• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕುಡಿಯುವ ನೀರಿನ ಇಳಿಸಿದ್ದು ರಾಜ್ಯ ಸರಕಾರದ ಮಾಸ್ಟರ್ ಸ್ಟ್ರೋಕ್!

Hanumantha Kamath Posted On July 22, 2022


  • Share On Facebook
  • Tweet It

ಕೊನೆಗೂ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ದರ ಒಂದಿಷ್ಟು ಕಡಿಮೆಯಾಗುತ್ತಿದೆ. ಅದಕ್ಕಾಗಿ ಎರಡು ವರ್ಷಗಳಿಗೂ ಹೆಚ್ಚಿನ ಸಮಯದಿಂದ ಶಾಸಕ ವೇದವ್ಯಾಸ ಕಾಮತ್ ಪಟ್ಟ ಶ್ರಮ ಫಲ ನೀಡಿದೆ. ಮುಂದಿನ ಒಂದು ವರ್ಷ ಇಳಿಕೆಯಾದ ನೀರಿನ ದರವನ್ನು ಜನ ಕೊಟ್ಟರೆ ಸಾಕಾಗುತ್ತದೆ. ಅಲ್ಲಿಗೆ ಒಂದು ಜನಪ್ರಿಯ ಯೋಜನೆ ಚುನಾವಣೆಗೆ ಎಂಟು ತಿಂಗಳು ಇರುವಾಗ ಜಾರಿಗೆ ತರಲು ರಾಜ್ಯ ಸರಕಾರ ತೀರ್ಮಾನಿಸಿದ್ದು ಉತ್ತಮ ರಾಜಕೀಯ ನಿರ್ಧಾರ. ಹಾಗಂತ ಕುಡಿಯುವ ನೀರಿನ ದರವನ್ನು ಏರಿಸಿದ್ದು ಯಾವುದೇ ರಾಜಕೀಯ ಪಕ್ಷದ ಸರಕಾರವಲ್ಲ. ಕಾಂಗ್ರೆಸ್ ಅಥವಾ ಭಾರತೀಯ ಜನತಾ ಪಾರ್ಟಿ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದಾಗ ನೀರಿನ ದರವನ್ನು ಹೆಚ್ಚಳ ಮಾಡುವಂತಹ ಕೆಲಸಕ್ಕೆ ಮುಂದಾಗಲೇ ಇಲ್ಲ. ಯಾಕೆಂದರೆ ಅದನ್ನು ಮಾಡಿದರೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಲ್ಲಾ ಪಕ್ಷಗಳಿಗೂ ಗೊತ್ತಿತ್ತು. ಯಾವ ಪಕ್ಷದ ಆಡಳಿತ ಕೂಡ ಈ ಬಗ್ಗೆ ಧೈರ್ಯ ಮಾಡಿರಲಿಲ್ಲ. ಆದರೆ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಬೇಕಾದರೆ ಆರ್ಥಿಕ ಸಂಪನ್ಮೂಲ ಅತ್ಯಗತ್ಯ. ಆರ್ಥಿಕ ಸಂಪನ್ಮೂಲ ಸಿಗಬೇಕಾದರೆ ಶುಲ್ಕ ಮತ್ತು ತೆರಿಗೆ ಸಂಗ್ರಹವಾಗಬೇಕು.

