ಮುಸ್ಲಿಂ ಸಿಎಂ ಎಂದ ಕುಮಾರನ ಮಾತು ಕೇಳಿ ಸಿದ್ದು ಥಂಡಾ!
ಜಾತ್ಯಾತೀತ ಜನತಾದಳ ರಾಜ್ಯದಲ್ಲಿ ಬಹುಮತಗಳಿಸಿದರೆ ಮುಸ್ಲಿಂ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗೆ ನಾವು ಚಂದ್ರನಲ್ಲಿ ಕಾಲಿಟ್ಟರೆ, ಸೂರ್ಯನನ್ನು ಸ್ಪರ್ಶಿಸಿದರೆ, ದೇವೆಗೌಡರು ಮತ್ತೊಮ್ಮೆ ಪ್ರಧಾನಿಯಾದರೆ ಹೀಗೆ ರೆ ಗಳ ದುನಿಯಾದಲ್ಲಿ ಜೆಡಿಎಸ್ ನಡೆಯುವುದು ಇಂದು ನಿನ್ನೆಯದ್ದಲ್ಲ. ಒಂದು ವೇಳೆ ಬಹುಮತ ಬಂದರೂ ಇವರು ಮುಸ್ಲಿಂ ಸಮುದಾಯದವರನ್ನು ಸಿಎಂ ಮಾಡಲ್ಲ. ಕೊನೆಯ ಕ್ಷಣ ಇವರೇ ಹಿಂದಿನ ಬಾಗಿಲಿನಿಂದ ತಮ್ಮ ಶಾಸಕರಿಗೆ ಕಿವಿಯೂದಿ ಕುಮಾರಸ್ವಾಮಿಯೇ ಸಿಎಂ ಆಗುತ್ತಾರೆ ಬಿಟ್ಟರೆ ಎಂದೆಂದಿಗೂ ಸಿಎಂ ಇಬ್ರಾಹಿಂ ಮುಖ್ಯಮಂತ್ರಿ ಆಗಲ್ಲ. ಆದರೂ ಹೇಳುವುದಕ್ಕೆ ಏನುಂಟು. ಹೇಳಿಬಿಡುವುದು. ನಂತರ ನೋಡೋಣ. ಹಾಗೇ ಎಚ್ ಡಿಕೆ ಮುಸ್ಲಿಂ ಮುಖ್ಯಮಂತ್ರಿಯ ದಾಳ ಉರುಳಿಸುವುದಕ್ಕೂ ಇತ್ತ ಕಾಂಗ್ರೆಸ್ ಕೈಕಾಲು ಬಿಡುವುದಕ್ಕೂ ಸರಿಯಾಗಿ ಹೋಗಿದೆ. ಯಾಕೆಂದರೆ ಎಚ್ ಡಿಕೆಗೆ ತಾವು ಗೆಲ್ಲುತ್ತೇವಾ, ಇಲ್ವಾ ಎನ್ನುವುದು ಮುಖ್ಯವಲ್ಲ. ಅವರಿಗೆ ತಮ್ಮನ್ನು ಅವಧಿಪೂರ್ವದಲ್ಲಿ ಸಿಎಂ ಸ್ಥಾನದಿಂದ ಇಳಿಸಿದ ಸಿದ್ದು ಯಾವ ಕಾರಣಕ್ಕೂ ಮತ್ತೆ ಸಿಎಂ ಆಗಬಾರದು ಎನ್ನುವ ಕೋಪ ಇದೆ. ಸಿದ್ದು ಬ್ರಹ್ಮಾಸ್ತ್ರ ಎಂದರೆ ಅಹಿಂದ. ಅದರಲ್ಲಿ ಅ ಅಂದರೆ ಅಲ್ಪಸಂಖ್ಯಾತ. ಬುಡದಲ್ಲಿಯೇ ಅ ಕಟ್ ಮಾಡಬೇಕು ಎಂದರೆ ದೊಡ್ಡ ದಾಳವೊಂದನ್ನು ಉರುಳಿಸಬೇಕು ಎಂದು ಕುಮ್ಮಿ ತಯಾರಾಗಿಬಿಟ್ಟರು. ಅವರಿಗೆ ಒಂದಂತೂ ಗ್ಯಾರಂಟಿ ಇದೆ. ಇದರಿಂದ ಸಿದ್ದು ಶೇಕ್ ಆಗಿಬಿಡುತ್ತಾರೆ. ಯಾಕೆಂದರೆ ಮುಸ್ಲಿಂ ಮತಗಳ ವಿಷಯದಲ್ಲಿ ಒಂದು ಲೆಕ್ಕಾಚಾರ ಇದೆ. ಆ ಸಮುದಾಯ ಯಾರು ತಮ್ಮ ಪರವಾಗಿ ನಿಲ್ಲುತ್ತಾರೋ ಅವರ ಪರವಾಗಿ ತಾನು