ಈ ಬಾರಿ ಪಿಎಫ್ ಐಗೆ ಇದೆ ಮಾರಿಹಬ್ಬ!
Posted On September 27, 2022
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಯ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡರೆ ಮತ್ತು ಅವರ ಮುಖಂಡರನ್ನು ಬಂಧಿಸಿದರೆ ಕೇಂದ್ರ ಸರಕಾರಕ್ಕೆ ಏನು ಲಾಭ? ಲಾಭ ನಂಬರ್ 1. ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ದೇಶದ್ರೋಹಿ ಸಂಘಟನೆಗಳ ಸಂಚಿಗೆ ಹಿನ್ನಡೆಯಾಗುತ್ತದೆ. ಲಾಭ ನಂಬರ್ 2. ದೇಶದ ಮುಸ್ಲಿಂ ಯುವಕರ ಬ್ರೇನ್ ವಾಶ್ ಮಾಡಿ ಅವರನ್ನು ಮತೀಯ ಗಲಭೆಯಲ್ಲಿ ತೊಡಗಿಸಿಕೊಳ್ಳುವ ಯತ್ನಗಳಿಗೆ ಕಷ್ಟವಾಗುತ್ತದೆ. ಲಾಭ ನಂಬರ್ 3. ಹಿಂದೂ ಮುಖಂಡರ ಹತ್ಯೆಗಳು ನಡೆಯುವುದು ತಪ್ಪುತ್ತದೆ. ಲಾಭ ನಂಬರ್ 5. ಪ್ರಧಾನಿಯವರನ್ನು ಹತ್ಯೆ ಮಾಡಿ ದೇಶದಲ್ಲಿ ರಾಜಕೀಯ ಅಸ್ಥಿರತೆಯನ್ನು ತರುವ ಗುರಿ ನಾಶವಾಗುತ್ತದೆ. ಇಷ್ಟೆಲ್ಲ ಲಾಭಗಳಿರುವಾಗ ಪಿಎಫ್ ಐ ಮುಖಂಡರನ್ನು ಬಂಧಿಸದೇ ಬಿಡಲು ಆಗುತ್ತಾ? ಬಂಧಿಸಲು ಮುಂದಾಗದವರನ್ನು ಕೇಂದ್ರ ಸರಕಾರ ಎನ್ನಲಾಗುತ್ತದೆಯಾ? ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯದಲ್ಲಿ ತಮ್ಮ ಬದ್ಧತೆ ಪ್ರದರ್ಶಿಸದೇ ಹೋದರೆ ಅವರ ಇಮೇಜ್ ವೃದ್ಧಿಸುವುದು ಹೇಗೆ? ಆದ್ದರಿಂದ ಕೇಂದ್ರ ಸರಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ಬಂಧನದ ಸರಣಿ ರಾಷ್ಟ್ರದಲ್ಲಿ ಮುಂದುವರೆದಿದೆ. ಹೀಗೆ ಆದ ಕೂಡಲೇ ಪಿಎಫ್ ಐ ಮೌನವಾಗಿರುತ್ತಾ? ಈ ಹಂತದಲ್ಲಿ ಆದಷ್ಟು ಹಿಂದೂ ಮುಖಂಡರು, ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎನ್ನುವ ಸಂದೇಶ ಪೊಲೀಸ್ ಇಲಾಖೆಯಿಂದ ನೀಡಲಾಗಿದೆ. ಒಮ್ಮೆಲೇ ಎಲ್ಲವೂ ಸರಿಯಾಗುತ್ತೆ ಎಂದಲ್ಲ. ಸಂಶಯ ಇರುವ ವ್ಯಕ್ತಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ ತಕ್ಷಣ ಅವರ ಹಿಂಬಾಲಕರಿಗೆ ಒಂದಿಷ್ಟು ನಡುಕ ಉಂಟಾಗುತ್ತದೆ. ಇವರಿಗೆ ವಿದೇಶದಿಂದ ಹಣ ಕೊಡುವವರು, ವಿವಿಧ ದೇಶದ್ರೋಹಿ ಚಟುವಟಿಕೆಗಳಿಗೆ ಫಂಡ್ ಮಾಡುವವರಿಗೆ ಟೆನ್ಷನ್ ಆಗುತ್ತದೆ. ಇದರಿಂದ ಅವರು ಫಂಡ್ ಮಾಡಲು ಹಿಂದೇಟು ಹಾಕುತ್ತಾರೆ. ಮುಖ್ಯವಾಗಿ ಯಾವುದೇ ಕೃತ್ಯಗಳನ್ನು ಮಾಡುವಾಗ ಅದು ಹಿಂದೂ ಮುಖಂಡರ ಮೇಲೆ ದಾಳಿ ಅಥವಾ ಹತ್ಯೆಯಾಗಲಿ ಏನಾದರೂ ಗಲಭೆ ಮಾಡುವ ಮೊದಲು ಅದರ ಆರಂಭದಿಂದ ಅಂತ್ಯದವರೆಗೂ ಸಾಕಷ್ಟು ಆರ್ಥಿಕ ಖರ್ಚು ಇರುತ್ತದೆ. ಅದಕ್ಕೆ ಸಾಕಷ್ಟು ಹಣದ ಹರಿವು ಬೇಕಾಗುತ್ತದೆ. ಹಂತಕರನ್ನು ಟ್ರೇನ್ ಮಾಡುವುದರಿಂದ ಹಿಡಿದು, ಅವರ ಕೃತ್ಯ ನಡೆಸಿದ ನಂತರ ಬಚ್ಚಿಡುವ ಅಡಗುದಾಣವನ್ನು ಸೇರಿಸಿ, ಬಂಧನವಾದ ನಂತರ ಅವರನ್ನು ಬಿಡಿಸುವ ತನಕ ಪ್ರತಿ ಖರ್ಚನ್ನು ಕೂಡ ನಿಭಾಯಿಸಬೇಕಾಗುತ್ತದೆ. ಈ ವಿಷಯದಲ್ಲಿ ಪಿಎಫ್ ಐ ಸಾಕಷ್ಟು ರೂಪುರೇಶೆಗಳನ್ನು ತಯಾರಿ ಮಾಡಿ ಕೆಲವು ಹತ್ಯೆಗಳನ್ನು ಮಾಡಲು ಸಿದ್ಧತೆ ನಡೆಸಿತ್ತು. ಈಗ ಎನ್ ಐಎ ಹಾಗೂ ಪೊಲೀಸರು ಈ ಸಂಘಟನೆಯ ಮುಖಂಡರನ್ನು ಬಂಧಿಸಿರುವುದರಿಂದ ಸದ್ಯ ಕೆಲವು ಅಮಾಯಕ ಹಿಂದೂ ಮುಖಂಡರ ಹತ್ಯೆಗಳಾಗುವುದು ತಪ್ಪಿದಂತೆ ಆಗಿದೆ. ಅದೇ ಇವರನ್ನು ಹಾಗೇ ಲಂಗುಲಗಾಮಿಲ್ಲದೇ ಬಿಟ್ಟಿದ್ದರೆ ಇವರು ಮಾಡಲಿರುವ ಅಷ್ಟೂ ಅನಾಚಾರಗಳಿಗೆ ಲೈಸೆನ್ಸ್ ಸಿಕ್ಕಿದಂತೆ ಆಗುತ್ತಿತ್ತು. ದೇಶದಲ್ಲಿ ಅರಾಜಕತೆ ಸೃಷ್ಟಿಯಾದರೆ ಆಗ ಒಳಗಿರುವ ದೇಶದ್ರೋಹಿಗಳೊಂದಿಗೆ ಹೊರಗಿರುವ ದೇಶದ್ರೋಹಿಗಳು ಕೈಜೋಡಿಸಿ ದೇಶದ ಐಕ್ಯತೆಗೆ ದಕ್ಕೆಯಾಗುತ್ತಿತ್ತು. ಇದು ಈಗ ಸದ್ಯದ ಮಟ್ಟಿಗೆ ಮುಂದೂಡಲ್ಪಟ್ಟಿದೆ. ಭವಿಷ್ಯದಲ್ಲಿ ಮೋದಿ ಪ್ರಧಾನಿಯಾಗದೇ, ಅಮಿತ್ ಶಾ ಗೃಹ ಮಂತ್ರಿಯಾಗದೇ ಇದ್ದರೆ ಆಗ ದೇಶದ್ರೋಹಿ ಸಂಘಟನೆಗಳಿಗೆ ಅವರು ನಡೆದಿದ್ದೇ ದಾರಿ ಆಗುವ ಸಾಧ್ಯತೆ ಇದೆ. ಯಾಕೆಂದರೆ ಹಿಂದೆ ಇದನ್ನು ನಮ್ಮ ದೇಶದಲ್ಲಿ ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದಲ್ಲಿ ನಾವು ನೋಡಿದ್ದೇವೆ ಮತ್ತು ಅನುಭವಿಸಿದ್ದೇವೆ. ಪಿಎಫ್ ಐ ಮುಖಂಡರ ಮೇಲಿದ್ದ 176 