ಹಾಗಂತ ಹಳೆ ಕಾಲದ ಶುಲ್ಕವನ್ನೇ ತೆಗೆದುಕೊಂಡರೆ ಇವತ್ತಿನ ಕಾಲದಲ್ಲಿ ಅಭಿವೃದ್ಧಿ ಸಾಧ್ಯವಾ? ಯಾಕೆಂದರೆ ಕಳೆದ 10-15 ವರ್ಷಗಳಲ್ಲಿ ಯಾವ ಆಡಳಿತ ಕೂಡ ದರ ಏರಿಸುವ ಧೈರ್ಯ ಮಾಡಿರಲೇ ಇಲ್ಲ. ಆದರೆ ಯಾವಾಗ 2019 ರಲ್ಲಿ ಒಂದಿಷ್ಟು ಸಮಯ ಪಾಲಿಕೆಯಲ್ಲಿ ಯಾವುದೇ ಪಕ್ಷದ ಸರಕಾರ ಇಲ್ಲದೇ, ಜಿಲ್ಲಾಧಿಕಾರಿಯವರೇ ಆಡಳಿತಾಧಿಕಾರಿಯಾಗಿದ್ದರಲ್ಲ, ಆ ಸಮಯದಲ್ಲಿ ಅವರು ಸಿಕ್ಕಿದೇ ಅವಕಾಶ ಎಂದು ಕುಡಿಯುವ ನೀರಿನ ದರವನ್ನು ಹೆಚ್ಚಳ ಮಾಡಿದ್ರು. ಹೆಚ್ಚಳ ಹೇಗೆ ಮಾಡಿದ್ರು ಎಂದರೆ ಅದು ನಿಜಕ್ಕೂ ಅವೈಜ್ಞಾನಿಕವಾಗಿತ್ತು. ಯಾವುದೇ ಒಂದು ಸರಕಾರ ದರ ಹೆಚ್ಚಳ ಮಾಡುವಾಗ ಅದು ಜನಸಾಮಾನ್ಯರಿಗೆ ಹೊರೆಯಾಗದೇ ಇದ್ದರೆ ಉತ್ತಮ. ಇಲ್ಲದಿದ್ದರೆ ಜನ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ. ಆದ್ದರಿಂದ ಜನಪ್ರತಿನಿಧಿಗಳು ಒಂದು ರೂಪಾಯಿ ಏರಿಸುವಾಗಲೂ ನೂರು ಸಲ ಯೋಚನೆ ಮಾಡುತ್ತಾರೆ. ಆದರೆ ಅಧಿಕಾರಿಗಳಿಗೆ ಅಂತಹ ಯಾವ ಹಂಗು ಕೂಡ ಇಲ್ಲವಲ್ಲ. ಅವರು ಹಿಂದಿನ ಎಲ್ಲಾ ಬಾಕಿಗಳನ್ನು ಒಮ್ಮೆಲ್ಲೆ ಹೇರಿಬಿಟ್ಟರು. ಇದರಿಂದ ಪಾಲಿಕೆ ವ್ಯಾಪ್ತಿಯ ನಾಗರಿಕ ಆಕ್ರೋಶಗೊಂಡ. ಅದರ ನಂತರ ಪಾಲಿಕೆಗೆ ಚುನಾವಣೆ ಬಂತು. ನಾವು ಅಧಿಕಾರಕ್ಕೆ ಬಂದ್ರೆ ಇಳಿಸ್ತೇವೆ ಎಂದು ಬಿಜೆಪಿ ಹೇಳಿಕೊಂಡಿತು. ಪ್ರಣಾಳಿಕೆಯಲ್ಲಿ ಕೊಟ್ಟ ಅನೇಕ ಭರವಸೆಗಳಲ್ಲಿ ಇದು ಒಂದಾಗಿತ್ತು. ರಾಜ್ಯದಲ್ಲಿಯೂ ಇವರದ್ದೇ ಸರಕಾರ ಇತ್ತಲ್ಲ. ಇವರಿಗೆ ಅಧಿಕಾರ ಕೊಟ್ಟರೆ ಮಾತ್ರ ಆಗುತ್ತದೆ ಎಂದು ಮತದಾರ ಕೂಡ ಲೆಕ್ಕ ಹಾಕಿದ. ಸಹಜವಾಗಿ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿದ ಮತದಾರ ಇವರು ಯಾವಾಗ ನೀರಿನ ದರ ಕಡಿಮೆ ಮಾಡುತ್ತಾರೆ ಎಂದು ಕಾಯುತ್ತಾ ಕುಳಿತ. ಪಾಲಿಕೆಯಲ್ಲಿ ಬಿಜೆಪಿ ಕೂಡ ಈ ವಿಷಯದಲ್ಲಿ ಎಚ್ಚರವಾಗಿಯೇ ಇತ್ತು. ದಿವಾಕರ್ ಮೇಯರ್ ಆದ ತಕ್ಷಣ ತಡ ಮಾಡದೇ ಪರಿಷತ್ ಸಭೆಯಲ್ಲಿ ನೀರಿನ ದರ ಪರಿಷ್ಕರಿಸುವ ನಿರ್ಣಯ ಕೈಗೊಂಡು ರಾಜ್ಯ ಸರಕಾದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಲಾಯಿತು. ಆದರೆ ಎರಡು ವರ್ಷ ರಾಜ್ಯ ಸರಕಾರ ಇವರು ಕಳುಹಿಸಿದ ನಿರ್ಣಯದ ಮೇಲೆ ಕುಳಿತುಕೊಂಡು ಅದನ್ನು ಬಿಸಿ ಮಾಡಿತೆ ವಿನ: ಫೈಲ್ ಅಲುಗಾಡಲೇ ಇಲ್ಲ. ಪ್ರತಿ ಬಾರಿ ಶಾಸಕರಿಗೆ ಜನರು, ವಿಪಕ್ಷ ಕಾಂಗ್ರೆಸ್ ಏನು ಮಾಡುತ್ತಿದ್ದಿರಿ ಎಂದು ಕೇಳುತ್ತಲೇ ಬರುತ್ತಿತ್ತು. ಶಾಸಕರ ಮೇಲೆ ಕೂಡ ಒತ್ತಡ ಇತ್ತು. ಅವರು ಕೂಡ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರಿಗೆ, ಪೌರಾಡಳಿತ ಸಚಿವರಿಗೆ ಮನವಿ ಮಾಡುತ್ತಾ ಬೆನ್ನು ಬಿದ್ದಿದ್ದರು. ಅಂತಿಮವಾಗ ಚುನಾವಣೆಗೆ ಬೆರಳೆಣಿಕೆಯ ತಿಂಗಳುಗಳು ಇರುವಾಗ ರಾಜ್ಯ ಸರಕಾರ ಅಸ್ತು ಎಂದಿದೆ. ಈ ಮೂಲಕ ನೀರಿನ ದರ ಇಳಿಸುವ ಭಗಿರಥ ಪ್ರಯತ್ನಕ್ಕೆ ಜಯ ಸಿಕ್ಕಿದೆ.

