• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಿಜೆಪಿ ಕೆಡರ್ ಆಧಾರಿತ ಪಕ್ಷ, ಕಾರ್ಯಕರ್ತರು ನಾಯಕರನ್ನು ಪ್ರಶ್ನಿಸಬಲ್ಲರು!

Hanumantha Kamath Posted On July 30, 2022


  • Share On Facebook
  • Tweet It

ಬೆಳ್ಳಾರೆಯಲ್ಲಿ ಪ್ರತಿಭಟಿಸಿದವರಲ್ಲಿ ಯಾವ ಜಾತಿ ಎನ್ನುವ ಭೇದಬಾವ ಇರಲಿಲ್ಲ. ಅವನು ಬಂಟ, ಬಿಲ್ಲವ, ಮೊಗವೀರ, ಬ್ರಾಹ್ಮಣ ಅಥವಾ ಇನ್ಯಾವುದೋ ಜಾತಿ ಎಂದು ಪ್ರತಿಭಟಿಸಲಿಲ್ಲ. ಪ್ರತಿಭಟಿಸಿದವರಲ್ಲಿ ಇದ್ದದ್ದು ಒಂದೇ ಧರ್ಮ ಅದು ಹಿಂದೂ. ಜಾತಿ ವಿಷಯದಲ್ಲಿ ವಿಂಗಡನೆ ಆಗಿದ್ದಂತೆ ಕಂಡುಬರುತ್ತಿದ್ದ ಹಿಂದೂ ಧರ್ಮದಲ್ಲಿ ಎಲ್ಲವನ್ನು ಮರೆತು ಕೇವಲ ಹಿಂದೂ ಎನ್ನುವ ಕಾರಣಕ್ಕೆ ಒಗ್ಗಟ್ಟಾಗುವುದು ಇದೆಯಲ್ಲ, ಅದನ್ನು ಬೆಳ್ಳಾರೆಯಲ್ಲಿ ಜನ ನೋಡಿದರು. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಪವರ್ ಏನು ಎಂಬುವುದು ಮೊನ್ನೆ ಗೊತ್ತಾಯಿತು. ಬಿಜೆಪಿ ಎನ್ನುವುದು ಕೆಡರ್ ಆಧಾರಿತ ಪಕ್ಷ. ಇಲ್ಲಿ ಇರುವುದು ಪಕ್ಷದ ಸಿದ್ಧಾಂತಕ್ಕಾಗಿ ಸೇವೆ ಸಲ್ಲಿಸುವ ಕಾರ್ಯಕರ್ತರ ಪಡೆ. ಕಾಂಗ್ರೆಸ್ ವ್ಯಕ್ತಿ ಕೇಂದ್ರಿಕೃತ ಪಕ್ಷ. ಮೇಲ್ನೋಟಕ್ಕೆ ಜಾತ್ಯಾತೀತ ಎಂದು ಹೇಳುತ್ತಾರಾದರೂ ಅವರದ್ದು ವ್ಯಕ್ತಿ ಆಧಾರಿತ ಅಥವಾ ನಾಯಕನ ಸುತ್ತಲೂ ತಿರುಗುವ ಪಕ್ಷ. ಕಾಂಗ್ರೆಸ್ಸಿನಲ್ಲಿ ಕುರ್ಚಿಯಲ್ಲಿ ಅಂದರೆ ಅಧಿಕಾರದಲ್ಲಿ ಇದ್ದವನಿಗೆ ಮಾತ್ರ ಬೆಲೆ. ನೀವು ಅಧಿಕಾರದಿಂದ ಕೆಳಗಿಳಿದರೋ ನಿಮ್ಮನ್ನು ಪಕ್ಷದ ಕಚೇರಿಯಲ್ಲಿ ಕಸ ಗುಡಿಸುವವ ಕೂಡ ಮೂಸುವುದಿಲ್ಲ. ಆದರೆ ಬಿಜೆಪಿ ಹಾಗೆ ಅಲ್ಲ, ಅಲ್ಲಿ ಅಧಿಕಾರದಲ್ಲಿ ಕೂತವರಿಗೂ ಒಬ್ಬ ಸಾಮಾನ್ಯ ಕಾರ್ಯಕರ್ತ ಕೂಡ ತಡರಾತ್ರಿ ಫೋನ್ ಮಾಡಿ ಯಾವುದೋ ಊರಿನ ಕೆಲಸ ಆಗಲಿಲ್ಲ ಎಂದು ಜೋರು ಮಾಡಬಲ್ಲ. ಯಾಕೆಂದರೆ ಅಲ್ಲಿ ಚುನಾಯಿತ ಜನಪ್ರತಿನಿಧಿ ಆಗುವುದು ಎಂದರೆ ಅದೊಂದು ಸೀಮಿತ ಅವಧಿಯ ಜವಾಬ್ದಾರಿ ಅಷ್ಟೇ. ಅದಕ್ಕಿಂತ ಜಾಸ್ತಿ ಇಲ್ಲ. ಕಾರ್ಯಕರ್ತರ ಕೆಲಸ ಆಗಲಿಲ್ಲವೋ ಅಂತಹ ವ್ಯಕ್ತಿಯನ್ನು ಪಕ್ಷದ ರಾಷ್ಟ್ರೀಯ ಮುಖಂಡರು ಮುಂದಿನ ಬಾರಿ ಪಕ್ಷದ ಕೆಲಸಕ್ಕೆ ಬಾ, ವಿಧಾನಸೌಧ, ಸಂಸತ್ತು ಬೇಡಾ ಎಂದು ಹೇಳಿದರೂ ಏನೂ ಮಾತನಾಡದೇ ಓಕೆ ಅನ್ನಬೇಕು. ಯಾಕೆಂದರೆ ಸೂತ್ರ ಸಮರ್ಥರ ಕೈಯಲ್ಲಿ ಇರುತ್ತದೆ. ಆ ಸಮರ್ಥರು ಕಾರ್ಯಕರ್ತರ ಭಾವನೆಗಳ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಬಿಜೆಪಿಯಲ್ಲಿ ಕಾರ್ಯಕರ್ತರು ತಮ್ಮ ನಾಯಕರಿಗೆ ಆವಾಜ್ ಹಾಕಿದರು ಎಂದರೆ ಅದರ ಹಿಂದೆ ಕೆಲಸ ಮಾಡಿ ಎನ್ನುವ ಆದೇಶ ಇರುತ್ತದೆ ಬಿಟ್ಟರೆ ಯಾವುದೇ ಬೇರೆ ಉದ್ದೇಶ ಇರುವುದಿಲ್ಲ. ಅಂತಹ ಒಂದು ವಾತಾವರಣ ಬಿಜೆಪಿಯಲ್ಲಿ ಮತ್ತು ಕಮ್ಯೂನಿಸ್ಟರಲ್ಲಿ ಮಾತ್ರ ಇರುವುದು. ಕಾಂಗ್ರೆಸ್ ಇನ್ನು ಎರಡು ದಶಕ ಹೋದರೂ ಇಂತಹ ವಾತಾವರಣವನ್ನು ಸೃಷ್ಟಿಸಲು ಪಕ್ಷದಲ್ಲಿ ಸಾಧ್ಯವೇ ಇಲ್ಲ. ಅದೇ ವಾತಾವರಣದಲ್ಲಿ ಬೆಳೆದಿದ್ದ ಕಾರ್ಯಕರ್ತರು ಮೊನ್ನೆ ಬೆಳ್ಳಾರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ಕೋಪ ಇದ್ದದ್ದು ಸಹಜ ಮತ್ತು ಅದನ್ನು ಅವರು ಹೊರಗೆಡವಿದ್ದು ಒಂದು ಸಾಮಾನ್ಯ ಪ್ರಕ್ರಿಯೆ. ಹಾಗೆ ಒಂದು ಅಸಮಾಧಾನ ಕಾರ್ಯಕರ್ತರಲ್ಲಿ ಇದೆ ಎಂದು ಗೊತ್ತಾದ ಕೂಡಲೇ ರಾಜಧಾನಿಯಿಂದ ಮುಖ್ಯಮಂತ್ರಿಯವರೇ ಸ್ವತ: ಬೆಳ್ಳಾರೆಗೆ ಓಡಿ ಬರಬೇಕಾಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಕೂಡ ಹೊರಟು ಬಂದರು. ಅದನ್ನು ಪಕ್ಷದ ಕಾರ್ಯಕರ್ತರ ಸಾಮರ್ತ್ಯ ಎನ್ನುವುದು. ಸಿಎಂ ಬಂದ ಮಾತ್ರಕ್ಕೆ ಕಾರ್ಯಕರ್ತರು ಸಮಾಧಾನಗೊಳ್ಳಲಿಲ್ಲ. ಈದ್ಗಾ ಮೈದಾನದಲ್ಲಿ ಭಾರತದ ಧ್ವಜವನ್ನು ಹಾರಿಸಿದ ರಮೇಶ್ ಅವರಿಗೆ ಯಾಕೆ ಹೊಡೆದದ್ದು, ಆ ಸಬ್ ಇನ್ಸಪೆಕ್ಟರ್ ಅವರಿಗೆ ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದರು. ಅದರ ನಂತರ ಸಿಎಂ ತಡಮಾಡಲಿಲ್ಲ. ತಕ್ಷಣ ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯದ ಠಾಣಾಧಿಕಾರಿಗಳನ್ನು ವರ್ಗಾವಣೆ ಮಾಡಿಸಿದರು. ಒಬ್ಬ ಎಸ್ ಐಯನ್ನು ಅವಧಿಪೂರ್ವ ವರ್ಗಾವಣೆ ಮಾಡಿದರೆ “ನೀವು ತಪ್ಪು ಮಾಡಿದ್ದೀರಿ” ಎನ್ನುವ ಪರೋಕ್ಷ ಸಂದೇಶ ಅದರ ಹಿಂದೆ ಅಡಕವಾಗಿರುತ್ತದೆ. ಅಲ್ಲಿಗೆ ಕಾರ್ಯಕರ್ತರ ಇನ್ನೊಂದು ಬೇಡಿಕೆ ಕೂಡ ಈಡೇರಿಸಿದಂತಾಯಿತು. ಮೂರನೇ ಬೇಡಿಕೆ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಕೊಡಲೇಬೇಕು. ಯಾವುದೇ ಸಿಎಂ ಸಾಮಾನ್ಯವಾಗಿ ಇಂತಹ ಬೇಡಿಕೆಯನ್ನು ಅಷ್ಟು ಸುಲಭವಾಗಿ ಪುರಸ್ಕರಿಸುವುದಿಲ್ಲ. ಆದರೆ ಬಿಜೆಪಿಯಲ್ಲಿ ಹಾಗಲ್ಲ. ಅದರಲ್ಲಿಯೂ ಬೆಳ್ಳಾರೆ ವಿಷಯದಲ್ಲಿ ತಾವು ಮಾಡುವ ಸಣ್ಣ ನಿರ್ಲಕ್ಷ್ಯವೂ ಸಿಎಂ ಅವರಿಗೆ ದುಬಾರಿಯಾಗುತ್ತದೆ ಎಂದು ಗೊತ್ತಿತ್ತು. ಅವರು ತಕ್ಷಣ ಎನ್ ಐಎಗೆ ಪ್ರಕರಣವನ್ನು ಹಸ್ತಾಂತರಿಸಲು ನಿರ್ಧರಿಸಿಬಿಟ್ಟರು. ಅಲ್ಲಿಗೆ ಕಾರ್ಯಕರ್ತರ ಇನ್ನೊಂದು ಬೇಡಿಕೆ ಕೂಡ ಈಡೇರಿದೆ. ಈಗ ಇರುವ ಇನ್ನೊಂದು ಬೇಡಿಕೆ ಎಂದರೆ ಆರೋಪಿಗಳ ಎನ್ ಕೌಂಟರ್ ಮಾಡಬೇಕು ಎನ್ನುವುದು. ಸದ್ಯ ಅದಕ್ಕೂ ರಾಜ್ಯ ಸರಕಾರ ಸೈ ಎನ್ನುವ ಸೂಚನೆ ನೀಡಿದೆ. ಎನ್ಕೌಂಟರ್ ಮಾಡುವುದು ಎಂದರೆ ಅದು ಸುಖಾ ಸುಮ್ಮನೆ ಆಗಲ್ಲ. ಅದೇನು ಸಿನೆಮಾ ಶೈಲಿಯಲ್ಲಿ ಮಾಡಲು ಕೂಡ ಆಗುವುದಿಲ್ಲ. ಅದಕ್ಕಾಗಿ ಒಂದು ರೂಪುರೇಶೆ ಬೇಕಾಗುತ್ತದೆ. ಆದರೆ ವಿಷಯ ಇರುವುದು ಯಾರನ್ನೋ ಸುಮ್ಮನೆ ಎನ್ಕೌಂಟರ್ ಮಾಡಿದರೆ ಪ್ರವೀಣ್ ಆತ್ಮಕ್ಕೆ ಚಿರಶಾಂತಿ ಕೂಡ ಸಿಗುವುದಿಲ್ಲ. ಹೆಚ್ಚಿನ ಹೈಫೈ ಪ್ರಕರಣಗಳಲ್ಲಿ ನೈಜ ಆರೋಪಿಗಳ ಬಂಧನ ಕೂಡ ಆಗುವುದಿಲ್ಲ. ಯಾರೋ ಸ್ಕೆಚ್ ಹಾಕುವುದು, ಯಾರೋ ಫೀಲ್ಡ್ ಮಾಡುವುದು ಮತ್ತು ಯಾರೋ ಅವರಿಗೆ ಫಂಡ್ ಮಾಡುವುದು ಹೀಗೆ ನಡೆಯುತ್ತಿರುತ್ತದೆ. ಇನ್ನು ಹತ್ಯೆಯ ನಂತರ ಪೊಲೀಸರು ಯಾವ ಸಂಘಟನೆ ಅಥವಾ ಯಾವ ಗ್ಯಾಂಗ್ ಮೇಲೆ ಡೌಟು ಬರುತ್ತದೋ ಅದರ ಮುಖಂಡರಿಗೆ ಫೋನ್ ಮಾಡಿ ಯಾರನ್ನಾದರೂ ಸರೆಂಡರ್ ಮಾಡಿಸಿ ಎಂದು ಕೂಡ ಹೇಳುವ ಕಥೆಗಳಿವೆ. ಅಲ್ಲಿ ಸರೆಂಡರ್ ಆಗಲೆಂದೇ ಹುಡುಗರು ಇರುತ್ತಾರೆ. ಅವರು ಇಷ್ಟು ದಿನ ಜೈಲಿನೊಳಗೆ ಇರಲು ಇಷ್ಟು ಹಣ ಎಂದು ಫಿಕ್ಸ್ ಮಾಡಿ ಒಳಗೆ ಹೋಗುತ್ತಾರೆ. ಅವರಿಗೆ ಒಳಗೆ ಉತ್ತಮ ಊಟದ ಸರಬರಾಜು ಮತ್ತು ವಗೈರೆಗಳ ಪೂರೈಕೆ ಕೂಡ ಮಾಡಲಾಗುತ್ತದೆ. ಅವರು ಒಂದಿಷ್ಟು ದಿನಗಳ ನಂತರ ಹೊರಗೆ ಬರುತ್ತಾರೆ. ನಿಜವಾಗಿ ಯಾರು ಸ್ಕೆಚ್ ಹಾಕಿದ್ದನೋ, ಯಾರು ಕೊಲೆ ಮಾಡಿದ್ದರೋ ಅವರು ಮುಂದಿನ ಬೇಟೆಗೆ ಹೋಗಿರುತ್ತಾರೆ. ಬೆಳ್ಳಾರೆ ಪ್ರಕರಣದಲ್ಲಿ ಹಾಗೆ ಆಗದಿರಲಿ. ನೈಜ ಆರೋಪಿಗಳ ಬಂಧನವಾಗಲಿ ಮತ್ತು ಆ ನೈಜ ಹಂತಕರನ್ನು ನರಕಕ್ಕೆ ಕಳುಹಿಸುವ ಕೆಲಸ ಶೀಘ್ರ ಆಗಲಿ ಎನ್ನುವುದು ಎಲ್ಲರ ನಿರೀಕ್ಷೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search