• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

2047ರೊಳಗೆ ಭಾರತವನ್ನು ಇಸ್ಲಾಮಿಕ ರಾಷ್ಟ್ರ ಮಾಡುವ ಪ್ರಯತ್ನ ಹುಟ್ಟಿಕೊಂಡಿದೆ!!

Hanumantha Kamath Posted On July 16, 2022
0


0
Shares
  • Share On Facebook
  • Tweet It

2047 ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕಿ 100 ವರ್ಷಗಳಾಗುತ್ತವೆ. ಹೊರಗಿನಿಂದ ಬಂದ ಶತ್ರುಗಳನ್ನು ದೇಶದಿಂದ ಓಡಿಸುವಲ್ಲಿ ನಾವು 0947 ರಲ್ಲಿ ಯಶಸ್ವಿಯಾಗಿದ್ದೇವು. ಆದರೆ ಕಳೆದ 75 ವರ್ಷಗಳಲ್ಲಿ ದೇಶದ ಒಳಗಿರುವ ಶತ್ರುಗಳನ್ನು ನಾವು ಏನೂ ಮಾಡಲು ಸಾಧ್ಯವಾಗಿಲ್ಲವಲ್ಲ ಎಂದು ಈಗ ಮತ್ತೆ ಸಾಬೀತಾಗಿದೆ. ಅದಕ್ಕೆ ತಾಜಾ ಉದಾಹರಣೆ ಬಿಹಾರದಲ್ಲಿ ಪೊಲೀಸರು ಬಂಧಿಸಿರುವ ಇಬ್ಬರು ಉಗ್ರರು. ಅವರು ಭಾರತದೊಳಗೆ ಕುಳಿತು ಇಲ್ಲಿಯ ಹುಡುಗರಿಗೆ ಬ್ರೇನ್ ವಾಶ್ ಮಾಡಿಸಿ ಅವರಿಗೆ ಆಯುಧ ತರಬೇತಿ ಕೊಟ್ಟು ಅವರಿಂದ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡಲು ಸಂಚು ರೂಪಿಸಿದ್ದರು. ತಮ್ಮ ಈ ಗುರಿಗೆ ಅಡ್ಡವಾಗಿರುವ ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರನ್ನು ಕೂಡ ಹತ್ಯೆ ಮಾಡಲು ನಿಯೋಜಿಸಿದ್ದರು. ಯಾಕೆಂದರೆ ಇವರ ಗುರಿ ಇರುವುದು ಭಾರತವನ್ನು 2047 ರಲ್ಲಿ ಇಸ್ಲಾಮಿಕ ರಾಷ್ಟ್ರವನ್ನಾಗಿಸುವ ಗುರಿ. ಇಂತವರನ್ನು ಏನು ಮಾಡಲು ಸಾಧ್ಯವಿದೆ. ಇದು ನಿಜಕ್ಕೂ ಯೋಚಿಸುವಂತಹ ಅನಿವಾರ್ಯತೆ ನಮ್ಮೆಲ್ಲರ ಮುಂದೆ ಇದೆ. ಪ್ರಪಂಚದ ಯಾವುದೇ ರಾಷ್ಟ್ರವನ್ನು ನಾವು ತೆಗೆದುಕೊಂಡರೂ ಅಲ್ಲಿ ಮುಸ್ಲಿಂ ಅರಸರ ದಾಳಿ, ಅತಿಕ್ರಮಣದ ಬಳಿಕ ಆ ರಾಷ್ಟ್ರಗಳು ಕಾಲಕ್ರಮೇಣ ಮುಸ್ಲಿಂ ರಾಷ್ಟ್ರಗಳಾಗಿ ಪರಿವರ್ತನೆಗೊಂಡವು. ಆದರೆ ಭಾರತ ಮಾತ್ರ ಮೊಗಲರ ದಾಳಿಯ ಬಳಿಕ ಅವರು ಮೂರ್ನಾಕು ಶತಮಾನಗಳನ್ನು ಭಾರತದಲ್ಲಿ ಕಳೆದ ಬಳಿಕವೂ, ಅವರ ನಿರಂತರ ದೌರ್ಜನ್ಯ, ಅತ್ಯಾಚಾರ, ಮತಾಂತರದ ಬಳಿಕವೂ ಭಾರತವೂ ಇಂದಿಗೂ ಬಹುಸಂಖ್ಯಾತ ಹಿಂದೂ ರಾಷ್ಟ್ರವಾಗಿಯೇ ಉಳಿದಿದೆ. ಮುಸ್ಲಿಮರ ಜನಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ ಬಿಟ್ಟರೆ ಅವರು ಇನ್ನು ಕೂಡ ಈ ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಆ ಬಗ್ಗೆ ಪ್ರಯತ್ನಗಳು ಮಾತ್ರ ನಿರಂತರವಾಗಿ ನಡೆಯುತ್ತಿದೆ ಎನ್ನುವುದಕ್ಕೆ ಸದ್ಯದ ಉದಾಹರಣೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಇಬ್ಬರ ಸದಸ್ಯರ ಬಂಧನ.
ದುರಂತವೆಂದರೆ ಅದರಲ್ಲಿ ಒಬ್ಬ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ. ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಮೊಹಮ್ಮದ್ ಜಲಾಲುದ್ದೀನ್ ಸಿಮಿಯಂತಹ ಸಂಘಟನೆಯಲ್ಲಿಯೂ ಕೆಲಸ ಮಾಡಿದ್ದ.

ಒಬ್ಬ ಅಧಿಕಾರಿ ಮಾನಸಿಕವಾಗಿ ಯಾವುದೇ ಸಂಘಟನೆಯ ಬಗ್ಗೆ ಒಲವನ್ನು ಹೊಂದಿರುವುದು ಅಪರಾಧವಲ್ಲ. ಆದರೆ ದೇಶದ್ರೋಹಿ ಸಂಘಟನೆಯಲ್ಲಿ ಇದ್ದು, ಈ ದೇಶವನ್ನೇ ಹಾಳು ಮಾಡಬೇಕೆಂದು ಹೊರಡುವುದು ಇದೆಯಲ್ಲ ಅದು ಘೋರ ಅಪರಾಧ. ರಾಜಕೀಯ ಪಕ್ಷಗಳಾದರೆ ಅವರಿಗೆ ನೈತಿಕತೆಯ ಕೊರತೆ ಇರುವುದರಿಂದ ಹಿಂದಿನ ಬಾಗಿಲಿನಿಂದ ಪಿಎಫ್ ಐ ಮತ್ತು ಅದರ ರಾಜಕೀಯ ಮುಖವಾಡ ಎಸ್ ಡಿಪಿಐಯನ್ನು ಬೆಂಬಲಿಸುವುದು ನಡೆದು ಬರುತ್ತಾ ಇದೆ. ಅಂತಹ ಪಕ್ಷಗಳನ್ನು ಬೆಂಬಲಿಸುವುದು ನಿಜಕ್ಕೂ ತಪ್ಪಾದರೂ ಅದನ್ನು ರಾಜಕೀಯದ ದಾಳಗಳು ಎಂದು ಅಂದುಕೊಂಡರೂ ಪೊಲೀಸ್ ಇಲಾಖೆಯಲ್ಲಿ ಅಂತಹ ವಾತಾವರಣ ನಿರ್ಮಾಣವಾಗಬಾರದು. ಇನ್ನೊಂದು ವಿಷಯ ಏನೆಂದರೆ ನುಪೂರ್ ಶರ್ಮಾ ಇತ್ತೀಚೆಗೆ ಹದೀಸ್ ನಲ್ಲಿದ್ದ ವಿಚಾರಗಳನ್ನು ಬಹಿರಂಗವಾಗಿ ಹೇಳಿದರು ಎನ್ನುವ ಕಾರಣಕ್ಕೆ ದೇಶದ ಅಸಂಖ್ಯಾತ ಮುಸಲ್ಮಾನರು ಬೀದಿಗೆ ಇಳಿದು ಸಾರ್ವಜನಿಕ ವಸ್ತುಗಳಿಗೆ ಹಾನಿ ಉಂಟು ಮಾಡಿದರು. ಹಾಗಾದರೆ ಈಗ ಬಂಧಿತರಾಗಿರುವ ಇಬ್ಬರು ಮುಸ್ಲಿಮರು ಈ ದೇಶದ ಐಕ್ಯತೆ, ಅಖಂಡತೆಗೆ ದಕ್ಕೆ ಮಾಡಲು ಸಂಚು ಹೂಡಿದ್ದಾರೆ ಎನ್ನುವ ವಿಷಯ ಬಹಿರಂಗವಾದಾಗ ಹಿಂದೂಗಳು ಕನಿಷ್ಟ ಇದರ ವಿರುದ್ಧ ಮಾತನಾಡುವುದು ಕೂಡ ಇಲ್ಲ ಎಂದರೆ ಅದರ ಅರ್ಥ ಏನು? ಇನ್ನು ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲಾಗುವುದು ಎಂದು ದೇಶದ ಯಾವುದೇ ಒಂದು ಸಂಘಟನೆಯ ಒಬ್ಬ ಕಿರಿಯ ಕಾರ್ಯಕರ್ತ ಹೇಳಿದರೂ ಅದರ ವಿರುದ್ಧ ದೊಡ್ಡದಾಗಿ ಧ್ವನಿ ಎತ್ತಿ ಪ್ರತಿಭಟಿಸುವ ಕಾಂಗ್ರೆಸ್ ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಪ್ರಯತ್ನಿಸುತ್ತಿದ್ದ ಇಬ್ಬರ ಬಂಧನವಾದ ಬಳಿಕವೂ ಅದರ ವಿರುದ್ಧ ಮಾತನಾಡುವುದಿಲ್ಲ. ಈಗ ಬಂಧಿತರಾಗಿರುವ ಇಬ್ಬರೂ ಕೇವಲ ಹೇಳಿಕೆಯನ್ನು ನೀಡಿದ್ದರೆ ಪಬ್ಲಿಸಿಟಿ ಸ್ಟಂಟ್ ಎಂದು ಸುಮ್ಮನೆ ಅದನ್ನು ಪಕ್ಕಕ್ಕೆ ಇಡಬಹುದಿತ್ತು. ಆದರೆ ಇವರು ಬೇರೆ ಬೇರೆ ರಾಜ್ಯಗಳಿಂದ ಯುವಕರನ್ನು ಕರೆಸಿ ಅವರನ್ನು ಬಿಹಾರದ ಹೋಟೆಲೊಂದರಲ್ಲಿ ಇರಿಸಿ ಅನೇಕ ದಿನಗಳ ತನಕ ಆಯುಧ ತರಬೇತಿಯನ್ನು ನೀಡುತ್ತಿದ್ದರು ಎಂದರೆ ಅದರ ಅರ್ಥ ಅವರ ಉದ್ದೇಶ ಸ್ಪಷ್ಟವಾಗಿತ್ತು. ಇನ್ನು ದೇಶದ ಪ್ರಧಾನಿಯನ್ನು ಹತ್ಯೆಗೈಯಲು ಸಂಚು ಹೂಡಿರುವುದು ಮತ್ತು ಮೋದಿ ಬಿಹಾರ ಭೇಟಿಯ ಒಂದು ದಿನದ ಮೊದಲು ಉಗ್ರರ ಬಂಧನವಾಗುತ್ತಿರುವುದು ಕೇವಲ ಕಾಕತಾಳೀಯ ಎಂದು ಹೇಳಲು ಆಗುವುದಿಲ್ಲ.

ಇನ್ನು ಮೋದಿ ಸರಕಾರ ಜಾರಿಗೆ ತರುವ ಎಲ್ಲಾ ಕಾಯಿದೆಗಳನ್ನು ವಿರೋಧಿಸಬೇಕೆಂಬ ನಿರ್ಣಯವನ್ನು ಮತಾಂಧ ಸಂಘಟನೆಗಳು ಮಾಡಿವೆ. ಆದರೆ ಹೋರಾಟ ಮಾಡುವ ಸಂದರ್ಭದಲ್ಲಿ ಭಾರತದ ಧ್ವಜವನ್ನು ಹಿಡಿಯೋಣ, ಈ ಮೂಲಕ ಸಂವಿಧಾನವನ್ನು ಗೌರವಿಸುತ್ತೇವೆ ಎಂಬ ನಾಟಕ ಮಾಡುತ್ತಾ ಜನರನ್ನು ನಂಬಿಸುವ ಕೆಲಸ ಮಾಡೋಣ ಎಂದು ನಿಶ್ಚಯವಾಗಿದೆ. ಇನ್ನು ಪ್ರತಿ ಹೋರಾಟದ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಬಳಸೋಣ. ಈ ಮೂಲಕ ದಲಿತರನ್ನು ಓಲೈಸಿ ಅವರನ್ನು ಮೋದಿ ಸರಕಾರದಿಂದ ಬೇರ್ಪಡಿಸುವ ಕೆಲಸ ಮಾಡೋಣ ಎಂದು ಕೂಡ ಪ್ಲಾನ್ ಆಗಿದೆ. ಈ ಮೂಲಕ ಮುಂದೊಂದು ದಿನ ದೇಶದಲ್ಲಿ ಇಸ್ಲಾಮಿಕ್ ಸರಕಾರವನ್ನು ಸ್ಥಾಪಿಸೋಣ ಎಂದು ಮತಾಂಧ ಸಂಘಟನೆಗಳು ನಿರ್ಧಾರ ಮಾಡಿವೆ. ಈ ಬಗ್ಗೆ ಹಿಂದೂಗಳು ಇನ್ನು ಕೂಡ ಯೋಚಿಸಿದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲ್ಲ!

0
Shares
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search