• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪ್ರವೀಣ್ ಹತ್ಯೆ ಬಿಜೆಪಿ ನಾಯಕರಿಗೂ, ಕಾರ್ಯಕರ್ತರಿಗೂ ಮುಂದಿನ ದಾರಿ ತೋರಿಸಿದೆ!!

Hanumantha Kamath Posted On July 28, 2022
0


0
Shares
  • Share On Facebook
  • Tweet It

ಯಾಕೆ ಈಗ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ? ಯಾಕೆಂದರೆ ಅವರದ್ದೇ ಪಕ್ಷದ ಒಬ್ಬ ನಿಷ್ಟಾವಂತ ಕಾರ್ಯಕರ್ತನ ಹತ್ಯೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಸಹಿತ ಸಂಘಪರಿವಾರದ ಕಾರ್ಯಕರ್ತರ ಹತ್ಯೆಗಳಾಗುತ್ತಿದ್ದವು. ಆಗಲೂ ಇದೇ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದರು. ಈಗಲೂ ಹೋರಾಟ ಮಾಡುತ್ತಿದ್ದಾರೆ. ಆಗ ಇವರು ಪ್ರತಿಭಟಿಸಲು ನಿಂತಾಗ ಯಾರ ವಿರುದ್ಧ ಎಂದು ಕರೆಕ್ಟಾಗಿ ಗೊತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಹತ್ಯೆಗಳಾಗುವಾಗ ಹಿಂದೂ ಕಾರ್ಯಕರ್ತರಲ್ಲಿ ಅಸಮಾಧಾನದ ಗೆರೆಗಳು ಮೂಡಲು ಶುರುವಾಯಿತು. ಯಾರಲ್ಲಿ ದು:ಖ ತೋಡಿಕೊಳ್ಳುವುದು. ಯಾರಲ್ಲಿ ನ್ಯಾಯ ಕೇಳುವುದು. ಹೋರಾಟಕ್ಕೆ ನಿಂತಾಗ ಯಾರ ವಿರುದ್ಧ ಎಂದು ಗೊಂದಲ ಆರಂಭದಲ್ಲಿ ಇತ್ತು. ಆ ಗೊಂದಲ ತುಂಬಾ ಸಮಯ ಗೊಂದಲವಾಗಿಯೇ ಉಳಿಯಲಿಲ್ಲ. ಹರ್ಷಾ ಕೊಲೆಯಾದಾಗ ಆ ಗೊಂದಲ ಇತ್ತು ನಿಜ. ಆದರೆ ಯಾವಾಗ ಸುಳ್ಯದ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾದಾಗ ಆ ಗೊಂದಲ ಉಳಿದಿಲ್ಲ. ಯಾಕೆಂದರೆ ಈ ಎಲ್ಲಾ ಹತ್ಯೆಗಳನ್ನು ತಡೆಯಬಹುದಿತ್ತು, ಆದರೆ ತಡೆಯುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಕಾರ್ಯಕರ್ತರಿಗೆ ಮನದಟ್ಟಾಗಿದೆ. ಅದಕ್ಕಾಗಿ ಅವರು ಇತಿಹಾಸದಲ್ಲಿ ಮೊದಲ ಬಾರಿ ಈ ಪ್ರಮಾಣದಲ್ಲಿ ತಮ್ಮದೇ ನಾಯಕರ ವಿರುದ್ಧ ಕೆಂಡಕಾರುತ್ತಿದ್ದಾರೆ. ಹಿಂದೆ ಹೀಗೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಜನರು ಬೀದಿಗೆ ಇಳಿಯುತ್ತಾ ಇದ್ದರೆ ಆಗ ಇದೇ ಬಿಜೆಪಿ ನಾಯಕರಿಗೆ ಖುಷಿಯಾಗುತ್ತಿತ್ತು. ಮತಗಳ ಧ್ರುವೀಕರಣವಾಗುತ್ತಿದೆ ಎನ್ನುವ ಸ್ಪಷ್ಟ ಸಂದೇಶ ಸಮಾಧಾನ ತರುತ್ತಿತ್ತು. ಆದರೆ ಈಗ ಪರಿಸ್ಥಿತಿ ರಿವಸ್ಸ್ ಆಗಿದೆ. ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿಯದ್ದೇ ಕಾರ್ಯಕರ್ತರು ಹತ್ಯೆಗೊಳಗಾಗುತ್ತಿದ್ದಾರೆ.

ಆವತ್ತು ಕಾಂಗ್ರೆಸ್ ಸರಕಾರ ಇದ್ದಾಗ ಬೀದಿಗೆ ಇಳಿದವರೇ ಈಗ ಮತ್ತೆ ಬೀದಿಗೆ ಇಳಿದಿದ್ದಾರೆ. ಒಂದೆರಡು ಸಲ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರೆ ಜನ ನಂಬುತ್ತಾರೆ. ಆದರೆ ಅದೇ ಚರ್ವಿತಚರ್ವಣ ಹೇಳಿಕೆಗಳು ಹೊರಬಂದರೆ ನಂಬಲು ಸಾಧ್ಯವಿದೆಯಾ? ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ, ಗೃಹಸಚಿವರು ಹೇಳುತ್ತಿದ್ದಾಗ ಅಲ್ಲಿಯೇ ಪಕ್ಕದ ಜೈಲಿನಲ್ಲಿ ಅದೇ ಹರ್ಷಾ ಕೊಲೆ ಆರೋಪಿಗಳು ಮಜಾ ಉಡಾಯಿಸಿದ ಸುದ್ದಿ ರಾಜ್ಯದ ಜನರಿಗೆ ಟಿವಿಯಲ್ಲಿ ಕಾಣುತ್ತಿದ್ದರೆ ಯಾವ ಬಿಜೆಪಿ ಅಥವಾ ಹಿಂದೂ ಕಾರ್ಯಕರ್ತ ತಾನೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುವ ಹೇಳಿಕೆಯನ್ನು ನಂಬುತ್ತಾನೆ. ಆದರೂ ಮೇಲೆ ನೋಡಿ ಉಗಿಯುವುದು ಬೇಡಾ ಎಂದು ಬಿಜೆಪಿ ಕಾರ್ಯಕರ್ತರು ಸುಮ್ಮನಿದ್ದರು. ಆದರೆ ಯಾವಾಗ ಪ್ರವೀಣ್ ನೆಟ್ಟಾರು ಎಂಬ ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯನನ್ನು ಆತನದ್ದೇ ಅಂಗಡಿಯ ಹೊರಗೆ ಅಟ್ಟಾಡಿಸಿ ಕೊಂದು ಹಾಕಿದರಲ್ಲ, ಆಗ ಇದೇ ಕಾರ್ಯಕರ್ತರ ಸಹನೆಯ ಕಟ್ಟೆ ಓಡೆಯಿತು. ಅಷ್ಟೂ ಕೋಪ ಹೋಗಿರುವುದು ಇದೇ ಆರಗ ಜ್ಞಾನೇಂದ್ರರ ಮೇಲೆ. ಇವರ ಸರಕಾರ ಶೂಟೌಟ್ ಅಂತೂ ಮಾಡುವುದಿಲ್ಲ. ಆದರೆ ಕನಿಷ್ಟ ಹಂತಕರ ಕೈಕಾಲು ಮುರಿದು ಮೂಲೆಗೆ ಹಾಕಬಹುದಲ್ಲ. ಅದು ಕೂಡ ಮಾಡದೇ ಜೈಲಿನೊಳಗೆ ಬಿರಿಯಾನಿ, ವಿಡಿಯೋ ಕಾಲ್ ಗೆ ಅವಕಾಶ ಕೊಡುತ್ತಾರಲ್ಲ, ಇನ್ನು ಇದರ ನ್ಯಾಯ ಕೇಳಲು ಹರ್ಷಾ ಸಹೋದರಿ ಅರಗ ಬಳಿ ಅವರು ಮಾತನಾಡಿದ ರೀತಿ ಕೂಡ ಜನರಿಗೆ ಬೇಸರ ತಂದಿದೆ. ಹೀಗೆ ಇರುವಾಗಲೇ ಪ್ರವೀಣ್ ಹತ್ಯೆಯಾಗಿದೆ.

