• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಯಾವ ಮುಸ್ಲಿಂ ರಾಜ ಜಾಗ ಕೊಟ್ಟಿದ್ದು ಮಿಥುನ್ ರೈ!!

Hanumantha Kamath Posted On March 8, 2023
0


0
Shares
  • Share On Facebook
  • Tweet It

ಉಡುಪಿ ಶ್ರೀ ಕೃಷ್ಣಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎಂದು ಬಹಳ ದೊಡ್ಡ ಸಂಶೋಧಕರಾಗಲು ಹೊರಟಿರುವ ಮಿಥುನ್ ರೈ ಅವರು ಮುಸ್ಲಿಂ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಹೇಳಿದ್ದಾರೆ. ಈ ಮೂಲಕ ತಮ್ಮ ಅರೆಬೆಂದ ಜ್ಞಾನವನ್ನು ಪ್ರದರ್ಶಿಸಿದ್ದಾರೆ. ಒಬ್ಬ ರಾಜಕಾಣಿಯಾದವನು ಎಲ್ಲಿ, ಏನು ಮಾತನಾಡಲು ಶುರು ಮಾಡುವ ಮೊದಲು ಆತ ಹೇಳುವ ವಿಷಯದ ಮಾಹಿತಿ ಸ್ಪಷ್ಟವಾಗಿರಬೇಕು. ಇಲ್ಲದೇ ಹೋದರೆ ಇತಿಹಾಸವನ್ನು ಕೆದಕಲು ಹೋಗಲೇಬಾರದು. ಯಾಕೆಂದರೆ ಬೀದಿಬದಿ ಆಡಳಿತ ಪಕ್ಷ, ರಾಜ್ಯ, ಕೇಂದ್ರ ಸರಕಾರವನ್ನು ಟೀಕಿಸುವುದು ಬೇರೆ, ಅಸಂಖ್ಯಾತ ಜನರು ಉಪಸ್ಥಿತರಿರುವ ಬೌದ್ಧಿಕ ಮಟ್ಟವನ್ನು ತೆರೆದಿಡುವುದು ಬೇರೆ. ಓಲೈಕೆ ರಾಜಕಾರಣ ಹಾಗೂ ಸೌಹಾರ್ದತೆ ಇದು ಎರಡೂ ಬೇರೆ ಬೇರೆ. ಓಲೈಕೆ ಎಂದರೆ ಏನೂ ಮಾಡದಿದ್ದರೂ ನೀವೆ ಶ್ರೇಷ್ಟರು ಎಂದು ಭ್ರಮೆಯ ರೈಲಿನಲ್ಲಿ ಹತ್ತಿಸಿಬಿಡುವುದು. ಸೌಹಾರ್ದತೆ ಎಂದರೆ ವಾಸ್ತವದಲ್ಲಿ ಜರುಗಿದ್ದನ್ನು ಅಂಕಿ ಅಂಶಗಳ ಆಧಾರದಲ್ಲಿ ಹೇಳುವುದು. ಕಾಂಗ್ರೆಸ್ ಸ್ವಾತಂತ್ರ್ಯದ ದಿನದಿಂದಲೇ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿಸಿಕೊಂಡಿತ್ತು. ಯಾವಾಗ ಅದು ನಿರೀಕ್ಷೆಗಿಂತ ಜಾಸ್ತಿಯಾಯಿತೋ ಜನ ಆ ಪಕ್ಷವನ್ನು ದೂರ ಇಟ್ಟರು. ಅದರಿಂದ ಕಾಂಗ್ರೆಸ್ ಬುದ್ಧಿ ಕಲಿತಂತೆ ಕಾಣಲಿಲ್ಲ. ಅಂತಹ ಪಕ್ಷದ ಯುವಚಿಗುರು, ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯ ಎದುರು ದಾಖಲೆಯ ಅಂತರದಲ್ಲಿ ಸೋತು, ಈಗ ಮೂಲ್ಕಿ-ಮೂಡಬಿದ್ರೆಯಲ್ಲಿ ಅಸೆಂಬ್ಲಿ ಚುನಾವಣೆಗೆ ನಿಲ್ಲಲು ಓಡಾಡಿಕೊಂಡಿರುವ ಮಿಥುನ್ ರೈ ಉಡುಪಿ ಶ್ರೀ ಕೃಷ್ಣ ಮಠದ ವಿಷಯ ಎತ್ತುವಂತವ ಅಗತ್ಯ ಇರಲಿಲ್ಲ. ಆದರೂ ಮುಸ್ಲಿಮರ ವಿಶಾಲ ಹೃದಯವನ್ನು ಜನರಿಗೆ ತೋರಿಸಿ ಮುಸ್ಲಿಮರಿಂದ ಶಹಭಾಷ್ ಗಿರಿ ಪಡೆದುಕೊಳ್ಳಬೇಕಲ್ಲ. ಆದ್ದರಿಂದ ಕಾಗಕ್ಕ-ಗೂಬಕ್ಕನ ಕಥೆಯನ್ನು ತೆರೆದಿಟ್ಟರು. ಈಗಿನ ಕಾಲದಲ್ಲಿ ಹೀಗೆ ಹೇಳಿ ದಕ್ಕಿಸಿಕೊಳ್ಳಬಹುದು ಎಂದು ಗೊತ್ತಿಲ್ಲದಷ್ಟು ಅಮಾಯಕರಲ್ಲ ಮಿಥುನ್ ರೈ. ಆದರೆ ಗ್ರಹಚಾರ ಕೆಲವೊಮ್ಮೆ ಸುಳ್ಳನ್ನು ಹೇಳಿಸುತ್ತದೆ. ಅದರಿಂದ ಇಮೇಜು ಹಾಳು ಮಾಡಿಸುತ್ತದೆ. ಮೊದಲನೇಯದಾಗಿ ಮುಸ್ಲಿಂ ಅರಸರು ಶ್ರೀಕೃಷ್ಣ ಮಠಕ್ಕೆ ಹೇಗೆ ಜಾಗ ಕೊಡಲು ಸಾಧ್ಯ. ಶ್ರೀ ಕೃಷ್ಣ ಮಠ ಸ್ಥಾಪನೆಯಾದದ್ದು ಅಂದಾಜು 13 ನೇ ಶತಮಾನದಲ್ಲಿ. ಕರಾವಳಿಯಲ್ಲಿ ಮುಸ್ಲಿಂ ರಾಜನ ಎಂಟ್ರಿಯಾದದ್ದು 16 ನೇ ಶತಮಾನದ ಬಳಿಕ. ಟಿಪ್ಪು ಮತ್ತು ಅವನ ತಂದೆ ಹೈದರಾಲಿ ಈ ಭಾಗದಲ್ಲಿ ಅಂದಾಜು 17 ನೇ ಶತಮಾನದಲ್ಲಿ ಹಿಂದೂ ರಾಜರುಗಳನ್ನು ಮುರಾಮೋಸದಿಂದ ಸೋಲಿಸುತ್ತಾ ತಮ್ಮ ಚಕ್ರಾಧಿಪತ್ಯವನ್ನು ವಿಸ್ತರಿಸುತ್ತಿದ್ದರು. ಇತಿಹಾಸದ ಪ್ರಕಾರ ಉಡುಪಿ ಭಾಗದಲ್ಲಿ ಯಾರಾದರೂ ಮುಸ್ಲಿಂ ಅರಸರ ಹೆಜ್ಜೆ ಗುರುತುಗಳು 13 ನೇ ಶತಮಾನಕ್ಕಿಂತ ಮೊದಲು ಬೀಳಲು ಸಾಧ್ಯವೇ ಇರಲಿಲ್ಲ. ಹಾಗಿರುವಾಗ ಅದಕ್ಕಿಂತ ಮೂರ್ನಾಕು ಶತಮಾನಗಳ ಮೊದಲು ಅವರು ಹೇಗೆ ಜಾಗ ಕೊಡಲು ಸಾಧ್ಯ? ಲಾಜಿಕ್ ಎನ್ನುವುದು ಬೇಕಲ್ಲ. ಒಂದು ವೇಳೆ ಟಿಪ್ಪು – ಹೈದರಾಲಿ ಅಲ್ಲದಿದ್ದರೆ ಮಿಥುನ್ ರೈ ಸಂಶೋಧನೆ ಪ್ರಕಾರ ಯಾವ ಮುಸ್ಲಿಂ ಅರಸರು ಇಲ್ಲಿ ಜಾಗ ಹೊಂದಿದ್ದರು. ಅವರು ಯಾವಾಗ ಜಾಗ ನೀಡಿದರು ಎಂದು ಹೇಳಿದರೆ ಉತ್ತಮ. ಇಲ್ಲದಿದ್ದರೆ ಈ ಒಂದು ಹೇಳಿಕೆಯಿಂದಲೇ ಮಿಥುನ್ ರೈ ಅವರ ಗೆಲುವು ಮರೀಚಿಕೆಯಾಗಿ ಹೋಗಬಹುದು.
