• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ….

Hanumantha Kamath Posted On February 1, 2023


  • Share On Facebook
  • Tweet It

ಯಾಕೆ ಹೀಗೆ ಆಗುತ್ತಿದೆ ಎನ್ನುವುದೇ ಈಗ ಉಳಿದಿರುವ ಯಕ್ಷ ಪ್ರಶ್ನೆ. ಹಿಂದೂ ಹೆಣ್ಣುಮಕ್ಕಳನ್ನು ಹಾಗೆ ಮುಟ್ಟಿ ದಕ್ಕಿಸಿಕೊಳ್ಳಬಹುದು ಎಂದು ಮತಾಂಧನೊಬ್ಬ ಅಂದುಕೊಳ್ಳುತ್ತಾನೆ ಎಂದರೆ ಅವನಿಗೆ ಮುಂದೆ ಯಾವ ಯುವತಿಗೂ ಕೈ ಹಾಕದಂತೆ ಮಾಡಬೇಕಾ, ಬೇಡ್ವಾ ಎನ್ನುವ ಪ್ರಶ್ನೆ ಸಮಾಜದ ಮುಂದಿದೆ. ಅಷ್ಟಕ್ಕೂ ಮುತ್ತಪ್ಪ ರೈಯವರು ಇರುವವರೆಗೂ ಪುತ್ತೂರು ಕಂಬಳದ ಕಣದಲ್ಲಿ ಒಂದು ಗಾಂಭಿರ್ಯ ಇತ್ತು. ಹೀಗೆ ಯಾರ್ಯಾರೋ ಒಳಗೆ ನುಗ್ಗಿ ಯುವತಿಯರ ಮೇಲೆ ಕೈ ಹಾಕಲು ಧೈರ್ಯ ಮಾಡುವುದು ಬಿಡಿ, ಯೋಚಿಸಲು ಕೂಡ ಹೋಗುತ್ತಿರಲಿಲ್ಲ. ಯಾಕೆಂದರೆ ಹಾಗೇನಾದರೂ ಮಾಡಿದರೆ ನಂತರ ಹಾಗೆ ಮಾಡಿದವನ ಕೈ ಊಟಕ್ಕೂ ಉಳಿಯುತ್ತಿರಲಿಲ್ಲ ಎನ್ನುವುದು ದಿಟ. ಯಾಕೆಂದರೆ ಸಿನೆಮಾ ನಟಿಯರನ್ನು, ರಂಗಭೂಮಿ ಕಲಾವಿದೆಯರನ್ನು ನೋಡಿದ ತಕ್ಷಣ ಅವರು ಸುಲಭವಾಗಿ ಸಿಗುತ್ತಾರೆ ಎಂದು ಅಂದುಕೊಳ್ಳುವ ದುರುಳರು ಎಲ್ಲಾ ಕಡೆ ಇದ್ದಾರೆ. ಸಾನಿಯಾ ಅಯ್ಯರ್ ಎಂಬ ನಟಿ ಪುತ್ತೂರು ಕಂಬಳದಲ್ಲಿ ವೇದಿಕೆಯ ಮೇಲೆ ನಿಂತು ಐ ಲವ್ ಪುತ್ತೂರು ಎಂದು ಹೇಳಿದ್ದು ಅದನ್ನು ಸಂತೋಷದಿಂದ ಸ್ವೀಕರಿಸಬೇಕೆ ವಿನ: ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅವಳ ಬಳಿ ಹೋಗಿ ಸಿಕ್ಕಿದ್ದೇ ಅವಕಾಶ ಎಂದು ಮುಟ್ಟಲು ಹೋಗಬಾರದು. ಅದರಿಂದ ಆ ಅಸಹ್ಯ ಮನಸ್ಸಿನವನದ್ದು ಏನೂ ಹೋಗುವುದಿಲ್ಲ. ಅವನಿಗೆ ಹೆಚ್ಚೆಂದರೆ ನಾಲ್ಕು ಧರ್ಮದೇಟು ಬೀಳಬಹುದು. ಅದನ್ನು ತಿನ್ನುವುದು ಅವನಿಗೆ ಹೊಸತು ಅಲ್ಲದೇ ಇರಬಹುದು. ಇನ್ನು ಇಂತಹ ಸಂದರ್ಭದಲ್ಲಿ ಪೊಲೀಸ್ ಸ್ಟೇಶನ್, ಕೋರ್ಟು ಎಂದು ಹೋಗುವುದು ಯಾರು ಎಂದು ಯಾರೂ ಕೂಡ ದೂರು ಕೊಡಲು ನಟಿಯರು ಹೋಗುವುದಿಲ್ಲ. ಆದ್ದರಿಂದ ಪಾಪಿಗಳಿಗೆ ಇದರಿಂದ ಕಳೆದುಕೊಳ್ಳುವುದು ಏನಿಲ್ಲ. ಆದರೆ ದಕ್ಷಿಣ ಕನ್ನಡ ಇಮೇಜು. ಪುತ್ತೂರಿಗೆ ಹೋಗಿದ್ದೆ. ಹೀಗೆ ಕೆಟ್ಟ ಅನುಭವ ಆಯಿತು ಎಂದು ಆಕೆ ಹೋಗಿ ಬಂದ ಕಡೆ ಎಲ್ಲಾ ನೋವು ತೋಡಿಕೊಂಡರೆ ನಿಜಕ್ಕೂ ಅದು ನಮ್ಮ ಊರಿಗೆ ಕಪ್ಪು ಚುಕ್ಕೆ.