ಕೇಸುಗಳನ್ನು ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆಗೆದುಕೊಂಡ ಪರಿಣಾಮ ಸಿದ್ದು ಅವಧಿಯಲ್ಲಿ ಸರಿಸುಮಾರು 30 ಹಿಂದೂ ಕಾರ್ಯಕರ್ತರ ಕೊಲೆಯಾಗಿ ಹೋಗಿತ್ತು. ಕೇವಲ ಹಿಂದೂ ಎನ್ನುವ ಕಾರಣಕ್ಕೆ ಕೊಲೆಗಳು ನಡೆದುಹೋಗಿರುವುದನ್ನು ನಾವು ನೋಡಿದ್ದೇವೆ. ಈಗ ಹೇಳಿ, ಪಿಎಫ್ ಐ ಮೇಲೆ ಅನುಕಂಪ ಇರುವುದು ಭಾರತೀಯ ಜನತಾ ಪಾರ್ಟಿಗೋ ಅಥವಾ ಕಾಂಗ್ರೆಸ್ಸಿಗೋ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಇನ್ನು ತಮ್ಮ ಅಂಗಸಂಸ್ಥೆಯಾದ ಎಸ್ ಡಿಪಿಐ, ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ತ್ರಿಕೋನ ಸ್ಪರ್ಧೇ ಇದ್ದರೆ ಮುಸ್ಲಿಂ ಮತಗಳು ವಿಭಜನೆಯಾಗಿ ಕಾಂಗ್ರೆಸ್ಸಿಗೆ ಸೋಲಾಗಿ ಬಿಜೆಪಿ ಗೆಲ್ಲುತ್ತದೆ ಎಂದು ಎಸ್ ಡಿಪಿಐಯವರು ತಮ್ಮದೇ ರಣತಂತ್ರವನ್ನು ಹೆಣೆದು ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಂತಹ ಹಲವು ನಿದರ್ಶನಗಳಿವೆ. ಹಾಗಿರುವಾಗ ಇವರನ್ನು ಬೆಳೆಯಲು ಬಿಟ್ಟರೆ ಇವರಿಂದ ದೇಶದ ಐಕ್ಯತೆಗೆ ಖಂಡಿತ ದಕ್ಕೆಯಾಗುತ್ತದೆ. ಆದರೆ ಎಸ್ ಡಿಪಿಐ ಕಚೇರಿಗಳ ಮೇಲೆ ದಾಳಿ ಮಾಡಿದರೆ ರಾಜಕೀಯ ಪಕ್ಷಗಳ ಮೇಲೆ ಸರಕಾರ ದಾಳಿ ಮಾಡಿಸಿದೆ ಎಂದು ಅದರ ಮುಖಂಡರು ಅಳುತ್ತಿದ್ದಾರೆ. ನೀವು ರಾಜಕೀಯ ಪಕ್ಷದವರೇ ಆಗಿದ್ದಲ್ಲಿ ರಾಜಕೀಯ ಪಕ್ಷಗಳು ಇರುವಂತೆಯೇ ಇರಿ. ನೀವು ಪಿಎಫ್ ಐ ಸಂಘಟನೆಯವರು ಆಗಿದ್ದಲ್ಲಿ ಆ ಸಂಘಟನೆಯ ಉದ್ದೇಶ ಏನು ಇದೆಯೋ ಅದನ್ನು ಈಡೇರಿಸಲು ಕಾರ್ಯತತ್ಪರರಾಗಬೇಕು. ಅದು ಬಿಟ್ಟು ನೀವು ಹೊರಗಿನಿಂದ ರಾಜಕೀಯ ಪಕ್ಷವಾಗಿ ಒಳಗಿನಿಂದ ದೇಶವಿರೋಧಿ ಕೃತ್ಯಗಳನ್ನು ಮಾಡಿದರೆ ಆಗ ನೀವು ರಾಜಕೀಯ ಪಕ್ಷ ಎನ್ನುವ ಕಾರಣಕ್ಕೆ ಸುಮ್ಮನೆ ಬಿಡಲು ಆಗುತ್ತಾ? ನೀವು ಸಂಘಟನೆಯೇ ಆಗಿದ್ದಲ್ಲಿ ಅದರಿಂದ ಸಮಾಜ ಕಟ್ಟಲು ಏನು ಅಗತ್ಯ ಇದೆಯೋ ಅದನ್ನು ಮಾಡಿ. ಸಮಾಜ ಒಡೆಯಲು ಏನು ಬೇಕಾಗುತ್ತದೆಯೋ ಅದಲ್ಲ!
- Advertisement -
Leave A Reply