ಕೆಲವೊಮ್ಮೆ ಯಾವುದೋ ಎಳೆ ಹಿಡಿದುಕೊಂಡು ಅದರ ಮೇಲೆ ಸುಳ್ಳಿನ ಗೋಪುರ ಕಟ್ಟುವವರಿದ್ದಾರೆ. ಉದಾಹರಣೆಗೆ ಟಿಪ್ಪು ಸಲಾಂ. ಹಿಂದೂಗಳ ಹತ್ಯೆ, ಮತಾಂತರ ಹೀಗೆ ತನ್ನ ಸಾಮ್ರಾಜ್ಯದಲ್ಲಿ ಕೋಮು ವಾತಾವರಣವನ್ನೇ ತುಂಬಿ ಅದನ್ನೇ ಆಡಳಿತ ಎಂದು ನಂಬಿದ್ದ ಟಿಪ್ಪು ಕ್ರಮೇಣ ನಿರಂತರ ಸೋಲು, ಅವನತಿ ಮತ್ತು ಪತನದ ಅಂಚಿಗೆ ಬರುವಾಗ ಅವನಿಗೆ ತನ್ನ ಈ ಅವಸಾನಕ್ಕೆ ಕಾರಣ ತಿಳಿಯುವ ಕುತೂಹಲ ಉಂಟಾಗುತ್ತದೆ. ಆಗ ಅಮಾಯಕರನ್ನು ಪೀಡಿಸಿರುವುದೇ ಅವರ ಶಾಪದಿಂದ ಹೀಗೆ ಆಗಿದೆ ಎನ್ನುವ ಜ್ಯೋತಿಷಿಗಳ ಸಲಹೆಯಂತೆ ಆತ ಕೊಲ್ಲೂರು ದೇವಳಕ್ಕೆ ಉಂಬಳಿ ಕೊಟ್ಟು ಅಲ್ಲಿ ತನ್ನ ಹೆಸರಿನಲ್ಲಿ ಪೂಜೆ ಮಾಡಲು ಹೇಳಿದ. ಅದರ ಅರ್ಥ ಟಿಪ್ಪು ಹಿಂದೂಗಳನ್ನು ಸಲಹುವ ಸಹಿಷ್ಣುತಾವಾದಿಯಾಗಿದ್ದ ಎಂದು ಯಾರಾದರೂ ಹೇಳಿದರೆ ಅದಕ್ಕಿಂತ ಮೂರ್ಖತನ ಬೇರೆ ಇಲ್ಲ. ಈಗ ನಾವು ನೀವು ಕೂಡ ನಮ್ಮ ಮಕ್ಕಳ ಹೆಸರಿನಲ್ಲಿ ಅರ್ಚನೆ, ಪೂಜೆ ಮಾಡಿ ಪರೀಕ್ಷೆಯಲ್ಲಿ, ವೈವಾಹಿಕ, ಉದ್ಯೋಗ ಹೀಗೆ ಏನಾದರೂ ಕಾರಣ ನೀಡಿ ಒಳ್ಳೆಯದಾಗಲಿ ಎಂದು ಬೇಡಿಕೊಂಡಿರುತ್ತೇವೆ. ಇದು ಕೂಡ ಹೀಗೆನೆ. ಹಾಗೆ ಅಂದುಕೊಂಡು ಟಿಪ್ಪು ಪರಧರ್ಮ ಸಹಿಷ್ಣು ಎಂದು ಹೇಳಲು ಆಗುತ್ತಾ? ಒಂದು ವೇಳೆ ಹಾಗೆ ಹೇಳುವುದಾದರೆ ಕೊಡಗಿನ ಕೊಡವರು ಹಿಂದೂಗಳಲ್ವಾ? ಹಾಗಾದರೆ ಮಿಥುನ್ ರೈ ಏನನ್ನು ಹೇಳಲು ಹೊರಟಿದ್ದಾರೆ? ಶ್ರೀಕೃಷ್ಣ ಮಠದ ಜಾಗ ಟಿಪ್ಪುವಿನದ್ದಾ? ಹೈದರಾಲಿದ್ದಾ? ಚುನಾವಣೆ ಹತ್ತಿರ ಬರುವಾಗ ಹಿರಿಯ ರೈಗಳು ಕೂಡ ಹೀಗೆ ಮುಸ್ಲಿಮರನ್ನು ಓಲೈಸಲು ಹೋಗಿ ಏನಾಯ್ತು ಎಲ್ಲರಿಗೂ ಗೊತ್ತೆ ಇದೆ. ಇನ್ನು ಪೇಜಾವರದ ಹಿರಿಯ ಶ್ರೀಗಳು ಶ್ರೀ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜ ಎಂದು ಹೇಳಿದ ಪೇಪರ್ ಕಟ್ಟಿಂಗ್ ಎಲ್ಲೆಡೆ ಹರಿದಾಡುತ್ತಿದೆ. ಶ್ರೀ ವಿಶ್ವೇಶ ತೀರ್ಥು ಹಾಗೆ ಹೇಳಿದ್ದಾರೆ ಎನ್ನಲಾದ ಪೇಪರ್ ಕಟ್ಟಿಂಗ್ ಈಗ ಕಾಣಬಹುದು. ಆದರೆ ತಾವು ಹಾಗೆ ಹೇಳಿಲ್ಲ ಎಂದು ಅಂದು ಪೇಜಾವರ ಶ್ರೀಗಳು ಹೇಳಿರುವುದು ಯಾಕೆ ಹೊರಗೆ ಬರುತ್ತಿಲ್ಲ!

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Hanumantha Kamath May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Hanumantha Kamath May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search