ಇದೇ ಸಂದರ್ಭದಲ್ಲಿ ಇನ್ನೊಬ್ಬ ಪುತ್ತೂರಿನ ಕಂಬಳದ ವೇದಿಕೆಯ ಮೇಲಿದ್ದ ನಟಿಯರ ಫೋಟೋಗಳನ್ನು ತೆಗೆಯುತ್ತಿದ್ದ ಎನ್ನಲಾಗಿದೆ. ಒಳ್ಳೆಯ ಉದ್ದೇಶದಿಂದ ಅನೇಕರು ತೆಗೆಯುತ್ತಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಲು, ಅದರಿಂದ ಖುಷಿಯನ್ನು ಹಂಚಿಕೊಳ್ಳಲು ಜನಸಾಮಾನ್ಯರು ತೆಗೆಯುವುದು ಸಾಮಾನ್ಯ. ಆದರೆ ನಟಿಯರ ಅಶ್ಲೀಲ ಭಂಗಿಗಳನ್ನು ವಿವಿಧ ಕೋನಗಳಲ್ಲಿ ತೆಗೆದು ವಿಕೃತ ಸಂತೋಷ ಅನುಭವಿಸುವುದು ಯಾವತ್ತೂ ಸರಿಯಲ್ಲ. ಅದರಿಂದ ಯಾರೂ ಏನೂ ಸಾಧಿಸಿದಂತೆ ಆಗುವುದಿಲ್ಲ. ಆ ನಟಿಯರು ಕೂಡ ಹೆಣ್ಣುಮಕ್ಕಳು ಮತ್ತು ನಮ್ಮದೇ ಸಹೋದರಿಯರ ತರಹ ಎಂದು ಅಂದುಕೊಂಡರೆ ಇಂತಹ ನೀಚ ಕೃತ್ಯವನ್ನು ಯಾರೂ ಮಾಡಲು ಹೋಗುವುದಿಲ್ಲ.

