ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??

ಒಂದೇ ಪ್ರಶ್ನೆ. ಹಿಂದೂಗಳಿಗೆ ವಿರೋಧಿ ಯಾರು? ನೂಪುರ್ ಶರ್ಮಾ ಮುಸ್ಲಿಮರ ಪವಿತ್ರ ನಂಬುಗೆಯಲ್ಲಿ ಏನು ಇತ್ತೋ, ಅವರ ಧಾರ್ಮಿಕ ಮುಖಂಡರು ಏನು ತಿಳಿದುಕೊಂಡಿದ್ದಾರೋ ಅದನ್ನೇ ಹೇಳಿದ್ದರೂ ಹೇಳಿದ ರೀತಿ ಸರಿಯಿಲ್ಲ ಎನ್ನುವ ಒಂದೇ ಕಾರಣಕ್ಕೆ ಇಡೀ ದೇಶದಲ್ಲಿ ಹಿಂಸೆಗಳಾದವು. ಅವರನ್ನು ಪಕ್ಷದಿಂದ ಆರು ವರ್ಷಗಳಿಗೆ ಉಚ್ಚಾಟಿಸಲಾಯಿತು. ಅವರು ತಪ್ಪಾಗಿದ್ದರೆ ಕ್ಷಮೆ ನೀಡಿ ಎಂದು ವಿನಂತಿಸಿದರೂ ಬಿಜೆಪಿ ಏನೂ ಕನಿಕರ ತೋರಿಸಿಲ್ಲ. ನವೀನ್ ಜಿಂದಾಲ್ ಟ್ವೀಟ್ ಮಾಡಿದ್ದರೂ ಅದರ ನಂತರ ಟ್ವಿಟ್ ಡಿಲಿಟ್ ಮಾಡಿದರೂ ಅವರ ವಿರುದ್ಧವೂ ಭಾರತೀಯ ಜನತಾ ಪಾರ್ಟಿ ಜಬರದಸ್ತ್ ಕ್ರಮ ತೆಗೆದುಕೊಂಡಿತು. ತಮ್ಮ ನಿಜವಾದ ತಪ್ಪೇನು ಎಂದು ಇಬ್ಬರಿಗೂ ಸರಿಯಾಗಿ ಹೇಳುವವರು ಯಾರಿಲ್ಲ. ಆದರೂ ನೂಪುರ್ ಶರ್ಮಾ ಅವರಿಗೆ ಲಕ್ಷಾಂತರ ಬೆದರಿಕೆಯ ಕರೆಗಳು ಬಂದವು. ಅತ್ಯಾಚಾರ ಮಾಡುತ್ತೇವೆ ಎಂದರು. ತಲೆ ತೆಗೆದವರಿಗೆ ಕೋಟಿ ರೂಪಾಯಿ ನೀಡುವ ಘೋಷಣೆ ಆಯಿತು. ಆದರೆ ಅದೇ ಕಾಂಗ್ರೆಸ್ಸಿನ ಐಟಿ ಸೆಲ್ಲಿನ ಪ್ರಮುಖರಾಗಿರುವ ಶೈಲಜಾ ಅಮರನಾಥ್ ಎಂಬುವವರು ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ ನಲ್ಲಿ ಹಿಂದೂ ಆರಾಧ್ಯ ದೇವರುಗಳಾದ ಶ್ರೀರಾಮಚಂದ್ರ, ಸೀತಾಮಾತೆ ಮತ್ತು ಹನುಮಂತ ದೇವರ ಬಗ್ಗೆ ನಿಂದಿಸಿದರೂ ಅವರ ವಿರುದ್ಧ ಇಡೀ ದೇಶ ಬಿಡಿ, ಒಂದು ಗ್ರಾಮದಲ್ಲಿಯೂ ಪ್ರತಿಭಟನೆ ಮಾಡುವವರು ಇಲ್ಲ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ ಬಿಟ್ಟರೆ ಅದರ ಮುಂದೆ ಏನೂ ಆಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಶೈಲಜಾ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿರುವ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಆಕೆಯನ್ನು ಪಕ್ಷದಿಂದ ಉಚ್ಚಾಟಿಸಲಾಗಿಲ್ಲ. ಶೈಲಜಾ ಅವರ ತಲೆಗೆ ಯಾರೂ ಒಂದು ರೂಪಾಯಿ ಕೂಡ ಘೋಷಿಸಿಲ್ಲ. ಇದರಿಂದ ಏನಾಯಿತು ಎಂದರೆ ತಾವು ಹಿಂದೂ ದೇವರನ್ನು ಅವಮಾನಿಸಿದರೆ ಏನೂ ಆಗುವುದಿಲ್ಲ ಎನ್ನುವುದು ಕಾಂಗ್ರೆಸ್ಸಿಗರಿಗೆ ಮತ್ತೆ ಸಾಬೀತಾಯಿತು. ಶೈಲಜಾ ಓರ್ವ ವಕೀಲೆ. ಅವರಿಗೆ ದೇವರುಗಳನ್ನು ಅವಹೇಳನ ಮಾಡಿದರೆ ಅದು ಒಂದು ಸಮುದಾಯಕ್ಕೆ ನೋವು ತರುತ್ತದೆ, ಅವರ ನಂಬಿಕೆಗಳಿಗೆ ಘಾಸಿ ಉಂಟು ಮಾಡುತ್ತದೆ ಎಂದು ಗೊತ್ತಿರಬೇಕಿತ್ತು. ಆದರೆ ಕ್ಲಬ್ ಹೌಸಿನಲ್ಲಿ ಮಾತನಾಡಿ ಏನೂ ಸಾಕ್ಷ್ಯ ಇಲ್ಲದೇ ದಕ್ಕಿಸಿಕೊಳ್ಳಬಹುದು ಎನ್ನುವ ಭಂಡ ಧೈರ್ಯ ಇದ್ದಿರಬಹುದು. ಇನ್ನು ಇಂತಹ ವಿಷಯಗಳಾದಾಗ ಹಿಂದೂ ಸಮಾಜ ಯಾವತ್ತೂ ದೊಡ್ಡ ರೀತಿಯಲ್ಲಿ ಬೀದಿಗೆ ಇಳಿಯುವುದಿಲ್ಲ ಎನ್ನುವ ಗ್ಯಾರಂಟಿ ಅವರಿಗೆ ಇದ್ದಿರಲೂಬಹುದು. ಆದರೆ ಇಷ್ಟು ಧೈರ್ಯದಿಂದ ಶ್ರೀರಾಮಚಂದ್ರ, ಸೀತೆ, ಹನುಮಂತ ದೇವರ ಬಗ್ಗೆ ಮಾತನಾಡಿದ ಶೈಲಜಾ ತಮ್ಮ ಮನೆಗೆ ಕೇಸರಿ ಸಂಘಟನೆಯ ಹುಡುಗರು ದಾಳಿ ಮಾಡಲು ಬಂದಿದ್ರು ಎಂದು ಕೇಸು ದಾಖಲಿಸಿದ್ದಾರೆ.
ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ ಎನ್ನುವುದು ನಿಜ. ಅದು ನಮಗೆ ಸಂವಿಧಾನ ಕೊಟ್ಟಿರುವ ಅವಕಾಶ ಎಂದು ಅಂದುಕೊಳ್ಳಬೇಕೆ ವಿನ: ಅದನ್ನು ಹಕ್ಕು ಎಂದು ಕೆಲವರು ಅಂದುಕೊಂಡು ಬಿಟ್ಟಿರುವುದರಿಂದ ಎಲ್ಲಾ ಸಮಸ್ಯೆಗಳು ಉದ್ಭವಿಸುತ್ತದೆ. ಅದೇ ಶೈಲಜಾ ಮುಸ್ಲಿಮರು ನಂಬುವ ಶಕ್ತಿಗೆ ಏನಾದರೂ ಹೇಳಿ ನೋಡಲಿ. ಆಗ ಅವರಿಗೆ ಅದರ ಪರಿಣಾಮ ಗೊತ್ತಾಗುತ್ತದೆ. ಈಗ ಏನಾಗಿದೆ ಎಂದರೆ ಶ್ರೀರಾಮನಿಗೆ ನಿಂದಿಸಿದ ತಕ್ಷಣ ಅದು ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಮಾತ್ರ ಬೇಸರವಾಗುತ್ತದೆ ಎಂದು ಕಾಂಗ್ರೆಸ್ಸಿಗರು ಅಂದುಕೊಂಡಿದ್ದಾರೆ. ಇನ್ನು ಹಿಂದೂಗಳಲ್ಲಿ ಏನಾಗಿದೆ ಎಂದರೆ ದೇವರನ್ನು ನಿಂದಿಸಿದವನು ಕಾಂಗ್ರೆಸ್ಸಾ, ಬಿಜೆಪಿಯಾ, ಸಂಘ ಪರಿವಾರಾನಾ, ಕಮ್ಯೂನಿಸ್ಟಾ, ದಲಿತನಾ, ಒಕ್ಕಲಿಗನಾ, ಲಿಂಗಾಯತನಾ, ಬ್ರಾಹ್ಮಣನಾ ಹಿಗೆ ಎಲ್ಲವನ್ನು ನೋಡಿ ನಂತರ ಯೋಚಿಸಲಾಗುತ್ತದೆ. ಅದೇ ಮುಸ್ಲಿಮರಲ್ಲಿ ತಮ್ಮ ದೇವರ ಬಗ್ಗೆ ಸತ್ಯವೇ ಬಂದರೂ ಅದು ಹೇಳಿದ ರೀತಿ ಹಂಗಿಸಿದಂತಿತು ಎಂದು ಮುಸ್ಲಿಮರು ದೇಶ, ವಿದೇಶಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆಗೆ ಇಳಿಯುತ್ತಾರೆ. ಕೆಲಸ ಹೋದರೂ ಪರವಾಗಿಲ್ಲ ಎಂದು ವಲಸಿಗರಿಗೆ ಪ್ರತಿಭಟನೆಯೇ ನಿಷೇಧವಾಗಿರುವ ಮೂಲಭೂತವಾದವನ್ನೇ ಹೊದ್ದು ಮಲಗಿರುವ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತಿಭಟನೆಗೆ ಇಳಿಯುತ್ತಾರೆ. ಆದರೆ ಹಿಂದೂಗಳ ಪ್ರತಿಭಟನೆ ಹೆಚ್ಚೆಂದರೆ ಭಜನೆ ಮಾಡುತ್ತಾ ಮೌನ ಪಾದಯಾತ್ರೆ ಎಂದು ಶೈಲಜಾ ಅಮರನಾಥ್ ಅವರಂತಹ ಜನ ಭಾವಿಸಿರುವುದರಿಂದ ಹೀಗೆ ಅವಹೇಳನ ಮಾಡುತ್ತಾರೆ. ಬಹುಶ: ಮುಸ್ಲಿಮರು ನಮ್ಮ ದೇವರನ್ನು ನಿಂದಿಸಿದರೆ ಅದನ್ನೇ ಹಿಂದೂ ಸಮಾಜ ಗಂಭೀರವಾಗಿ ತೆಗೆದುಕೊಂಡಿಲ್ಲ. ಇಲ್ಲದಿದ್ದರೆ ಜಾಕೀರ್ ನೈಕ್ ಯಾವತ್ತೋ ಭಾರತದ ಕಂಬಿಗಳ ಹಿಂದೆ ಇರಬೇಕಿತ್ತು. ಆದರೆ ನಮ್ಮ ಧರ್ಮದಲ್ಲಿಯೇ ಶೈಲಜಾ ಅವರಂತಹ ಧರ್ಮ ವಿರೋಧಿಗಳು ಇರುವಾಗ ನಾವು ಬೇರೆಯವರನ್ನು ದೂಷಿಸಿ ಏನು ಪ್ರಯೋಜನ. ಇನ್ನು ಕಾಂಗ್ರೆಸ್ಸಿನಲ್ಲಿ ಹಿಂದೂ ಧರ್ಮದಿಂದ ಮುಸ್ಲಿಂಗೆ ಮತಾಂತರ ಆಗಿರುವ ಕೆಲವರು ಇದ್ದಾರೆ. ಅವರು ಕೂಡ ಹಿಂದೂ ದೇವರ ಅವಹೇಳನದಲ್ಲಿ ಶೈಲಜಾ ಅವರಿಗೆ ಸಾಥ್ ನೀಡಿದ್ದಾರೆ.
ಅದೇ ಕಾಂಗ್ರೆಸ್ ಈಗ ಶೈಲಜಾ ಅವರ ಮನೆಯ ಮೇಲೆ ಕಲ್ಲು ಬಿಸಾಡಿದ ಘಟನೆಯನ್ನು ದೊಡ್ಡದು ಮಾಡುವ ತಂತ್ರ ಹೂಡಲಿತ್ತು. ಆದರೆ ಸದ್ಯ ಡಿಕೆಶಿ ಪಠ್ಯಪುಸ್ತಕ ಹರಿಯುವುದರಲ್ಲಿ ಬಿಝಿಯಾಗಿರುವುದರಿಂದ ಮತ್ತು ಅವರ ನಾಯಕ ರಾಹುಲ್ ಇ.ಡಿ ತನಿಖೆಯಲ್ಲಿ ಇರುವುದರಿಂದ ಅಲ್ಲಿ ಕೂಡ ಪ್ರತಿಭಟನೆ ಮಾಡಲು ನಾಯಕರು ಹೋಗಿರುವುದರಿಂದ ಇತ್ತ ಗಮನ ಕೊಡಲು ಪುರುಸೊತ್ತು ಸಿಗದೇ ಬಿಟ್ಟಿದ್ದಾರೆ. ಇಲ್ಲದೇ ಹೋದರೆ ಹಿಂದೂ ದೇವರನ್ನು ನಿಂದಿಸಿದರೆ ಮನೆಯ ಕಿಟಕಿಗೆ ಕಲ್ಲು ಬಿಸಾಡುವುದಾ ಎಂದು ಕೇಳುವುದಕ್ಕೂ ಕಾಂಗ್ರೆಸ್ಸಿಗರು ಹಿಂಜರಿಯುವುದಿಲ್ಲ!
Leave A Reply