ದೈವಾರಾಧಕರ ಕಾಲಿನ ಧೂಳಿನ ಕಣ ಚೇತನ್ ಬಗ್ಗೆ…!
ಕೆಲವರು ಇರುತ್ತಾರೆ. ಅವರು ಬಿಟ್ಟಿ ಪ್ರಚಾರ ಪಡೆಯಲು ಏನಾದರೂ ವಿಷಯ ಸಿಗುತ್ತದೆಯೋ ಎಂದು ಕಾಯುತ್ತಾ ಇರುತ್ತಾರೆ. ಅದಕ್ಕೆ ಚೇತನ್ ಎಂಬ ಒಂದು ಕಾಲದ ನಟ ಕೂಡ ಕಾರಣ. ಚೇತನ್ ಮೂಲತ: ಈ ಮಣ್ಣಿನಲ್ಲಿ ಹುಟ್ಟಿದವರಲ್ಲ. ಅಮೇರಿಕಾದ ಯಾವುದೋ ಮೂಲೆಯಲ್ಲಿ ಹುಟ್ಟಿ, ಅಲ್ಲಿ ಮಾಡಲು ಏನೂ ಕೆಲಸವಿಲ್ಲದೇ, ಭಾರತದಲ್ಲಿ ಬಂದು ಇಲ್ಲಿ ಕಡ್ಡಿ ಅಲ್ಲಾಡಿಸೋಣ ಎಂದು ನಿಶ್ಚಯಿಸಿರುವ ಮನುಷ್ಯ. ಇಂತವರು ಈ ಎಡಪಂಥಿಯ ಚಿಂತನೆಯ ಅರ್ಧ ಬೆಂದ ಮಡಕೆಗಳು. ಅದನ್ನು ಉಪಯೋಗಿಸಲು ಸಾಧ್ಯವಿಲ್ಲ. ಹಾಗಂತ ಹೊರಗಿನಿಂದ ನೋಡಲು ಚೆನ್ನಾಗಿಯೇ ಇರುತ್ತದೆ. ಒಳಗೆ ನೋಡಿದರೆ ದೊಡ್ಡ ಸೊನ್ನೆ. ಚೇತನ್ ಆ ದಿನಗಳು ಎನ್ನುವ ಸಿನೆಮಾ ಮಾಡಿ ಒಂದಿಷ್ಟು ಹೆಸರು ಸಂಪಾದಿಸಿರುವುದು ಬಿಟ್ಟರೆ ಅಂತಹ ಉತ್ತಮ ನಟ ಏನಲ್ಲ. ಆ ದಿನಗಳು ಸಿನೆಮಾದಲ್ಲಿ ಅಗ್ನಿಶ್ರೀಧರ್ ಅವರ ಉತ್ತಮ ಕಥೆ ಇತ್ತು. ಚೈತನ್ಯ ಅವರ ಉತ್ತಮ ನಿರ್ದೇಶನವಿತ್ತು. ಬಾಲಿವುಡ್ ಪೋಷಕ ನಟರ ಉತ್ತಮ ನಟನೆ ಇತ್ತು. ಅದರ ನಡುವೆ ಹೂವಿನೊಂದಿಗೆ ದಾರ ಕೂಡ ದೇವರ ಮುಡಿಗೇರುವಂತೆ ಕನ್ನಡಿಗರು ಸಿನೆಮಾವನ್ನು ಒಪ್ಪಿಕೊಂಡರು. ಅಷ್ಟೇ ಚೇತನಿನ ಬಯೋಡಾಟಾ. ಅದು ಬಿಟ್ಟರೆ ಆತ ಅಬ್ಬೇಪಾರಿ. ಅಂತವನು ದೈವರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎನ್ನುವ ಅರ್ಥದ ಮಾತುಗಳನ್ನು ಆಡುತ್ತಾನೆ ಎಂದರೆ ಅವನನ್ನು ಅಸಹ್ಯದಿಂದ ನೋಡಿ ಮುಂದೆ ಹೋಗುವುದು ಉತ್ತಮ. ಅದು ಮಾಡಬೇಕೆ ವಿನ: ಅವನಿಗೆ ಮೈಕ್ ಕೊಟ್ಟು, ಹತ್ತಾರು ಟಿವಿ ಕ್ಯಾಮೆರಾಗಳು ಸುತ್ತುವರೆದು ಕೇಳುವುದಿದೆಯಲ್ಲ, ಅದರಿಂದ ಏನಾಗುತ್ತದೆ, ಅವನ ಅಹಂ ತಣಿಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಒಂದು ಒಳ್ಳೆಯ ಕೆಲಸವನ್ನು ಒಬ್ಬ ವ್ಯಕ್ತಿ ಮಾಡಿದರೆ ಅವನನ್ನು ಟಿವಿಯಲ್ಲಿ ಇಡೀ ದಿನ ತೋರಿಸಲು ಟಿವಿಯವರು ಜಾಹೀರಾತು ಹಣ ಕೇಳಲ್ವಾ? ಅದೇ ಈ ತಿಕ್ಕಲು ಮನಸ್ಸಿನವರು ಏನೂ ಕೆಲಸ ಇಲ್ಲ ಎಂದು ಯಶಸ್ಸಿನ ಉತ್ತುಂಗದಲ್ಲಿರುವ ವಿಷಯಕ್ಕೆ ಕಲ್ಲು ಬಿಸಾಡಿದರೆ ಅವನಿಗೆ ಇಡೀ ದಿನ ಮೈಲೇಜ್ ಕೊಡುವಂತದ್ದು ಏನಿದೆ? ಅಷ್ಟಕ್ಕೂ ಚೇತನ್ ಗೆ ದೈವ ನರ್ತನ, ದೈವಾರಾಧನೆ ಬಗ್ಗೆ ಏನು ಗೊತ್ತಿದೆ? ಅದನ್ನು ನೋಡಿದ್ದಾನಾ? ಏನೋ ಅವನ ಗ್ಲಾಸ್ ಗೆಳೆಯರು ತಮ್ಮ ಹೊಟ್ಟೆಕಿಚ್ಚನ್ನು ತಣಿಸಲು ಹೇಳಿದ್ದನ್ನು ಈತ ವಾಂತಿ ಮಾಡಿದ್ದಾನೆ ಬಿಟ್ಟರೆ ಅದರಲ್ಲಿ ಇವನದ್ದು ಏನು ಇದೆ? ಈತ ಟ್ವಿಟ್ ಬರೆದಾಗ ಯಾರೂ ಮೂಸಲು ಕೂಡ ಹೋಗದೇ ಇದ್ದರೆ ಆಗ ಇವನ ಅಜ್ಞಾನ ಇವನಲ್ಲಿಯೇ ಉಳಿಯುತ್ತಿತ್ತು. ದೈವಾರಾಧನೆಯನ್ನು ವೈದಿಕ ಪರಂಪರೆ ಬ್ರಾಹ್ಮಣ್ಯತ್ವ ಹೀಗೆ ಏನೇನೋ ಶಬ್ದಗಳಿಂದ ಜರೆದು ಹಿಂದೂಗಳ ನಡುವೆ ಒಡಕನ್ನು ಉಂಟು ಮಾಡಿರುವ ಚೇತನ್ ಗೆ ಅಷ್ಟು ಧಮ್ ಇದ್ರೆ ಅಂತಹ ಹೇಳಿಕೆಯನ್ನು ಮಂಗಳೂರಿನಲ್ಲಿ ಬಂದು ಕೊಡಲಿ. ಅದಕ್ಕಿಂತ ಹೆಚ್ಚಾಗಿ ಈ ದೈವರಾಧನೆಯನ್ನು ಎಡಪಂಥಿಯ ಕನ್ನಡಕದಿಂದ ನೋಡುವುದನ್ನು ನಿಲ್ಲಿಸಲಿ. ಸರಿಯಾಗಿ ನೋಡಿದರೆ ಚೇತನ್ ಈ ತಿಂಗಳ ಫೆಬ್ರವರಿಯಲ್ಲಿಯೇ ಭಾರತದಿಂದ ಗಡೀಪಾರಾಗಬೇಕಿತ್ತು. ನ್ಯಾಯಮೂರ್ತಿಯೊಬ್ಬರ ತೀರ್ಪಿನ ಬಗ್ಗೆ ಅಸಭ್ಯವಾಗಿ ಟ್ವಿಟ್ ಮಾಡಿದ ಕಾರಣ ಬೆಂಗಳೂರು ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದರು. ಆವಾಗ ಆತನ ಜಾತಕ ಬಿಚ್ಚಿದಾಗ ವೀಸಾ ನಿಯಮ ಉಲ್ಲಂಘಿಸಿದ ಅನಿವಾಸಿ ಭಾರತೀಯ ಪ್ರಜೆ ಆದ ಕಾರಣಕ್ಕೆ ಈ ದೇಶದಿಂದ ಗಡಿಪಾರು ಮಾಡಲು ಫೈಲ್ ಸಿದ್ಧವಾಗಿತ್ತು. ರಾಜ್ಯ ಸರಕಾರ ಮನಸ್ಸು ಮಾಡಿದರೆ ಇಷ್ಟೊತ್ತಿಗೆ ಚೇತನ್ ತನ್ನ ಜನ್ಮಸ್ಥಳ ಅಮೇರಿಕಾದ ಯಾವುದೋ ಮೂಲೆಯಲ್ಲಿ ಬಿದ್ದಿರಬೇಕಿತ್ತು. ಆದರೆ ಭಾರತೀಯ ಜನತಾ ಪಾರ್ಟಿಯಲ್ಲಿಯೂ ಕೆಲವರು ಕಲಬೆರಕೆ ಇದ್ದಾರಲ್ಲ, ಅವರು ಇವನನ್ನು ಇಲ್ಲಿಯೇ ಉಳಿಸಿಬಿಟ್ಟರು. ಅದರ ಪರಿಣಾಮ ಏನಾಯಿತು? ಇವನಿಗೆ ತಾನು ಏನು ಮಾತನಾಡಿದರೂ ನಡೆಯುತ್ತೆ ಎನ್ನುವ ಅಹಂಕಾರ ಬಂದುಬಿಡ್ತು. ಈಗ ಮತ್ತೆ ತನ್ನ ಬಾಲ ಬಿಚ್ಚಲು ಅವಕಾಶ ಕೊಟ್ಟಂತೆ ಆಗಿದೆ. ತನ್ನನ್ನು ತಾನು ಸಾಮಾಜಿಕ ಹೋರಾಟಗಾರ ಎಂದು ಕರೆಸಿಕೊಳ್ಳುವ ಚಪಲ ಇರುವ ಚೇತನ್ ಒಬ್ಬ ವಿಫಲ ನಟ. ಈಗ ಕಾಂತಾರ ಸಿನೆಮಾ ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದರಿಂದ ಸಹಜವಾಗಿ ಅದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ತನಗೆ ನಟನೆ ಗೊತ್ತಿಲ್ಲ ಅಂದುಕೊಂಡು ಎಲ್ಲಿಯಾದರೂ ಜ್ಯೂನಿಯರ್ ನಟನ ಪಾತ್ರ ಮಾಡಿಕೊಂಡು ಇರಲು ಮನಸ್ಸು ಒಪ್ಪುತ್ತಿಲ್ಲ. ಹಾಗಂತ ಇವನಿಗೆ ಪಾತ್ರ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಈ ಹಿಂದೆ ಪಾತ್ರ ಕೊಟ್ಟವರು ಹಾಕಿದ ಹಣ ಕೂಡ ವಾಪಾಸು ಬರದೇ ಪರಿತಪಿಸಿರುವಾಗ ಇವನಿಗೆ ಇನ್ಯಾರು ತಾನೆ ಅವಕಾಶ ಕೊಡುತ್ತಾರೆ. ಇನ್ನು ಇಲ್ಲಿನವರಿಗಿಂತ ಈ ಹೊರಗಿನಿಂದ ಬಂದು ಇಲ್ಲಿನ ಅನ್ನ, ನೀರು, ಉದ್ಯೋಗಕ್ಕಾಗಿ ಅಲೆದಾಡುತ್ತಿರುತ್ತಾರಲ್ಲ, ಅಂತವರಿಗೆ ಈ ಚೇತನ್ ನಂತೆ ಏನಾದರೂ ಮಾಡಿ ಲೈಮ್ ಲೈಟಿಗೆ ಬರುವ ಹಪಾಹಪಿಯಿರುತ್ತದೆ. ಇದರಲ್ಲಿ ವಿಫಲ ನಟರು, ಲೆಕ್ಕಕ್ಕಿಲ್ಲದ ಕ್ರೀಡಾಪಟುಗಳು, ಎಲ್ಲಿಯೂ ಸಲ್ಲದ ರಾಜಕಾರಣಿಗಳು ಇರುತ್ತಾರೆ. ಇಂತವರಿಂದ ಕೆಟ್ಟ ಸಂದೇಶ ಹೋಗುತ್ತದೆ ಎಂದು ಮೊದಲೇ ಸುಳಿವು ಸಿಕ್ಕಿದ ತಕ್ಷಣ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತಮ್ಮ ಹೊಲಸು ಬಾಯಿಯಿಂದ ಅವರು ಏನೇನೋ ಹೇಳುತ್ತಾರೆ. ಇನ್ನು ಈ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಎನ್ನುವುದು ಇದೆಯಲ್ಲ, ಅದರ ಅಡಿಯಲ್ಲಿ ಇವರು ಬೊಗಳುತ್ತಾರೆ. ಇವರನ್ನು ಕಟ್ಟಿ ಹಾಕದಿದ್ದರೆ ಮನಸ್ಸುಗಳನ್ನು ಕೆಡಿಸಿಬಿಡುತ್ತಾರೆ. ಆದ್ದರಿಂದ ಆದಷ್ಟು ಬೇಗ ಒಳ್ಳೆಯ ಸಂಕೋಲೆ ಹುಡುಕಿ ತರುವುದು ಉತ್ತಮ !
Leave A Reply