ಇನ್ನು ಹೀಗೆ ನೀಚ ಕೃತ್ಯ ಮಾಡುವವರು ಸಿಕ್ಕಿಬಿದ್ದಾಗ ಇದರಲ್ಲಿ ಯಾವ ರಾಜಕಾರಣಿ ಕೂಡ ಹಸ್ತಕ್ಷೇಪ ಮಾಡಬಾರದು. ಆರೋಪಿಗೆ ಸೂಕ್ತ ಶಿಕ್ಷೆ ಆಗಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಅದು ಬಿಟ್ಟು ಆತನ ಧರ್ಮ ನೋಡಿ ಬಿಡಿಸಲು ಹೋಗುವುದು, ಅಮಾಯಕ ಎನ್ನುವುದು ಎಲ್ಲಾ ಮಾಡುತ್ತಾ ಇದ್ದರೆ ಅವನು ಇವತ್ತು ಸೇಫ್ ಆಗಬಹುದು. ಆದರೆ ಮುಂದಿನ ದಿನಗಳಲ್ಲಿ ನಮ್ಮ ಊರಿಗೆ ದೊಡ್ಡ ಕಳಂಕ ಆಗುತ್ತಾನೆ. ಇನ್ನು ಕಂಬಳದ ಆಯೋಜಕರು ಕೂಡ ಸ್ಟಾರ್ ಗಳನ್ನು ಕರೆಸುವ ಉದ್ದೇಶ ಏನೆಂದು ಅರ್ಥವಾಗುವುದಿಲ್ಲ. ಸಿನೆಮಾದಲ್ಲಿ ಮರ ಸುತ್ತುವಂತಹ ನಾಲ್ಕು ದೃಶ್ಯಗಳಲ್ಲಿ ಅಭಿನಯಿಸಿದವರಿಗೂ, ಜಾನಪದ ಕ್ರೀಡಾ ಉತ್ಸವವಾಗಿರುವ ಕಂಬಳಕ್ಕೂ ಏನು ಸಂಬಂಧ? ಕಂಬಳವನ್ನು ಭಯ, ಭಕ್ತಿ, ಗೌರವದಿಂದ ಕಾಣುವವರನ್ನು ಕರೆದರೆ ಅದರಿಂದ ಕಂಬಳದ ಆಯೋಜಕರಿಗೂ ಗೌರವ. ಈಗ ರಿಷಭ್ ಶೆಟ್ಟಿ ಅವರು ಕಂಬಳವನ್ನು ತಮ್ಮ ಸಿನೆಮಾದಲ್ಲಿ ಉತ್ತಮ ಉದ್ದೇಶಕ್ಕಾಗಿ ಬಳಸಿ ಅದನ್ನು ಅಂತರಾಷ್ಟ್ರೀಯವಾಗಿ ಖ್ಯಾತಿ ಮಾಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಕಂಬಳದ ವಿಷಯದ ಮೇಲೆ ಸಿನೆಮಾ ಮಾಡಲಿದ್ದಾರೆ. ಅವರು ಕಂಬಳ ವೀಕ್ಷಣೆ ಮಾಡಿದರೆ ಅದಕ್ಕೊಂದು ಗೌರವ ಇದೆ. ಅದು ಬಿಟ್ಟು ಕೇವಲ ಪ್ರಚಾರಕ್ಕೆ ಯಾರನ್ನೋ ಕರೆದು ಅವರು ನಾಲ್ಕು ವಾಕ್ಯ ಉಲಿದರೆ ಕಂಬಳಕ್ಕೆ ಆಗುವುದಾದರೂ ಏನು? ಈಗ ಈ ಗೊಂದಲವನ್ನು ಪರಿಹರಿಸಲು ಪುತ್ತೂರು ಕಂಬಳದ ಆಯೋಜಕರು ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕಂಬಳಕ್ಕೆ ಬರುವವರು ಯಾವ ಧರ್ಮ, ಮತದವರು ಎಂದು ಅವರ ಹಣೆಯಲ್ಲಿ ಬರೆದಿರುವುದಿಲ್ಲ. ಎಲ್ಲರೂ ಬರುತ್ತಾರೆ. ಕೆಲವರ ಉದ್ದೇಶ ಕೆಟ್ಟದಿರಲೂಬಹುದು. ಆದ್ದರಿಂದ ನಟಿಮಣಿಯರನ್ನು ಕರೆಸಿ ತಮ್ಮ ಕಂಬಳ ರೈಸ್ ಬೇಕು ಎಂದು ಉದ್ದೇಶ ಇರುವವರು ಒಂದಿಷ್ಟು ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ನಿಮ್ಮ ಕಂಬಳ ಮಿಂಚಬೇಕು ಎಂದರೆ ಅದನ್ನು ಸಾತ್ವಿಕವಾಗಿಯೂ ಮಾಡಬಹುದು. ರಂಗು ರಂಗಿನ ಅವಶ್ಯಕತೆ ಅಗತ್ಯವೇ ಎಂದು ನೋಡಬೇಕು!

  • Share On Facebook
  • Tweet It


- Advertisement -


Trending Now
ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
Hanumantha Kamath September 25, 2023
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Hanumantha Kamath September 22, 2023
Leave A Reply

  • Recent Posts

    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
  • Popular Posts

    • 1
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 2
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search