ನಿಲ್ಲುತ್ತದೆ. ಡಿಕೆಶಿ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮೇಲೆ ಮುಸ್ಲಿಂ ಸಮುದಾಯವನ್ನು ಸಿದ್ದುವಿನ ಹಾಗೆ ಕುತ್ತಿಗೆಗೆ ಕಟ್ಟಿಕೊಂಡು ತಿರುಗುತ್ತಿಲ್ಲ. ಅದರಿಂದ ಹಿಜಾಬ್, ಧರ್ಮ ದಂಗಲ್ ವಿಷಯದಲ್ಲಿ ಕಾಂಗ್ರೆಸ್ ಅಷ್ಟೇನೂ ಸ್ಟ್ರಾಂಗ್ ಆಗಿ ಮುಸ್ಲಿಮರ ಜೊತೆ ನಿಂತಿಲ್ಲ. ಯಾಕೆಂದರೆ ಅತಿಯಾದ ಓಲೈಕೆ ಮಾಡಿದರೆ ಪಕ್ಷಕ್ಕೆ ಅಂತಹ ಲಾಭ ಆಗುವುದಿಲ್ಲ ಎಂದು ಡಿಕೆಶಿಗೆ ಗೊತ್ತಿದೆ. ಅದಕ್ಕಾಗಿ ಅವರು ಎಲ್ಲಾ ಸಮುದಾಯದವರನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಪ್ಲಾನ್ ರೂಪಿಸಿದ್ದಾರೆ. ಆದರೆ ಸಿದ್ದುವಿಗೆ ಅಹಿಂದ ಬಿಟ್ಟು ಬೇರೆ ಹೋದರೆ ಕಷ್ಟ ಎಂದು ಅನಿಸಿದೆ. ಅದಕ್ಕಾಗಿ ಅವರು ಆಗಾಗ ಮುಸ್ಲಿಂ ಓಲೈಕೆಯನ್ನು ಮಾಡುತ್ತಾರೆ. ಆದರೆ ಅದು ಸಾಲುವುದಿಲ್ಲ ಎಂದು ಸಿದ್ದುವಿಗೆ ಗೊತ್ತಿದೆ. ಆದರೆ ಅವರಿಗೆ ಪಕ್ಷದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಈಗ ಕುಮ್ಮಿ ಹೀಗೆ ಹೇಳಿದ ಬಳಿಕ ಏನಾಗುತ್ತದೆ? ನಮಗೆ ಜೆಡಿಎಸ್ ವಾಸಿ ಎಂದು ಮುಸ್ಲಿಂ ಸಮುದಾಯ ಕನ್ಫರ್ಮ್ ಮಾಡಿಕೊಳ್ಳುತ್ತದೆ. ಮುಸ್ಲಿಮರಲ್ಲಿ ಹೇಗೆ ಎಂದರೆ ಮನೆಯ ಒಬ್ಬ ವ್ಯಕ್ತಿ ತಮಗೆ ಈ ಬಾರಿ ಯಾವ ಪಕ್ಷ ಸೂಟ್ ಆಗುತ್ತದೆ, ಸಮುದಾಯದ ಮನಸ್ಥಿತಿ ಹೇಗಿದೆ, ಯಾರು ತಮ್ಮ ಕ್ಷೇತ್ರದಲ್ಲಿ ಗೆಲ್ತಾರೆ ಎನ್ನುವುದನ್ನು ಲೆಕ್ಕ ಹಾಕಿ ಅವರನ್ನು ಗೆಲ್ಲಿಸಿಬಿಡುತ್ತಾರೆ. ಇನ್ನು ಸಮುದಾಯದ ಹಿರಿಯ ಒಂದು ಪಕ್ಷಕ್ಕೆ ನಮ್ಮ ಮತ ಎಂದು ನಿರ್ಧಾರ ಮಾಡಿದರೆ ಮುಗಿಯಿತು. ಇಡೀ ಕುಟುಂಬ ಅವರನ್ನು ಹಿಂಬಾಲಿಸುತ್ತದೆ. ಮಸೀದಿಯಲ್ಲಿ ಒಮ್ಮೆ ಘೋಷಣೆ ಮಾಡಿದರೆ ಮುಗಿಯಿತು. ನಂತರ ಜೀವ ಹೋದರೂ ಅವರು ಚೇಂಜ್ ಆಗಲ್ಲ. ಆದ್ದರಿಂದ ಐದು ತಿಂಗಳ ಮೊದಲೇ ಮುಸ್ಲಿಮರ ಮನಸ್ಸನ್ನು ತಮ್ಮೆಡೆ ಸೆಳೆದು ಹವಾ ಸೃಷ್ಟಿಸಲು ಜೆಡಿಎಸ್ ತಯಾರಾಗಿದೆ. ಅದಕ್ಕಾಗಿ ಮುಸ್ಲಿಮರನ್ನೇ ಜೆಡಿಎಸ್ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಕೂಡ ನಾವು ಅಧಿಕಾರಕ್ಕೆ ಬಂದರೆ ಟಿಪ್ಪು ವಿಶ್ವವಿದ್ಯಾನಿಲಯ ಮಾಡುತ್ತೇವೆ ಎಂದು ಎದೆತಟ್ಟಿ ಹೇಳುತ್ತಿದ್ದಾರೆ. ಇನ್ನೊಂದೆಡೆ ಅಧಿಕಾರಕ್ಕೆ ಬಂದರೆ ಮತಾಂತರ, ಗೋಹತ್ಯಾ ನಿಷೇಧ ವಾಪಾಸು ತೆಗೆಯುತ್ತೇವೆ ಎಂದು ಕಾಂಗ್ರೆಸ್ ಕೂಡ ಹೇಳಿಕೊಳ್ಳುತ್ತಿದೆ. ಒಟ್ಟಿನಲ್ಲಿ ಅಲ್ಪಸಂಖ್ಯಾತರನ್ನು ಒಲೈಸಲು ಕಠಿಣವಾಗಿ ಜೆಡಿಎಸ್, ಸಾಫ್ಟ್ ಆಗಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕುಮ್ಮಿ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಅಹಿಂದದಲ್ಲಿರುವ ಇನ್ನೊಂದು ಶಬ್ದ ದ ಅಂದರೆ ದಲಿತ ಅದಕ್ಕೂ ಕೈ ಹಾಕಿದ್ದಾರೆ. ನಾವು ಬಹುಮತದಲ್ಲಿ ಅಧಿಕಾರಕ್ಕೆ ಬಂದರೆ ದಲಿತ ವ್ಯಕ್ತಿಯೊಬ್ಬರನ್ನು ಉಪಮುಖ್ಯಮಂತ್ರಿ ಮಾಡುವ ಅವಕಾಶ ಕೂಡ ತೆರೆದಿದೆ ಎಂದು ಹೇಳಿದ್ದಾರೆ. ಈ ಮೂಲಕ ದಲಿತರನ್ನು ಕೂಡ ಓಲೈಸುವ ಕೆಲಸ ನಡೆದಿದೆ. ಇನ್ನು ಹೆಣ್ಣುಮಕ್ಕಳ ಕಷ್ಟ ಕೂಡ ಅರಿತಿರುವುದರಿಂದ ಓರ್ವ ಮಹಿಳೆಯನ್ನು ಕೂಡ ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಹೀಗೆ ಸಿದ್ದು ಭತ್ತಳಿಕೆಯ ಬ್ರಹ್ಮಾಸ್ತ್ರಗಳನ್ನು ಕುಮ್ಮಿ ಕಸಿಯುತ್ತಿದ್ದಾರೆ. ಸಿದ್ದುವಿಗೆ ವೋಟ್ ಹಾಕಿದರೂ ಅವರ ಪಕ್ಷದವರು ನಮ್ಮ ಜೊತೆ ನಿಲ್ಲಲ್ಲ ಎಂದು ಮುಸ್ಲಿಂ ಸಮುದಾಯದವರು ಅಂದುಕೊಂಡರೆ ಆಟ ಫಿನಿಶ್. ಈ ನಡುವೆ ಹಿಂದೂಗಳ ಪಕ್ಷ ಭಾರತೀಯ ಜನತಾ ಪಾರ್ಟಿ ಕೂಡ ಹಿಂದೂಗಳ ಪರ ಗಟ್ಟಿಯಾಗಿ ನಿಂತರೆ ಈ ಬಾರಿಯ ಚುನಾವಣೆ ಕುತೂಹಲಕಾರಿಯಾಗಲಿದೆ!
Leave A Reply