ಪ್ರವೀಣ್ ಹತ್ಯೆ ಒಂದು ಸಂಚು ಎನ್ನುವುದು ಸುಳ್ಯದಲ್ಲಿ ಇರುವವರಿಗೂ, ಸುಳ್ಯದ ಹೊರಗಿನವರಿಗೂ ಚೆನ್ನಾಗಿ ಗೊತ್ತು. ಗೊತ್ತಿಲ್ಲದಿರುವುದು ಬೆಳ್ಳಾರೆ ಸಹಿತ ಆಸುಪಾಸಿನ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾತ್ರ. ಒಂದು ವಾರದ ಹಿಂದೆ ಮಸೂದ್ ಎನ್ನುವ ಮುಸ್ಲಿಂ ಯುವಕನ ಮೇಲೆ ಹಿಂದೂ ಯುವಕರು ಹಲ್ಲೆ ಮಾಡಿದ್ದರು. ಅದರಿಂದ ಆ ಯುವಕ ಮೃತಪಟ್ಟಿದ್ದ. ಆರೋಪಿಗಳು ಈಗ ಜೈಲಿನಲ್ಲಿದ್ದಾರೆ. ಆಗಲೇ ಕೆಲವರು ಮಸೂದ್ ಹತ್ಯೆಗೆ ವಾರದೊಳಗೆ ಪ್ರತೀಕಾರ ಮಾಡುತ್ತೇವೆ ಎಂದಿದ್ದರು. ಇದು ಆವತ್ತು ಇಡೀ ಸುಳ್ಯಕ್ಕೆ ಗೊತ್ತಿತ್ತು. ಪೊಲೀಸರು ಗುಪ್ತಚರ ಇಲಾಖೆಯ ಸಹಾಯ ಪಡೆದು ಹಾಗೆ ಹೇಳಿದವರನ್ನು ಬಂಧಿಸಬಹುದಿತ್ತು. ಆದರೆ ಮಾಡಿರಲಿಲ್ಲ. ಮತಾಂಧರು ಮೂರು ಗುಂಪುಗಳಲ್ಲಿ ಯಾರು ಸಿಗುತ್ತಾರೆ ಎಂದು ಹುಡುಕುತ್ತಿದ್ದರಂತೆ. ಎರಡು ದಿನಗಳ ಮೊದಲು ಒಂದು ಗುಂಪು ಒಬ್ಬ ಹಿಂದೂವಿನ ಹತ್ಯೆಗೆ ಸ್ಕೆಚ್ ಹಾಕಿ ಕುಳಿತಿದ್ದಾಗ ಅವನು ಸ್ವಲ್ಪದರಲ್ಲಿಯೇ ಪಾರಾಗಿದ್ದ ಎನ್ನುವ ಮಾಹಿತಿ ಇದೆ. ಇದೆಲ್ಲವೂ ಪೊಲೀಸರ ಗಮನಕ್ಕೆ ಬರದೇ ಇರಲು ಸಾಧ್ಯವೇ? ಆದರೂ ಕ್ಯಾರಲೆಸ್ ಮಾಡಲಾಗಿತ್ತು. ಇನ್ನು ಪೊಲೀಸರು ಬೀಸಿದ ಲಾಠಿಗೆ ಕೆಲವರ ತಲೆ ಓಡೆದಿದೆ. ಅಷ್ಟಕ್ಕೂ ಪೊಲೀಸರು ಲಾಠಿ ಬೀಸಿದ್ದು ಎಂದು ಸರಕಾರ ಹೇಳಿದರೂ ಹೇಳಬಹುದು. ಆದರೆ ಒಂದು ಪ್ರತಿಭಟನೆಯಲ್ಲಿ ಬಿಜೆಪಿಯ ಉನ್ನತ ನಾಯಕರು ಇದ್ದಾಗ ಅವರದ್ದೇ ಪಕ್ಷದ ಕಾರ್ಯಕರ್ತರು ಎದುರಿಗೆ ಇರುವಾಗ ಲಾಠಿ ಬೀಸಲು ಹೋಗುವುದು ಎಂದರೆ ಪೊಲೀಸ್ ಇಲಾಖೆಗೂ ಸರಕಾರಕ್ಕೂ ಪರಸ್ಪರ ಸಂವಹನ ಇಲ್ಲ ಎಂದೇ ಅರ್ಥ. ಒಂದು ವೇಳೆ ಪೊಲೀಸರೇ ಸರಕಾರದ ವಿರುದ್ಧ ಹೋಗಿ ಲಾಠಿ ಬೀಸಿ ಕೆಲವರ ತಲೆ ಓಡೆದರು ಎಂದೇ ಇಟ್ಟುಕೊಳ್ಳೋಣ. ಆದರೆ ಇದೇ ಪೊಲೀಸ್ ವ್ಯವಸ್ಥೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಈಡಿ ವಿರುದ್ಧ ಪ್ರತಿಭಟನೆ ಮಾಡಿದಾಗ ಎಷ್ಟು ಶಾಂತವಾಗಿತ್ತು. ಅಲ್ಲೆಲ್ಲೋ ಇದೇ ವಿಷಯದಲ್ಲಿ ರೈಲಿಗೆ ಬೆಂಕಿ ಹಚ್ಚಲಾದರೂ ಲಾಠಿ ಬೀಸಿಲ್ಲ. ಪ್ರತಿಭಟನಾಕಾರರು ಅಲ್ಲಿಯೇ ಇದ್ದ ಮಸೀದಿಗೆ ಕಲ್ಲು ಹೊಡೆಯುವುದನ್ನು ತಡೆಯುವುದಕ್ಕಾಗಿ ಲಾಠಿಚಾರ್ಜ್ ಮಾಡಲಾಯಿತು ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಪೊಲೀಸರು ಯಾರನ್ನು ಹೊಡೆದಿದ್ದಾರೆ ಎನ್ನುವುದು ವಿಡಿಯೋದಲ್ಲಿ ದಾಖಲಾಗಿದೆ. ಅದನ್ನು ಇಲ್ಲಾ ಎಂದು ಹೇಳಲು ಸಾಧ್ಯವಿಲ್ಲ.
ಕೊನೆಯದಾಗಿ ರಾಜೀನಾಮೆ ಪರ್ವ ಶುರುವಾಗಿದೆ. ಪಕ್ಷದ ವಿವಿಧ ಪದಾಧಿಕಾರಿಗಳಾಗಿದ್ದವರು ರಾಜೀನಾಮೆ ಕೊಡುತ್ತಿದ್ದಾರೆ. ಅವರ ಮನವೊಲಿಸಿ ಸರಿ ಮಾಡೋಣ ಎಂದು ಬಿಜೆಪಿ ನಾಯಕರು ಅಂದುಕೊಳ್ಳಬಹುದು. ನಮ್ಮ ಕಾರ್ಯಕರ್ತರು ನಮಗೆ ಬಿಟ್ಟು ಬೇರೆಯವರಿಗೆ ಎಲ್ಲಿ ವೋಟ್ ಹಾಕುತ್ತಾರೆ. ನಾಲ್ಕು ದಿನ ಕೋಪ ಇರುತ್ತದೆ.
ನಂತರ ಸರಿಯಾಗುತ್ತದೆ ಎನ್ನುವ ಮನಸ್ಥಿತಿಯಿಂದ ಬಿಜೆಪಿ ಹೊರಬರಬೇಕು. ಇಲ್ಲದಿದ್ದರೆ ಐದು ವರ್ಷ ರೆಸ್ಟ್ ಸಿಗುವ ಸಾಧ್ಯತೆ ಹೆಚ್ಚಾಗಲಿದೆ!

0
Shares
  • Share On Facebook
  • Tweet It




Trending Now
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
  • Popular Posts

    • 1
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 2
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 3
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 4
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 5
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!

  • Privacy Policy
  • Contact
© Tulunadu Infomedia.

Press enter/return to begin your search