ಇಲ್ಲಿ ಇನ್ನೊಂದು ವಿಷಯವನ್ನು ಮಾತ್ರ ಕ್ಲಿಯರ್ ಮಾಡಬೇಕಿದೆ. ಅದೇನೆಂದರೆ ಕೆಲವು ಕಡೆ ನೀರಿನ ಬಿಲ್ ಮೂರ್ನಾಕು ತಿಂಗಳಿಗೆ ಒಮ್ಮೆ ಬರುವುದು ಅಥವಾ ಕಟ್ಟುವವರು ಇದ್ದಾರೆ. ಈಗ ಇಳಿಕೆಯಾಗಿರುವ ನೀರಿನ ಬಿಲ್ ಅಗಸ್ಟ್ ಒಂದರಿಂದ ಜಾರಿಗೆ ಬರುವುದಾದರೆ ಹಿಂದಿನ ತಿಂಗಳುಗಳ ದರ ಮತ್ತು ಮುಂದಿನ ಇಳಿಕೆಯ ದರದ ಬಿಲ್ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಾಗರಿಕರು ಪಾಲಿಕೆಯ ಪಡಸಾಲೆಯಲ್ಲಿ ಬಿಲ್ ಹಿಡಿದುಕೊಂಡು ಸರಿ ಮಾಡಿಸಲು ಅಲೆದಾಡುವಂತೆ ಆಗಬಾರದು. ಒಟ್ಟಿನಲ್ಲಿ ಕಳೆದ ಪಾಲಿಕೆ ಚುನಾವಣೆ ಮೊದಲು ಬಿಜೆಪಿ ಕೊಟ್ಟ ಭರವಸೆಯಲ್ಲಿ ಪ್ರಮುಖವಾಗಿರುವುದನ್ನು ಈಡೇರಿಸಿದಂತಾಗಿದೆ. ಅದೇ ಪ್ರಣಾಳಿಕೆಯಲ್ಲಿ ಅವರು ನೀರಿನ ವಿಷಯದಲ್ಲಿಯೇ ನೀಡಿದ್ದ ಇನ್ನೊಂದು ಭರವಸೆಯೆಂದರೆ ತುಂಬೆಯ ಹೊಸ ಡ್ಯಾಂನಲ್ಲಿ ಏಳು ಮೀಟರ್ ನಿಲ್ಲಿಸಲು ಬೇಕಾದ ಅನುದಾನವನ್ನು ರಾಜ್ಯ ಸರಕಾರದಿಂದ ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು. ಈ ಬಾರಿ ಡ್ಯಾಂನಲ್ಲಿ ನೀರು ಸಾಕಷ್ಟು ಇದ್ದ ಕಾರಣ ಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರಿನ ಅಭಾವ ಉದ್ಭವಿಸಿರಲಿಲ್ಲ. ಆದರೆ ಪ್ರತಿ ಬಾರಿ ಹೀಗೆನೆ ಆಗುತ್ತೆ ಎಂದು ಹೇಳಲು ಆಗುವುದಿಲ್ಲ. ಅದಕ್ಕಿರುವ ಒಂದೇ ಪರಿಹಾರ ರಾಜ್ಯ ಸರಕಾರ 120 ಕೋಟಿ ರೂಪಾಯಿ ಬಿಡುಗಡೆಗೊಳಿಸುವುದು ಮತ್ತು ಕುಡಿಯುವ ನೀರಿನ ಪೂರೈಕೆಗೆ ಶಾಶ್ವತ ವ್ಯವಸ್ಥೆ ಮಾಡುವುದು. ಅದು ಕೂಡ ಆಗಬೇಕು. ದರ ಇಳಿಸಲು ತಪಸ್ಸು ಮಾಡಿದ ಭಗೀರಥ ಅದನ್ನು ಮಾಡಬಹುದಾ ಎಂದು ಜನ ಕಾಯುತ್ತಿದ್ದಾರೆ!

