಕೃತ ಹೆಣ್ಣುಮಗಳು. ಅವಳಿಂದ ಏನೂ ತಪ್ಪಾಗಿಲ್ಲ ಎಂದು ಹದೀಸ್ ತಿಳಿದಿರುವ ಮುಸ್ಲಿಂ ಹಿರಿಯರಿಗೂ ಗೊತ್ತಿದೆ. ಆದರೂ ಅವರು ಮೌನವಾಗಿದ್ದಾರೆ. ಅವರನ್ನು ಖುಷಿಪಡಿಸಲು ಕೆಲವು ರಾಜಕೀಯ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ಬಿಜೆಪಿ ನಮ್ಮವರನ್ನು ಕೈಬಿಟ್ಟಿತಾ ಎಂದು ಕೇಸರಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ನೊಂದುಕೊಂಡು ಬರೆಯುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಸತ್ಯವನ್ನು ಸೂರ್ಯನ ಬೆಳಕಿಗೆ ಒಡ್ಡಿ ಭಾರತಾಂಬೆಯ ದಿಟ್ಟ ಹೆಣ್ಣುಮಗಳು ಪರದೆಯ ಹಿಂದೆ ಸರಿದು ಹೋಗಿದ್ದಾಳೆ. ಅವಳಿಗೆ ಶುಭವಾಗಲಿ ಎಂದು ಹಾರೈಕೆ.
Leave A Reply