  • Share On Facebook
  • Tweet It


- Advertisement -


Trending Now
ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
Hanumantha Kamath August 6, 2022
ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
Hanumantha Kamath August 5, 2022
Leave A Reply

  • Recent Posts

    • ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
    • ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
    • ಬೈಕ್ ನಲ್ಲಿ ಹಿಂದೆ ಕೂತುಕೊಂಡರೆ ಹುಶಾರ್!
    • ಸಂಜೆಯಿಂದ ಬಂದ್ ಮಾಡಿ ರೋಡ್ ಬ್ಲಾಕ್ ಮಾಡಿದರೆ ಆಗುತ್ತಾ?
    • ಪರಿಹಾರ ಕೊಡುವಾಗ ಒಂದು ರಾಜಧರ್ಮ, ಇನ್ನೊಂದು ಸಿದ್ಧಾಂತ ಧರ್ಮ!
    • ಬಿಜೆಪಿ ಕೆಡರ್ ಆಧಾರಿತ ಪಕ್ಷ, ಕಾರ್ಯಕರ್ತರು ನಾಯಕರನ್ನು ಪ್ರಶ್ನಿಸಬಲ್ಲರು!
    • ರಾಜೀನಾಮೆ ಕೊಡುತ್ತಿರುವವರು ಪಲಾಯನವಾದ ಮಾಡುತ್ತಿದ್ದಾರಾ?
    • ಪ್ರವೀಣ್ ಹತ್ಯೆ ಬಿಜೆಪಿ ನಾಯಕರಿಗೂ, ಕಾರ್ಯಕರ್ತರಿಗೂ ಮುಂದಿನ ದಾರಿ ತೋರಿಸಿದೆ!!
    • ರಮೇಶ್ ಮಾತಿನಿಂದಲಾದರೂ ಹಿರಿಯ ಕಾಂಗ್ರೆಸ್ಸಿಗರು ಮೈಚಳಿ ಬಿಡುತ್ತಾರಾ?
    • ಸೋನಿಯಾಗೆ ನೋ'ಬೆಲ್' ಕೊಡಿಸಲು ಖಾದರ್ ತಯಾರ್!
  • Popular Posts

    • 1
      ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
    • 2
      ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
    • 3
      ಬೈಕ್ ನಲ್ಲಿ ಹಿಂದೆ ಕೂತುಕೊಂಡರೆ ಹುಶಾರ್!
    • 4
      ಸಂಜೆಯಿಂದ ಬಂದ್ ಮಾಡಿ ರೋಡ್ ಬ್ಲಾಕ್ ಮಾಡಿದರೆ ಆಗುತ್ತಾ?
    • 5
      ಪರಿಹಾರ ಕೊಡುವಾಗ ಒಂದು ರಾಜಧರ್ಮ, ಇನ್ನೊಂದು ಸಿದ್ಧಾಂತ ಧರ್ಮ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search